ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1

 


ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1

ಭಾರತದ ಈಗಿನ ಶಿಕ್ಷಣ ವ್ಯವಸ್ಥೆಯನ್ನು, ಅಥವಾ ಭಾರತೀಯ ಸಂಸ್ಕೃತಿ ವಿರೋಧಿ ಹಾಗೂ ಗುಲಾಮಗಿರಿಯ ಮಾನಸಿಕತೆಯನ್ನು ಗಮನಿಸಿದಾಗಲೆಲ್ಲ ಇದೆಲ್ಲವೂ ಮೆಕಾಲೆ ಶಿಕ್ಷಣದ ಪ್ರಭಾವ ಎಂದು ವಿಮರ್ಶೆ ಮಾಡುವುದನ್ನು ಅನೇಕರು ಕೇಳಿಯೆ ಇರುತ್ತೇವೆ. ಹಾಗಾದರೆ ಈ ಮೆಕಾಲೆ ಎನ್ನುವ ವ್ಯಕ್ತಿ ಯಾರು, ಅವನು ಹೇಗೆ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದ, ಅವನ ಮುಂಚೆ ಭಾರತದಲ್ಲಿ ಸಶಕ್ತವಾದ ಸಾರ್ವತ್ರಿಕವಾದ ಶಿಕ್ಷಣ ವ್ಯವಸ್ಥೆ ಇತ್ತೆ ಎನ್ನುವ ಸಂದೇಹಗಳು ಮೂಡುವುದು ಸಹಜ. ಈ ವಿಷಯದಲ್ಲಿ ಕೆಲವರು ಹೀಗೆ ವಾದಿಸುತ್ತಾರೆ "ಭಾರತ ಇಂದು ವಿಜ್ಞಾನ ತಂತ್ರಜ್ಞಾನ ಮುಂತಾದ ವಿಷಯದಲ್ಲಿ ಸಾಧನೆ ಮಾಡಿದ್ದರೆ, ಅದು ಮೆಕಾಲೆ ತಂದ ಇಂಗ್ಲೀಷ್ ಶಿಕ್ಷಣದ ಫಲವೇ.  ಬ್ರಿಟಿಷರ ಶಿಕ್ಷಣ ಪ್ರಭಾವದಿಂದ ಇಂದು ಎಲ್ಲಾ ಜಾತಿಯವರು ಶಿಕ್ಷಣವನ್ನು ಪಡೆಯುವಂತಾಗಿದೆ. ಹಿಂದಿನ ಗುರುಕುಲ ಪದ್ಧತಿಯೇ ಇದ್ದಿದ್ದರೆ ಕೇವಲ ಬ್ರಾಹ್ಮಣರು ಮಾತ್ರ ಶಿಕ್ಷಿತರಾಗಿ ಉಳಿದವರನ್ನು ಜ್ಞಾನದಿಂದ ದೂರವಿಟ್ಟು ಶೋಷಿಸುತ್ತಿದ್ದರು". 

ಇದಕ್ಕೆ ಪೂರಕವಾಗಿ ಕುವೆಂಪುವರದ್ದು ಎನ್ನಲಾಗುವ "ಇಂಗ್ಲಿಷಿನವರು ಇಂಡಿಯಾಕ್ಕೆ ಬರದಿದ್ದರೆ ನಾನು ಕುಪ್ಪಳಿಯಲ್ಲಿ ಸಗಣಿ ತಟ್ಟಿಕೊಂಡು ಬ್ರಾಹ್ಮಣರ ಗದ್ದೆ ಉತ್ತುