ಮಧ್ವಾಚಾರ್ಯರು ಮತ್ತು Time Management


ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳಿಗೂ ಇರುವುದು ೨೪ ಘಂಟೆಗಳೆ,ಆದರೆ ಅಷ್ಟೇ ಸಮಯವನ್ನು ಬಳಸಿಕೋಂಡು ಕೆಲವರು ಬಹಳ ಸಾಧಿಸುತ್ತಾರೆ. ಕೆಲವರು ಸಮಯ ಸಾಲುವುದಿಲ್ಲ ಎಂದು ಆಕ್ಷೇಪಿಸುತ್ತಾರೆ.ಇಲ್ಲಿ ಮುಖ್ಯವಾಗಿ ಎರಡು ಕಾರಣಗಳು, ಒಂದು ಉದಾಸೀನತೆ, ಇನ್ನೋಂದು ಸಮಯನಿರ್ವಹಣೇಯ ಕೋರತೆ.ಉದಾಸಿನತೆಗೆ ಮದ್ದಿಲ್ಲ,ಆದರೆ ಸಮಯವನ್ನು ಹೇಗೆ ನಿರ್ವಹಿಸಬೇಕೆಂಬ ಕಲೆಯನ್ನು ತಿಳಿದುಕೋಳ್ಳಬೇಕು. ಆಚಾರ್ಯರು ತಮ್ಮ ಅವತಾರಕಾಲದಲ್ಲಿ ಅಪರಿಮಿತ ಸಾಧನೆಗಳನ್ನು ಮಾಡುತ್ತಾ ಸಮಯನಿರ್ವಹಣೆಯ ಕಲೆಯನ್ನು ಶಿಷ್ಯರಿಗಾಗಿ ತೋರಿಸಿಕೋಟ್ಟಿದ್ದಾರೆ. ಮಧ್ವನವಮಿಯ ಸಂಧರ್ಭದಲ್ಲಿ  ಅದನ್ನು ಅರ್ಥೈಸಿಕೋಳ್ಳಲು ಪ್ರಯತ್ನಿಸೋಣ.

ಸಮಯ ಹಂಚಿಕೆ [Time Management]
ನಾವು ಅನೇಕ ಬಾರಿ ಪ್ರಮುಖವಲ್ಲದ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡಿ, ಪ್ರಮುಖ ಕೆಲಸಗಳಿಗೆ ಸಮಯವಿಲ್ಲವೆಂದು ಒದ್ದಾಡುತ್ತೆವೆ. ಆಚಾರ್ಯರು ಬಾಲಕನಾಗಿದ್ದಾಗ ಅವರ ತಂದೆಯು ಅಕ್ಷರಾಭ್ಯಾಸ ಮಾಡಿಸಲು ಪ್ರ‍ಾರಂಭಿಸಿದರು.ತಂದೆಯು ಒಮ್ಮೆ ಬರೆದಿದ್ದನ್ನು ಮತ್ತೊಮ್ಮೆ ಬರೆಯಲು ಹೇಳಿದರು.ಆಚಾರ್ಯರು “ನೆನ್ನೆ ಬರೆದ ಅಕ್ಷರಗಳನ್ನೇ ಮತ್ತೆ ಮತ್ತೆ ಯಾಕೆ ಬರೆಯಬೇಕು,ಹೊಸದೇನಾದಿದ್ದರು ಹೇಳಿ” ಎಂದರು. ಮುಂದೋಮ್ಮೆ ಆಚಾರ್ಯರ ವೇದಗುರುಗಳು ವೇದಪಾಠವನ್ನು ಮಾಡುತ್ತಿದ್ದರು.ಆಚಾರ್ಯರು ಬೇರೆನನ್ನೋ ಯೋಚಿಸುತ್ತಿದ್ದರು.ಆಗ ಗುರುಗಳು “ಗೆಳೆಯರೋಂದಿಗೆ ವೇದವನ್ನು ಏಕೆ ಉಚ್ಚಾರಿಸುತ್ತಿಲ್ಲಾ” ಎಂದು ಆಕ್ಷೇಪಿಸಿದರು. ಅದಕ್ಕೆ ಆಚಾರ್ಯರು “ಓಮ್ಮೆ ಅರ್ಧ ಋಕ್ಕು,ಮತ್ತೋಮ್ಮೆ ಸಂಪೂರ್ಣ ಋಕ್ಕು ಪಠಿಸುವ ಈ ಕ್ರಮ ನನಗೆ ಹಿಡಿಸುವುದಿಲ್ಲ” ಎಂದು ಉತ್ತರಸಿದರು. ಅವತಾರಕಾಲದಲ್ಲಿ ಲೀಲೆಗಾಗಿ ಅವರಿಗೆ ಪ್ರಮುಖವಲ್ಲದಿದ್ದರು ಓಮ್ಮೆ ಈ ರೀತಿಯ ಕೆಲಸಗಳನ್ನು ಆಚಾರ್ಯರು ಮಾಡಿದರು. ಆದರೆ ಸಾಮನ್ಯರಂತೆ ಮತ್ತೆ ಮತ್ತೆ ಆ ಕೆಲಸಗಳನ್ನು ಲೀಲೆಗಾಗಿಯೂ ಮಾಡಲಿಲ್ಲ. ಯಾವ ಕೆಲಸಗಳಿಗೆ ಎಷ್ಟು ಸಮಯ ಮೀಸಲಿಡುತ್ತೆವೆನ್ನುವುದೇ ಸಮಯನಿರ್ವಹಣೆಯ ಗುಟ್ಟೆಂದು ಆಚಾರ್ಯರು ತೋರಿಸಿ ಕೊಟ್ಟರು.

