Posts

Showing posts from 2025

ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1

Image
  ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1 ಭಾರತದ ಈಗಿನ ಶಿಕ್ಷಣ ವ್ಯವಸ್ಥೆಯನ್ನು, ಅಥವಾ ಭಾರತೀಯ ಸಂಸ್ಕೃತಿ ವಿರೋಧಿ ಹಾಗೂ ಗುಲಾಮಗಿರಿಯ ಮಾನಸಿಕತೆಯನ್ನು ಗಮನಿಸಿದಾಗಲೆಲ್ಲ ಇದೆಲ್ಲವೂ ಮೆಕಾಲೆ ಶಿಕ್ಷಣದ ಪ್ರಭಾವ ಎಂದು ವಿಮರ್ಶೆ ಮಾಡುವುದನ್ನು ಅನೇಕರು ಕೇಳಿಯೆ ಇರುತ್ತೇವೆ. ಹಾಗಾದರೆ ಈ ಮೆಕಾಲೆ ಎನ್ನುವ ವ್ಯಕ್ತಿ ಯಾರು, ಅವನು ಹೇಗೆ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದ, ಅವನ ಮುಂಚೆ ಭಾರತದಲ್ಲಿ ಸಶಕ್ತವಾದ ಸಾರ್ವತ್ರಿಕವಾದ ಶಿಕ್ಷಣ ವ್ಯವಸ್ಥೆ ಇತ್ತೆ ಎನ್ನುವ ಸಂದೇಹಗಳು ಮೂಡುವುದು ಸಹಜ. ಈ ವಿಷಯದಲ್ಲಿ ಕೆಲವರು ಹೀಗೆ ವಾದಿಸುತ್ತಾರೆ "ಭಾರತ ಇಂದು ವಿಜ್ಞಾನ ತಂತ್ರಜ್ಞಾನ ಮುಂತಾದ ವಿಷಯದಲ್ಲಿ ಸಾಧನೆ ಮಾಡಿದ್ದರೆ, ಅದು ಮೆಕಾಲೆ ತಂದ ಇಂಗ್ಲೀಷ್ ಶಿಕ್ಷಣದ ಫಲವೇ.  ಬ್ರಿಟಿಷರ ಶಿಕ್ಷಣ ಪ್ರಭಾವದಿಂದ ಇಂದು ಎಲ್ಲಾ ಜಾತಿಯವರು ಶಿಕ್ಷಣವನ್ನು ಪಡೆಯುವಂತಾಗಿದೆ. ಹಿಂದಿನ ಗುರುಕುಲ ಪದ್ಧತಿಯೇ ಇದ್ದಿದ್ದರೆ ಕೇವಲ ಬ್ರಾಹ್ಮಣರು ಮಾತ್ರ ಶಿಕ್ಷಿತರಾಗಿ ಉಳಿದವರನ್ನು ಜ್ಞಾನದಿಂದ ದೂರವಿಟ್ಟು ಶೋಷಿಸುತ್ತಿದ್ದರು".  ಇದಕ್ಕೆ ಪೂರಕವಾಗಿ ಕುವೆಂಪುವರದ್ದು ಎನ್ನಲಾಗುವ "ಇಂಗ್ಲಿಷಿನವರು ಇಂಡಿಯಾಕ್ಕೆ ಬರದಿದ್ದರೆ ನಾನು ಕುಪ್ಪಳಿಯಲ್ಲಿ ಸಗಣಿ ತಟ್ಟಿಕೊಂಡು ಬ್ರಾಹ್ಮಣರ ಗದ್ದೆ ಉತ್ತುಕೊಂಡಿರುತ್ತಿದ್ದೆ." ಎಂಬುವ ಹೆಳಿಕೆಯು ಆಗಾಗ ಹರಿದಾಡುತ್ತಿರುತ್ತದೆ. ಈ ವಾದದ ಸತ್ಯಾಸತ್ಯತೆಯನ್ನು ...

ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಧೀರ.

Image
ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಮಹಾರಾಜ ಧೀರ.  ಮೈಸೂರು ಅರಮನೆಯನಲ್ಲಿ ನಡೆಯುವ  ಖಾಸಗಿ ದರ್ಬಾರ್ ನ್ನು ಆಡಿಕೊಳ್ಳುವ ವರ್ಗವೊಂದು ರಾಜರ ಕೊಡುಗೆಗಳನ್ನು ಅಲ್ಲೆಗೆಳೆಯುವ ಪ್ರಯತ್ನ ಮಾಡುತ್ತಲೆ ಇರುತ್ತದೆ.  ಇವರು ರಾಜಪ್ರಭುತ್ವವನ್ನು ಟೀಕಿಸಿ ಮಾತನಾಡುವುದುಂಟು . ರಾಜನ ಮಗನೆ ರಾಜನಾಗಬೇಕು, ಮತ್ಯಾರಿಗೂ ಅವಕಾಶಕಲ್ಪಿಸದ ವ್ಯವಸ್ಥೆ. ರಾಜರು ಸ್ತ್ರೀಲೋಲುಪರು, ಐಷಾರಾಮಿಗಳು, ವಿಲಾಸಿಜೀವಿಗಳಾಗಿದ್ದರು , ಪ್ರಜೆಗಳ ಕಷ್ಟಗಳಿಗೆ ಯಾವುದೆ ಸ್ಪಂದನೆಯಿಲ್ಲದ ವ್ಯವಸ್ಥೆ. ಇವೆ ಮೊದಲಾದ ಟೀಕೆಗಳನ್ನು ರಾಜಪ್ರಭುತ್ವದ ವಿಷಯದಲ್ಲಿ ಕೇಳುತ್ತೆವೆ. ಇದು ವಾಸ್ತವಿಕವೆ ? ರಾಜಪ್ರಭುತ್ವವು ಈಗ ಪ್ರಸಕ್ತವಲ್ಲದಿರಬಹುದು, ಆದರೆ ಆ ರಾಜಪ್ರಭುತ್ವವಿದ್ದ ಕಾಲದಲ್ಲಿ ಆಡಳಿತ ವ್ಯವಸ್ಥೆಯೆಲ್ಲವೂ ಇವರೆಲ್ಲ ಆರೋಪಿಸುವ ದೋಷಗಳಿಂದಲೆ ಕೂಡಿತ್ತೆ . ರಾಜರಲ್ಲಿ ನೈತಿಕತೆಯೆ ಇರಲಿಲ್ಲವೆ ? ರಾಜನಿಗೆ ಸಾಮಾನ್ಯ ಪ್ರಜೆಯ ಕುರಿತು ಕಾಳಜಿಯೆ ಇರಲಿಲ್ಲವೆ ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ . ಇದಕ್ಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲ್ಲು ಕಾರ್ತವೀರ್ಯಾರ್ಜುನನ ಚರಿತ್ರೆಯನ್ನು ತಿಳಿಯಬೇಕು . ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ ಧರ್ಮಶೀಲ , ಪರಾಕ್ರಮೀ ಕ್ಷತ್ರಿಯ . ತಂದೆಯು ಸ್ವರ್ಗಸ್ಥನಾದ ಮೇಲೆ ಮಂತ್ರಿಗಳು ಹಾಗೂ ಪುರೋಹಿತರು ಪಟ್ಟಾಭಿಷೇಕಕ್ಕೆ ತಯಾರಾಗಿ ರಾಜನಾಗುವಂತೆ ಪ್ರಾರ್ಥಿಸಿದರು . ಅವರಷ್ಟೆ ಅಲ್ಲದೆ ಪೌರಜನರೆಲ್ಲರೂ ಅವ...

A Bhāratīya Rājanīti- Purāṇic Perspective on Tax Collection and Governance: Lessons from the Rule of Kārtavīryārjuna

Image
A Bhāratīya Rājanīti- Purāṇic Perspective on Tax Collection and Governance: Lessons from the Rule of Kārtavīryārjuna Democracy is generally understood as a system “of the people, by the people, for the people,” where the citizens hold sovereignty. Advocates of democracy often criticize monarchy, arguing that it restricts power to a hereditary lineage, thereby denying opportunities to others. Monarchs, they claim, were indulgent, luxury-driven, and indifferent to the hardships of their subjects. However, is this criticism entirely justified? While monarchy may no longer be relevant today, was it inherently flawed in the ways often described? Were all monarchs devoid of morality? Did kings truly lack concern for their people? To seek answers to these questions, we must examine the history of Kārtavīryārjuna. Kārtavīryārjuna: A Righteous and Powerful Kshatriya Kārtavīryārjuna, the son of Kṛtavīrya, was a virtuous and mighty ruler. After his father’s passing, the ministers, priests, and ci...

Protection of Workers’ Rights – The Indian Perspective

Image
Protection of Workers’ Rights – The Indian Perspective The ethical values of Sanātana Dharma are eternal and universal. In Russia, at one time, there was a massive uprising against feudalism and the tyranny of landlords, inspired by Communist ideology. However, that revolution did not end positively; it concluded in violence, disorder, and instability, leading to countless deaths and suffering. If we look at world history, except for the French Revolution, no revolution has successfully constructed a new society. Most revolutions have only managed to topple the existing systems without building a new and better one in their place. Over time, these thoughts evolved into labour unions and labour laws, and the idea of “labour dignity” took shape. With this came great awareness about labour protection and workers’ fundamental rights. However, many of these labour unions, driven by political motives and invoking worker welfare, repeatedly called for strikes and shutdowns. Consequently, man...

ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ

Image
ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ ಸನಾತನಧರ್ಮದ ನೀತಿ ಮೌಲ್ಯಗಳು ಸಾರ್ವಕಾಲಿಕ . ರಷ್ಯಾದಲ್ಲಿ ಒಂದು ಕಾಲದಲ್ಲಿ ಜಮೀನ್ದಾರಿಕೆಯ ವಿರುದ್ಧವಾಗಿ ಹಾಗೂ ಜಮೀನ್ದಾರರ ದಬ್ಬಾಳಿಕೆಯ ವಿರುದ್ಧವಾಗಿ ,ಕಮ್ಯುನಿಸಮ್ ನ ಚಿಂತನೆಯೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಯಿತು . ಆದರೆ ಆ ಹೋರಾಟವು ಸಕಾರಾತ್ಮವಾಗಿ ಕೊನೆಗೊಳ್ಳದೆ ,ಹಿಂಸೆ , ಅನಾಚಾರ, ಅಸ್ಥಿರತೆಯಲ್ಲಿ ಕೊನೆಗೊಂಡು ಅನೇಕ ಸಾವು-ನೋವುಗಳನ್ನು ಕಂಡಿತು . ಜಗತ್ತಿನ ಇತಿಹಾಸದಲ್ಲಿ ಫ್ರೆಂಚ ಕ್ರಾಂತಿ ಹೊರತುಪಡಿಸಿದರೆ , ಇನ್ನಾವುದೆ ಕ್ರಾಂತಿಗಳಿಂದ ಸಮಾಜದ ನಿರ್ಮಾಣವು ಸಾಧ್ಯವಾಗಿಲ್ಲ. ಉಳಿದೆಲ್ಲ  ಕ್ರಾಂತಿಗಳು ಇರುವ ವ್ಯವಸ್ಥೆಯನ್ನು ಉರುಳಿಸಿದವೆ ಹೊರತು ಹೊಸ ಸಮಾಜವನ್ನು ಕಟ್ಟಲಿಲ್ಲ. ಈ ಚಿಂತನೆಗಳು ಬೆಳೆದು ಕಾರ್ಮಿಕ ಸಂಘಟನೆಗಳು , ಕಾರ್ಮಿಕ ನಿಯಮಗಳೆಲ್ಲಾ ಬಂದು "'ಲೇಬರ್ ಡಿಗ್ನಿಟಿ"' ಎಂಬ ಚಿಂತನೆಯೊಂದಿಗೆ ಕಾರ್ಮಿಕರ ಹಿತಸಂರಕ್ಷಣೆ, ಮೂಲಭೂತ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಮೂಡಿತು . ಆದರೆ ಇದೇ ಕಾರ್ಮಿಕ ಸಂಘಟನೆಗಳು ರಾಜಕೀಯದಿಂದ ಪ್ರೇರಿತವಾಗಿ ,ಕಾರ್ಮಿಕರ ಹಿತರಕ್ಷಣೆ ನೆಪವೊಡ್ಡಿ ಪದೆ ಪದೆ ಮುಷ್ಕರಗಳನ್ನು ಬಂದಗಳನ್ನು ಕರೆಕೊಟ್ಟಿದ್ದರಿಂದ , ಕಾರ್ಖಾನೆಯ ಮಾಲಿಕರು ನಷ್ಟಕ್ಕೆ ಸಿಲುಕಿಕೊಂಡು ಕಾರ್ಖಾನೆಯನ್ನು ಮುಚ್ಚಿದಾಗ , ಬಡ ಕಾರ್ಮಿಕರು ಬಿದಿಗೆ ಬಿದ್ದ ಅನೇಕ ಪ್ರಸಂಗಗಳು ಕಳೆದೈದಾರು ದಶಕಗಳಲ್ಲಿ ನಡೆದಿವೆ . ಹಾಗಾದರೆ  ಇಂತಹ ಜ್ವಲಂತ ಸಮಸ್ಯೆಯಾದ...

ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ !

Image
  ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ ! ಭಾರತದ ಇತಿಹಾಸ ,ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಶ್ರೇಷ್ಠ ಪಂಡಿತರು ಅನೆಕರಿದ್ದಾರೆ. ಹಾಗೆಯೆ ವಿದ್ವಾಂಸ ಎಂಬ ಹಣೆಪಟ್ಟಿಯನ್ನು ಹೊತ್ತ್ತು ಅನೇಕ ವರ್ಷ ಮೆರೆದ ಮೇಲೆ , ನಿಜ ಬಣ್ಣ ಬಯಲಾದ ಕಥೆಗಳಿಗೂ ಕಡಿಮೆಯೆನಿಲ್ಲ. ಹೆಚ್.ಹೆಚ್.ವಿಲ್ಸನ್ ತನ್ನ ಕಾಲದ  ಶ್ರೇಷ್ಠ ಪಂಡಿತನೆಂದು ಪ್ರಸಿದ್ಧನಾದವನು. ಎಸಿಯಾಟಿಕ್ ಸೋಸಾಯಿಟಿಯ ನಿರ್ದೇಶಕನಾಗಿ , ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ,ಅನೇಕ ಉನ್ನತ ಪದವಿಯನ್ನು ಗಳಿಸಿದವನು. ಜೇಮ್ಸ ಮಿಲ್ ನ ಕುಪ್ರಸಿದ್ಧವಾದ "ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ" ದ ಸಂಶೋಧಿತ ಪುನರಾವೃತ್ತಿಗಳನ್ನು ತನ್ನ ಮುನ್ನುಡಿಯೊಂದಿಗೆ ಪುನರ್ಮುದ್ರಿಸಿದ. ಮೇಘದೂತ, ವಿಷ್ಣುಪುರಾಣವನ್ನು ಅನುವಾದಿಸಿದ. ಮೊತ್ತ ಮೊದಲ ಬಾರಿಗೆ ಋಗ್ವೇದದ ಕೆಲವು ಭಾಗವನ್ನು ಆಂಗ್ಲಭಾಷೆಗೆ ಅನುವಾದಿಸಿದ. ಇವನು ನಿಜವಾಗಿ ಅಷ್ಟು ಶ್ರೇಷ್ಠ ಪಂಡಿತನೆ. ಸಂಸ್ಕೃತದ ಯಾವುದೆ ವಿಧವಾದ ಅಧ್ಯಯನದ ಹಿನ್ನಲೆಯೆಲ್ಲದೆ ಭಾರತಕ್ಕೆ ಬಂದಳಿದ ಇವನು ಪ್ರಪಂಚದ ಮೊದಲ ಸಂಸ್ಕೃತ-ಇಂಗ್ಲೀಷ್ ನಿಘಂಟುವನ್ನು ಜಗತ್ತಿಗೆ ಕೊಟ್ಟದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದರೆ ಅನಾವರಣಗೊಳ್ಳುವುದು ,ಅದೃಷ್ಟ, ವಂಚನೆ, ಉತ್ಸಾಹ ಹಾಗು ಕೃತಿಚೌರ್ಯದ ಇತಿಹಾಸ. ಅದುವೆ ಹೆಚ್,ಹೆಚ್, ವಿಲ್ಸನ್ ನ ಜೀವನೇತಿಹಾಸ. *ಹೆ...

