ಇಂಡೊಲೊಜಿ ವಿಮರ್ಶೆ- 15 ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2
ಇಂಡೊಲೊಜಿ ವಿಮರ್ಶೆ- 15 ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2
ನಿರಂತರ ರಾಜಕೀಯ ವಿಪ್ಲವ ಹಾಗೂ ಅಸ್ಥಿರತೆತಯಿಂದ ಭಾರತದಲ್ಲಿ ಕೆಲವು ಶತಮಾನಗಳವರೆಗೆ ಜ್ಞಾನದ ವಿಕಾಸದಲ್ಲಿ ಕುಂಠಿತತೆಯನ್ನು ಗಮನಿಸಬಹುದು. ನೂತನ ಆವಿಷ್ಕಾರಗಳು ,ಪ್ರಾಯೋಗಿಕ ವಿಜ್ಞಾನದ ( Experimental Science) ಬೆಳವಣಿಗೆಗಳು ಹದಿನೈದನೆಯ ಶತಮಾನದ ನಂತರ ಕುಂಠಿತವಾಯ್ತು. ಅದಕ್ಕೆ ಪ್ರಾಯಃ ದೇಶಿಯ ರಾಜರುಗಳು ದೇಶಿ ಹಾಗೂ ವಿದೇಶಿ ಆಕ್ರಮಣಗಳಿಂದ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವುದರಲ್ಲೆ ಮಗ್ನವಾಗಿದ್ದದ್ದು ಕಾರಣ. ರಾಜರ ದೂರದೃಷ್ಟಿ ರಹಿತವಾದ ನಾಯಕತ್ವವು ಪ್ರಮುಖ ಕಾರಣಗಳಲ್ಲೊಂದು. ಅದೇ ಕಾಲದಲ್ಲಿ ರಾಜರು ಭಾರತೀಯ ವಿದ್ಯೆಗಳಿಗಾಗಿ ಪಾಠಶಾಲೆಗಳಿಗೆ ದೇಣಿಗಳಿಗಗಳನ್ನು , ಜಮೀನುಗಳನ್ನು ಕೊಡುತ್ತಿದ್ದರೂ ಕೂಡ ಪಶ್ಚಿಮದೇಶದಿಂದ ಹೊಸತಾಗಿ ಉದಯವಾಗುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಥವಾ ಅರಿತುಕೊಳ್ಳುವ ಪ್ರಯತ್ನವಾಗಲಿಲ್ಲ. ಪಾಠಶಾಲೆಗಳಲ್ಲಿ ಹಾಗು ಗುರುಕುಲಗಳಲ್ಲಿ ಸಾಹಿತ್ಯ, ವ್ಯಾಕರಣ, ನ್ಯಾಯ, ವೇದಾಂತ ಮುಂತಾದ ಪಾರಂಪರಿಕ ಶಾಸ್ತ್ರಗಳ ಅಧ್ಯಯನ ಮಾತ್ರವೆ ನಡೆಯುತ್ತಿತ್ತು. ಗಣಿತದ ಅಧ್ಯಯನವು ಪ್ರಚಲಿತದಲ್ಲಿತ್ತಾದರೂ ಪಾಠಶಾಲೆಗಳಲ್ಲಿ ವ್ಯವಹಾರಕ್ಕೆ ಸಾಕಾಗುವ ಗಣಿತವನ್ನು ಮಾತ್ರ ಬೋಧಿಸುತ್ತಿದ್ದರು . ಗುರುಕುಲದಲ್ಲೂ ಜ್ಯೌತಿಷ ಸಿದ್ಧಾಂತಕ್ಕೆ ಸಿಮಿತವಾದ ಪಂಚಾಂಗ ನಿರ್ಮಾಣಕ್ಕೆ ಉಪಯೋಗವಾಗುವ ಹಾಗೂ ಗ್ರಹಗಳ ಸ್ಥಿತಿಗತಿಗಳ ಜ್ಞಾನದಕ್ಕೆ ಬೇಕಾಗುವ ಗಣಿತದ ಅಭ್ಯಾಸ ಪ್ರಚಲಿತದಲ್ಲಿತ್ತು. ಕುತೂಹಲದ ವಿಷಯವೆಂದರೆ ಆರ್ಯಭಟನ ವರೆಗೂ ಯವನರ ಜೊತೆಗಿದ್ದ ಜ್ಞಾನವಿನಿಯಮದಿಂದ ಶಾಸ್ತ್ರದಲ್ಲಿದ್ದ ಜ್ಞಾನದ ಆದಾನ-ಪ್ರದಾನ ಮುಂದಿನ ಶತಮಾನಗಳಲ್ಲಿ ಕಾಣಲು ಸಿಗುವುದಿಲ್ಲ.
