Posts

ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ

Image
ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ                         ಪೂಜ್ಯ ಗುರುಗಳು ತಾವು ಜೀವನದುಕ್ಕೂ ಎಂದೂ ಬಿಡದ ಪಾಠ, ಪ್ರವಚನ, ಸಂಚಾರವನ್ನು ಮಾಡುತ್ತಲೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಅವರ ವ್ಯಕ್ತಿತ್ವ ಸಮುದ್ರವಿದ್ದಂತೆ.  ನಾವು ನಮ್ಮ ನಮ್ಮ ಪಾತ್ರೆಗನುಗುಣವಾಗಿ ನೀರನ್ನು ಮನೆಗೆ ತರಬಹುದು .  ತರದೆ ಇದ್ದದ್ದೆ ಅಪಾರ . ಆದರೆ ನಮಗೆ ಸಮುದ್ರದ ನೀರನ್ನು ತಂದೆವೆಲ್ಲಾ ಎನ್ನುವ ಖುಷಿ . ಪೂಜ್ಯ ಗುರುಗಳ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದವರೆಲ್ಲಗೂ ಆದದ್ದು ಇದೇ ಅನುಭವ . ಇಂತಹ ಗುರುಗಳ ಜೊತೆ  ಎರಡು ವರ್ಷ ಸಂಚಾರ ಮಾಡುವ ಭಾಗ್ಯ ಒದಗಿದ್ದು ನನ್ನ ಸುಕೃತದ ಫಲ .ನಾನೂ ಪಾತ್ರೆಗನುಗುಣವಾಗಿ ಒಂದಷ್ಟು ಅನುಭವ ಪಡೆದಿದ್ದೇನೆ . ಅದನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುತ್ತೇನೆ   ಮಹಾನ್ ದೇಶಭಕ್ತರು . ಪೇಜಾವರ ಸ್ವಾಮಿಗಳು ದೇಶಭಕ್ತರು. ಹೌದು ಸ್ವಾಮಿಗಳು ಎಂದೂ ದೇಶಭಕ್ತಿಗೂ ಆಧ್ಯಾತ್ಮಕ್ಕೂ ವಿರೋಧವನ್ನು ಕಾಣಲೇ ಇಲ್ಲ.  ಈ ವಿಷಯದಲ್ಲಿ ನನಗಾದ ಅನುಭವವೇ ಪ್ರಮಾಣ.  May 16-2014 ಭಾರತದ ರಾಜಕೀಯದಲ್ಲಿ ಮಹತ್ವದ ದಿನ. ಅಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದಿತ್ತು. ಸ್ವಾಮಿಗಳೊಟ್ಟಿಗೆ ಕೆಲವು ದಿನಗಳಿಂದ ನಾವು ಉಡುಪಿಯಲ್ಲೇ ಇದ್ದೆವು. ಅಂದು ಬೆಳಗ್ಗೆ ಸ್ವಾಮಿಗಳು ಕೃಷ್ಣನ ಪೂಜೆ ಮು...

ಮಧ್ವಾಚಾರ್ಯರು ಮತ್ತು Leadership Quality

Image
       ಅಮಂತ್ರಂ ಅಕ್ಷರಂ ನಾಸ್ತಿ          ನಾಸ್ತಿ ಮೂಲಂ ಅನೌಷಧಂ|       ಅಯೋಗ್ಯಃ ಪುರುಷೋ ನಾಸ್ತಿ          ಯೋಜಕಃ ತತ್ರ ದುರ್ಲಭಃ|| ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು “ ಆಧ್ಯಾತ್ಮಜ್ಞಾನನೇತಾ ” ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವ “ನಾಯಕ” ಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರು.  ಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ. ಮುಂದಾಳುತ್ವ ಗುಣ (leading from front) ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹ...

ಮಧ್ವಾಚಾರ್ಯರು ಮತ್ತು Time Management

ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳಿಗೂ ಇರುವುದು ೨೪ ಘಂಟೆಗಳೆ,ಆದರೆ ಅಷ್ಟೇ ಸಮಯವನ್ನು ಬಳಸಿಕೋಂಡು ಕೆಲವರು ಬಹಳ ಸಾಧಿಸುತ್ತಾರೆ. ಕೆಲವರು ಸಮಯ ಸಾಲುವುದಿಲ್ಲ ಎಂದು ಆಕ್ಷೇಪಿಸುತ್ತಾರೆ.ಇಲ್ಲಿ ಮುಖ್ಯವಾಗಿ ಎರಡು ಕಾರಣಗಳು, ಒಂದು ಉದಾಸೀನತೆ, ಇನ್ನೋಂದು ಸಮಯನಿರ್ವಹಣೇಯ ಕೋರತೆ.ಉದಾಸಿನತೆಗೆ ಮದ್ದಿಲ್ಲ,ಆದರೆ ಸಮಯವನ್ನು ಹೇಗೆ ನಿರ್ವಹಿಸಬೇಕೆಂಬ ಕಲೆಯನ್ನು ತಿಳಿದುಕೋಳ್ಳಬೇಕು. ಆಚಾರ್ಯರು ತಮ್ಮ ಅವತಾರಕಾಲದಲ್ಲಿ ಅಪರಿಮಿತ ಸಾಧನೆಗಳನ್ನು ಮಾಡುತ್ತಾ ಸಮಯನಿರ್ವಹಣೆಯ ಕಲೆಯನ್ನು ಶಿಷ್ಯರಿಗಾಗಿ ತೋರಿಸಿಕೋಟ್ಟಿದ್ದಾರೆ. ಮಧ್ವನವಮಿಯ ಸಂಧರ್ಭದಲ್ಲಿ  ಅದನ್ನು ಅರ್ಥೈಸಿಕೋಳ್ಳಲು ಪ್ರಯತ್ನಿಸೋಣ. ಸಮಯ ಹಂಚಿಕೆ [Time Management] ನಾವು ಅನೇಕ ಬಾರಿ ಪ್ರಮುಖವಲ್ಲದ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡಿ, ಪ್ರಮುಖ ಕೆಲಸಗಳಿಗೆ ಸಮಯವಿಲ್ಲವೆಂದು ಒದ್ದಾಡುತ್ತೆವೆ. ಆಚಾರ್ಯರು ಬಾಲಕನಾಗಿದ್ದಾಗ ಅವರ ತಂದೆಯು ಅಕ್ಷರಾಭ್ಯಾಸ ಮಾಡಿಸಲು ಪ್ರ‍ಾರಂಭಿಸಿದರು.ತಂದೆಯು ಒಮ್ಮೆ ಬರೆದಿದ್ದನ್ನು ಮತ್ತೊಮ್ಮೆ ಬರೆಯಲು ಹೇಳಿದರು.ಆಚಾರ್ಯರು “ನೆನ್ನೆ ಬರೆದ ಅಕ್ಷರಗಳನ್ನೇ ಮತ್ತೆ ಮತ್ತೆ ಯಾಕೆ ಬರೆಯಬೇಕು,ಹೊಸದೇನಾದಿದ್ದರು ಹೇಳಿ” ಎಂದರು. ಮುಂದೋಮ್ಮೆ ಆಚಾರ್ಯರ ವೇದಗುರುಗಳು ವೇದಪಾಠವನ್ನು ಮಾಡುತ್ತಿದ್ದರು.ಆಚಾರ್ಯರು ಬೇರೆನನ್ನೋ ಯೋಚಿಸುತ್ತಿದ್ದರು.ಆಗ ಗುರುಗಳು “ಗೆಳೆಯರೋಂದಿಗೆ ವೇದವನ್ನು ಏಕೆ ಉಚ್ಚಾರಿಸುತ್ತಿಲ್ಲಾ” ಎಂದು ಆಕ್ಷೇಪಿಸಿದರು. ಅದಕ್ಕೆ...

ವಿಜಯದಾಸರ ಸ್ವಪ್ನಸುಳಾದಿ - ದಾಸರು ಮಾಡಿಸಿದ ಸ್ವಪ್ನ ಲೋಕದ ವಿಹಾರ

Image
ಸಾಧನಾ ಮಾರ್ಗದಲ್ಲಿ ಅತಿಪ್ರಮುಖವಾದ ಅಂಶ ಭಕ್ತಿ. ಭಕ್ತಿ ಎಂದರೆ ಪರಮಾತ್ಮನಲ್ಲಿ ಮಾಡುವ ಮಾಹಾತ್ಮ್ಯಜ್ಞಾನಪೂರ್ವಕವಾದ ಧೃಢವಾದ ಸ್ನೇಹ. ಪರಮಾತ್ಮನಲ್ಲಿ ಮಾಹಾತ್ಮ್ಯಜ್ಞಾನ ಬರಬೇಕಾದರೆ, ಅವನ ಗುಣಗಳನ್ನು ,ಲೀಲೆಗಳನ್ನು ಅರ್ಥೈಸಿಕೊಳ್ಳಬೇಕು. ಈ ರೀತಿಯಾದ ಭಕ್ತಿಯೇ ನಮ್ಮಲ್ಲಿ ಈಶ ದಾಸ ಭಾವವನ್ನು, ಪರಮಾತ್ಮನ ಅಧೀನರೆಂಬ ಜ್ಞಾನವನ್ನು ಅನುಭವ ,ಆಚರಣೆಗಳ ಹಂತಕ್ಕೆ ಕೊಂಡೊಯ್ಯುತ್ತದೆ. ನಾವು ಪರಮಾತ್ಮನ ಅಧೀನರೆಂಬ ಪ್ರಮೇಯಕ್ಕೆ ಅತ್ಯಂತ ಉತ್ತಮವಾದ ದೃಷ್ಟಾಂತವೆಂದರೆ ವ್ಯಕ್ತಿಗಳು ಮಲಗಿದಾಗ ಕಾಣುವ ಸ್ವಪ್ನ. ಸ್ವಪ್ನವು ಅತಿ ವಿಸ್ಮಯಕಾರಿಯಾದ ಪರಮಾತ್ಮನ ಸೃಷ್ಟಿ. ನಾವು ಸ್ವತಂತ್ರರಾಗಿದ್ದರೆ, ನಾವು ಇಚ್ಚೆಪಟ್ಟಂತೆ ಸ್ವಪ್ನವನ್ನು ಕಾಣಬೇಕಿತ್ತು. ಆದರೆ ವಸ್ತುಸ್ಥಿತಿಯು ಹಾಗಿಲ್ಲವೆನ್ನುವುದು ಎಲ್ಲರಿಗೂ ಅನುಭವವೇದ್ಯವೇ ಆಗಿದೆ. ಸ್ವಪ್ನದಂತೆಯೆ ಜಾಗೃತ್ತು ಅವನ ಅಧೀನ. ಮಾನವನ ಈ ಅವಸ್ಥೆಗಳನ್ನು, ಅವುಗಳನ್ನು ನಿಯಂತ್ರಿಸುವ ಪರಮಾತ್ಮನ ರೂಪಗಳನ್ನು ದಾಸರು ಸ್ವಪ್ನಸುಳಾದಿಯಲ್ಲಿ ವಿಮರ್ಶಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ಪದಾರ್ಥಗಳು ಸತ್ಯ ಎನ್ನುವುದು ಆಚಾರ್ಯರ ಸಿದ್ಧಾಂತ. ಸ್ವಪ್ನಕಾಲದಲ್ಲಿ ಕಾಣುವ ಪದಾರ್ಥಗಳನ್ನು ಪರಮಾತ್ಮನು ಮನಸ್ಸೆಂಬ ಗೊಡೆಯ ಮೇಲೆ ಸೃಷ್ಟಿಸುತ್ತಾನೆ. ಈ ಪದಾರ್ಥಗಳನ್ನು ಯಾವಾಗ ಸೃಷ್ಟಿಸುತ್ತಾನೆ ಎಂದು ಪ್ರಶ್ನೆ ಮೂಡುವುದು ಸಹಜ. ಸ್ವಪ್ನಕಾಲಕ್ಕಿಂತ ಮುಂಚೆ ಅಥವಾ ನಂತರ ಎಚ್ಚರಕಾಲದಲ್ಲಿ ಸೃಷ್ಟಿಸುತ್ತಾನೆ ಎಂದು ಹೇಳಲು ...

