ಇಂಡೊಲೊಜಿ ವಿಮರ್ಶೆ -8- Fulfillment theology




ಇಂಡೊಲೊಜಿ ವಿಮರ್ಶೆ -8- Fulfillment Theology 

ಭಾರತದಲ್ಲಿ ಕ್ರಿಶ್ಚಿಯಾನಿಟಿಯನ್ನು ಪ್ರಬಲವಾಗಿ ಪ್ರಸರಿಸಲು ಮಿಶನರಿಗಳ ಪ್ರಯತ್ನ ಮುಂದುವರಿದಿತ್ತು . ಆದರೆ ಭಾರತೀಯ ಮೂಲದ ಸಂಸ್ಕೃತಿಗೆ ಒಗ್ಗಿಕೊಂಡವರಿಗೆ ಕ್ರಿಶ್ಚಿಯಾನಿಟಿಯ ಆಚರಣೆಗಳು ತೀರಾ ಅಸಹಜವಾಗಿ ಕೃತಕವಾಗತೊಡಗಿದವು . ಅಷ್ಟೆ ಅಲ್ಲದೆ ದೇಶೀಯ ಕ್ರಿಶ್ಚಿಯನ್ನರ ಅಗತ್ಯತೆಕೆಗೆ ತಕ್ಕಂತೆ ಯುರೋಪಿನ ಚರ್ಚಗಳ ಪರಿಕಲ್ಪನೆಗಳಿಂದ ಹೊರಬಂದು ಭಾರತೀಯ ಚರ್ಚ್ ಗಳ ಅಗತ್ಯತೆಯನ್ನು ಮಿಶನರಿಗಳು ಮನಗಂಡವು . ಈ ದೃಷ್ಟಿಕೋನದಿಂದ ಹಿಂದೂ ಮತ್ತು ಕ್ರಿಶ್ಚಿಯಾನಿಟಿಯ ಸಾಮರಸ್ಯ ಮೂಡಿಸುವ ದೃಷ್ಟಿಯಿಂದ ಬದಲಾವಣೆ ತರದೆ ಕ್ರಿಶ್ಚಿಯಾನಿಟಿಯ ಪ್ರಸಾರವು ಕಷ್ಟಸಾಧ್ಯ ಎಂದು ಅರಿವಾದಾದ ಹುಟ್ಟಿದ ರೂಪುರೇಷೆ   Fulfillment theology.

Fulfillment theology  (ಪರಿಪೂರ್ಣತೆಯ ಸಿದ್ದಾಂತ)- ವಿಲಿಯಮ್ ಮಿಲ್ಲರ್ (1838-1923)

ವಿಲಿಯಮ್ ಮಿಲ್ಲರ್ ನು ಸ್ಕಾಟ್ಲ್ಯಾಂಡ್ ನ ಶಿಕ್ಷಣಶಾಸ್ತ್ರನಾಗಿದ್ದನು . Free church of Scotland ಎಂಬ ಚರ್ಚನ ಮಿಶನರಿಯಾಗಿ ಭಾರತಕ್ಕೆ ಬಂದನು . ಇವನು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಮೂಲಕ ದಕ್ಷಿಣ ಭಾರತದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಈ ಸಿದ್ಧಾಂತದ ಮೂಲಕ ಕ್ರಿಶ್ಚಿಯಾನಿಟಿಯನ್ನು ಭಾರತೀಯ ಜನರಿಗೆ ಹತ್ತಿರವಾಗಿಸುವಲ್ಲಿ ಕಾರ್ಯಪೃವೃತ್ತನಾದ . ಕ್ರಿಸ್ತ್ತನು ಹಾಗು ಕ್ರಿಶ್ಚಿಯಾನಿಟಿಯು ಉಳಿದ ಎಲ್ಲಾ ರಿಲಿಜಿಯನ್ ಗಳ ಪರಿಪೂರ್ಣತೆಗೆ ಕಾರಣವು ಎಂದು ಪ್ರತಿಪಾದಿಸುವ ಈ ಸಿದ್ಧಾಂತದ ಹರಿಕಾರನಾದನು . ವಾಸ್ತವವಾಗಿ ಇದರ ಜಾಡನ್ನು ಅವನ್ನು ಬೈಬಲ್ಲಿನಿಂದಲೆ ಪಡೆದನು . ಬೈಬಲ್ ನಲ್ಲಿ Old Testament ಮತ್ತು New Testament ಎಂಬ ಎರಡು ಭಾಗಗಳಿವೆ . Old Testament ನಲ್ಲಿರುವ ನಿಯಮಗಳನ್ನು ಪೂರ್ಣಗೊಳಿಸಲು ಯೇಸು ಬಂದಿದ್ದಾನೆಂದು ಕ್ರಿಶ್ಚಿಯನ್ನರು ನಂಬುತ್ತಾರೆ .ಇದರಿಂದ ಸ್ಪೂರ್ತಿ ಪಡೆದ ಮಿಲ್ಲರನು 1868 ರಲ್ಲಿ ಪ್ರಕಟವಾದ Scottish Missions in india ಎನ್ನುವ ಪುಸ್ತದಲ್ಲಿ ಹೀಗೆ ಅಭಿಪ್ರಾಯಪಡುತ್ತಾನೆ  -ಹಿಂದೂಯಿಸಮ್ ಎನ್ನುವುದು ಅತ್ಯಂತ ಪ್ರಭಾವಕಾರಿಯಾದ ಧರ್ಮವಾಗಿದೆ. ಇದು ಅದರ ಅನುಯಾಯಿಗಳನ್ನು ಬೆರೆಲ್ಲಾ ರಿಲಿಜಿಯನ್ ಗಳಿಗಿಂತ ಹೆಚ್ಚು ಪ್ರಭಾವಿಯಾಗಿ ಒಂದುಗೂಡಿಸುತ್ತದೆ. ಹಾಗಾಗಿ ಅದಕ್ಕೆ ತಕ್ಕಂತೆ ನಮ್ಮ ತಂತ್ರಗಾರಿಕೆಯನ್ನು ರಚಿಸಬೇಕು .  ಶಿಕ್ಷಣದ ಮೂಲಕ ಕ್ರಿಶ್ಚಿಯಾನಿಟಿಯ ಪ್ರಸಾರವನ್ನು ಮಾಡಬೇಕು. ಶಿಕ್ಷಣವನ್ನು ಸಾಧನವನ್ನಾಗಿ ಉಪಯೋಗಿಸಿ ಮಿಶನರಿ ಶಾಲೆಗಳು ಅಧ್ಯಯನದ ಎಲ್ಲಾ ಅಂಶಗಳಲ್ಲಿ ಕ್ರಿಸ್ಚಿಯಾನಿಟಿಯ ಸತ್ಯಗಳನ್ನು ಅಳವಡಿಸಬೇಕು. ಆಕ್ರಮಣಕಾರಿಯಾಗಿ ನೇರವಾಗಿ ಮತಾಂತರಿಸುವ ಬದಲು ಶಿಕ್ಷಣದ ಮೂಲಕ ಸೌಮ್ಯವಾಗಿ ಕ್ರಿಶ್ಚಿಯಾನಿಟಿಯ ಮೌಲ್ಯಗಳನ್ನು ಸಮಾಜದಲ್ಲಿ ಪಸರಿಸಬೇಕು . ಅದರ ಅಂಗವಾಗಿ ಫುಲಫಿಲಮೆಂಟ್ ಥಿಯಲೊಜಿಯನ್ನು ಬಳಸಿಕೊಳ್ಳಬೇಕು . ಕ್ರಿಶ್ಚಿಯಾನಿಟಿಯಲ್ಲದೆ ಉಳಿದ ಧರ್ಮಗಳಲ್ಲಿಯೂ ಸಮಾಜಕ್ಕ್ಕೆ ಉಪಯೋಗವಾಗು ಅನೇಕ ಸತ್ಯವಾದ ಅಂಶಗಳಿವೆ . ಆದರೆ ಅದರ ಪರಿಪೂರ್ಣತೆಯನ್ನು ಅಥವಾ ಪೂರ್ತಿಯನ್ನು ಯೇಸುವು ನೆರೆವೇರಿಸುತ್ತಾನೆ . ಹಾಗಾಗಿ ಯೇಸುವು ಯಾವುದೆ ಧರ್ಮವನ್ನು ನಾಶಪಡಿಸಲು ಬಂದಿಲ್ಲ, ಹೊರತಾಗಿ ಉಳಿದ ಧರ್ಮಗಳನ್ನು ಪರಿಪೂರ್ಣಗೊಳಿಸಲು ಬಂದಿದ್ದಾನೆ ಎಂದು ಧೃಢವಾಗಿ ಪ್ರತಿಪಾದಿಸಬೇಕು . ಹೀಗೆ ಭಾರತೀಯ ನೆಲದ ಸಂಸ್ಕೃತಿಯ ಮೇಳೈಸುವಿಕೆಯಿಂದ ಮಾತ್ರ ಮಿಶನರಿಯ ಕಾರ್ಯಗಳನ್ನು ಸುಲಭವಾಗಿ ಮುಂದುವರಿಸಲು ಸಾಧ್ಯವೆಂದು ಪ್ರತಿಪಾದಿಸಿದನು . ಮಿಲ್ಲರನ ಈ ಶೈಲಿಯು ದಕ್ಷಿಣಭಾರತದಲ್ಲಿ ಬಹಳ ಪ್ರಭಾವಿಯಾಗಿ ಕೆಲಸಮಾಡಿತು . ಅವನ ಸಾಧನೆಗೆ ಕೈಸರ್-ಎ-ಹಿಂದ್ ಎಂಬ ಪ್ರಶಸ್ತಿಯನ್ನು ನೀಡಿ ಸರ್ಕಾರವು ಅವನನ್ನು ಸನ್ಮಾನಿಸಿತು . 

ದಕ್ಷಿಣದಲ್ಲಿ ಯಶಸ್ವಿಯಾದ ಫುಲಫಿಲಮೆಂಟ್ ಥಿಯಲೊಜಿಯನ್ನು ಬಂಗಾಳದಲ್ಲೂ ಬಳಸಿಕೊಂಡು ಕ್ರಿಶ್ಚಿಯಾನಿಟಿಯ ವಿಸ್ತಾರಕ್ಕೆ ಪ್ರಯತ್ನ ಮಾಡಿದ ಮತ್ತೊಬ್ಬ ಮಿಶನರಿ ಜಾನ್ ನಿಕೋಲ್ ಫರ್ಕ್ವಾರ್ (1861-1929). ಜಾನ್ ನಿಕೋಲ್ ಫರ್ಕ್ವಾರ್ ಕ್ರಿಶ್ಚಿಯಾನಿಟಿಯ  ಪ್ರಸಾರಕ್ಕಾಗಿ ಅನೇಕ ಪುಸ್ತಕಗಳನ್ನು ಬರೆದ ಅವುಗಳಲ್ಲಿ ಪ್ರಮುಖವಾದವುಗಳು.

A Primer of Hinduism (1914)

The Crown of Hinduism (1913)

The Approach of Christ to Modern India (1913)

Gita and Gospel (1906)

Permanent Lessons of the Gita (1903)

The Crown of Hinduism (1913) ಎಂಬ ಪುಸ್ತಕದಲ್ಲಿ ಅವನು ಯೇಸುವು ಹಿಂದು ಧರ್ಮದ ಪರಿಪೂರ್ಣತೆಗೆ ಕಾರಣನು ಎಂದು ಪ್ರಬಲವಾಗಿ ಪ್ರತಿಪಾದಿಸಿದ. ಹಿಂದೂ ಧರ್ಮದ ಅಂಗಗಳಾದ ಕರ್ಮ ಸಿದ್ದಾಂತ ,ಜಾತಿ ಪದ್ಧತಿಗಳು, ಅನೇಕ ಮೂಡನಂಬಿಕೆ ಆಚರಣೆಗಳು ಆಧುನಿಕ ಭಾರತದ ಸಮಾಜಕ್ಕೆ ನಿರ್ಮಾಣಕ್ಕೆ ಪೂರಕವಲ್ಲ ಅದರ ಬದಲಾಗಿ ಕ್ರಿಸ್ತನ ಉಪದೇಶದ ಆಧಾರದಲ್ಲಿ ಸ್ವತಂತ್ರ ವಿಚಾರಧಾರೆ, ಪೂರೋಗಾಮಿ ಚಿಂತನೆ, ಇವುಗಳಿಂದ ಉನ್ನತ ಭಾರತೀಯ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದ. ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುವುದೆ ಎಂದು ಅಪಹಾಸ ಮಾಡಿದ್ದನ್ನು ಕೆಳಿದೆವು . ಈ ರೀತಿಯಾದ ಪ್ರಶ್ನೆಯನ್ನು ಅಂದೆ ಅವನು ತನ್ನ ಪುಸ್ತಕದಲ್ಲಿ  ಮಾಡಿ ಇಂತಹ ಮೂಢನಂಬಿಕೆಯು ಹಿಂದೂಗಳಿಗೆ ಇನ್ನು ಹೆಚ್ಚು ಪಾಪವನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಈ ರೀತಿಯಾದ ಮೂಢಾಚರಣೆಗಳನ್ನು ಖಂಡಿಸಿದ. 

. Take the crude custom of bathing in the Ganges to wash away sin. The custom is not only absurd, but seriously Immoral. Here is how a Hindu( Mr.kunhikannan Madras Christian college magazine) writes of it:

If we can commit sins and wash them away by bathing in the waters of certain rivers, how easy have things become! Such ideas are most dangerous to man's moral evolution. They encourage the commission of sin by holding out the hope of cleansing through the holy water of the Ganges.(THE CROWN OF HINDUISM-442) ಗಂಗೆಯಲ್ಲಿ ಸ್ನಾನ ಮಾಡುವ ಮೂಲಕ ಪಾಪವನ್ನು ತೊಳೆದುಹಾಕಬಹುದೆಂಬ ಮೂಢ ಸಂಪ್ರದಾಯವನ್ನು ಪರಿಗಣಿಸೋಣ. ಈ ಸಂಪ್ರದಾಯವು ಸರ್ವಥಾ ಅಸಂಗತವಷ್ಟೇ ಅಲ್ಲ, ಗಂಭೀರವಾಗಿ ಅನೈತಿಕವೂ ಆಗಿದೆ. ಇದರ  ಬಗ್ಗೆ  ಕುನ್ಹಿಕಣ್ಣನ್ ಎಂಬ ಹಿಂದುವು ಕೂಡ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ ಪತ್ರಿಕೆಯಲ್ಲಿ ಇದರ ಬಗ್ಗೆ ಬರೆಯುತ್ತಾನೆ:

"ನಾವು ಪಾಪಗಳನ್ನು ಮಾಡಬಹುದು ಮತ್ತು ಕೆಲವು ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಅವುಗಳನ್ನು ತೊಳೆದುಹಾಕಬಹುದು ಎಂದು ಊಹಿಸುವುದಾದರೆ, ಈ ಜೀವನ ಎಷ್ಟು ಸುಲಭವಾಗಿದೆ! ಇಂತಹ ಕಲ್ಪನೆಗಳು ಮಾನವನ ನೈತಿಕ ವಿಕಾಸಕ್ಕೆ ಅತ್ಯಂತ ಅಪಾಯಕಾರಿ. ಅವು  ಗಂಗಾ ನದಿಯ ನೀರಿನಲ್ಲಿ ಶುದ್ಧೀಕರಣದ ಭರವಸೆಯನ್ನು ನೀಡುವುದರಿಂದ ಪಾಪ ಮಾಡುವುದಕ್ಕೆ ಉತ್ತೇಜನ ನೀಡುತ್ತವೆ."

ಈ ರೀತಿಯಾಗಿ ಅನೇಕ ಹಿಂದೂ ಧರ್ಮದ ಆಚರಣೆಗಳನ್ನು ಕಟಕಟಗೆ ಎಳೆದು  ಖಂಡಿಸಿದ. ವಿವೇಕಾನಂದರ, ದಯಾನಂದ ಸರಸ್ವತಿ ಮುಂತಾದ ಆಗಿನ ಕಾಲದ ಹಿಂದೂ ನಾಯಕರ ಕ್ರಿಶ್ಚಿಯಾನಿಟಿ ಕುರಿತಾದ ಅಕ್ಷೇಪಗಳಿಗೆ ಪ್ರತ್ಯುತ್ತರಕ್ಕೆ ಪ್ರಯತ್ನರೂಪವಾದ ವಿಸ್ತೃತವಾದ ಈ ಗ್ರಂಥವು ಪೂರ್ಪಪಕ್ಷ ರೂಪದಲ್ಲಿ ಅಧ್ಯಯನ ಯೋಗ್ಯವಾಗಿದೆ. ಹಿಂದೂ ಧರ್ಮದ ಕೆಲವೊಂದು ಅಂಶಗಳನ್ನು ಕ್ರಿಶ್ಚಿಯಾನಿಟಿಯ ಜೊತೆಗೆ ಸಮೀಕರಿಸಿ, ಅನೇಕ ಅಂಶಗಳನ್ನು ಖಂಡಿಸಿ ಕೊನೆಗೆ ಕ್ರಿಸ್ತನೇ crown of hinduism ಹಿಂದುವಿಸಂನ ಕಿರೀಟ ಎಂದು ಪ್ರಬಲವಾಗಿ ಪ್ರತಿಪಾದಿಸಲಾಗಿದೆ. ಹೀಗೆ ಉಳಿದ ಗ್ರಂಥಗಳನ್ನು ಇದೆ ಉದ್ದೇಶಗಳಿಂದ ರಚಿಸಿದ.

ಅದೇ ರೀತಿಯಾಗಿ ರೆವರೆಂಡ್ ವಿಲಿಯಂ ವಾರ್ಡ್ (1769–1823) ಇಂಗ್ಲ್ಲಾಂಡಿನ ಕ್ರಿಶ್ಚಿಯನ್ ಮಿಷನರಿ  ಹಿಂದೂ ಧರ್ಮದ  "A View of the History, Literature, and Mythology of the Hindoos" ಎಂಬ ನಾಲ್ಕು ಸಂಪುಟಗಳ ಗ್ರಂಥವನ್ನು ರಚಿಸಿ ಹಿಂದೂ ಧರ್ಮವನ್ನು ಟೀಕಿಸಿದನು.

ಹೀಗೆ ಮಿಶನರಿಗಳು ಅವರ ಪಂಡಿತರು ಹಿಂದೂ ಧರ್ಮವನ್ನು ಎಷ್ಟು ಸಾಧ್ಯವೋ ಅಷ್ಟು ಕೀಳು ಮಟ್ಟದಿಂದ ಚಿತ್ರಿಸಿ,ಟೀಕಿಸಿ , ಕೆಲವು ಸಂದರ್ಭಗಳಲ್ಲಿ ಸಾಮರಸ್ಯದ ಮುಖವಾಡವನ್ನು ಪ್ರಕಟಿಸಿ ಮತಾಂತರಕ್ಕೆ ಪೂರಕವಾದ ಸಾಹಿತ್ಯವನ್ನು ನಿರ್ಮಿಸಿದರು.

ಮುಂದಿನ ಸಂಚಿಕೆಗಳಲ್ಲಿ ಮಿಷನರಿಗಳ ಪ್ರಭಾವಿಲ್ಲದ ಸ್ವತಂತ್ರವಾಗಿ ಭಾರತ ಮತ್ತು ಭರತ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಯುರೋಪ್ ಮೂಲದ ವಿದ್ವಾಂಸರ ಬಗ್ಗೆ ತಿಳಿಯೋಣ.

ಗ್ರಂಥ ಋಣ

1.Early indologist a study in motivation –part-1

Autor –Swamy B.V.Giri 

2.The Crown of Hinduism (1913)

Author - John Nicol Farquahar.

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions