ಇಂಡೊಲೋಜಿ ವಿಮರ್ಶೆ 13 – ಬ್ರಿಟನ್ನಿನ ಶೈಕ್ಷಣಿಕ ಕ್ರಾಂತಿಗೆ ಸ್ಫೂರ್ತಿಯಾದ ಭಾರತಿಯ ಗುರುಕುಲ ಪದ್ಧತಿ

 


ಇಂಡೊಲೋಜಿ ವಿಮರ್ಶೆ 13 – ಬ್ರಿಟನ್ನಿನ ಶೈಕ್ಷಣಿಕ ಕ್ರಾಂತಿಗೆ ಸ್ಫೂರ್ತಿಯಾದ ಭಾರತಿಯ ಗುರುಕುಲ ಪದ್ಧತಿ

ಭಾರತದಲ್ಲಿ ಬ್ರಿಟಿಷರು ಬರುವ ಮೊದಲು ಸಾಮೂಹಿಕವಾದ ಶಿಕ್ಷಣವ್ಯವಸ್ಥೆಯೆ ಇರಲಿಲ್ಲ. ಅದರಲ್ಲೂ ಕೇವಲ ಬ್ರಾಹ್ಮಣರು ಮಾತ್ರ ಶಿಕ್ಷಣವನ್ನು ಪಡೆಯುತ್ತಿದ್ದು , ಉಳಿದ ವರ್ಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದರು ಎಂದು ಭಾರತಿಯರಲ್ಲಿ ತುಂಬಿಸಿದ ಭಾವನೆ . ಆದರೆ ಇದರ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡುವುದಕ್ಕೆ ಇದು ಸಕಾಲ. ಬ್ರಿಟೀಷರು ಭಾರತೀಯ ಶಿಕ್ಷಣವ್ಯವಸ್ಥೆಯನ್ನು ಸರಿಮಾಡಬೇಕಿದ್ದಲ್ಲಿ , ಮೊದಲು ಅವರಲ್ಲಿ ಒಂದು ಒಳ್ಳೆಯ ಶಿಕ್ಷಣವ್ಯವಸ್ಥೆ ಇದ್ದಿರಲೇ ಬೇಕಲ್ಲವೆ ? ಹಾಗದರೆ 17 ಮತ್ತು 18 ಶತಮಾನದಲ್ಲಿ  ಬ್ರಿಟನ್ ನಲ್ಲಿ ಯಾವ ಮಟ್ಟದ ಶಿಕ್ಷಣದ ವ್ಯವಸ್ಥೆಯಿತ್ತೆನ್ನುವುದನ್ನು ವಿಮರ್ಶಿಸಬೇಕು . 

ಎಲ್ಲರೂ ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋಗುವಾಗ Monitor ಎಂಬ ಪದವನ್ನು ಕೇಳಿಯೆ ಇರುತ್ತೀರಿ. ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಒಬ್ಬ ವಿದ್ಯಾರ್ಥಿಯನ್ನು Monitor ಮಾಡಿ ಅವನು ತರಗತಿಯನ್ನು ನಿಯಂತ್ರಿಸುವ ವ್ಯವಸ್ಥೆ . ಈ Monitor ವ್ಯವಸ್ಥೆಗೆ ಸ್ಫೂರ್ತಿ  ಗುರುಕುಲ ಶಿಕ್ಷಣ ವ್ಯವಸ್ಥೆ. ಈ ಮಾನಿಟರ್ ವ್ಯವಸ್ಥೆ ಬ್ರಿಟನ್ ನಲ್ಲಿ ಶಿಕ್ಷಣ ಕ್ರಾಂತಿಗೆ ಮೂಲವಾಯಿತು. ಬ್ರಿಟನ್ ಶಿಕ್ಷಣ ಕ್ರಾಂತಿಗೂ ಗುರುಕುಲ ವ್ಯವಸ್ಥೆಗೂ  ಎತ್ತಣ ಸಂಬಂಧ ಎನ್ನುವ  ಸಂಶಯವೇ? ಇದಕ್ಕೆ ಉತ್ತರ ಮುಂದೆ ಇದೆ.

 History of education in Great Britain ಎಂಬ ಪುಸ್ತಕವನ್ನು ಬರೆದ S.J. Curtis ಮತ್ತು  M.E A Boultwood ಪ್ರಕಾರ ಹದಿನೆಂಟನೆ  ಶತಮಾನ ಹಾಗೂ ಹತ್ತೊಂಬತ್ತನೆಯ ಶತಮಾನದ ಮೊದಲನೆಯ ಭಾಗದವರೆಗೂ ಬ್ರಿಟನ್ನಿನಲ್ಲಿ ಸಾಮೂಹಿಕವಾದ ,ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆ ಇರಲಿಲ್ಲ.

"What facilities existed at the beginning of the nineteenth century for poor children to obtain elementary education and for well-to-do parents to send their children to secondary schools? The answer to the first part of the question depends to a certain extent on locality. Schools were unevenly distributed and, on the whole. parents who lived in south-eastern England had better oppor-tunities for securing elementary education for their children than those who lived in the rural districts of the North and West, and English children were more fortunate than Welsh. The shifting of population which resulted in the development of new centres of industry after the middle of the eighteenth century had left many districts of England and Wales very ill-provided with any kind of school". (History of education in Great Britain Chapter-1)

( ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಬಡ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಪಡೆಯಲು ಮತ್ತು ಶ್ರೀಮಂತ ಪೋಷಕರು ತಮ್ಮ ಮಕ್ಕಳನ್ನು ಪ್ರೌಢಶಾಲೆಗಳಿಗೆ ಕಳುಹಿಸಲು ಯಾವ ಸೌಲಭ್ಯಗಳು ಇದ್ದವು?

ಈ ಪ್ರಶ್ನೆಯ ಮೊದಲ ಭಾಗದ ಉತ್ತರವು ಕೆಲವು ಮಟ್ಟಿಗೆ ಪ್ರದೇಶದ ಮೇಲೆ ಅವಲಂಬಿತವಾಗಿತ್ತು. ಶಾಲೆಗಳು ಎಲ್ಲೆಡೆ ಸಮಾನವಾಗಿ ಇರಲಿಲ್ಲ. ಸಾಮಾನ್ಯವಾಗಿ ದಕ್ಷಿಣ-ಪೂರ್ವ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಪೋಷಕರಿಗೆ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಲು ಉತ್ತಮ ಅವಕಾಶಗಳು ಇದ್ದವು. ಆದರೆ ಉತ್ತರ ಮತ್ತು ಪಶ್ಚಿಮ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ಅವಕಾಶಗಳು ಕಡಿಮೆಯಾಗಿದ್ದವು. ಇಂಗ್ಲೆಂಡ್‌ನ ಮಕ್ಕಳಿಗೆ, ವೇಲ್ಸ್‌ನ ಮಕ್ಕಳಿಗಿಂತ ಹೆಚ್ಚು ಅನುಕೂಲಕರ ಪರಿಸ್ಥಿತಿ ಇತ್ತು.

ಹದಿನೆಂಟನೇ ಶತಮಾನದ ಮಧ್ಯಭಾಗದ ನಂತರ ಹೊಸ ಕೈಗಾರಿಕಾ ಕೇಂದ್ರಗಳು ಬೆಳೆಯಲು ಆರಂಭವಾದಾಗ ಜನಸಂಖ್ಯೆಯ ಸ್ಥಳಾಂತರವೂ ನಡೆಯಿತು. ಅದರ ಪರಿಣಾಮವಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಅನೇಕ ಪ್ರದೇಶಗಳಲ್ಲಿ ಯಾವುದೇ ರೀತಿಯ ಶಾಲೆಗಳೇ ಸಮರ್ಪಕವಾಗಿ ಲಭ್ಯವಿರದ ಪರಿಸ್ಥಿತಿ ಉಂಟಾಯಿತು.)

“Even in areas where there was a more adequate provision of schools, many poor parents were unable to take advantage of it. Wages were low and, as a consequence of the war with revolutionary France, the cost of food and clothing was soaring. As soon as children reached the age of five or six they were sent to mines and factories to work for long hours in unhealthy surroundings in order to supplement family earnings........ Hence one can say in general terms that not only were there insufficient schools, but only a small proportion of children of school age, about one in thirty, received any organised education. ( History of education in Great Britain Chapter-1 page-2)

(ಶಾಲೆಗಳ ವ್ಯವಸ್ಥೆ ಸ್ವಲ್ಪ ಸಮರ್ಪಕವಾಗಿದ್ದ ಪ್ರದೇಶಗಳಲ್ಲಿಯೂ ಅನೇಕ ಬಡ ಪೋಷಕರಿಗೆ ಅದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೂಲಿ ತುಂಬಾ ಕಡಿಮೆಯಾಗಿತ್ತು. ಜೊತೆಗೆ  ಫ್ರಾನ್ಸ್ ವಿರುದ್ಧ ನಡೆದ ಯುದ್ಧದ ಪರಿಣಾಮವಾಗಿ ಆಹಾರ ಮತ್ತು ಬಟ್ಟೆಗಳ ಬೆಲೆಗಳು ತುಂಬಾ ಏರಿಕೆಯಾಗಿದ್ದವು.

ಮಕ್ಕಳು ಐದು ಅಥವಾ ಆರು ವರ್ಷದ ವಯಸ್ಸಿಗೆ ತಲುಪಿದ ತಕ್ಷಣವೇ ಕುಟುಂಬದ ಆದಾಯಕ್ಕೆ ಸಹಾಯವಾಗಲೆಂದು ಅವರನ್ನು ಗಣಿ ಪ್ರದೇಶಗಳು ಮತ್ತು ಕಾರ್ಖಾನೆಗಳಲ್ಲಿ ದುಡಿಯಲು ಕಳುಹಿಸಲಾಗುತ್ತಿತ್ತು. ಅಲ್ಲಿ ಅವರು ಅನಾರೋಗ್ಯಕರ ಪರಿಸರದಲ್ಲಿ ಬಹಳ ದೀರ್ಘ ಸಮಯ ಕೆಲಸ ಮಾಡಬೇಕಾಗುತ್ತಿತ್ತು.

ಹತ್ತೊಂಬತ್ತನೇ ಶತಮಾನದ ಆರಂಭದ ಕಾರ್ಖಾನೆ ಮೇಲ್ವಿಚಾರಕರ ವರದಿಗಳನ್ನು ಓದಿದರೆ, ಮಗು ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕಾದ ವಯಸ್ಸಿನಲ್ಲಿ, ಆಗಿನ ಮಕ್ಕಳು ಎಷ್ಟು ದುಃಖಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಕಾರ್ಮಿಕ ವರ್ಗದ ಪೋಷಕರ ಮಕ್ಕಳಲ್ಲಿ ಶಾಲೆಗೆ ಹೋಗುವ ಅವಕಾಶ ಸಿಕ್ಕಿದ್ದರೂ, ಅವರು ಒಂಬತ್ತು ಅಥವಾ ಹತ್ತು ವರ್ಷದ ನಂತರ ಶಾಲೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬದ ಖರ್ಚಿಗೆ ಸಹಾಯ ಮಾಡಲು ಅವರು ಕೆಲಸ ಮಾಡಿ ಹಣ ಗಳಿಸುವುದು ಅನಿವಾರ್ಯವಾಗಿತ್ತು.

ಆದ್ದರಿಂದ ಸಾಮಾನ್ಯವಾಗಿ ಹೇಳುವುದಾದರೆ, ಶಾಲೆಗಳ ಸಂಖ್ಯೆ ಸಾಕಾಗಿರಲಿಲ್ಲ. ಅಷ್ಟು ಮಾತ್ರವಲ್ಲ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಬಹಳ ಕಡಿಮೆ ಮಕ್ಕಳು — ಸುಮಾರು ಮೂವತ್ತರಲ್ಲಿ ಒಬ್ಬ ಮಗು ಮಾತ್ರ — ಯಾವುದಾದರೂ ಸಂಘಟಿತ ಶಿಕ್ಷಣವನ್ನು ಪಡೆಯುತ್ತಿದ್ದರು.)

ಇಂತಹ ಸಂದರ್ಭದಲ್ಲಿ  ಬ್ರಿಟನ್ನಿನಲ್ಲಿ Charity School ( ಸಮಾಜದ ದತ್ತಿಯಿಂದ ನಡೆಯುವ ಶಾಲೆಗಳು) ಗಳು ಪ್ರಾರಂಭವಾದವು .

ಚಾರಿಟಿ ಶಾಲೆಗಳು (ದಾನಶಾಲೆಗಳು) 

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಪ್ರಾಥಮಿಕ ಶಾಲೆಗಳು ಅನೇಕ ವಿಧವಾಗಿದ್ದವು . ಲಂಡನ್ ಮತ್ತು ದೊಡ್ಡ ನಗರಗಳಲ್ಲಿ, ಹಾಗೆಯೇ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ, ಬಡ ಮಕ್ಕಳಿಗೆ “ಚಾರಿಟಿ ಶಾಲೆಗಳು” (ದಾನಶಾಲೆಗಳು) ಲಭ್ಯವಾಗುತ್ತಿತ್ತು. ಇವುಗಳನ್ನು  ಜಮೀನ್ದಾರರು ಮತ್ತು ಧಾರ್ಮಿಕ ವ್ಯಕ್ತಿಗಳು ಸ್ಥಾಪಿಸಿದ್ದರು. ಕೆಲವೆಡೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು; ಇನ್ನೂ ಕೆಲವು ಕಡೆ  ಕಡಿಮೆ ಶುಲ್ಕವಿತ್ತು. ಸುಮಾರು ಸಾವಿರಕ್ಕೂ ಹೆಚ್ಚು ಇಂತಹ ಶಾಲೆಗಳಿದ್ದವು ಎಂದು ಅಂದಾಜಿಸಲಾಗಿದೆ.ಈ ಶಾಲೆಗಳಲ್ಲಿ ಶಿಕ್ಷಕರು ಸಾಮಾನ್ಯವಾಗಿ ಇಂಗ್ಲೆಂಡ್ ಚರ್ಚಿನ ಸದಸ್ಯರಾಗಿರಬೇಕು ಮತ್ತು ಮಕ್ಕಳಿಗೆ ಓದು, ಬರಹ, ಅಂಕಗಣಿತ ಹಾಗೂ ಧಾರ್ಮಿಕ ಪಾಠಗಳನ್ನು ಕಲಿಸಬೇಕಾಗಿತ್ತು.

ಇವುಗಳ ಜೊತೆಗೆ, 1698ರಲ್ಲಿ ಸ್ಥಾಪಿತವಾದ Society for Promoting Christian Knowledge (S.P.C.K.) ಎಂಬ ಸಂಸ್ಥೆಯು ಅನೇಕ ದಾನಶಾಲೆಗಳನ್ನು ಪ್ರಾರಂಭಿಸಿತು. ಸಮಾಜದ ಅನೇಕ ಜನರಿಂದ ಸಣ್ಣಸಣ್ಣ ದೇಣಿಗೆಗಳನ್ನು ಸಂಗ್ರಹಿಸಿ ಶಾಲೆಗಳನ್ನು ನಡೆಸುವ ವ್ಯವಸ್ಥೆ ಇದಾಗಿತ್ತು. ಚರ್ಚಿನ ಪ್ರಮುಖರು, ಭೂಸ್ವಾಮಿಗಳು ಮತ್ತು ಧಾರ್ಮಿಕ ನಾಯಕರು ಇದಕ್ಕೆ ಬೆಂಬಲ ನೀಡಿದರು. ಈ ಸಂಸ್ಥೆ ಶಾಲೆಗಳ ಸ್ಥಾಪನೆಯಷ್ಟೇ ಅಲ್ಲದೆ, ಬೈಬಲ್, ಪ್ರಾರ್ಥನಾ ಪುಸ್ತಕಗಳು ಮತ್ತು ಧಾರ್ಮಿಕ ಪುಸ್ತಕಗಳನ್ನು ಕಡಿಮೆ ಬೆಲೆಗೆ ಮುದ್ರಿಸಿ ಹಂಚುವ ಕೆಲಸವನ್ನೂ ಮಾಡಿತು.

ಈ ಚಳವಳಿಯ ಮುಖ್ಯ ಉದ್ದೇಶ ಸಮಾಜದಲ್ಲಿ ಧಾರ್ಮಿಕತೆ ಮತ್ತು ನೈತಿಕತೆಯನ್ನು ಬೆಳೆಸುವುದು.

ಈ ಶಾಲೆಗಳ ಪಾಠ್ಯಕ್ರಮದಲ್ಲಿ ಧಾರ್ಮಿಕ ಶಿಕ್ಷಣ, ಓದು-ಬರಹ-ಅಂಕಗಣಿತ (Three R’s) ಮುಖ್ಯವಾಗಿತ್ತು. ಜೊತೆಗೆ ಪ್ರಾಯೋಗಿಕ ಕೌಶಲ್ಯಗಳನ್ನೂ ಕಲಿಸಲಾಗುತ್ತಿತ್ತು. ಹುಡುಗಿಯರಿಗೆ ಹೊಲಿಗೆ , ಹುಡುಗರಿಗೆ ನೌಕಾಯಾನ, ತೋಟಗಾರಿಕೆ ಮೊದಲಾದ ತರಬೇತಿಗಳನ್ನು ನೀಡಲಾಗುತ್ತಿತ್ತು. ಕೆಲವು ಶಾಲೆಗಳು ದಿನ ಶಾಲೆಗಳಾಗಿದ್ದರೆ, ಕೆಲವು ವಸತಿ ಶಾಲೆಗಳಾಗಿಯೂ ಬೆಳೆಯುವಂತಾಯಿತು. ಮಕ್ಕಳಿಗೆ ವಿಶೇಷ ಯೂನಿಫಾರ್ಮ್ ಕೂಡ ನೀಡಲಾಗುತ್ತಿತ್ತು.

ಚಾರಿಟಿ ಶಾಲೆಗಳು ಹುಡುಗರಿಗೂ ಹುಡುಗಿಯರಿಗೂ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ನೀಡಿದ ಮೊದಲ ಸಂಸ್ಥೆಗಳಾಗಿದ್ದವು. S.P.C.K. ಹೊಸ ಶಾಲೆಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಸಂಕಷ್ಟದಲ್ಲಿದ್ದ ಕೆಲವು ಖಾಸಗಿ ದಾನಶಾಲೆಗಳನ್ನೂ ತನ್ನ ಅಧೀನಕ್ಕೆ ತೆಗೆದುಕೊಂಡಿತು.

ಆದರೆ ಹದಿನೆಂಟನೇ ಶತಮಾನದ ಮಧ್ಯಭಾಗದ ನಂತರ ಈ ಚಳವಳಿಯ ಆರಂಭದ ಉತ್ಸಾಹ ಕಡಿಮೆಯಾಗತೊಡಗಿತು. ಕ್ರಮೇಣ ಅದರ ಪ್ರಭಾವ ಕುಂಠಿತವಾಯಿತು.

ಶಾಲೆಗಳ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವುದು ಕಷ್ಟವಾದರೂ, 1758ರ ಅಂಕಿಅಂಶಗಳ ಪ್ರಕಾರ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 1,329 ಚಾರಿಟಿ ಶಾಲೆಗಳಿದ್ದು, ಅವುಗಳಲ್ಲಿ ಒಟ್ಟು 23,421 ವಿದ್ಯಾರ್ಥಿಗಳು ಇದ್ದರು. ಇವರಲ್ಲಿ 19,506 ಹುಡುಗರು ಮತ್ತು 3,915 ಹುಡುಗಿಯರು ಸೇರಿದ್ದರು.

ಇವುಗಳ ಜೊತೆಗೆ ವೇಲ್ಸ್‌ನಲ್ಲಿ “ಸಂಚಾರಿ ಶಾಲೆಗಳು” (Circulating Schools) ಕೂಡ ಇದ್ದವು. ಇಂತಹ 218 ಶಾಲೆಗಳಲ್ಲಿ 9,834 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಇವರಲ್ಲಿ ಕೆಲವು ವಯಸ್ಕರೂ ಇದ್ದರು.

ಅನೇಕ ಚಾರಿಟಿ ಶಾಲೆಗಳು ಬಹಳ ಚಿಕ್ಕದಾಗಿದ್ದು, ಅವುಗಳಲ್ಲಿ ಇಪ್ಪತ್ತಕ್ಕೂ ಕಡಿಮೆ ಮಕ್ಕಳು ಮಾತ್ರ ಓದುತ್ತಿದ್ದರು. ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ ಹಣ ಹಾಗೂ ಗುಣಮಟ್ಟದ ನಿರ್ವಹಣಾ ಕೊರತೆಯಿಂದ ಇವುಗಳಲ್ಲಿ ಹಲವಾರು ಶಾಲೆಗಳು ಮುಚ್ಚಲಾರಂಭಿಸಿದವು.

ಉದ್ಯಮ ಶಾಲೆಗಳು” (Schools of Industry) ಹದಿನೆಂಟನೇ ಶತಮಾನದ ಆರಂಭದಲ್ಲಿ ಕೆಲವು “ಉದ್ಯಮ ಶಾಲೆಗಳು” (Schools of Industry) ಸ್ಥಾಪಿಸಲ್ಪಟ್ಟವು. ಳ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇಂತಹ ಶಾಲೆಗಳ ಸಂಖ್ಯೆಯೂ ಹೆಚ್ಚಾಯಿತು. ಇವು ಚಾರಿಟಿ ಶಾಲೆಗಳಂತೆಯೇ ಇದ್ದರೂ, ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.

ಹುಡುಗರಿಗೆ ತೋಟಗಾರಿಕೆ, ಮರ ಕೆಲಸ, ಚಪ್ಪಲಿ ತಯಾರಿಕೆ, ಮುದ್ರಣ ಕೆಲಸ ಮುಂತಾದ ಉಪಯುಕ್ತ ವೃತ್ತಿಗಳನ್ನು ಕಲಿಸಲಾಗುತ್ತಿತ್ತು. ಹುಡುಗಿಯರಿಗೆ ಉಣ್ಣೆಯ ನೂಲನ್ನು ಹೆಣೆಯುವುದು, ಹೊಲಿಗೆ, ನೇಯುವಿಕೆ ಮತ್ತು ಹುಲ್ಲಿನಿಂದ ವಸ್ತು ತಯಾರಿಸುವ ಕೆಲಸಗಳನ್ನು ಕಲಿಸುತ್ತಿದ್ದರು. ಮಕ್ಕಳಿಂದ ತಯಾರಾದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಶಾಲೆಯ ನಿರ್ವಹಣೆಗೆ ಬಳಸಲಾಗುತ್ತಿತ್ತು. ಮಕ್ಕಳ ಆದಾಯವು ಅವರ ಖರ್ಚಿಗಿಂತ ಹೆಚ್ಚಾದರೆ, ಅವರಿಗೆ ಹಣವನ್ನು ನೀಡಲಾಗುತ್ತಿತ್ತು.

ಈ ಶಾಲೆಗಳ ಉದ್ದೇಶ ಶಾಲೆಯೇ ತನ್ನ ಖರ್ಚನ್ನು ತಾನೇ ನಡೆಸಿಕೊಳ್ಳುವಂತಾಗುವುದು. ಆದರೆ ವೆಚ್ಚವನ್ನು ಭರಿಸಲು ಶಾಲಾ ಮುಖ್ಯಸ್ಥರು ಶಿಕ್ಷಣಕ್ಕಿಂತ ಉದ್ಯೋಗ ತರಬೇತಿಗೆ ಹೆಚ್ಚು ಒತ್ತು ನೀಡುವ ಪ್ರಲೋಭನಕ್ಕೆ ಒಳಗಾಗುತ್ತಿದ್ದರು.

ಒಟ್ಟಾರೆ ಹುಡುಗರ ಶಾಲೆಗಳು ಹುಡುಗಿಯರ ಶಾಲೆಗಳಷ್ಟು ಯಶಸ್ವಿಯಾಗಲಿಲ್ಲ. ಹುಡುಗರ ತಯಾರಿಸಿದ ವಸ್ತುಗಳಿಗೆ ಹುಡುಗಿಯರ ಉತ್ಪನ್ನಗಳಷ್ಟು ಬೇಡಿಕೆ ಇರಲಿಲ್ಲ. ನಂತರ ಕಾರ್ಖಾನೆ ಪದ್ಧತಿ ವೇಗವಾಗಿ ಬೆಳೆಯುತ್ತಿದ್ದಂತೆ ಬಾಲ ಕಾರ್ಮಿಕರ ಬೇಡಿಕೆ ತುಂಬಾ ಹೆಚ್ಚಾಯಿತು. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕಾರ್ಖಾನೆಗಳು ಮತ್ತು ಗಣಿ ಪ್ರದೇಶಗಳಲ್ಲಿ ಕೆಲಸಕ್ಕೆ ಕಳುಹಿಸಲು ಇಷ್ಟಪಟ್ಟರು.