 [Smart work]  ಜಾಣ್ಮೆಯಿಂದ ಕೆಲಸ
    ಆಚಾರ್ಯರು ನಾಲ್ಕು ಅಧ್ಯಾಯಗಳಿರುವ ಅನುವ್ಯಾಖ್ಯಾನವನ್ನು ರಚಿಸುತ್ತಿದ್ದರು. ಅವರಿಗೆ ಈ ಗ್ರಂಥವನ್ನು ಬೇಗ ರಚಿಸಿ ಮುಗಿಸಬೇಕೆಂದೆನೆಸಿತು. ಆಗ ಆಚಾರ್ಯರು ನಾಲ್ಕು ಜನ ಶಿಷ್ಯಂದಿರಿಂದ ಅನಾಯಾಸವಾಗಿ ಬೇರೆ ಬೇರೆ ಭಾಗಗಳನ್ನು ಒಂದೆ ಸಮಯದಲ್ಲಿ ಹೇಳಿ ಬರೆಸಿಸಿದರು.ಗ್ರಂಥ ರಚನೆಯ ಕಾರ್ಯಯು ಆಚಾರ್ಯರ ಜಾಣ್ಮೆಯಿಂದ ಬಹಳ ಬೇಗನೆ ಮುಗಿಯಿತು. ಆಚಾರ್ಯರ ಈ ಲೀಲೆಯ ನಮಗೆ ಸ್ಫೂರ್ತಿಯಾಗಬಲ್ಲದು.  ಕೆಲವೋಬ್ಬರು ಬಹಳ ಪರಿಶ್ರಮ ಪಟ್ಟು ಕೆಲಸ ಮಾಡುತ್ತಾರೆ,ಆದರೆ ಅವರಿಗೆ ನಿರೀಕ್ಷಿಸಿದಷ್ಟು ಫಲ ದೋರಕುವುದಿಲ್ಲ. ಅದಕ್ಕೆ ಕಾರಣ ಜಾಣ್ಮೆಯ ಕೋರತೆ.  ಇಂಗ್ಲೀಷ್ ಭಾಷೆಯಲ್ಲಿ ಓಂದು ಗಾದೆಯಿದೆ.  If hard work is secret to success . Then Donkey would be the king of the jungle.   ಅಂದರೆ,ಕೇವಲ ಪರಿಶ್ರಮವೆ ಯಶಸ್ಸಿಗೆ ಕಾರಣವಾಗಿದ್ದರೆ,ಕತ್ತೆಯು ಕಾಡಿನ ರಾಜನಾಗಿರುತ್ತಿತ್ತು,ಸಿಂಹವಲ್ಲ. ಎಕೆಂದರೆ ಕತ್ತೆಯಷ್ಟು ಪರಿಶ್ರಮಿಯಾಗಿರುವ ಮತ್ತೋಂದು ಪ್ರಾಣಿಯಿಲ್ಲ. ಹಾಗಾಗಿ ಕೇವಲ ಪರಿಶ್ರಮವು ಯಶಸ್ಸಿಗೆ ಕಾರಣವಲ್ಲ. ಜಾಣ್ಮೆಯಿಂದ ಕೂಡಿದ ಪರಿಶ್ರಮವು ಯಶಸ್ಸಿಗೆ ಕಾರಣವೆಂದು ಆಚಾರ್ಯರು ತಮ್ಮ ಲೀಲೆಯಿಂದ ತೋರಿಸಿಕೊಟ್ಟರು.