ಅದರೆ ಪಶ್ಚಿಮದಲ್ಲಿ
ಸುಮಾರು ಸಾವಿರ ವರ್ಷಗಳ ಕಾಲ ಕ್ರಿಶ್ಚಿಯಾನಿಟಿಯ ಪ್ರಭಾವದಿಂದ ನಿಂತ ನೀರಾಗಿದ್ದ ಜ್ಞಾನದ ವಿಕಾಸವು
ಹದಿನಾರನೆಯ ಶತಮಾನದಲ್ಲಿ ಯುರೋಪಿನಲ್ಲಾದ ಪುನರುತ್ಥಾನದ ಕ್ರಾಂತಿಯಿಂದ (Renascence) ಸ್ವತಂತ್ರವಾಗಿ ವಿಕಸಿಸಲು ಪ್ರಾರಂಭವಾಯಿತು. ಪ್ರಾಯೋಗಿಕ ವಿಜ್ಞಾನವು ಬಹಳ ಪ್ರಗತಿಯನ್ನು ಸಾಧಿಸಿತು . ಹೊಸ ಹೊಸ
ಮಿಶನ್ ಗಳ ಆವಿಷ್ಕಾರದಿಂದ ಔದ್ಯೋಗಿಕ ಕ್ರಾಂತಿಯು (Industrial revolution) ನಡೆದು ಪದಾರ್ಥಗಳನ್ನು
ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ತಯಾರಿಸಲಾಗುತ್ತಿತ್ತು (Mass Production) .ಇದರಿಂದ ಯುರೋಪಿನ ದೇಶಗಳು ಶ್ರೀಮಂತವಾದವು
. ಯುರೊಪಿನ ಪ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು, ನೇರವಾಗಿ
ರಾಜನ ಮುಖಾಂತರ ಅಥವಾ ಈಸ್ಟ ಇಂಡಿಯಾ ಕಂಪನಿಯಂತಹ ಕಂಪನಿಗಳ ಮುಖಾಂತರ ವ್ಯಾಪಾರವನ್ನು ಪ್ರಾರಂಭಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಅವರ ಸೈನ್ಯವು ಬಹಳ ಸಶಕ್ತವಾಗಿತ್ತು ಹಾಗೂ ಶಿಸ್ತುಬದ್ದವೂ
ಆಧುನಿಕ ಶಸ್ತ್ರಸಜ್ಜಿತವಾಗಿತ್ತು. ಇದರಿಂದ ಯುರೋಪಿನ ಅನೇಕ ದೇಶಗಳು ಭಾರತದಲ್ಲಿ ಹಾಗೂ ಎಷ್ಯಾದ ಹಾಗೂ ಆಫ್ರಿಕಾದ ದೇಶಗಳಲ್ಲಿ ನೆಲೆಗಳನ್ನು ಸ್ಥಾಪಿಸಿದ್ದರು.
ಆದರೂ ಬ್ರಿಟಿಷರು ರಾಜಕೀಯ ಚಾಣಾಕ್ಷಣತನದಿಂದ ಉಳಿದವನ್ನೆಲ್ಲಾ ಹಿಮ್ಮೆಟ್ಟಿಸಿ 18 ನೆಯ ಶತಮಾನದ ಅಂತ್ಯಭಾಗದಲ್ಲಿ ಭಾರತದಲ್ಲಿ ಎಕಚಕ್ರಾಧಿಪತ್ಯವನ್ನು ಸ್ಥಾಪಿಸಿದರು.
ಈ ರೀತಿಯಾದ ಸ್ವತಂತ್ರವಾದ ಚಿಂತನೆಗಳ ಉಗಮದ ಪ್ರಭಾವದಿಂದ ಅಲ್ಲಿ ಶಾಲೆಗಳಲ್ಲಿ ಈ ರೀತಿಯಾದ ವಾತಾವರಣವಿರದಿದ್ದರೂ , ಬುದ್ದಿವಂತರಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ
ಈ ಕುರಿತಾದ ಅಧ್ಯಯನ ಮತ್ತು ಶೋಧವನ್ನು ಮುಂದುವರೆಸಿದರು . ಇದರ ಜೊತೆಗೆ ಈ ವಿಷಯದ ಶೋಧನೆಗಳಿಗೆ ರಾಜರ
ಅಥವಾ ರಾಣಿಯರ ಆರ್ಥಿಕ ಪ್ರೋತ್ಸಾಹ , ಹದಿನೇಳನೆಯ ಶತಮಾನದಲ್ಲಿ ಸ್ಥಾಪಿತವಾದ ದಿ ರೊಯಲ್ ಸೋಸಾಯಿಟಿ
ಮುಂತಾದ ಸಂಸ್ಥೆಗಳ ಪ್ರೋತ್ಸಾಹ, ಶ್ರೀಮಂತರ ಹಾಗೂ ವ್ಯಾಪಾರಿಗಳ ಆರ್ಥಿಕ ಸಹಕಾರ , ರಾಜಕೀಯ ಸ್ಥಿರತೆ
ಮೊದಲಾದ ಕಾರಣಗಳಿಂದ ವಿಜ್ಞಾನವು ಅಭಿವೃದ್ಧಿಯನ್ನು ಕಂಡಿತು. ಇದರ ಪರಿಣಾಮದಿಂದ ಕೈಗಾರಿಕಾ ಕ್ರಾಂತಿಯುಂಟಾಯಿತು
. ಅದರಿಂದುಂಟಾದ ಬೇಡಿಕೆಯಿಂದ ವಿಜ್ಞಾನದ ನಾಗಾಲೋಟವು ಮುಂದುವರೆಯಿತು .
ಭಾರತದ ಶಾಲೆ ಹಾಗೂ ಪಾಠಶಾಲೆಗಳಲ್ಲಿ ಯುರೋಪಿನ ಅಥವಾ ಕೆಲವು ಯುರೋಪಿನ ದೇಶಗಳಿಗಿಂತ ಹೆಚ್ಚಿನ ಮಟ್ಟದ ಪ್ರಾಥಮಿಕ ವಿದ್ಯಾಭ್ಯಾಸವಿದ್ದರೂ , ಉನ್ನತ ಹಂತದಲ್ಲಿ ,ನ್ಯಾಯ, ವ್ಯಾಕರಣ, ವೇದಾಂತ ಮುಂತಾದ ಶಾಸ್ತ್ರೀಯ ಗ್ರಂಥಗಳಿಗಿಂತ ಭಿನ್ನವಾಗಿ ನೈಸರ್ಗಿಕ ವಿಜ್ಞಾನದಲ್ಲಿ ಅಧ್ಯಯನಕ್ಕಾಗಿ ಯಾವುದೇ ವಾತಾವರಣವಿರಲಿಲ್ಲ. ಆದರೆ ಇದೇ ಪರಿಸ್ಥಿತಿತು ಎಲ್ಲಾ ಕಾಲದಲ್ಲೂ ಇತ್ತೆಂದು ತಿಳಿಯಬೇಕಾಗಿಲ್ಲ. ಕ್ರಿ.ಶ. ಒಂದನೆ ಶತಮಾನದಿಂದಾರಂಭಿಸಿ ಹನ್ನೆರಡನೆಯ ಶತಮಾನದವರೆಗೂ ಭಾರತದಲ್ಲಿ ಅನೇಕವಿಧವಾದ ಭೌತಿಕ ಆವಿಷ್ಕಾರಗಳಾಗಿದ್ದನ್ನು ಗಮಿನಿಸಬಹುದು. ಆ ಕಾರಣದಿಂದಲೆ ಭಾರತದಲ್ಲಿ ರಸಾಯನ, ವಾಸ್ತು , ಔಷಧ ಮುಂತಾದ ಪ್ರಾಯೋಗಿಕ ಜ್ಞಾನಪ್ರಕಾರಗಳಲ್ಲಿ ಅತ್ಯಂತ ಅದ್ಭುತವಾದ ಸಾಧನೆಗಳಾಗಿವೆ. ಅವು ಅತ್ಯದ್ಭುತವಾದ ದೇವಾಲಯ ನಿರ್ಮಾಣವಾಗಿರಬಹುದು , ಅದಕ್ಕೆ ಬೇಕಾಗುವ ರಸಾಯನ ವಿಜ್ಞಾನ ಹಾಗೂ ಭೌತ ವಿಜ್ಞಾನದಲ್ಲಿಯೂ ಅತ್ಯಂತ ಯಶಸ್ಸನ್ನು ಪಡೆದಿದ್ದರು. ಉದಾಹರಣೆಗೆ ಯುರೋಪಿಯನ್ನರು ಈಗ ಡಮಾಸ್ಕಸ್ ಸ್ಟೀಲ್ (Damascus Steel) ಎಂದು ಕರೆಯುವ ಉಕ್ಕಿನ ಒಂದು ಗ್ರಾಂ ಅನ್ನು ಕೂಡ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ತಯಾರಿಸಿಲ್ಲ. ಇದನ್ನು ಈಗಿನ ಕರ್ನಾಟಕ , ಆಂಧ್ರ , ತಮಿಳುನಾಡು ಭಾಗಗಳಲ್ಲಿ ಕ್ರಿ.ಪೂ ಮೂರನೆಯ ಶತಮಾನದಿಂದಲೂ ಭಾರತೀಯರು ತಯಾರಿಸುತಿದ್ದರು. ಮೊದಲು ಯುರೋಪಿಯನ್ನರು ಇದನ್ನು Wootz Steel ಎಂದು ಕರೆಯುತಿದ್ದರು. Wootz ಎನ್ನುವುದು ಉಕ್ಕು ಎಂಬ ಪದದ ಮೂಲದ್ದು. ಸಾಮಾನ್ಯವಾಗಿ ಯುರೂಪಿಯನ್ನರು ಬಳಸುತ್ತಿದ್ದ ಉಕ್ಕಿನಲ್ಲಿ ಅರ್ಧ ಪ್ರತಿಶತಕ್ಕಿಂತ ಹೆಚ್ಚು ಕಾರ್ಬನ್ ಅಂಶವಿರುತ್ತಿತ್ತು . ಆದರೆ Wootz steel ನಲ್ಲಿ ಕೇವಲ ಮೂರು ಪ್ರತಿಶತ ಕಾರ್ಬನ್ ಅಂಶವಿರುತ್ತಿತ್ತು . ಹಾಗಾಗಿ ಇದು ಗಟ್ಟಿಯಾಗಿದ್ದರೂ ಸುಲಭವಾಗಿ ಬಗ್ಗುತ್ತದೆ ಮತ್ತು ಹೊಡೆತಕ್ಕೆ ಸುಲಭವಾಗಿ ಛಿದ್ರವಾಗುವುದಿಲ್ಲ. ಈ ಸಮತೋಲನವನ್ನು ಕಾಪಾಡಿಕೊಳ್ಳಲು ಭಾರತತೀಯ ಉಕ್ಕು ತಯಾರಿಕಾಕಾರರು ವಿಶಿಷ್ಟ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದರು . ಈ ಉಕ್ಕಿನ ತುಂಡುಗಳು ಅರಬ್ಬರ ಮೂಲಕ ಮಧ್ಯ ಏಷ್ಯಾಕ್ಕೆ ತಲುಪಿ , ಸಿರಿಯಾದ ಡಮಾಸ್ಕಸ್ ನಲ್ಲಿ ಖಡ್ಗ ಮುಂತಾದ ಅಸ್ತ್ರ ತಯಾರಿಕೆಗೆ ಬಳಸಲಾಗುತ್ತಿದ್ದು. ಮಧ್ಯಕಾಲದಲ್ಲಿ ನಡೆದ ಧರ್ಮಯುದ್ಧಗಳಲ್ಲಿ ಈ ಉಕ್ಕಿನಿಂದ ತಯಾರಾದ ಕತ್ತಿಗಳಿಂದ ಮುಸ್ಲೀಮರು ಯುದ್ಧ ಮಾಡಿದರು . ಮುಸ್ಲಿಂ ಯೋಧರ ಕೈಯಲ್ಲಿದ್ದ ಕತ್ತಿಗಳು ತಮ್ಮ ರಕ್ಷಾಕವಚಗಳನ್ನು ಸುಲಭವಾಗಿ ಸೀಳುತ್ತಿದ್ದನ್ನು ಕಂಡು ಯುರೋಪಿಯನ್ನರು ಆತಂತ್ರಕ್ಕೆ ಒಳಗಾದರು. ಹಾಗಾಗಿಯೆ ಹನ್ನೆರಡನೆ ಶತಮಾನದ ಪ್ರಸಿದ್ಧ ಮುಸ್ಲಿಂ ಇತಿಹಾಸಕಾರ ಅಲ್ ಇದ್ರಿಸಿ ಯು ‘ ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠವಾದ ಮತ್ತು ಉಕ್ಕೆಂದರೆ ಅದು ಭಾರತದ ಹಿಂದೂವಾನಿ ಉಕ್ಕು’ ಎಂದು ಶ್ಲಾಘಿಸಿದ್ದಾನೆ. ಇಂತಹ ಉಕ್ಕಿನ ತಯಾರಿಕೆಯ ವಿಧಾನವು ಕ್ರಿ.ಶ. 1800 ಆಸುಪಾಸಿನಲ್ಲಿ ಭಾರತದಲ್ಲಿ ಪ್ರಾಯಃ ಕಣ್ಮರೆಯಾಯಿತು . ಇದಕ್ಕೆ ಕಾರಣ ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿ. 1740 ರಲ್ಲಿ ಬೆಂಜ್ಮನ್ ಹಂಟ್ಸಮನ್ ಎಂಬ ಗಡಿಯಾರಗಳ ಉತ್ಪಾದಕನು ಯುರೋಪಿನಲ್ಲೆ ಅತ್ಯಂತ ಶುದ್ಧವಾದ ಉಕ್ಕನ್ನು ತಯಾರಿಸುವ ತಂತ್ರಜ್ಞಾನವನ್ನು ಕಂಡುಹಿಡಿದನು. ಭಾರತದಲ್ಲಿ ಈ ಉಕ್ಕನ್ನು ಸಣ್ಣ ಸಣ್ಣ ಕುಲುಮೆಗಳಲ್ಲಿ ತಯಾರಿಸುತ್ತಿದ್ದರಿಂದ ಸಣ್ಣ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಾಗುತ್ತಿತ್ತು. ಭಾರತೀಯ ಉಕ್ಕಿಗೆ ಸರಿಸಮಾನವಲ್ಲದಿದ್ದರೂ ಕೈಗಾರಿಕಾ ಕ್ರಾಂತಿಯಿಂದ ಉಕ್ಕನ್ನು ಬಹಳ ಕಡಿಮೆ ಸಮಯದಲ್ಲಿ ಟನ್ ಗಟ್ಟಲೆ ಉತ್ಪಾದಿಸಲು ಸಾಧ್ಯವಾಯಿತು. ಇದರಿಂದ ಭಾರತದ ಉಕ್ಕಿಗೆ ಬೇಡಿಕೆ ಕಡಿಮೆಯಾಯಿತು. ಬ್ರಿಟೀಷರು ಭಾರತದ ಉಕ್ಕಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸಿದರು. ಹಾಗೂ ಹತ್ತೊಂಬತ್ತನೆಯ ಶ್ತತಮಾನದ ಅಂತ್ಯದ ವೇಳೆಗೆ ಬ್ರಿಟನ್ನಿನಲ್ಲಿ ತಯಾರಾದ ಉಕ್ಕಿನ್ನು ಭಾರತಕ್ಕೆ ಆಮದು ಮಾಡಲು ಪ್ರಾರಂಭಿಸಿದರು ಆ ಕಾರಣದಿಂದ ಭಾರತದ ಕಮ್ಮಾರರ ಜೀವನಕ್ಕೆ ಆಧಾರವೇ ಇಲ್ಲದಾಗಿ ಕ್ರಮೇಣ ಆ ವಿದ್ಯೆಯೆ ನಶಿಸಿ ಹೋಯಿತು. ನಶಿಸಿಹೋದ ಉಕ್ಕಿನ ತುಂಡಿನ ತಯಾರಿಕೆಯಲ್ಲಿ ಅನುಸರಿಸಿದ ರಾಸಾಯನಿಕ ಪ್ರಕ್ರಿಯೆಯ ಸಂಶೋಧನೆಯು ಮೈಕೆಲ್ ಫ್ಯಾರಡೆಯಿಂದ ಆರಂಭಿಸ್ಸಿ ಇಲ್ಲಿಯವರೆಗೂ ನಡೆಯುತ್ತಲಿದೆ. ಆದರೆ ಅದರಲ್ಲಿಯೂ ಭಾರತೀಯರ ಕೊಡುಗೆ ತೀರಕಮ್ಮಿ ಅನ್ನುವುದು ವಿಷಾದನೀಯ. ಉಕ್ಕಿನ ಉದ್ಯಮಕ್ಕು ಶಿಕ್ಷಣಕ್ಕೂ ಎನು ಸಂಬಂಧ ಎಂದೆನಿಸಬಹುದು , ಆದರೆ ಫ್ರಾನ್ಸಿಸ್ ಬುಕಾನನ್ ಅವರ "ಎ ಜರ್ನಿ ಫ್ರಾಮ್ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರು, ಕೆನರಾ, ಅಂಡ್ ಮಲಬಾರ್" ಎಂಬ ಪುಸ್ತಕದಲ್ಲಿ ಈ ಉಕ್ಕು ತಯಾರಿಕೆಯ ಲೆಕ್ಕಾಚಾರವನ್ನು ದಾಖಲಿಸಿದ್ದನು ಗಮನಿಸಿದಾಗ ಸ್ಪಷ್ಟವಾಗುತ್ತದೆ '
''ಸಾಮಾನ್ಯ ವೆಚ್ಚಗಳ ಪಟ್ಟಿ: ಕಬ್ಬಿಣವನ್ನು ಉಕ್ಕಾಗಿ ಪರಿವರ್ತಿಸುವುದರ ಜೊತೆಗೆ, ಮಾಲೀಕನು ಕೆಲಸಗಾರರ ತಕ್ಷಣದ ಜೀವನೋಪಾಯಕ್ಕಾಗಿ ಹಣವನ್ನು ನೀಡುವುದರ ಜೊತೆಗೆ ಕುಲುಮೆಗೆ ಸಂಬಂಧಿಸಿದ ಈ ಕೆಳಗಿನ ಸಾಮಾನ್ಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ:
ಅರಣ್ಯ ಅಧಿಕಾರಿಗೆ (Keeper of the forest): ಇದ್ದಿಲು (Charcoal) ಮಾಡಲು ಅನುಮತಿ ಪಡೆಯಲು – 110 ಪಣ (Fanams)
ಸುಂಕ ಅಥವಾ ಕಸ್ಟಮ್ಸ್ ಅಧಿಕಾರಿಗೆ (Sunca / Collector of customs): – 30 ಪಣ (Fanams)
ಗೌಡ ಅಥವಾ ಗ್ರಾಮದ ಮುಖ್ಯಸ್ಥನಿಗೆ (Gauda / Chief of the village): ಮನೆ ಬಾಡಿಗೆಗಾಗಿ – 15 ಪಣ (Fanams)
ಪೂಜೆ ಮತ್ತು ಬಲಿಗಳಿಗೆ (Sacrifices): – 30 ಪಣ (Fanams)
ಬೆತ್ತದ ಕೊಳವೆಗಳಿಗೆ (Bellows): – 42 ಪಣ (Fanams)
ಬ್ರಾಹ್ಮಣರಿಗೆ ಧರ್ಮಾರ್ಥವಾಗಿ (Charity to Bráhmans): – 20 ಪಣ (Fanams)
ಒಟ್ಟು ವೆಚ್ಚ: 247 ಪಣ (Fanams)'' ( A Journey from Madras Through the Countries of Mysore, Canara, and Malabar, Volume 2, p,21,22)
ಈ ವೆಚ್ಚವನ್ನು ಮಾಲಿಕನು ಭರಿಸುತಿದ್ದ. ಕಾರ್ಮಿಕರು ತಮ್ಮ ಪಾಲಿನ ಉಕ್ಕಿನ ಮಾರಾಟದಿಂದ ಬಂದ ಹಣದಲ್ಲಿ ಮಾಲಿಕನ ಪಾಲನ್ನು ಹಿಂದುರಿಗಿಸಿ ,ಲಾಭಾಂಶವನ್ನು ತಾವು ಪಡೆಯುತ್ತಿದ್ದರು. ಬ್ರಾಹ್ಮಣರಿಗೆ ಬಂದ ದತ್ತಿಯು ಅವರ ಜೀವನದ ಸ್ಥಿರತೆಗೆ ಕಾರಣವಾಗಿ ಅವರು ಶಿಕ್ಷಕರಾಗಿರಲು ಸಹಾಯಕವಾಗುತ್ತಿತ್ತು . ಕ್ರಾಂತಿಯಿಂದ ಭಾರತೀಯ ಅನೇಕ ಕುಲಕಸುಬುಗಳನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದ ಜೀವನವು ಅತಂತ್ರವಾದವು. ಹಾಗಾಗಿ ಭಾರತದಲ್ಲಿ ಬಡತನವು ಹೆಚ್ಚಾಯಿತು. ಕೈಗಾರಿಕಾ ಕ್ರಾಂತಿಯಿಂದ ಭಾರತೀಯ ಅನೇಕ ಕುಲಕಸುಬುಗಳನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದ ಜನರ ಜೀವನವು ಅತಂತ್ರವಾದವು. ಹಾಗಾಗಿ ಭಾರತದಲ್ಲಿ ಬಡತನವು ಹೆಚ್ಚಾಯಿತು. ಬಡತನವು ಹೆಚ್ಚಾದಂತೆ ವಿದ್ಯಾಭ್ಯಾಸವು ಕಡಿಮೆಯಾಗಿ ಅನಕ್ಷರತೆಯು ಹೆಚ್ಚಾಯಿತು .
ಖಗೋಳ ಹಾಗೂ ಗಣಿತದಲ್ಲೂ ಆ ಕಾಲದ ಪ್ರಪಂಚದ ಇತರ ಭಾಗದವರಿಗಿಂತ ಹೆಚ್ಚು ಮುಂದುವರೆದಿದ್ದರು. ಹಾಗಾಗಿಯೆ ಅನೇಕ ಗ್ರೀಕ್ ಇತಿಹಾಸಜಕಾರರಿಂದ ಆರಂಭಿಸಿ ಚೀನಿ ಯಾತ್ರಿಕನಾದ ಹ್ಯುಯನ್ ತ್ಸಾಂಗ್ ಮೊದಲಾದವರು ಭಾರತದ ಕುರಿತಾಗಿ ಗೌರವಶಾಲಿಯಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಮುಂದಿನ ಅನೇಕ ಶತಮಾನಗಳವರೆಗೆ ಪ್ರಾಯೋಗಿಕ ವಿಜ್ಞಾನಕ್ಕೆ ಹೆಚ್ಚು ಪ್ರೋತ್ಸಾಹ ಸಿಗದಿದ್ದಕ್ಕೆ ರಾಜಕೀಯ ಬದಲಾವಣೆಗಳೂ ಪ್ರಮುಖ ಕಾರಣವಾಗಿರಬಹುದು. ಯಾವುದೆ ರಾಜರು