ಅನಾಥರು ಮತ್ತು ತ್ಯಜಿಸಲ್ಪಟ್ಟ ಮಕ್ಕಳನ್ನು ಸೇರಿಸಿಕೊಂಡರೂ ಕೂಡ ಉದ್ಯಮ ಶಾಲೆಗಳನ್ನು  ಉಳಿಸಿಕೊಳ್ಳಲು ಆ ಸಂಖ್ಯೆಯು ಸಾಕಾಗಲಿಲ್ಲ.

ಭಾನುವಾರದ ಶಾಲೆಗಳು (Sunday Schools)

1780ರ ವೇಳೆಗೆ ಚಾರಿಟಿ ಶಾಲೆಗಳ ಪ್ರಭಾವ ಬಹಳ ಕಡಿಮೆಯಾಗಿತ್ತು. ಅದೇ ಸಮಯದಲ್ಲಿ ಕೈಗಾರಿಕಾ ಬದಲಾವಣೆಗಳ ಪರಿಣಾಮವಾಗಿ ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿತ್ತು. ಬಾಲಕಾರ್ಮಿಕರ ಬೇಡಿಕೆ ಹೆಚ್ಚಾದ ಕಾರಣ ಸಾವಿರಾರು ಮಕ್ಕಳು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ವಾರದಲ್ಲಿ ಒಂದು ದಿನ — ಭಾನುವಾರ — ಬಹುತೇಕ ಮಕ್ಕಳಿಗೆ ಕೆಲಸದಿಂದ ಬಿಡುವು ಇತ್ತು.

  ಭಾನುವಾರದಂದು ನಗರದಲ್ಲಿ ಮಕ್ಕಳ ಅಸಭ್ಯ ವರ್ತನೆಯೇ “ಭಾನುವಾರದ ಶಾಲೆಗಳ ಚಳವಳಿ” (Sunday School Movement) ಆರಂಭವಾಗಲು ಕಾರಣವಾಯಿತು. Robert Raikes ಎಂಬುವನು ಈ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಿದನು.

ಆರಂಭದಲ್ಲಿ ಈ ಭಾನುವಾರದ ಶಾಲೆಗಳ ಚಳವಳಿಗೆ ಎಲ್ಲಾ ಕ್ರೈಸ್ತ ಪಂಥಗಳ ಬೆಂಬಲವಿತ್ತು. 1803ರಲ್ಲಿ ಸ್ಥಾಪಿತವಾದ Sunday School Union ಸಂಸ್ಥೆಯ ಸಮಿತಿಯಲ್ಲಿ ಚರ್ಚಿನ ಸದಸ್ಯರು ಮತ್ತು ಭಿನ್ನಮತೀಯರು (Dissenters) ಇಬ್ಬರೂ ಇದ್ದರು.

ಈ ಶಾಲೆಗಳಲ್ಲಿ ಮುಖ್ಯವಾಗಿ ಬೈಬಲ್ ಓದಲು ಸಹಾಯವಾಗಲೆಂದು ಓದು ಮತ್ತು ಪದಗಳ ಉಚ್ಚಾರಣೆ (spelling) ಕಲಿಸಲಾಗುತ್ತಿತ್ತು. ಆದರೆ ಕೆಲವು ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣವನ್ನೂ ನೀಡಲಾಗುತ್ತಿತ್ತು. ಆರಂಭದಲ್ಲಿ ರಾಬರ್ಟ್ ರೈಕ್ಸ್ ಶಿಕ್ಷಕರಿಗೆ ಸಂಬಳ ನೀಡುತ್ತಿದ್ದರು. ಆದರೆ ಚಳವಳಿ ವಿಸ್ತರಿಸುತ್ತಿದ್ದಂತೆ ಸಂಬಳ ಪಡೆಯುವ ಶಿಕ್ಷಕರ ಬದಲು ಸ್ವಯಂಸೇವಕರನ್ನು ಬಳಸುವ ಪದ್ಧತಿ ಹೆಚ್ಚಾಯಿತು ಮತ್ತು ಶಿಕ್ಷಣವನ್ನು ಮುಖ್ಯವಾಗಿ ಧಾರ್ಮಿಕ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು.

ಬಡ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಒದಗಿಸಲು ದಾನಧರ್ಮದ ಮತ್ತು ಸ್ವಯಂಸೇವಾ ಪ್ರಯತ್ನಗಳು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಲಭ್ಯವಿದ್ದ ಹಣ ಸಾಕಾಗುತ್ತಿರಲಿಲ್ಲ. ಅನುಭವ ಹೊಂದಿದ ಶಿಕ್ಷಕರ ಕೊರತೆಯೂ ಮತ್ತೊಂದು ದೊಡ್ಡ ಸಮಸ್ಯೆಯಾಗಿತ್ತು.

ಆದ್ದರಿಂದ, ಲಭ್ಯವಿದ್ದ ಶಿಕ್ಷಕರನ್ನು ಅತ್ಯುತ್ತಮವಾಗಿ ಬಳಸುವುದು ಮತ್ತು ಶಾಲೆಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ನಡೆಸುವ ವಿಧಾನವನ್ನು ಕಂಡುಹಿಡಿಯುವುದು ಮುಖ್ಯ ಪ್ರಶ್ನೆಯಾಯಿತು. ಇದೇ ಕಾರಣದಿಂದ ಆಂಡ್ರೂ ಬೆಲ್ ಮತ್ತು ಜೋಸೆಫ್ ಲ್ಯಾಂಕಾಸ್ಟರ್ ಅವರು ಸೂಚಿಸಿದ ಶಿಕ್ಷಣ ಯೋಜನೆಗಳಿಗೆ ಜನಪ್ರಿಯ ಬೆಂಬಲ ದೊರಕಿತು.

ಜೋಸೆಫ್ ಲ್ಯಾಂಕಾಸ್ಟರ್(Joseph Lancaster) ಮತ್ತು ಆಂಡ್ರೂ ಬೆಲ್ (Andrew Bell)ಇವರ ಮೊನಿಟೋರಿಯಲ್ ಶಾಲೆಗಳು.

