Posts

Showing posts from 2026

ಇಂಡೊಲೊಜಿ ವಿಮರ್ಶೆ- 15 ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2

Image
                                ಇಂಡೊಲೊಜಿ ವಿಮರ್ಶೆ- 15  ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2         ನಿರಂತರ ರಾಜಕೀಯ ವಿಪ್ಲವ ಹಾಗೂ ಅಸ್ಥಿರತೆಯಿಂದ ಭಾರತದಲ್ಲಿ ಕೆಲವು ಶತಮಾನಗಳವರೆಗೆ ಜ್ಞಾನದ ವಿಕಾಸದಲ್ಲಿ ಕುಂಠಿತತೆಯನ್ನು ಗಮನಿಸಬಹುದು. ನೂತನ ಆವಿಷ್ಕಾರಗಳು ,ಪ್ರಾಯೋಗಿಕ ವಿಜ್ಞಾನದ ( Experimental Science) ಬೆಳವಣಿಗೆಗಳು ಹತ್ತನೆಯ ಶತಮಾನದ ನಂತರ ಇಳಿಮುಖದಲ್ಲಿದ್ದು ಹದಿನಾರನೆಯ ಶತಮಾನದ ನಂತರ ಸಂಪೂರ್ಣ ಕುಂಠಿತವಾಯ್ತು. ಅದಕ್ಕೆ ಪ್ರಾಯಃ ದೇಶಿಯ ರಾಜರುಗಳು  ದೇಶಿ ಹಾಗೂ ವಿದೇಶಿ ಆಕ್ರಮಣಗಳಿಂದ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವುದರಲ್ಲೆ ಮಗ್ನವಾಗಿದ್ದದ್ದು ಕಾರಣ. ರಾಜರ ದೂರದೃಷ್ಟಿ ರಹಿತವಾದ ನಾಯಕತ್ವವು ಪ್ರಮುಖ ಕಾರಣಗಳಲ್ಲೊಂದು. ಹದಿನೆಂಟು ಹಾಗೂ ಹತ್ತೊಂಬತ್ತನೆಯ ಶತಮಾನದಲ್ಲಿ  ರಾಜರು ಭಾರತೀಯ ವಿದ್ಯೆಗಳಿಗಾಗಿ ಪಾಠಶಾಲೆಗಳಿಗೆ ದೇಣಿಗೆಗಳನ್ನು , ಜಮೀನುಗಳನ್ನು ಕೊಡುತ್ತಿದ್ದರೂ ಕೂಡ ಪಶ್ಚಿಮದೇಶದಿಂದ ಹೊಸತಾಗಿ ಉದಯವಾಗುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಥವಾ ಅರಿತುಕೊಳ್ಳುವ ಪ್ರಯತ್ನವಾಗಲಿಲ್ಲ. ಪಾಠಶಾಲೆಗಳಲ್ಲಿ ಹಾಗು ಗುರುಕುಲಗಳಲ್ಲಿ ಸಾಹಿತ್ಯ, ವ್ಯಾಕರಣ, ನ್ಯಾಯ, ವೇದಾಂತ ಮುಂತಾದ ಪಾರಂಪರಿಕ ...

ಇಂಡೋಲೋಜಿ ವಿಮರ್ಶೆ- 14 ಭಾರತೀಯ ಶಿಕ್ಷಣದ ಸಂಕ್ರಮಣಕಾಲ

Image
                                                                                             ಇಂಡೊಲೊಜಿ ವಿಮರ್ಶೆ - 14  ಭಾರತೀಯ ಶಿಕ್ಷಣದ ಸಂಕ್ರಮಣಕಾಲ ಹಿಂದಿನ ಸಂಚಿಕೆಯಲ್ಲಿ 18 ಹಾಗೂ 19 ನೆ ಶತಮಾನದ ಯೂರೋಪಿನ ಶಿಕ್ಷಣ ವ್ಯವಸ್ಥೆ ಮತ್ತು ಪದ್ಧತಿಯನ್ನು ತಿಳಿದೆವು . ಹಾಗಾದರೆ ಭಾರತದಲ್ಲಿ ಆ ಕಾಲಘಟ್ಟದಲ್ಲಿ ಯಾವ ರೀತಿಯಾದ ಶಿಕ್ಷಣ ವ್ಯವಸ್ಥೆಯಿತ್ತು ಎನ್ನುವ ಕುತೂಹಲ ಮೂಡುವುದು ಸಹಜ. ಭಾರತದಲ್ಲಿ ಲಕ್ಷ ಲಕ್ಷ ಗುರುಕುಲಗಳಿದ್ದದ್ದು ಸತ್ಯವೆ ?, ಅಲ್ಲಿ ಯಾವ ವಿಷಯಗಳನ್ನು ಬೋಧಿಸುತ್ತಿದ್ದರು? ಅಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶವಿತ್ತೆ?,ಬ್ರಾಹ್ಮಣರಿಗೆ ಮಾತ್ರ ಅಧ್ಯಯನಕ್ಕೆ ಅವಕಾಶವಿತ್ತೆ? ,ಉಳಿದವರನ್ನು ಇವರು ಶಿಕ್ಷಣದಿಂದ ವಂಚಿತರನ್ನಾಗಿಸಿದರು ಎಂಬೆಲ್ಲಾ ವಾದಗಳಿವೆ ಇವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸಬೇಕಾಗಿದೆ .   31 ಡಿಸಂಬರ್ 1600 ರಲ್ಲಿ ಲಂಡನ್ನಿನ ವ್ಯಾಪಾರಿಗಳ ಗುಂಪೊಂದು  ಈಸ್ಟ ಇಂಡಿಯಾ ಕಂಪನಿ ಎಂಬ ಹೆಸರಿನಲ್ಲಿ ಕಂಪನಿಯೊಂ...