ತಂತ್ರಜ್ಞಾನದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ ಅದನ್ನು ಭಾರತದಲ್ಲಿ ಅಳವಡಿಸಿಕೊಂಡು ಬೆಳೆಸಬಹುದಾದ ಪ್ರಯತ್ನವನ್ನು ಮಾಡಲಿಲ್ಲ ಅಥವಾ ಅಂತಹ ನಾಯಕತ್ವಗುಣವನ್ನು ಮುಂದೆಯೂ ತೋರಲಿಲ್ಲ. ಆದರೆ ಬ್ರಿಟಿಷರ ಆಡಳಿತದಲ್ಲೂ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ದೂರದೃಷ್ಟಿಯಿಂದ ಪಶ್ಚಿಮದ ವಿಜ್ಞಾನ ತಂತ್ರಜ್ಞಾನವನ್ನು ಅಭ್ಯಸಿಸಲು ಪ್ರೋತ್ಸಾಹ ಒದಗಿಸಿ , ಅದರ ಫಲರೂಪವಾಗಿ ಅನೇಕ ಕಾರ್ಖಾನೆಗಳನ್ನು ನಿರ್ಮಿಸಿ ಆಗಿನ ಕಾಲದ ಅತ್ಯಂತ ಅಭಿವೃದ್ದಿಹೊಂದಿದ ಪ್ರದೇಶವನ್ನಾಗಿಸಿದರು. ದಿವಾನ್ ಶೇಷಾದ್ರಿ ಅಯ್ಯರ್ ಅವರನ್ನು ಯುರೋಪಿಗೆ ಕಳುಹಿಸಿ ಅಲ್ಲಿನ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವನ್ನು ಅಭ್ಯಸಿಸಲು ಪ್ರೋತ್ಸಾಹಿಸಿದರು. ಅದರಿಂದ ಶಿವನ ಸಮುದ್ರದಲ್ಲಿ ಎಷ್ಯಾದ ಮೊತ್ತ ಮೊದಲ ಜಲವಿದ್ಯುತ್ ಉತ್ಪಾದನೆಯ ಕೇಂದ್ರವನ್ನು 1905 ರಲ್ಲಿ ಪ್ರಾರಂಭಿಸಿದರು. ಬೆಂಗಳೂರು ಏಷ್ಯಾದಲ್ಲೆ ಮೊತ್ತ ಮೊದಲ್ ವಿದ್ಯುತ್ ದೀಪಗಳನ್ನು ಪಡೆದ ನಗರವಾಯಿತು. ಇಂತಹ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದ ದೂರದೃಷ್ಟಿ ನಾಯಕತ್ವದ ರಾಜರವರು. ಅವರ ಸಂಸ್ಕೃತ ಸಾಹಿತ್ಯ ,ಸಂಗೀತ ಮುಂತಾದ ಕಲಾ ಪ್ರಕಾರಗಳಿಗೂ ಪ್ರೋತ್ಸಾಹವಿತ್ತಿದ್ದನ್ನು ಸ್ಮರಿಸಲೇಬೇಕು . ಹಾಗಾಗಿ ಅಧುನಿಕ ವಿಜ್ಞಾನ ಹಾಗೂ ದೇಶೀಯ ಜ್ಞಾನಪರಂಪರೆಯ ಪ್ರೋತ್ಸಹಕ್ಕೆ ವಿರೋಧಾಭಾಸವನ್ನು ಕಾಣದೆ ಆಗಿನ ಕಾಲದಲ್ಲೆ ಭಾರತದ ಭವಿಷ್ಯದ ನೀತಿಗಳಿಗೆ ನೀಲಿನಕ್ಷೆಯನ್ನು ಹಾಕಿ ಕೊಟ್ಟರು. ಮೊದಲ ಹನ್ನೆರಡು ಶತಮಾನಗಳಲ್ಲೂ ಹಾಗೂ 20ನೆಯ ಶತಮಾನದ ಆದಿಯಲ್ಲೂ ರಾಜರಿಂದ ಈ ಬದಲಾವಣೆ ಸಾಧ್ಯವಾಗಿದ್ದಾದರೆ , ಮಧ್ಯದಲ್ಲಿ ರಾಜಕೀಯ ಅಸ್ಥಿರತೆ ,ದೂರದೃಷ್ಟಿ ನಾಯಕತ್ವ ಕೊರತೆಯೆ ನಮ್ಮಲ್ಲಿ ಪ್ರಾಯೋಗಿಕ ವಿಜ್ಞಾನ ಬೆಳವಣಿಗೆಯಾಗದಿರುದಕ್ಕೆ ಕಾರಣವೆನ್ನಬಹುದು.