ಜೋಸೆಫ್ ಲ್ಯಾಂಕಾಸ್ಟರ್ ಒಬ್ಬ ಶಿಕ್ಷಕನಾಗಿದ್ದು ಇದೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಪಟ್ಟು ಸಫಲನಾಗದೆ  ಸಾಲದಲ್ಲಿ ಮುಳಗಿ ಸಂಕಷ್ಟಕ್ಕೊಳಗಾಗಿದ್ದನು.

ಆಂಡ್ರೂ ಬೆಲ್ ಕೂಡ ಶಿಕ್ಷಕನಾಗಿದ್ದು ಬೇರೆ ಕೆಲಸಗಳಲ್ಲಿ ತೃಪ್ತಿಯನ್ನು ಕಾಣದೆ ಆಗಿನ ಕಾಲದ ಅನೇಕ ಯುವಕರಂತೆ ಸಂಪತ್ತನ್ನು ಗಳಿಸಲು ಭಾರತಕ್ಕೆ ಬರಲು ನಿಶ್ಚಯಿಸಿದ.

 ದೇಶವನ್ನು ತೊರೆಯುವ ಮೊದಲು ಅವನು ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯವನ್ನು ವೈದ್ಯಕೀಯ ಡಾಕ್ಟರ್ (Doctor of Medicine) ಪದವಿಯನ್ನು  ನೀಡುವಂತೆ ಒಪ್ಪಿಸಿದನು . ಸ್ವಲ್ಪ ಸಮಯದಲ್ಲೇ ಅವನು ಮದ್ರಾಸಿನ Military Male Asylum ಸಂಸ್ಥೆಯ ಮೇಲ್ವಿಚಾರಕರಾಗಿ ನೇಮಕಗೊಂಡನು.

ಈ ಸಂಸ್ಥೆ ಸೈನಿಕರ ಅನಾಥ ಗಂಡು ಮಕ್ಕಳಿಗಾಗಿ ಸ್ಥಾಪಿಸಲಾದ ಒಂದು ಶಾಲೆಯಾಗಿತ್ತು.

ಮದ್ರಾಸಿಗೆ ಬಂದ ನಂತರ ಇಲ್ಲಿನ ಗುರುಕುಲಗಳನ್ನು ಗಮನಿಸುತ್ತಿದ್ದಾಗ ಒಮ್ಮೆ ಒಬ್ಬ ಶಿಕ್ಷಕನು ಹಿರಿಯ ವಿದ್ಯಾರ್ಥಿಗೆ ಮರಳಿನಲ್ಲಿ ಅಕ್ಷರಗಳನ್ನು ಹೇಳಿಕೊಡುತ್ತಿದ್ದನ್ನು ಗಮನಿಸಿದ.

“I had, at first sight of a Malabar school, adopted the idea of teaching the letters in sand spread over a board or bench before the scholars, as is always done on the ground in the schools of the natives of this country.”( An Experiment in Education , page-53)

(ಈ ದೇಶದ ಸ್ಥಳೀಯರ ಶಾಲೆಗಳಲ್ಲಿ ಸಾಮಾನ್ಯವಾಗಿ ನೆಲದ ಮೇಲೆ ಮಾಡುವ ರೀತಿಯಲ್ಲಿ, ಮಕ್ಕಳ ಮುಂದೆ  ಫಲಕ ಇಟ್ಟು ಅಥವಾ ಬೆಂಚಿನ ಮೇಲೆ ಮರಳು ಹಾಸಿ ಅದರಲ್ಲಿ ಅಕ್ಷರಗಳನ್ನು ಕಲಿಸುವ ವಿಧಾನವನ್ನು ನಾನು ಮೊದಲ ಬಾರಿ ಒಂದು ಮಲಬಾರ್ ಶಾಲೆಯನ್ನು ನೋಡಿದ ತಕ್ಷಣವೇ ಅಳವಡಿಸಿಕೊಂಡೆ.”)

ಇದೇ ರೀತಿ ಹಲವಾರು ಗುರುಕುಲಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಹಿರಿಯವಿದ್ಯಾರ್ಥಿಗಳಿಗೆ ಪಾಠವನ್ನು ಹೇಳುತ್ತಿದ್ದನ್ನು ಗಮನಿಸಿದ. ಇದು ಅವನಿಗೆ ಅತ್ಯಂತ ಆಶ್ಚರ್ಯ ತರಿಸಿದ್ದಲ್ಲದೆ, ಇದನ್ನು ತನ್ನ ಶಾಲೆಯಲ್ಲಿ ಪ್ರಯೋಗಿಸಬೇಕೆಂದು ನಿಶ್ಚಯಿಸಿದ. ಮೊದಲು ಅವನ ಪ್ರಯೋಗಕ್ಕೆ ಬಹಳ ಪ್ರತಿರೋಧವನ್ನು ಎದುರಿಸಿದ. ಆದರೆ ಅವನು ಛಲ ಬಿಡಲಿಲ್ಲ.

ಅವರು ಜಾನ್ ಫ್ರಿಸ್ಕನ್ ಎಂಬ ಎಂಟು ವರ್ಷದ ಬಾಲಕನನ್ನು ಆಯ್ಕೆ ಮಾಡಿ, ಅವನಿಗೆ ತರಗತಿಯನ್ನು ಕಲಿಸುವ ಜವಾಬ್ದಾರಿ ನೀಡಿದನು. ಈ ಪ್ರಯೋಗ ಯಶಸ್ವಿಯಾಯಿತು ಮತ್ತು ಫ್ರಿಸ್ಕನ್ ನನ್ನು  ಕಿರಿಯ ತರಗತಿಯ ಶಿಕ್ಷಕನಾಗಿ ನೇಮಕ ಮಾಡಲಾಯಿತು. ಮದ್ರಾಸಿನ ಈ ಶಾಲೆಯಲ್ಲಿ ಕೆಲಸ ಮಾಡುತ್ತಲೆ Madras System ಎಂಬ ಶಿಕ್ಷಣಪದ್ಧತಿಯನ್ನು ಹುಟ್ಟುಹಾಕಿದ.

1795ರಲ್ಲಿ ಅವನು ಸಾಕಷ್ಟು ಸಂಪತ್ತಿನೊಂದಿಗೆ ಇಂಗ್ಲೆಂಡ್‌ಗೆ ಮರಳಿದನು. ಡಾರ್ಸೆಟ್ ಪ್ರದೇಶದ ಸ್ವಾನೇಜ್ ಎಂಬ ಸ್ಥಳದ ಚರ್ಚಿನ ಧರ್ಮಾಧಿಕಾರಿಯಾಗಿ ನೇಮಕಗೊಂಡನು.

1797ರಲ್ಲಿ ಅವರು ಮದ್ರಾಸಿನಲ್ಲಿ ನಡೆಸಿದ ಶಿಕ್ಷಣ ಪ್ರಯೋಗಗಳ ಕುರಿತು An Experiment in Education ಎಂಬ ಹೆಸರಿನಲ್ಲಿ ಒಂದು ಪುಸ್ತಕ ಪ್ರಕಟಿಸಿದನು. ಈ ಪುಸ್ತಕಕ್ಕೆ ಬಹಳ ಪ್ರಸಿದ್ಧಿ ದೊರಕಿತು. 1814ರವರೆಗೆ ಅದರ ಐದು ಆವೃತ್ತಿಗಳು ಪ್ರಕಟವಾಗಿದವು. ಕೊನೆಯ ಆವೃತ್ತಿ ಬಹಳ ವಿಸ್ತಾರವಾಗಿತ್ತು.

ಬೆಲ್ ನು ಜೋಸೆಫ್ ಲ್ಯಾಂಕಾಸ್ಟರ್ ಅವರ ಪರಿಚಯ ಮಾಡಿಕೊಂಡನು ಮತ್ತು ಕೆಲವು ಕಾಲ ಇಬ್ಬರೂ ತಮ್ಮ ಶಿಕ್ಷಣದ ಆಲೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಇದರ ಫಲವಾಗಿ ಮಾನಿಟೋರಿಯಲ್ ಶಾಲೆಗಳ ಜನನವಾಯಿತು. ಇದರಲ್ಲಿ ಗುರುಕುಲ ಶಿಕ್ಷಣದ ಅನೇಕ ಅಂಶವನ್ನು ಅಳವಡಿಸಿಕೊಳ್ಳಲಾಯಿತು. 

ಈ ಎರಡೂ ಶಿಕ್ಷಣ ಪದ್ಧತಿಗಳಲ್ಲಿ ಬರವಣಿಗೆ ಮತ್ತು ಸಂಖ್ಯೆಗಳ ಪ್ರಾಥಮಿಕ ಅಭ್ಯಾಸವನ್ನು ಕಲಿಸಲು ಮರಳಿನ ತಟ್ಟೆ (sand-tray) ಬಳಸಲಾಗುತ್ತಿತ್ತು.

ತರಗತಿಯ ಉತ್ತಮ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅವನನ್ನು ಮಾನಿಟರ್ ಎಂಬ ಪದವಿಯನ್ನು ಕೊಟ್ಟು ತರಗತಿಯ ಉಳಿದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ನಿಯೋಜಿಸಲಾಗುತ್ತಿತ್ತು. ಅಂತಹ ಉತ್ತಮ ವಿದ್ಯಾರ್ಥಿಗಳನ್ನು ಕಿರಿಯ ವಿದ್ಯಾರ್ಥಿಗಳಿಗೆ ಬೋಧಿಸಲು ಕೂಡ ನಿಯೋಜಿಸುತ್ತಿದ್ದರು. ಇದರಿಂದ ಗುಣಮಟ್ಟ ಹಾಗೂ ವೆಚ್ಚ ಎರಡನ್ನು ಕೂಡ ನಿಯಂತ್ರಿಸಲಾಯಿತು.

 ಈ ಎರಡೂ ಪದ್ಧತಿಗಳ ಪ್ರಮುಖ ಲಕ್ಷಣ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವುದಾಗಿತ್ತು. ಲ್ಯಾಂಕಾಸ್ಟರ್ ಶಾಲೆಯಲ್ಲಿ ಒಂದು ಮಗುವಿನ ವಾರ್ಷಿಕ ಶಿಕ್ಷಣ ವೆಚ್ಚ 7 ಶಿಲ್ಲಿಂಗ್ 6 ಪೆನ್ಸ್ ಆಗಿತ್ತು. ಬಹಳ ದೊಡ್ಡ ಶಾಲೆಗಳಲ್ಲಿ ಈ ವೆಚ್ಚವನ್ನು ಇನ್ನೂ ಕಡಿಮೆ ಮಾಡಬಹುದಾಗಿತ್ತು.

500 ವಿದ್ಯಾರ್ಥಿಗಳಿದ್ದ ಒಂದು ರಾಷ್ಟ್ರೀಯ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ ಆಗುವ ವೆಚ್ಚ ಕೇವಲ 4 ಶಿಲ್ಲಿಂಗ್ 2 ಪೆನ್ಸ್ ಎಂದು ಅಂದಾಜಿಸಲಾಗಿತ್ತು.

ಹೀಗೆ ಬ್ರಿಟನ್ ನಲ್ಲಿ ಒದಗಿದ್ದ ಸಮಸ್ಯೆಯನ್ನು ಭಾರತೀಯ ಗುರುಕುಲದ ಶಿಕ್ಷಣ ಪದ್ಧತಿಯಿಂದ ಸ್ಪೂರ್ತಿ ಪಡೆದು ಪರಿಹರಿಸಲಾಯಿತು. ಬೆಲ್ ನು ನೇರವಾಗಿ ತನ್ನ ಶಿಕ್ಷಣಪದ್ಧತಿಯ ಅನೇಕ ಅಂಶಗಳಿಗೆ ಭಾರತೀಯ ಪದ್ಧತಿಯಿಂದ ಪಡೆದ ಸ್ಪೂರ್ತಿಯನ್ನು ದಾಖಲಿಸಲಿಲ್ಲ . ಕೆಲವು ಕಡೆ ಮಾತ್ರ ಮಲಬಾರ್ ಶಾಲೆಗಳ,ಸ್ಥಳೀಯ ಶಾಲೆಗಳ  ಪದ್ಧತಿಯ ಸ್ಫೂರ್ತಿಯನ್ನು ನಮೂದಿಸಿದ್ದಾನೆ.

ಆದರೆ ಬ್ರಿಟನ್ನಿನಲ್ಲಿ ಈ ಪದ್ಧತಿಯು ಯಶಸ್ವಿಯಾದ ನಂತರ ,ತಾವು ಆಳುತ್ತಿದ ಎಲ್ಲಾ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಅಳವಡಿಸಲು ಆದೇಶಿಸಿದಾಗ -  ಈಸ್ಟ ಇಂಡಿಯಾ ಕಂಪನಿಯ ನಿರ್ದೇಶಕ ಮಂಡಳಿಯು ಹೀಗೆ ಅಭಿಪ್ರಾಯ ಪಟ್ಟಿತು ಎಂದು Alexandr Tschurenev ಅವರು ದಾಖಲಿಸುತ್ತಾರೆ-

“In its educational despatch of 1814, the Up of Directors of the East India Company expressed the opinion that Bell’s new mode of education was, basically, the ‘mode of instruction that from time immemorial has been practiced’ under Indian village schoolmasters…”(A Colonial Experiment in Education, Madras, 1789–1796.”) 

(1814ರ ಶಿಕ್ಷಣ ಸಂಬಂಧಿ ವರದಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರ ಮಂಡಳಿಯು, ಬೆಲ್ ಅವರ ಹೊಸ ಶಿಕ್ಷಣ ವಿಧಾನವು ಮೂಲತಃ ‘ಅನಾದಿಕಾಲದಿಂದಲೇ ಭಾರತೀಯ ಗ್ರಾಮ ಶಾಲಾ ಶಿಕ್ಷಕರು ಅನುಸರಿಸುತ್ತಿದ್ದ ಶಿಕ್ಷಣ ಪದ್ಧತಿಯೇ’ ಎಂದು ಅಭಿಪ್ರಾಯಪಟ್ಟಿತು.”)

ಇರಲಿ ,ಅವನು ಅನೇಕ ವಿಷಯಗಳನ್ನು ಮಾರ್ಪಡಿಸಿ ಅದನ್ನು ಅನ್ವಯಿಸಿದ್ದರೂ , ಅದರ ಸ್ಪೂರ್ತಿಯ ಶ್ರೇಯಸ್ಸನ್ನು ಕೊಡಬೇಕಾದ್ದಷ್ಟನ್ನು ಕೊಡದಿದ್ದದ್ದಕ್ಕೆ ಇದೇ ಮೊದಲ ಉದಾಹರಣೆಯಲ್ಲ. ಇಂತಹ ಅನೇಕ ವಿಷಯಗಳನ್ನು ವಂದನಾ ಶಿವಾ ಅನ್ನುವ ಕೃಷಿ ವಿಜ್ಞಾನಿಗಳು ಕೃಷಿಕ್ಷೇತ್ರಕ್ಕೆ ಸಂಬಂಧಪಟ್ಚಂತೆ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನಮ್ಮದೆ ವಿಷಯಗಳನ್ನು ಮಾರ್ಪಾಡಿನೊಂದಿಗೆ ಮತ್ತೆ ನಮಗೆ ಕಲಿಸುವ ಅಥವಾ ಮಾರುವ ಈ ವಿಧಾನವನ್ನು ರಾಜೀವ್ ಮಲ್ಹೋತ್ರಾ ಅವರು ಇದನ್ನು U-Turn Theory, Dization Theory ಎಂದು ಪರಿಚಯಿಸಿದ್ದಾರೆ.

ಆದರೆ ನಂತರದ ದಿನಗಳಲ್ಲಿ ಅದರದ್ದೇ ವಿಕೃತ ರೂಪವನ್ನು ಬಂಗಾಳದಲ್ಲಿ ಪರಿಚಯಿಸಿ ಭಾರತೀಯ ಗುರುಕುಲ ಪದ್ದತಿಯನ್ನು ಕೆಳಮಟ್ಟದ್ದು ಎಂಬಂತೆ ಬಿಂಬಿಸಲು ಪ್ರಾರಂಭಿಸದ್ದನ್ನು ಭಾರತಿಯರು ತಿಳಿಯಬೇಕಿದೆ.

ಇತಿಹಾಸದ ಈ ಸತ್ಯವನ್ನು ನಮ್ಮ ಮುಂದಿನ ಪೀಳಿಗೆ ಅರಿತು ಗುರುಕುಲ ಶಿಕ್ಷಣ ಪದ್ಧತಿಯ ಮಹತ್ವವನ್ನು ತಿಳಿಯಬೇಕಿದೆ.

ಗ್ರಂಥ ಋಣ

1. An Introductory History of English Education Since 1800.

Authors -Curtis, S. J., and M. E. A. Boultwood.

Publisher - London: University Tutorial Press,

2.An Analysis of the Experiment in Education, Made at Egmore, Near Madras

Author - Andrew Bell

Publisher -Cadell and Davies

https://archive.org/details/ananalysisexper00bellgoog

ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಓದಬೇಕಾದ ಪುಸ್ತಕ. ತನ್ನ ಶಿಕ್ಷಣ ಪದ್ಧತಿಯ ಬೆಳವಣಿಗೆಯನ್ನು ಪ್ರತಿಹಂತದಲ್ಲೂ ವಿವರವಾಗಿ  ದಾಖಲಾಸಿದ ಪರಿ ಅನ್ಯಾ ದೃಶ. ರೆಕಾರ್ಡ್ಸ್ ಅನ್ನು ದಾಖಲಿಸುವ ಗುಣ ಯುರೋಪಿಯನ್ ರಿಗೆ ಸಿದ್ಧ ಹಸ್ತ. ಆದ್ದರಿಂದಲೇ ಇವತ್ತು ಇತಿಹಾಸ ಬರವಣಿಗೆ ಅವರಾಧೀನ. ನಮ್ಮಲ್ಲಿಯ ದಾಖಲಾತಿ ಪದ್ಧತಿಯ ಅಭಾವದಿಂದಲೇ ಅನೇಕ ವಿಷಯಗಳು ಇಂದು ಲುಪ್ತವಾಗಿರುವುದು ವಿಷಾದದ ಸಂಗತಿ.


ಡಾ.ಶ್ರೀನಿಧಿ ಪ್ಯಾಟಿ
ಸಂಶೋಧಕರು ,
ಪೂರ್ಣಪ್ರಜ್ಞ ಸಂಶೋಧನ ಮಂದಿರ,ಬೆಂಗಳೂರು.

Comments

Popular posts from this blog

Savitri: The Embodiment of Feminine Strength and Devotion

A Bhāratīya Rājanīti- Purāṇic Perspective on Tax Collection and Governance: Lessons from the Rule of Kārtavīryārjuna

Principles of Leadership in the Teachings and Life of Shri Madhvacharya