ಕೆಲಸಗಳ ಸಂಯೋಜನೆ [Combining activities]
ಆಚಾರ್ಯರ ಉತ್ತರಭಾರತದ ಯಾತ್ರೆಯ ಸಂದರ್ಭ. ಒಮ್ಮೆ ಅಗ್ನಿಶರ್ಮ ಮುಂತಾದ ಐದಾರು ಜನ ದ್ವಿಜರು ಒಟ್ಟಿಗೆ ಬಂದು ಆಚಾರ್ಯರ ಭಿಕ್ಷೆ ಮಾಡಿಸಬೇಕೆಂದು ಅರುಹಿದರು. ಆದರೆ ಆಚಾರ್ಯರು ಅಂದೆ ಆ ಗ್ರಾಮವನ್ನು ಬಿಟ್ಟು ಹೋಗುವ ಮನಸ್ಸು ಮಾಡಿದ್ದರು. ಈ ಐದಾರು ಜನರ ಪ್ರಾರ್ಥನೆಯನ್ನು ಮನ್ನಿಸಿದರೆ, ಇನ್ನೂ ಐದಾರು ದಿನ ಅಲ್ಲೆ ತಂಗಬೇಕಾಗುತ್ತಿತ್ತು. ಆಗ ಆಚಾರ್ಯರು, ಅವರೆಲ್ಲರು ವ್ಯವಸ್ತ್ಜೆಮಾಡಿದ ಭಿಕ್ಷೆಯನ್ನು ಒಂದೇದಿನ ಒಟ್ಟಿಗೆ ಭುಂಜಿಸಿದರು. ಎಲ್ಲರಿಗೂ ಸಂತೋಷವನ್ನು ಉಂಟುಮಾಡಿದರು.ಪ್ರಳಯಕಾಲದಲ್ಲಿ ಎಲ್ಲವನ್ನು ಕಬಳಿಸುವ ಆಚರ್ಯರಿಗೆ ಇದೇನು ಆಶ್ಚರ್ಯವಲ್ಲ ಎಂದು ನಾರಾಯಣಪಂಡಿತಾಚಾರ್ಯರು  ವರ್ಣಿಸುತ್ತಾರೆ. ಇಲ್ಲಿ ಆಚಾರ್ಯರು ಕೆಲಸಗಳನ್ನು ಸಂಯೋಜನೆ ಮಾಡಿ ಸಮಯವನ್ನು ಹೇಗೆ ಉಳಿಸಬಹುದೆಂದು ತೋರಿಸಿಕೋಟ್ಟಿದ್ದಾರೆ. ನಾವು  ಒಂದು ಕಡೆ ಹೋರಟರೆ ಒಂದೆ ಕೆಲಸವನ್ನು ಮಾಡಿಕೋಂಡು ಬರುತ್ತೇವೆ,ಅಥವಾ ಒಂದು ಕೆಲಸವನ್ನು ಯೋಚಿಸಿ ಹೋರಟರೆ ಅದನ್ನು ಮಾತ್ರ ಮಾಡಿಕೋಂಡು ಬರುತ್ತೆವೆ,ಆ ಸಂದರ್ಭದಲ್ಲಿ ಇನ್ನೂ ಬೇರೆನೆಲ್ಲಾ ಕೆಲಸಗಳನ್ನು ಮಾಡಬಹುದೆಂದು ಯೋಚಿಸಲು ಹೋಗುವುದೆ ಇಲ್ಲಾ. ಆಗ ಸಮಯ ಸಾಕಾಗದೆ ಕೆಲಸಗಳು ಹಾಗೆ ಉಳಿದುಬಿಡುತ್ತವೆ. ಕೆಲಸಗಳನ್ನು ಸಂಯೋಜನೆ ಮಾಡಲು ತಿಳಿದರೆ ,ಸಮಯವು ಉಳಿಯುತ್ತವೆ,ಮತ್ತು ಅಂದುಕೋಂಡ ಎಲ್ಲಾ ಕೆಲಸಗಳೂ ಮುಗಿಯುತ್ತವೆ.ಹೀಗೆ ಆಚಾರ್ಯರು ನಮಗೆ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೋಳ್ಳಬಹುದಾದ ವಿಷಯಗಳನ್ನು ತಮ್ಮ ಅವತಾರಕಾಲದಲ್ಲಿ ತೋರಿಸಿಕೋಟ್ಟಿದ್ದಾರೆ.ಅದನ್ನು ಅರಿತು ಆಚರಿಸಲು ಪ್ರಯತ್ನಿಸೋಣ.

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting