ಇಂಡೋಲೋಜಿ ವಿಮರ್ಶೆ- 14 ಭಾರತೀಯ ಶಿಕ್ಷಣದ ಸಂಕ್ರಮಣಕಾಲ
ಇಂಡೊಲೊಜಿ ವಿಮರ್ಶೆ- 14 ಭಾರತೀಯ ಶಿಕ್ಷಣದ ಸಂಕ್ರಮಣಕಾಲ
ಹಿಂದಿನ ಸಂಚಿಕೆಯಲ್ಲಿ 18 ಹಾಗೂ 19 ನೆ ಶತಮಾನದ ಯೂರೋಪಿನ ಶಿಕ್ಷಣ
ವ್ಯವಸ್ಥೆ ಮತ್ತು ಪದ್ಧತಿಯನ್ನು ತಿಳಿದೆವು . ಹಾಗಾದರೆ ಭಾರತದಲ್ಲಿ ಆ ಕಾಲಘಟ್ಟದಲ್ಲಿ ಯಾವ ರೀತಿಯಾದ
ಶಿಕ್ಷಣ ವ್ಯವಸ್ಥೆಯಿತ್ತು ಎನ್ನುವ ಕುತೂಹಲ ಮೂಡುವುದು ಸಹಜ. ಭಾರತದಲ್ಲಿ ಲಕ್ಷ ಲಕ್ಷ ಗುರುಕುಲಗಳಿದ್ದದ್ದು
ಸತ್ಯವೆ ?, ಅಲ್ಲಿ ಯಾವ ವಿಷಯಗಳನ್ನು ಬೋಧಿಸುತ್ತಿದ್ದರು? ಅಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶವಿತ್ತೆ?,ಬ್ರಾಹ್ಮಣರಿಗೆ
ಮಾತ್ರ ಅಧ್ಯಯನಕ್ಕೆ ಅವಕಾಶವಿತ್ತೆ? ,ಉಳಿದವರನ್ನು ಇವರು ಶಿಕ್ಷಣದಿಂದ ವಂಚಿತರನ್ನಾಗಿಸಿದರು ಎಂಬೆಲ್ಲಾ
ವಾದಗಳಿವೆ ಇವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸಬೇಕಾಗಿದೆ .
31 ಡಿಸಂಬರ್ 1600 ರಲ್ಲಿ ಲಂಡನ್ನಿನ ವ್ಯಾಪಾರಿಗಳ ಗುಂಪೊಂದು ಈಸ್ಟ ಇಂಡಿಯಾ ಕಂಪನಿ ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ ಭಾರತ ಮುಂತಾದ ಪೂರ್ವೀಯ ದೇಶಗಳೊಂದಿಗೆ ವ್ಯಾಪಾರವನ್ನು ಮಾಡಲು ಬ್ರಿಟನ್ನಿನ ರಾಣಿಯಿಂದ ಪರವಾನಗಿಯನ್ನು ಪಡೆದರು . ಇದೊಂದು ಖಾಸಗಿ ಕಂಪನಿಯಾಗಿದ್ದು ವ್ಯಾಪಾರದಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿತ್ತು . ಹಾಗಾಗಿ 1600 ರಿಂದ 1813 ವರೆಗೂ ಬ್ರಿಟಿಷರ ಈ ಕಂಪನಿಯು ಭಾರತದ ಶಿಕ್ಷಣದ ಯಾವುದೆ ಚಿಂತೆಯನ್ನು ಮಾಡಿರಲಿಲ್ಲ. 19ನೆಯ ಶತಮಾನದ ಆದಿಯಲ್ಲಿ ಕಂಪನಿಯ ಆಡಳಿತ ಭಾರತಾದ್ಯಂತ ವಿಸ್ತಾರಗೊಂಡಾಗ ಮಿಶನರಿಗಳು ಕ್ರಿಶ್ಚಿಯಾನಿಟಿಯ ಪ್ರಸಾರಕ್ಕಾಗಿ ತಮಗೆ ಪರವಾನಗಿ ನೀಡುತ್ತಿಲ್ಲ ಎಂದು ಕಂಪನಿಯ ವಿರುದ್ಧ ಬೇಸರಗೊಂಡರು. ಅದರ ಜೊತೆಗೆ ಪೂರ್ವೀಯ ದೇಶಗಳ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಕೆಲವರು ಅವುಗಳ ಪ್ರೋತ್ಸಾಹಕ್ಕಾಗಿ ಕಂಪನಿಯು ಹಣವನ್ನು ಮೀಸಲಾಗಿಡಬೇಕು ಎಂದು ಬ್ರಿಟನ್ನಿನ ಪಾರ್ಲಿಮೆಂಟ್ ನ ಮೇಲೆ ಒತ್ತಡವನ್ನು ತಂದರು . ಅದರ ಪರಿಣಾಮವಾಗಿ 1813 ರಲ್ಲಿ ಬ್ರಿಟನ್ನಿನ ಪಾರ್ಲಿಮೆಂಟಿನಲ್ಲಿ Charter Act of 1813 ಎಂಬ ನಿಯಮದ ಮೂಲಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಕ್ಕೆ ಒಂದು ಲಕ್ಷ ರೂಪಾಯಿಗೆ ಕಮ್ಮಿ ಇಲ್ಲದಂತೆ ಖರ್ಚು ಮಾಡುವಂತೆ ಆದೇಶಿಸಿತು . ಅದಕ್ಕಾಗಿ ಭಾರತದ ಪ್ರಸಕ್ತ ಶಿಕ್ಷಣದ ಸ್ಥಿತಿಗತಿಗಳನ್ನು ತಿಳಿಯಲು ಸರ್ವೆಯೊಂದನ್ನು ನಡೆಸಲು ಕಂಪನಿಯು ತಿರ್ಮಾನಿಸಿತು .
ಆಡಳಿತದ ದೃಷ್ಟಿಯಿಂದ ಭಾರತವನ್ನು ಮದ್ರಾಸ್ ಪ್ರೆಸಿಡೆನ್ಸಿ , ಬೊಂಬೆ ಪ್ರೆಸಿಡೆನ್ಸಿ , ಕಲ್ಕತ್ತಾ ಪ್ರೆಸಿಡೆನ್ಸಿ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು . ಅದರಲ್ಲಿ ಕಲ್ಕತ್ತಾ ಪ್ರೆಸಿಡೆನ್ಸಿಯಲ್ಲಿ ವಿಲಿಯಂ ಎಡಂ ಎನ್ನುವವನು ಸರ್ವೆಯನ್ನು ನಡೆಸಿದನು . 1835 ರಲ್ಲಿ ಆಗಿನ ಗವರ್ನರ್ ಆಗಿದ್ದ ವಿಲಿಯಂ ಬೆಂಟಿಂಕ್ ನು ಇವನನ್ನು ಸರ್ವೆಯನ್ನು ನಡೆಸಲು ನಿಯುಕ್ತಿಗೊಳಿಸಿದನು. ಮುಂದಿನ ಮೂರು ವರ್ಷಗಳಲ್ಲಿ ಇವನು ಮೂರು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಮರ್ಪಿಸಿದನು . ಇವನ ವರದಿಯಲ್ಲಿ ಭಾರತದ ಆಗಿನ ಶಿಕ್ಷಣದ ಸ್ಥಿತಿಯನ್ನು ಅವನು ಹೀಗೆ ವಿವರಿಸಿದ್ದಾನೆ - The estimate of 100,000 such schools in Bengal and Behar is confirmed by a consideration of the number of villages. in those two provinces. Their number has been officially estimated at 150,748, of which, not all, but most have each a school. If it be admitted that there is so large a proportion as a third of the villages that have no schools, there will still be 100,000 that have them. Let it be admitted that these calculations from uncertain premises are only distant approximations to the truth, and it will still appear that the system of village schools is extensively prevalent; that the desire to give education to their male children must be deeply seated in the minds of parents even of the humblest classes ; and that these are the institutions, closely interwoven as they are with the habits of the people and the customs of the country, through which primarily, although not exclusively, we may hope to improve the morals and intellect of the native population.
(ಬಂಗಾಳ ಮತ್ತು ಬಿಹಾರದಲ್ಲಿ ಸುಮಾರು 1,00,000 ಪಾಠಶಾಲೆಗಳಿದ್ದವು ಎಂಬ ಅಂದಾಜು, ಅಲ್ಲಿನ ಗ್ರಾಮಗಳ ಸಂಖ್ಯೆಯನ್ನು
ಪರಿಗಣಿಸಿದಾಗ ಸಮಂಜಸವಾಗಿದೆ. ಈ ಎರಡು ಪ್ರಾಂತ್ಯಗಳಲ್ಲಿ ಒಟ್ಟು 1,50,748 ಗ್ರಾಮಗಳಿವೆ ಎಂದು ಸರ್ಕಾರದ ಅಂದಾಜು ಹೇಳುತ್ತದೆ. ಇವುಗಳಲ್ಲಿ ಎಲ್ಲ
ಗ್ರಾಮಗಳಲ್ಲದಿದ್ದರೂ, ಬಹುತೇಕ ಪ್ರತಿಯೊಂದು ಗ್ರಾಮದಲ್ಲೂ ಒಂದು
ಪಾಠಶಾಲೆ ಇತ್ತು.
ಮೂರನೇ ಒಂದು ಭಾಗದ ಗ್ರಾಮಗಳಲ್ಲಿ
ಪಾಠಶಾಲೆಗಳಿವೆ ಎಂದು ಒಪ್ಪಿಕೊಂಡರೂ, ಉಳಿದ ಸುಮಾರು 1,00,000 ಗ್ರಾಮಗಳಲ್ಲಿ ಪಾಠಶಾಲೆಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಲೆಕ್ಕಾಚಾರಗಳು ಸಂಪೂರ್ಣ
ನಿಖರವಾಗಿರದಿದ್ದರೂ, ಗ್ರಾಮೀಣ ಪಾಠಶಾಲೆಗಳ ವ್ಯವಸ್ಥೆ ಬಹಳ
ವ್ಯಾಪಕವಾಗಿತ್ತು ಎಂಬುದು ತಿಳಿಯುತ್ತದೆ.
ಬಡ ಕುಟುಂಬಗಳ ಪೋಷಕರಿಗೂ ತಮ್ಮ ಗಂಡು
ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ಬಲವಾದ ಆಸೆ ಇತ್ತು. ಜನರ ಜೀವನಶೈಲಿ ಮತ್ತು ದೇಶದ
ಸಂಪ್ರದಾಯಗಳೊಂದಿಗೆ ಬೆಸೆದುಕೊಂಡಿದ್ದ ಈ ಗ್ರಾಮೀಣ ಪಾಠಶಾಲೆಗಳ ಮೂಲಕವೇ ಮುಖ್ಯವಾಗಿ (ಆದರೆ ಕೇವಲ
ಅವುಗಳ ಮೂಲಕ ಮಾತ್ರವಲ್ಲ) ಭಾರತೀಯ ಜನರ ನೈತಿಕತೆ ಮತ್ತು ಬುದ್ಧಿಶಕ್ತಿಯನ್ನು ಅಭಿವೃದ್ಧಿಪಡಿಸಬಹುದು
ಎಂಬ ನಿರೀಕ್ಷೆ ಇದೆ.)
ಇವನ ವರದಿಯನ್ನು ಗಮನಿಸಿದಾಗ ಭಾರತದಲ್ಲಿ
ತಮ್ಮ ಮಕ್ಕಳು ಶಿಕ್ಷಣವನ್ನು ಪಡೆಯಬೆಕೆಂಬ ಹಂಬಲ ಸ್ವಾಭಾವಿಕವಾಗಿ ತಂದೆ ತಾಯಿಗಳಲ್ಲಿ ಇತ್ತು ಎಂದು
ತಿಳಿದುಬರುತ್ತದೆ . ಹಾಗಾಯೆ ಶಿಕ್ಷಣಕ್ಕಾಗಿ ಮನೆಯ ಪಾಠದ ಹೊರತಾಗಿಯೂ ಸಾರ್ವಜನಿಕವಾದ ವ್ಯಾಪಕವಾದ
ವ್ಯವಸ್ಥೆಯಿತ್ತು ಎಂದು ತಿಳಿಯಬಹುದಾಗಿದೆ .ಆದರೆ ಇದರ ಜೊತೆಗೆ ಭಾರತೀಯ ಜನರ ನೈತಿಕತೆ ಹಾಗು ಬುದ್ಧಿಶಕ್ತಿಯನ್ನು
ಅಭಿವೃದ್ಧಿಪಡಿಸಬೆಕೆಂಬ ಅವನ ಅಭಿಪ್ರಾಯವು ನೈತಿಕತೆ ಹಾಗು ಬುದ್ಧಿಮತ್ತೆಯ ಕುರಿತಾಗಿ ಯುರೊಪಿಯನ್ನರ
ಪೂರ್ವಾಗ್ರಹವನ್ನು ತಿಳಿಸುತ್ತದೆ .
ಅದೇ ರೀತಿಯಲ್ಲಿ ಮದ್ರಾಸ್ ಪ್ರೆಸಿಡೆಸಿಯಲ್ಲಿ ಥಾಮಸ್ ಮನ್ರೋ 1826ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಕೇವಲ ಮದ್ರಾಸಿನಲ್ಲಿಯೆ 11,758 ದೇಶೀಯ ಪ್ರಾಥಮಿಕ ಶಾಲೆಗಳಿದ್ದವು ಅಲ್ಲದೆ 749 ಕಾಲೇಜುಗಳಿದ್ದವು . ಇಲ್ಲಿ 1,57,644 ಹುಡುಗರು ಮತ್ತು 4023 ಹುಡುಗಿಯರು ವಿದ್ಯೆಯನ್ನು ಕಲಿಯುತ್ತಿದ್ದರು. . ತಂಜಾವೂರಿನ ಜೇ.ಕಾಟನ್ ಎಂಬ ಪ್ರಿನ್ಸಿಪಲ್ ಕಲೆಕ್ಟರ್ ನು ಜೂನ್ -28, 1823 ರಲ್ಲಿ ಸರ್ಕಾರಕ್ಕೆ ಸಮರ್ಪಿಸಿದ ವರದಿ .
|
ಶಾಲಾ-ಕಾಲೆಜುಗಳ ಸಂಖ್ಯೆ |
ಬ್ರಾಹ್ಮಣರು ಗಂಡು |
ಹೆಣ್ಣು |
ಕ್ಷತ್ರಿಯರು – ಗಂ |
ಹೆ |
ವೈಶ್ಯರು- ಗಂ |
ಹೆ- |
ಶೂದ್ರರು- ಗಂ- |
ಹೆ- |
ಇತರರು -ಗಂ |
ಹೆ |
|
884 |
2817 |
- |
369 |
- |
222 |
- |
10661 |
125 |
2426 |
29
|
ಇದನ್ನು ಗಮನಿಸಿದಾಗ
ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಬ್ರಾಹ್ಮಣೇತರರಿಗೆ ಶಿಕ್ಷಣಕ್ಕೆ ಅವಕಾಶವೆ ಇರಲಿಲ್ಲ ಎಂಬ ವಾದವು ಎಷ್ಟು ವರ್ಣರಂಜಿತವಾಗಿದೆ ಎಂದು ಗಮನಿಸಬಹುದಾಗಿದೆ . ಆದರೂ ಅನುಪಾತದಲ್ಲಿ ಹೆಣ್ಣು ಮಕ್ಕಳ
ಸಂಖ್ಯೆಯು ಕಡಿಮೆಯೆ ಇದೆ . ಎಲ್ಲಾ ಜಿಲ್ಲೆಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ
ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಸಿಮಿತವಾದ ಭಾಗವಹಿಸುವಿಕೆ
ಇತ್ತೆಂದು ತಿಳಿಯುತ್ತದೆ. ಆದರೆ ಶೂದ್ರ- ಹಾಗೂ ಇತರ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಗಣನೀಯವಾದ ಸಂಖ್ಯೆಯನ್ನು
ಗಮನಿಸಬಹುದಾಗಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮನೆಯಲ್ಲಿಯೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿತ್ತು.
ಇದು ಒಂದು ಜಿಲ್ಲೆಯ ವರದಿಯಾದರೂ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಾಸವಾದರೂ ಪ್ರಾಥಮಿಕ ಶಿಕ್ಷಣದಲ್ಲಿ
ಹಂತದಲ್ಲಿ ಭಾರತದ ಉತ್ತರ , ಪಶ್ಚಿಮ ಮುಂತಾದ ಭಾಗಗಳಲ್ಲಿಯು ಇದೆ ರಿತಿಯಾದ ಕ್ರಮವನ್ನು ಗಮನಿಸಬಹುದಾಗಿದೆ.
ಸಂಸ್ಕೃತ ಪಾಠಶಾಲೆಗಳಲ್ಲಿ ,ವೇದಪಾಠಶಾಲೆಗಳಲ್ಲಿ ಬ್ರಾಹ್ಮಣರು ಮಾತ್ರ ಅಧ್ಯಯನ ಮಾಡುತ್ತಿದ್ದರು. ಅದೇ
ರೀತಿಯಾಗಿ ಉನ್ನತ ಶಿಕ್ಷಣದ ವಿಷಯದಲ್ಲಿ ಬ್ರಾಹ್ಮಣರನ್ನು
ಬಿಟ್ಟು ಉಳಿದವರು ತಮ್ಮ ಕುಲವೃತ್ತಿಗನುಗುಣವಾಗಿ ವಿದ್ಯೆಯನ್ನು ಪಡೆಯುತ್ತಿದ್ದರು .
ಅಂದಿನ ಶಿಕ್ಷಣದ ಕ್ರಮವನ್ನು ತಿಳಿಯಬೇಕಾದರೆ
ಆಸ್ಟ್ರಿಯಾದೇಶದ ಮಿಶನರಿಯಾಗಿ 1776
ರಿಂದ 1789 ವರೆಗೆ ಭಾರತದ ಕೇರಳದ
ಮಲಬಾರಿನಲ್ಲಿ ನೆಲೆಸಿದ್ದ ರಾ ಪೊಲಿನೊ ಡ ಬಾರ್ತಲೋಮಿಯೋ
(Fra Paolino da San
Bartolomeo) ಎಂಬವುವನು ಬರೆದ “ವೊಯೇಜ್
ಟು ಈಸ್ಟ್ ಇಂಡೀಸ್`` (A
Voyage to the East Indies) ಎಂಬ
ಪುಸ್ತಕವನ್ನು ಗಮನಿಸಬೇಕಾಗುತ್ತದೆ. ಇವನು ಭಾರತದಲ್ಲಿ
ಹದಿಮೂರು ವರ್ಷಗಳ ಕಾಲ ಇದ್ದು ಸಂಸ್ಕೃತವನ್ನು ಅಧ್ಯಯನವನ್ನು ಮಾಡಿ 1790ರಲ್ಲಿ ರೋಮ್‌ನಲ್ಲಿ Sidharubam
seu Grammatica Samscrdamica ಎಂಬ ಗ್ರಂಥವನ್ನು ಪ್ರಕಟಿಸಿದರು. ಇದು
ಯುರೋಪಿನವರಿಗೆ ಲಭ್ಯವಾದ ಮೊದಲ ಮುದ್ರಿತ ಸಂಸ್ಕೃತ ವ್ಯಾಕರಣ ಗ್ರಂಥವಾಗಿತ್ತು.
‘’The education of youth in India is much simpler, and not near so expensive as in Europe. The children assemble half-naked under the shade of a coconut tree ; place themselves in rows on the ground, and trace out on the fand, with the fore finger of the right hand, the elements of their alphabet, and then smooth it with the left when they wish to trace out other characters. The writing matter, called Again, or Eluttacien, who stations himself opposite to his pupils, examines what they have done; points out their faults, and shews them how to correct them. At first, he attends them standing but when the young people have acquired some readiness in writing, he places himself cross-legged on a tiger’s or deer's skin, or even on a mat made of the leaves of the coco-nut tree, or wild ananas, which is called Kaida, plaited together. This method of teaching writing was introduced into India two hundred years before the birth of Christ, according to the testimony of Megasthenes, and still continues to be practiced. No people, perhaps, on earth have adhered so much to their ancient usages and cuftoms as the Indians…………’’ (Voyage To The East Indies- Book-2 , Chapter 1, p, 261 ) ‘’ ಭಾರತದ ಶಿಕ್ಷಣ ಪದ್ಧತಿಯು ಯುರೋಪಿನವರಿಗಿಂತ ಸರಳವೂ ಕಡಿಮೆ ಖರ್ಚಿನದೂ ಆಗಿದೆ. ಮಕ್ಕಳು ಒಂದು ತೆಂಗಿನ ಮರದಡಿಯಲ್ಲಿ ಅರೆಬೆತ್ತಲೆಯಾಗಿ ಸೇರುತ್ತಾರೆ. ಅಲ್ಲಿ ಅವರನ್ನು ಸಾಲಾಗಿ ನಿಲ್ಲಿಸಲಾಗುತ್ತದೆ. ಬಲಗೈ ತೋರು ಬೆರಳಿನಿಂದ ಮರಳಿನಲ್ಲಿ ಬರೆಯುತ್ತಾರೆ. ಬೆರಳಿನಲ್ಲಿ ವರ್ಣಮಾಲೆಯನ್ನು ಬರೆದ ಅನಂತರ ಎಡಗೈಯಿಂದ ಅದನ್ನು ಅಳಿಸಿ ಮತ್ತೆ ಬೇರೆ ಅಕ್ಷರಗಳನ್ನು ಕಲಿಯುತ್ತಾರೆ. ಬರವಣಿಗೆ ಕಲಿಸುವ ಅಧ್ಯಾಪಕರನ್ನು ಅಜ್ಜನ್ ಅಥವಾ ಎಳುತ್ತಚ್ಚನ್ ಎಂದು ಕರೆಯುತ್ತಾರೆ. ಆತನು ಎದುರುಗಡೆ ನಿಂತುಕೊಂಡು ಬರೆದಿರುವುದನ್ನು ವೀಕ್ಷಣೆ ಮಾಡುತ್ತಿರುತ್ತಾನೆ. ಅವರ ತಪ್ಪುಗಳನ್ನು ತಿದ್ದುತ್ತಾನೆ. ಮೊದಲ ಹಂತದಲ್ಲಿ ಅವರೆಲ್ಲ ನಿಂತುಕೊಂಡೇ ಪಾಠ ಕಲಿಯಬೇಕಾಗುತ್ತದೆ. ಆದರೆ ಹುಡುಗರು ಬರವಣಿಗೆಯನ್ನು ಕಲಿತುಕೊಂಡ ಮೇಲೆ ಹುಲಿಯ ಚರ್ಮದ ಮೇಲೆಯೋ ಅಥವಾ ಕೃಷ್ಣಾಜಿನದ ಮೇಲೆಯೋ ಪದ್ಮಾಸನದಲ್ಲಿ ಅವನು ಕೂರಿಸುತ್ತಾನೆ ಅಥವಾ ಹಳ್ಳಿಗಳಲ್ಲಿ ಮಾಡಿರುವ ಚಾಪೆಯ ಮೇಲೆ ಕೂರಿಸುತ್ತಾನೆ. ಈ ವಿಧಾನವು ಭಾರತದಲ್ಲಿ ಕ್ರೈಸ್ತರು ಬರುವುದಕ್ಕಿಂತ 200 ವರ್ಷಗಳ ಹಿಂದೆಯೇ ಬೆಳೆದು ಬಂದಿರುವುದಾಗಿದೆ. ಇದನ್ನು ಮೆಗಾಸ್ತಾನೀಸನು ಗುರುತಿಸಿರುವನಲ್ಲದೇ ಈಗಲೂ ಅದು ಮುಂದುವರಿಯುತ್ತಿದೆ. ಜಗತ್ತಿನ ಯಾವುದೇ ಜನರು ಭಾರತೀಯರ ಪೂರ್ವಜರಷ್ಟರ ಮಟ್ಟಿಗೆ ಈ ವಿಷಯದಲ್ಲಿ ಮುಂದುವರಿದಿಲ್ಲವೆಂಬುದು ಗಮನಾರ್ಹವಾದುದು.
ಮಲಬಾರಿನಲ್ಲಿ ಉಪಾಧ್ಯಾಯರು ಪ್ರತೀ ಎರಡು ತಿಂಗಳಿಗೊಮ್ಮೆ ತಮ್ಮ
ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಡೆಯುತ್ತಾರೆ. ಅದು ಎರಡು ಪಣ ಅಥವ ಪಣಮ್ ಪ್ರಮಾಣದ ಶಿಕ್ಷಣ
ಶುಲ್ಕವಾಗಿರುತ್ತದೆ. ಆದರೆ ಕೆಲವರು ಹಣ ಕೊಡುವುದಿಲ್ಲ. ಬದಲಾಗಿ ಒಂದಷ್ಟು ಅಕ್ಕಿ ಕೊಡುತ್ತಾರೆ.
ಆದುದರಿಂದಾಗಿ ವಿದ್ಯಾರ್ಥಿಗಳ ಪೋಷಕರಿಗೆ ಶಿಕ್ಷಣ ಹೊರೆಯಾಗುವುದೇ ಇಲ್ಲ. ಕೆಲವು ಅಧ್ಯಾಪಕರು
ವಿದ್ಯಾರ್ಥಿಗಳಿಂದ ಪ್ರತಿಯಾಗಿ ಏನನ್ನು ಬಯಸದೇ ಉಚಿತವಾಗಿಯೇ ವಿದ್ಯಾಭ್ಯಾಸವನ್ನು ನೀಡುತ್ತಾರೆ.
ಅಂತಹವರಿಗೆ ದೇವಾಲಯಗಳಿಂದಲೋ ಅಥವಾ ಜಾತಿಯ ಮುಖಂಡನಿಂದಲೋ ಸಂಭಾವನೆಯನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳು ಬರವಣಿಗೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಮೇಲೆ ಅವರನ್ನೂ ಕೆಲವೊಂದು ಶಾಲೆಗಳಲ್ಲಿ
ಸೇರಿಸಲಾಗುತ್ತದೆ. ಅವುಗಳನ್ನು 'ಏದುಪಲ್ಲಿ' ಎಂದು ಕರೆಯುತ್ತಾರೆ. ಅಲ್ಲಿ ಅವರು ತಾಳೆಗರಿಯಲ್ಲಿ (ಪನ)
ಬರೆಯುವುದಕ್ಕೆ ಕಲಿಯುತ್ತಾರೆ. ಇಂತಹ ಅನೇಕ ಗರಿಗಳ ಕಟ್ಟನ್ನು ಗ್ರಂಥ ಎಂದು ಕರೆಯುತ್ತಾರೆ. ಅದು
ಭಾರತೀಯ ಪ್ರಾಚೀನ ಪುಸ್ತಕವಾಗಿದೆ. ಇಂತಹ ಪುಸ್ತಕವನ್ನು ಕಬ್ಬಿಣದ ತಗಡಿನಲ್ಲಿ ಬರೆದರೆ ಅದನ್ನು
ಗ್ರಂಥವರಿ ಅಥವಾ ಲೇಖ್ಯ ಎನ್ನುತ್ತಾರೆ. ಅಂದರೆ ಬರವಣಿಗೆ ಎಂದರ್ಥ. ಇದು ಅಲೇಖ್ಯವಾದುದರಿಂದ
ಲೇಖ್ಯವನ್ನು ಬೇರ್ಪಡಿಸುವ ಕ್ರಮವಾಗಿರುತ್ತದೆ.
ಶಾಲೆಗೆ ಗುರು ಅಥವಾ ಉಪಾಧ್ಯಾಯರು ಬರುತ್ತಿರುವ ಹಾಗೆಯೇ ಅವರಿಗೆ
ಅತ್ಯಂತ ಗೌರವವನ್ನು ನೀಡಲಾಗುತ್ತದೆ. ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರವನ್ನು ವಿದ್ಯಾರ್ಥಿಗಳು
ಮಾಡುತ್ತಾರೆ; ಹಾಗೆಯೇ ಬಲಗೈಯಿಂದ ಬಾಯಿ
ಮುಚ್ಚಿಕೊಳ್ಳುತ್ತಾರೆ. ಗುರುವು ಮಾತಾಡಲು ಹೇಳುವವರೆಗೆ ಬಾಯಿಂದ ಕೈ ತೆಗೆಯುವುದಿಲ್ಲ. ಅವರ
ಅನುಮತಿಯಿಲ್ಲದೇ ಮಾತಾಡುವುದು ಅಥವಾ ಅವಿಧೇಯವಾಗಿ ವರ್ತಿಸುವವರನ್ನು ಶಾಲೆಯಿಂದ
ಹೊರಗಟ್ಟಲಾಗುತ್ತದೆ. ಕೆಲವೊಮ್ಮೆ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಮಟ್ಟಕ್ಕೆ ಬೆಳೆಯದವರನ್ನು
ಕೂಡ ಶಾಲೆಯಿಂದ ಹೊರಗಟ್ಟಲಾಗುತ್ತದೆ. ಈ ಕಾರಣಕ್ಕಾಗಿ ಗುರುಗಳಿಗೆ ತಕ್ಕ ಮರ್ಯಾದೆಯನ್ನು ಯಾವಾಗಲೂ
ನೀಡಲಾಗುತ್ತದೆ. ಹಾಗಾದುದರಿಂದ ವಿದ್ಯಾರ್ಥಿಗಳು ಕೂಡ ಯಾವಾಗಲೂ ವಿನಯವಂತರಿರುತ್ತಾರೆ. ಹಾಗೆಯೇ
ಅವರು ನಿಯಮಗಳನ್ನು ಮೀರುವುದೇ ಅಪರೂಪವಾಗಿರುತ್ತದೆ. ಗುರುಗಳು ಮುಖ್ಯವಾಗಿ ಬರವಣಿಗೆ ಮತ್ತು
ಲೆಕ್ಕ, ಸಂಸ್ಕೃತ, ವ್ಯಾಕರಣ (ಮೊದಲ ಹಂತ), ಸಂಸ್ಕೃತ, ವ್ಯಾಕರಣ (ಎರಡನೆಯ ಹಂತ) ಅಮರಕೋಶ ಇತ್ಯಾದಿಗಳನ್ನು ಕಲಿಸುತ್ತಾರೆ.