Savitri: The Embodiment of Feminine Strength and Devotion

Image
  Savitri: The Embodiment of Feminine Strength and Devotion In our Puranas  the Mahabharata and Ramayana, we find numerous stories of women who exemplify the maturity of feminine power, determination, and penance. Among them, Savitri stands out as a prominent figure—renowned for her penance that brought back her husband from death. The famous vrata  that she observed is known as the Vata Savitri Vrata. Here, "Vata" refers to the banyan tree. Although the episode of Savitri in the Mahabharata does not specifically mention the banyan tree, various Puranas such as the Skanda Purana describe the connection between the story and the banyan tree. The essence of this beautiful story is as follows: Once, in the land of Madra, there lived a king named Ashwapati. Though he had been married for many years, he remained childless. Wishing to have children, he undertook rigorous penance. He practiced recited the Gayatri Mantra, and offered ten thousand Ahutis into the sacrificial fire....

ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ

Image
  ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- "ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ" ಭಾರತವನ್ನು ಅಧ್ಯಯನ ಮಾಡಿದ ಯುರೂಪಿನ ವಿದ್ವಾಂಸರು ಎರಡು ಬಗೆಯವರು . ಭಾರತ ಹಾಗೂ ಭಾರತೀಯವಾದದ್ದರಲ್ಲಿ ಯಾವುದೆ ಮಹತ್ವವಾದ ಅಂಶಗಳಿಲ್ಲ ಎಂದು ವಾದಿಸಿ ಹೀಳಾಯಿಸಿ ತುಚ್ಛವಾಗಿ ಕಾಣುವವರು , ಹಾಗೆಯೆ  ಭಾರತೀಯವಾದದ್ದರಲ್ಲಿ ಅನೇಕ ಉತ್ತಮ ಅಂಶಗಳಿವೆ ಎಂದು ವಾದಿಸಿ ತಮ್ಮ ಇತಿಮಿತಿಯಲ್ಲಿ ಅದನ್ನು ಜಗತ್ತಿಗೆ ಪರಿಚಿಯಿಸಿದವರು . ಮೊದಲನೆಯ ಪ್ರಕಾರದ ವಿದ್ವಾಂಸರು ಭಾರತವನ್ನು ಹೀಗೆಳೆಯುದಷ್ಟೆ ಅಲ್ಲದೆ , ಯುರೋಪಿನ ವಸಾಹತುಷಾಹಿಗಳ ಆಳ್ವಿಕೆಯಿಂದಲೆ ಭಾರತವು ನಾಗರೀಕತೆಯನ್ನು ಹೊಂದಲು ಸಾಧ್ಯವೆಂದು ಸಮರ್ಥಿಸುತಿದ್ದರು . ಅವರಲ್ಲಿ ಭಾರತಕ್ಕೆ ಒಮ್ಮೆಯೂ ಭೇಟಿಕೊಡದೆ , ಭಾರತದ ಯಾವುದೆ ಭಾಷೆಗಳನ್ನು ತಿಳಿಯದೆ ಮೂರು ಸಂಪುಟಗಳಲ್ಲಿ history of British India  ಎಂಬ ಪುಸ್ತಕಗಳ ಮೂಲಕ ಭಾರತದ ಇತಿಹಾಸವನ್ನು ಬರೆದ ಜೇಮ್ಸ್ ಮಿಲ್ ಕೂಡ ಒಬ್ಬ. ಜೇಮ್ಸ್ ಮಿಲ್ 1773- 1836 ಜೇಮ್ಸ್ ಮಿಲ್ ಬಹಳ ಬುದ್ಧಿವಂತನಾದ ಹುಡುಗನಾಗಿದ್ದ. ತನ್ನ ಶಾಲಾ ದಿನಗಳ ಅಧ್ಯಯನದ ನಂತರ ಎಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಲಾ ವಿಷಯದಲ್ಲಿ ಪದವಿಯನ್ನು ಸಂಪಾದಿಸಿದ . ನಂತರ ಡಿವಿನಿಟಿ ಸ್ಟಡಿಸ್( ಕ್ರಿಶ್ಚಿಯಾನಿಟಿಯ ಅಧ್ಯಯನ) ಎಂಬ ವಿಭಾಗದಲ್ಲಿ ಅಧ್ಯಯನ ಮಾಡಿದ. ಅದೇ ಆಧಾರದಲ್ಲಿ ಸ್ಕಾಟ್ಲ್ಯಾಂಡಿನ ಚರ್ಚೊಂದರಲ್ಲಿ ಬೋಧಕನಾಗಿ ಕೆಲಸ ಗಿಟ್ಟಿಸಿಕೊಂಡ. ಆದರೆ ಅವನು ನಿಯ...

ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ

Image
  ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ವಸು ಎಂಬ ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ(ಬೇಡ) ಜನ್ಮವನ್ನು ಪಡೆಯುತ್ತದೆ. ಆ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ ಎನ್ನುವುದು ವರಾಹ ಪುರಾಣದಲ್ಲಿ ನಿರೂಪಿದವಾದ ರಾಜನ ವೃತ್ತಾಂತ. ಇದರ ಆಧಾರದಿಂದ ಆಚಾರ್ಯರು ಕರ್ಮಗಳಿಗೂ ಜೀವಸ್ವರೂಪವಿಗೆ ಎಂಬ ತತ್ವವನ್ನು ಅನುವ್ಯಾಖ್ಯಾನದ ತೃತೀಯಾಧ್ಯಾಯದಲ್ಲಿ ನಿರೂಪಿಸಿದ್ದಾರೆ.    ಬ್ರಹ್ಮಹತ್ಯಾ ದೋಷವು ಬೇಡನ ಜನ್ಮವನ್ನು ಪಡೆದ ಮೇಲೆ ಎನು ಮಾಡಿದನು ಎಂಬ ಕುತೂಹಲವುಂಟಾಗುತ್ತದೆ. ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು.ತಮ್ಮ ಸಂನ್ಯಾಸಪದ್ಧತಿ ಎಂಬ ಗ್ಲಂಥದಲ್ಲಿ ವಿಷ್ಣುನೈವೇದ್ಯದ ಮಹತ್ವವನ್ನು ಸೂಚಿಸುವ ಪ್ರಕರಣದಲ್ಲಿ ವರಾಹ ಪುರಾಣದಲ್ಲಿರುವ ಬೇಡನ ರೋಚಕವಾದ ವೃತ್ತಾಂತವನ್ನು ಉಲ್ಲೇಖಿಸುತ್ತಾರೆ. ವ್ಯಾಧಶ್ವಶುರಸಂವಾದ ಎಂದು ಈ ಪ್ರಕರಣವು ತುಂಬಾ ಅಪರೂಪದ ವಿಷಯಗಳನ್ನೊಳಗೊಂಡಿದೆ.  ವ್ಯಾಧತ್ವೇ ಚ ಸುಧರ್ಮಜ್ಞೋ ಬಭೂವ ಚ ತಥಾಕರೋತ್  ಸೋಽಮಾವಾಸ್ಯಾಂ ತಥಾ ಪುತ್ರ್ಯಾಃ ಶ್ವಶುರಸ್ಯ ಗೃಹಂ ಪ್ರತಿ | ಗತ...

ಇಂಡೊಲೊಜಿ ವಿಮರ್ಶೆ -9 - ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ

Image
  ಇಂಡೊಲೊಜಿ ವಿಮರ್ಶೆ -9 -  ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ  ಮಿಶನರಿಗಳು ಮತಾಂತರದ ಉದ್ದೇಶದಿಂದಲೆ ಭಾರತೀಯ ಸಂಸ್ಕೃತಿಯ ಹಾಗೂ ಭಾರತೀಯ ಗ್ರಂಥಗಳ ಅಧ್ಯಯನವನ್ನು ಮಾಡಿದರು ಎಂಬ ಅಂಶವನ್ನು ಕಳೆದ ಕೆಲವು ಸಂಚಿಕೆಗಳಲ್ಲಿ ಅರಿತುಕೊಂಡೆವು . ಇವರ ಜೊತೆಗೆ ಮಿಶನರಿಗಳಲ್ಲದ ಬ್ರಿಟಿಷ್  ಹಾಗೂ ಜೆರ್ಮನಿ, ಫ್ರಾನ್ಸ  ಮುಂತಾದ ಇತರ ಯುರೋಪಿನ ವಿದ್ವಾಂಸರು ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು . ಈ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಮೇಲಿನ ಆಸಕ್ತಿಯಿಂದ ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು. ಇವರಿಗೆ ಮಿಶನರಿಗಳಂತೆ ಮತಾಂತರ ಮುಂತಾದ ಯಾವುದೇ ಉದ್ದೇಶಗಳಿರಲಿಲ್ಲವಾದರೂ ಸಹಜವಾದ ಸ್ವಜನ್ಮಜಾತ ಕ್ರಿಶ್ಚಿಯಾನಿಟಿಯ ಪ್ರಭಾವವಿದ್ದದ್ದರಿಂದ ಅದರ ಪ್ರಭಾವವನ್ನು ಅವರ ವಿಮರ್ಶೆಗಳಲ್ಲಿ , ಗ್ರಂಥಗಳಲ್ಲಿ ಕಾಣಬಹುದಾಗಿದೆ . ಇಂತಹ ಅನೇಕ ಯುರೋಪಿನ ವಿದ್ವಾಂಸರು ಭಾರತದ ಅಧ್ಯಯನವನ್ನು ಮಾಡಿದ್ದಾರೆ . ಅವರಲ್ಲಿ ಪ್ರಮುಖರನ್ನು ಮುಂದಿನ ಕೆಲವು ಸಂಚಿಕೆಗಳಲ್ಲಿ ಗಮನಿಸೋಣ .  ಸರ್ ವಿಲಿಯಮ್ ಜೋನ್ಸ್  (Sir William Jones 1746-1794) ವಿಲಿಯಮ್ ಜೋನ್ಸ್ ಲಂಡನ್ ನಲ್ಲಿ ಜನಿಸಿದ. ಚಿಕ್ಕ ವಯಸ್ಸಿನಲ್ಲಿಯೆ ಭಾಷೆಗಳ ಬಗ್ಗೆ ಆಸಕ್ತಿಯನ್ನು ಬೆಳಿಸಿಕೊಂಡು ಗ್ರೀಕ್,ಲ್ಯಾಟಿನ್, ಪರ್ಷಿಯನ್, ಅರೆಬಿಕ್, ಹಿಬ್ರೂ, ಮುಂತಾದ ಎಂಟು ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಸಂಪಾದಿಸಿದ. ಆಕ್ಸ್ವರ್ಡ ವ...

Sri Vyasaraja: A Historical Reappraisal – Dispelling Myths and Misconceptions

Image
Sri Vyasaraja: A Historical Reappraisal – Dispelling Myths and Misconceptions Dr. Shrinidhi S pyati  In India, we occasionally hear objections that Madhwa saints have contributed little to the revival of Sanatana Dharma. However, a deeper historical study of Vyasaraja’s life reveals that his contributions in this regard are equally unparalleled. Vyasaraja was the royal preceptor (Rajguru) for over half a century, guiding Vijayanagara rulers like Saluva Narasimha Devaraya, Timmabhupala, Tuluva Narasa Nayaka, Veera Narasimha raya, Krishnadevaraya, and Achyuta Devaraya. He was also the spiritual teacher to Purandara Dasa and Kanaka Dasa, ensuring that the path of devotion (Bhakti) flourished in his kingdom, deeply rooting itself in the hearts of the people. Despite having immense influence over the kings, he sought no personal gains, remaining immersed in devotion to Krishna and exemplifying the pinnacle of renunciation. The unique life of Vyasaraja has been captured by the poet So...

ಇಂಡೊಲೊಜಿ ವಿಮರ್ಶೆ -8- Fulfillment theology

Image
ಇಂಡೊಲೊಜಿ ವಿಮರ್ಶೆ -8- Fulfillment Theology  ಭಾರತದಲ್ಲಿ ಕ್ರಿಶ್ಚಿಯಾನಿಟಿಯನ್ನು ಪ್ರಬಲವಾಗಿ ಪ್ರಸರಿಸಲು ಮಿಶನರಿಗಳ ಪ್ರಯತ್ನ ಮುಂದುವರಿದಿತ್ತು . ಆದರೆ ಭಾರತೀಯ ಮೂಲದ ಸಂಸ್ಕೃತಿಗೆ ಒಗ್ಗಿಕೊಂಡವರಿಗೆ ಕ್ರಿಶ್ಚಿಯಾನಿಟಿಯ ಆಚರಣೆಗಳು ತೀರಾ ಅಸಹಜವಾಗಿ ಕೃತಕವಾಗತೊಡಗಿದವು . ಅಷ್ಟೆ ಅಲ್ಲದೆ ದೇಶೀಯ ಕ್ರಿಶ್ಚಿಯನ್ನರ ಅಗತ್ಯತೆಕೆಗೆ ತಕ್ಕಂತೆ ಯುರೋಪಿನ ಚರ್ಚಗಳ ಪರಿಕಲ್ಪನೆಗಳಿಂದ ಹೊರಬಂದು ಭಾರತೀಯ ಚರ್ಚ್ ಗಳ ಅಗತ್ಯತೆಯನ್ನು ಮಿಶನರಿಗಳು ಮನಗಂಡವು . ಈ ದೃಷ್ಟಿಕೋನದಿಂದ ಹಿಂದೂ ಮತ್ತು ಕ್ರಿಶ್ಚಿಯಾನಿಟಿಯ ಸಾಮರಸ್ಯ ಮೂಡಿಸುವ ದೃಷ್ಟಿಯಿಂದ ಬದಲಾವಣೆ ತರದೆ ಕ್ರಿಶ್ಚಿಯಾನಿಟಿಯ ಪ್ರಸಾರವು ಕಷ್ಟಸಾಧ್ಯ ಎಂದು ಅರಿವಾದಾದ ಹುಟ್ಟಿದ ರೂಪುರೇಷೆ    Fulfillment theology. Fulfillment theology  (ಪರಿಪೂರ್ಣತೆಯ ಸಿದ್ದಾಂತ)- ವಿಲಿಯಮ್ ಮಿಲ್ಲರ್ (1838-1923) ವಿಲಿಯಮ್ ಮಿಲ್ಲರ್ ನು ಸ್ಕಾಟ್ಲ್ಯಾಂಡ್ ನ ಶಿಕ್ಷಣಶಾಸ್ತ್ರನಾಗಿದ್ದನು . Free church of Scotland ಎಂಬ ಚರ್ಚನ ಮಿಶನರಿಯಾಗಿ ಭಾರತಕ್ಕೆ ಬಂದನು . ಇವನು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಮೂಲಕ ದಕ್ಷಿಣ ಭಾರತದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಈ ಸಿದ್ಧಾಂತದ ಮೂಲಕ ಕ್ರಿಶ್ಚಿಯಾನಿಟಿಯನ್ನು ಭಾರತೀಯ ಜನರಿಗೆ ಹತ್ತಿರವಾಗಿಸುವಲ್ಲಿ ಕಾರ್ಯಪೃವೃತ್ತನಾದ . ಕ್ರಿಸ್ತ್ತನು ಹಾಗು ಕ್ರಿಶ್ಚಿಯಾನಿಟಿಯು ಉಳಿದ ಎಲ್ಲಾ ರಿಲಿಜಿಯನ್ ಗಳ ಪರಿಪೂರ್ಣತೆಗೆ ಕಾರಣವು ಎ...