ಇಂಡೊಲೋಜಿ ವಿಮರ್ಶೆ 13 – ಬ್ರಿಟನ್ನಿನ ಶೈಕ್ಷಣಿಕ ಕ್ರಾಂತಿಗೆ ಸ್ಫೂರ್ತಿಯಾದ ಭಾರತಿಯ ಗುರುಕುಲ ಪದ್ಧತಿ

Image
  ಇಂಡೊಲೋಜಿ ವಿಮರ್ಶೆ 13 – ಬ್ರಿಟನ್ನಿನ ಶೈಕ್ಷಣಿಕ ಕ್ರಾಂತಿಗೆ ಸ್ಫೂರ್ತಿಯಾದ ಭಾರತಿಯ ಗುರುಕುಲ ಪದ್ಧತಿ ಭಾರತದಲ್ಲಿ ಬ್ರಿಟಿಷರು ಬರುವ ಮೊದಲು ಸಾಮೂಹಿಕವಾದ ಶಿಕ್ಷಣವ್ಯವಸ್ಥೆಯೆ ಇರಲಿಲ್ಲ. ಅದರಲ್ಲೂ ಕೇವಲ ಬ್ರಾಹ್ಮಣರು ಮಾತ್ರ ಶಿಕ್ಷಣವನ್ನು ಪಡೆಯುತ್ತಿದ್ದು , ಉಳಿದ ವರ್ಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದರು ಎಂದು ಭಾರತಿಯರಲ್ಲಿ ತುಂಬಿಸಿದ ಭಾವನೆ . ಆದರೆ ಇದರ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡುವುದಕ್ಕೆ ಇದು ಸಕಾಲ. ಬ್ರಿಟೀಷರು ಭಾರತೀಯ ಶಿಕ್ಷಣವ್ಯವಸ್ಥೆಯನ್ನು ಸರಿಮಾಡಬೇಕಿದ್ದಲ್ಲಿ , ಮೊದಲು ಅವರಲ್ಲಿ ಒಂದು ಒಳ್ಳೆಯ ಶಿಕ್ಷಣವ್ಯವಸ್ಥೆ ಇದ್ದಿರಲೇ ಬೇಕಲ್ಲವೆ ? ಹಾಗದರೆ 17 ಮತ್ತು 18 ಶತಮಾನದಲ್ಲಿ  ಬ್ರಿಟನ್ ನಲ್ಲಿ ಯಾವ ಮಟ್ಟದ ಶಿಕ್ಷಣದ ವ್ಯವಸ್ಥೆಯಿತ್ತೆನ್ನುವುದನ್ನು ವಿಮರ್ಶಿಸಬೇಕು .  ಎಲ್ಲರೂ ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋಗುವಾಗ Monitor ಎಂಬ ಪದವನ್ನು ಕೇಳಿಯೆ ಇರುತ್ತೀರಿ. ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಒಬ್ಬ ವಿದ್ಯಾರ್ಥಿಯನ್ನು Monitor ಮಾಡಿ ಅವನು ತರಗತಿಯನ್ನು ನಿಯಂತ್ರಿಸುವ ವ್ಯವಸ್ಥೆ . ಈ Monitor ವ್ಯವಸ್ಥೆಗೆ ಸ್ಫೂರ್ತಿ  ಗುರುಕುಲ ಶಿಕ್ಷಣ ವ್ಯವಸ್ಥೆ. ಈ ಮಾನಿಟರ್ ವ್ಯವಸ್ಥೆ ಬ್ರಿಟನ್ ನಲ್ಲಿ ಶಿಕ್ಷಣ ಕ್ರಾಂತಿಗೆ ಮೂಲವಾಯಿತು. ಬ್ರಿಟನ್ ಶಿಕ್ಷಣ ಕ್ರಾಂತಿಗೂ ಗುರುಕುಲ ವ್ಯವಸ್ಥೆಗೂ  ಎತ್ತಣ ಸಂಬಂಧ ಎನ್ನುವ  ಸಂಶಯವೇ? ಇದಕ್ಕೆ ಉತ್ತರ ಮುಂದೆ ಇದೆ. ...

Principles of Leadership in the Teachings and Life of Shri Madhvacharya

Image
  Principles of Leadership in the Teachings and Life of Shri Madhvacharya अमंत्रम् अक्षरं नास्ति नास्ति मूलम्अनौषधं| अयोग्यः पुरुषो नास्ति योजकः तत्र दुर्लभः || This Sanskrit subhāṣita says that there is no syllable that cannot be transformed into a mantra, no plant that has no medicinal value, and no person who is completely incapable. What is rare is a person who can identify these hidden qualities, discover them, and employ them appropriately in the right situation. So how can this problem be addressed? Is there a solution? Can we find such guidance in the life and works of Madhwacharya? The answer is yes. A good leader knows how to assign the right work to the right person. Therefore, leadership qualities must be cultivated in an individual to address this challenge. The important questions then are: What are those leadership qualities? How can one become a true leader? Madhwacharya answers these questions through his life and teachings. Leading from the Front A leader must alw...