ಭಾರತೀಯರ ಶಾಲೆಗಳಲ್ಲಿ ಕಾವ್ಯ, ಶಸ್ತ್ರವಿದ್ಯೆ, ವೈದ್ಯಶಾಸ್ತ್ರ, ನೌಕಾಶಾಸ್ತ್ರ, ಈಟಿ ವಿದ್ಯೆ, ಚೆಂಡಾಟ, ಚದುರಂಗ, ತರ್ಕಶಾಸ್ತ್ರ, ಜ್ಯೋತಿಷ್ಯ, ಸ್ವಾಧ್ಯಾಯ ಮತ್ತು ಮೌನ ಇವುಗಳನ್ನು ಕಲಿಸುತ್ತಾರೆ.
ಭಾರತದ ಎಲ್ಲ ಸ್ತ್ರೀಯರೂ ಶೂದ್ರರು ಮತ್ತು ನಾಯರ್ ಹೆಣ್ಣು ಮಕ್ಕಳನ್ನು ಹೊರತುಪಡಿಸಿ 12ನೇ ವರ್ಷಗಳವರೆಗೆ ಮನೆಯಲ್ಲಿಯೇ ಇರುತ್ತಾರೆ. ಅವರು ಮನೆಯಿಂದ ಹೊರಗೆ ಹೊರಟರೆಂದರೆ ಅವರ ತಾಯಿ ಇಲ್ಲವೇ ಅತ್ತೆ ಜೊತೆಯಲ್ಲಿರುತ್ತಾರೆ. ಅವರು ತಮ್ಮ ಮನೆಯ ಒಂದು ನಿರ್ದಿಷ್ಟ ಭಾಗದಲ್ಲಿ ಇರುತ್ತಾರೆ. ಅದನ್ನು ಅಂತಗ್ರ್ರಹ ಎಂದು ಕರೆಯುತ್ತಾರೆ. ಅಲ್ಲಿಗೆ ಯಾವುದೇ ಗಂಡಸು ಹೋಗುವಂತಿಲ್ಲ,
ಹುಡುಗರಿಗೆ 9ನೇ ವಯಸ್ಸಿನಲ್ಲಿ ಅವನ ತಂದೆಯ ಜಾತಿಗೆ ಅಥವಾ ವೃತ್ತಿಗೆ ಸೇರಿಸುವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗುತ್ತದೆ. ಹಾಗೆ ಆದಮೇಲೆ ಅವರು ಅದನ್ನು ಎಂದಿಗೂ ಮೀರುವಂತಿಲ್ಲ. ಗ್ರೀಕ್ ಲೇಖಕರೆಲ್ಲ ಹೇಳಿರುವಂತೆ ಈ ನಿಯಮಗಳೆಲ್ಲ ಅತ್ಯಂತ ಜಟಿಲವಾದವು. ಆದರೂ ಇವುಗಳೆಲ್ಲ ಶಿಕ್ಷಣಕ್ಕೆ ಹಾಗೆಯೇ ರೀಲಿಜಿಯನ್ನಿನ ದೃಷ್ಟಿಯಿಂದ ಅತ್ಯಗತ್ಯವಾದುವುಗಳೇ ಆಗಿವೆ. ಈ ನಿಯಮಗಳ ಪ್ರಕಾರ ಬೇರೆ ಜಾತಿಯವರನ್ನು ಮದುವೆಯಾಗುವಂತೆಯೇ ಇಲ್ಲ. ಹಾಗಾದುದರಿಂದ ಭಾರತೀಯರು ಸಾಧಾರಣವಾದ ಮತ್ತು ಮೇಲ್ಲೋರಿಕೆಯ ಶಿಕ್ಷಣ ಪದ್ಧತಿಯಲ್ಲಿ ತಮ್ಮ ಮಕ್ಕಳನ್ನು ಬೆಳೆಸುವುದಿಲ್ಲ ಎಂದು ಇದರಿಂದ ತಿಳಿಯುತ್ತದೆ. ಆದರೆ ಪ್ರತಿಯೊಂದು ಜಾತಿಯಲ್ಲಿ ಹುಟ್ಟಿದ ಮಗುವು ಕೂಡ ತನ್ನ ಒಟ್ಟು ಜೀವನದಲ್ಲಿ ಏನಾಗಬೇಕೋ ಹಾಗೆ ಕಲಿಯುತ್ತಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಭವಿಷ್ಯತ್ತಿನ ಬ್ರಾಹ್ಮಣ ಹುಡುಗನು ಮೊದಲಿನಿಂದಲೇ ಓದು - ಬರವಣಿಗೆ, ಪೂಜೆ, ಚಂದ್ರ ಗ್ರಹಣ - ಸೂರ್ಯಗ್ರಹಣಗಳನ್ನು ಲೆಕ್ಕ ಹಾಕುವುದು; ಕಾನೂನು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಕಲಿಯುತ್ತಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವೇದ ವೇದಾಂಗಗಳೆಲ್ಲವನ್ನು ಕಲಿಯಬೇಕಾಗುತ್ತದೆ. ವೈಶ್ಯನು ಕೃಷಿಗೆ ಸಂಬಂಧಿಸಿದ ವಿದ್ಯೆಯನ್ನು ಕಲಿಯುತ್ತಾನೆ. ಕ್ಷತ್ರಿಯರು ಯುದ್ಧ ವಿದ್ಯೆಯನ್ನು ಕಲಿಯುತ್ತಾರೆ. ಹಾಗೆಯೇ ಶೂದ್ರನು ಯಂತ್ರ ವಿದ್ಯೆ, ಬೆಸ್ತರವನು ಮೀನು ಹಿಡಿಯುವುದು, ತೋಟಿಗನು ತೋಟ ಬೆಳೆಸುವುದು, ಬನಿಯನು ವಾಣಿಜ್ಯವನ್ನು ಕಲಿಯುತ್ತಾನೆ.
ಈ ರೀತಿಯ ವಿದ್ಯಾಭ್ಯಾಸದ ಮೂಲಕ
ಸಾರ್ವಜನಿಕ ಹಿತದೃಷ್ಟಿಯಿಂದ ಅನೇಕ ಸಂಗತಿಗಳು ಸಾಧ್ಯವಾಗುತ್ತವೆ. ಇದರಿಂದ ತಲೆಮಾರು -
ತಲೆಮಾರುಗಳಿಗೆ ಜ್ಞಾನ ಹರಿದು ಬರುವುದಕ್ಕೆ ಸಾಧ್ಯವಾಗುತ್ತದೆ; ಹಾಗಾದಾಗ ಜ್ಞಾನ ನಿರಂತರವಾಗಿ ಒಂದು ಹೆಜ್ಜೆ ಮುಂದೆ
ಹೋಗುತ್ತದೆಯಲ್ಲದೇ, ಇನ್ನಷ್ಟು ನಿಶ್ಚಿತಗೊಳ್ಳುತ್ತದೆ.
ಅಲೆಕ್ಸಾಂಡರ್ ಮಹಾಶಯನ ಕಾಲದಲ್ಲಿ ಭಾರತೀಯರು ತಾಂತ್ರಿಕವಾಗಿ ಅಪಾರ ಸಾಧನೆಯನ್ನು ಮಾಡಿದ್ದರು.
ಒಂದು ಸಲ ನಾನು ಇದನ್ನೆಲ್ಲ ಕಣ್ಣಾರೆ ಕಂಡೆ. ಪೋರ್ಚಗಲ್‌ನಲ್ಲಿ ಭಾರತೀಯರು ಮಾಡಿದ ಒಂದು
ಲ್ಯಾಂಪನ್ನು ನಾನು ನೋಡಿದ್ದೇನೆ. ಅದು ತುಂಬ ಸುಂದರವಾಗಿತ್ತು. ಅದರಲ್ಲಿರುವ ಕಲಾ ನೈಪುಣ್ಯ
ಅತ್ಯಂತ ವಿನೂತನವಾಗಿತ್ತು.
ಕೆಲವು ದಿನಗಳ ಅಂತಹದ್ದೇ ಇನ್ನೊಂದು
ಲ್ಯಾಂಪ್ ನನಗೆ ದೊರೆಯಿತು. ಅದರಲ್ಲಿ ಏನೂ ವ್ಯತ್ಯಾಸವಿರಲಿಲ್ಲ. ಹಾಗಾದುದರಿಂದ ಭಾರತದಲ್ಲಿ ಕಲೆ
ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದೇಶೀಯರು ಭಾರತಕ್ಕೆ ಬಂದಲ್ಲಿಂದ ತೀವ್ರವಾದ
ಅಧಃಪತನವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು. ಇದರಿಂದಾಗಿ ಅನೇಕ ಪ್ರಾಂತ್ಯಗಳಲ್ಲಿ ಏನೂ ಪ್ರೋತ್ಸಾಹ
ದೊರೆಯಲಿಲ್ಲ. ಜಾತಿ-ಜಾತಿಗಳು ಪರಸ್ಪರ ಜಗಳವಾಡುವುದಕ್ಕೆ ಪ್ರಾರಂಭಿಸಿದವು. ಅದಕ್ಕಿಂತ ಮೊದಲು ಬೇರೆ ಬೇರೆ ಸಾಮ್ರಾಜ್ಯಗಳು
ಅಭ್ಯುದಯದ ಪಥದಲ್ಲಿದ್ದವು. ಕಾನೂನುಗಳನ್ನು ಗೌರವಿಸಲಾಗುತ್ತಿತ್ತು. ನ್ಯಾಯ ನೀತಿಗಳು ಎಲ್ಲೆಲ್ಲೂ ಕಂಡುಬರುತ್ತಿದ್ದವು. ದುರಾದೃಷ್ಟವಶಾತ್ ಈಗಿನ
ಪ್ರಾಂತ್ಯಗಳಲ್ಲಿ ಎಲ್ಲ ಕಡೆಯೂ ಅರಾಜಕತೆಯೆ ಕಂಡುಬರುತ್ತದೆ.’’ (Voyage To the East Indies- Book-2, Chapter 1, p,261-265).
ಇದು ದಕ್ಷಿಣಭಾರತದ ಅವನ ಅನುಭವವಾದರೂ ಸಮಗ್ರ ಭಾರತದ ಆಗಿನ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಬಿಂಬಿಸುತ್ತದೆ. ಅದರಲ್ಲೂ ಅವನ ಕೊನೆಯ ಮಾತಿನಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಗಳಿವೆ. ಅದರ ವಿಮರ್ಶೆ ಮುಂದಿನ ಸಂಚಿಕೆಯಲ್ಲಿ.....

Comments
Post a Comment