ಈ ತೊಂದರೆಗಳು ನಿಧಾನಕ್ಕೆ ಪರಿಹಾರವಾಗಬಹುದು. ಜನರ ಬಡತನದಿಂದ
ಕುಂಠಿತವಾಗಿರುವ ಶಿಕ್ಷಣವು ಸರಕಾರದ ನೆರವಿನಿಂದಾಗಿ ದೇಶದಾದ್ಯಂತ ಸುಧಾರಣೆಯಾಗಬಹುದು. ಹಾಗೆಯೇ
ಒಳ್ಳೆಯ ಶಿಕ್ಷಣವನ್ನು ಸುಲಭವಾಗಿಯೂ ಎಲ್ಲರಿಗೂ ನೀಡುವುದರಿಂದ, ಆ ಮೂಲಕ ಶಿಕ್ಷಣಕ್ಕೆ ಸರಕಾರದಿಂದ ಪ್ರೋತ್ಸಾಹ
ಒದಗಿದರೆ ಸರಕಾರದ ಎಲ್ಲ ಕಛೇರಿಗಳಲ್ಲಿಯೂ ಅವರ ಸೇವೆಯನ್ನು ಪಡೆಯಬಹುದಾಗಿದೆ. ಉತ್ತಮ
ಶಿಕ್ಷಕರಿಲ್ಲದಿದ್ದರೆ ಈಗಿರುವ ಸ್ಥಿತಿಯನ್ನೇ ಒಂದು ವೇಳೆ ಮುಂದುವರಿಸಿದರೆ ಮುಂದೆ ಯಾವುದೇ
ಪ್ರಗತಿಯೂ ಸಾಧ್ಯವಾಗಲಾರದು. ಅಂತಹ ಉತ್ತಮ ಶಿಕ್ಷಕರು ತಯಾರಾದಾಗಬೇಕಾದರೆ ಅವರಿಗೆ ಉತ್ತಮ
ವೇತನವನ್ನು ನೀಡಬೇಕಾಗುತ್ತದೆ. ಹಾಗಾದುದರಿಂದ ಸರಕಾರದಿಂದ ಅವರಿಗೆ ಆಕರ್ಷಣೀಯವಾದ ಸಂಬಳವು ದೊರೆಯಬೇಕು.
ಅದರಿಂದ ಅವರಿಗೆ ತೃಪ್ತಿ ದೊರೆಯಬೇಕು. ಉಳಿದ ಸಮಸ್ಯೆಗಳು ಸಹಜವಾಗಿಯೇ ಪರಿಹಾರವಾದಾವು. ಅವರು
ಸಾಮಾನ್ಯ ಹಳ್ಳಿ ಶಾಲೆಯ ಉಪಾಧ್ಯಾಯರಿಗಿಂತ ಜ್ಞಾನದಲ್ಲಿಯೂ, ಕರ್ತವ್ಯದಲ್ಲಿಯೂ ಮೇಲ್ಮಟ್ಟದವರಾದರೆ ವಿದ್ಯಾರ್ಥಿಗಳು ಶಾಲೆಗೆ
ಬರುತ್ತಾರೆ. ಇದರಿಂದ ಅವರ ವರಮಾನವೂ ಹೆಚ್ಚಾಗುತ್ತದೆ.
ಶಾಲೆಗಳ
ಖರ್ಚುಗಳನ್ನು ಗೌರವಾನ್ವಿತ ನ್ಯಾಯಾಲಯದ ಅನುಮತಿಯನ್ನು ಪಡೆಯುವ ಮೊದಲೇ ನೀಡಬಹುದಾಗಿದೆ. ಅವರಿಂದ
ನಾವು ಅನುಮತಿ ಪಡೆಯಬೇಕಾದ ಒಟ್ಟು ಮೊತ ಕೇವಲ 50 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ. ಕಲೆಕ್ಟರ್‌ಗಳು ನೀಡಿರುವ ವರದಿಯ
ಪ್ರಕಾರ ಈ ಉದ್ದೇಶಕ್ಕಾಗಿ ನೀಡುವ ನೆರವು ಈ ಉದ್ದೇಶಕ್ಕೆ ಎಷ್ಟು ಮಾತ್ರಕ್ಕೂ ಸಾಕಾಗಲಾರದು. ಅಂತಹ
ನೆರವು ಹೆಚ್ಚೆಂದರೆ 20,000.00 ರೂಪಾಯಿಗಳು
ಮಾತ್ರವೇ ಆಗಿದೆ’’ ( ಸರ್ ಥೋಮಸ್ ಮನ್ರೋ ಕೈಗೊಂಡ ನಿರ್ಣಯಗಳು- ಮಾ.10,1826) ಹಾಗಾಗಿ ಬ್ರಿಟಿಷರು ನಮ್ಮ ಶಿಕ್ಷಣ
ಪದ್ಧತಿಯ ಉದ್ಧರಿಸಿದರು ಎಂಬ ಅವರ ವಾದವು ಅವರ ಅಭಿಪ್ರಾಯಗಳಿಗೆ ವಿರುದ್ಧವಾಗಿವೆ.

Comments
Post a Comment