ಧಾರ್ಮಿಕಪ್ರಪಂಚದ "ಆಧುನಿಕ ವಿಜ್ಞಾನ"ವಾದಿಗಳು

Image
                              ಹೌದು ಇಂದು  ಧಾರ್ಮಿಕ ಪ್ರಪಂಚದಲ್ಲಿ ಆಧುನಿಕ ವಿಜ್ಞಾನವಾದಿಗಳ ಸಂಖ್ಯೆ ಜಾಸ್ತಿಯಾಗಿದೆ . ಸನಾತನದ ಧರ್ಮದ ಪ್ರತಿಯೊಂದು ಆಚರಣೆಗಳಿಗೆ ಹಾಗು ಸಿದ್ಧಾಂತಗಳಿಗೆ ಆಧುನಿಕ ವಿಜ್ಞಾನದ ಸಮ್ಮತಿಯ ಮುದ್ರೆಯನ್ನು ಒದಗಿಸಲು ಪ್ರಯತ್ನಿಸುವವರ ಮತ್ತು ಅದನ್ನು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.   ಇದರ ಪರಿಣಾಮವಾಗಿ   ದೀಪಾವಳಿಯಲ್ಲಿ ಹಚ್ಚುವ ದೀಪದಿಂದ ಪ್ರಾರಂಭಿಸಿ ಸಂಕ್ರಾಂತಿಯಲ್ಲಿ ತಿನ್ನುವ ಎಳ್ಳು ಬೆಲ್ಲದವರೆಗಿನ ಎಲ್ಲಾ ಸಂಪ್ರದಾಯಗಳಿಗೂ "ವೈಜ್ಞಾನಿಕ" ಸ್ಪರ್ಶವನ್ನು ನೀಡಲು ಅನೇಕರು ಪ್ರಯತ್ನಿಸುತ್ತಾರೆ . ಈ ಪ್ರಯತ್ನದಲ್ಲಿ ವಿಜ್ಞಾನದ ಹೆಸರಿನಲ್ಲಿ ಅನೇಕ ಬಾಲಿಶ ಕಾರಣಗಳನ್ನು ನೀಡುತ್ತಾ , ವಿಜ್ಞಾನಕ್ಕೂ ನ್ಯಾಯ ಒದಗಿಸದೆ ,ಶಾಸ್ತ್ರ ಸಂಪ್ರದಾಯಗಳಿಗೂ ಅನ್ಯಾಯ ಮಾಡುತ್ತಾ ಅಪಹಾಸ್ಯಗೀಡಾಗುತ್ತಿದ್ದಾರೆ . ಈ ಮನಸ್ಥಿತಿಗೆ ಕಾರಣವನ್ನು ಯೋಚಿಸಬೇಕು . ೧೮ನೆಯ ಶತಮಾನದ ನಂತರ ಆಧುನಿಕ ವಿಜ್ಞಾನ ಕಂಡ ಬೆಳವಣಿಗೆ ಊಹೆಗೆ ನಿಲುಕದ್ದು . ವಿಜ್ಞಾನಿಗಳು ನಿಸರ್ಗದ ಅನೇಕ ಗುಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಾ ಅನೇಕ ಸಿದ್ಧಾಂತಗಳನ್ನು ಮಂಡಿಸಿದರು . ಅವುಗಳನ್ನು ಪ್ರಯೋಗಕ್ಕೊಳಪಡಿಸಿ ಖಚಿತಪಡಿಸಿಕೊಂಡರು . ಇಂತಹ ಸಿದ್ಧಾಂತಗಳನ್ನು ಬಳಸಿಕೊಂಡು ತಂತ್ರಜ್ಞಾನವು ಅಗಾಧವಾಗಿ ಬೆಳೆಯಿತು . ಐವತ್ತು ವರ್ಷಗಳ ಹಿಂದೆ...

ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ

Image
                            ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ                                                                                                 ಭಾರತದಲ್ಲಿ ಸನಾತನ ಧರ್ಮದ ಪುನರುತ್ಥಾನದ ವಿಷಯದಲ್ಲಿ ಮಾಧ್ವ ಯತಿಗಳ ಕೊಡುಗೆ ಎನೂ ಇಲ್ಲ ಎನ್ನುವ ಆಕ್ಷೇಪವನ್ನು ನಾವು ಆಗ್ಗಾಗ್ಗೆ ಕೇಳುತ್ತೆವೆ . ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದನ್ನು ನಾವು ಓದಿದ್ದೇವೆ . ಆದರೆ ಅದರಂತೆಯೇ  ವ್ಯಾಸರಾಜರ ಜೀವನವನ್ನು ಐತಿಹಾಸಿಕ ದೃಷ್ಟಿಯಿಂದ ಇನ್ನೂ ಹೆಚ್ಚು ಅಧ್ಯಯನ ಮಾಡಿದರೆ ಇವರ ಕೊಡುಗೆಯೂ ಈ ವಿಷಯದಲ್ಲಿ ಅನುಪಮವೇ ಎನ್ನುವ ಸತ್ಯ ಗೋಚರಿಸುತ್ತದೆ.  ವ್ಯಾಸರಾಜರು  ಸಾಳುವ ನರಸಿಂಹದೇವರಾಯ , ತಿಮ್ಮಭೂಪಾಲ , ತುಳುವ ನರಸ ನಾಯಕ , ವೀರ ನರಸಿಂಹರಾಯ , ಕೃಷ್ಣದೇವರಾಯ , ಅಚ್ಯುತ ದೇವರಾಯರೆಂಬ ವಿಜಯನಗರರಾಜರುಗಳಿಗೆ ಅರ...

Upanayanam

                                                                                                    When a human being comes to outer world from mother’s womb, he is considered as another creature in this world.   What makes him different from other creatures is the concept that he has higher intellectual thinking capacity which is found rarely in others. Human being can evolve this capacity to fulfill his spiritual and social desires. Nowadays you can see many ads which tell you to use their products to increase brain’s capacity. But you know that they are not going to help you....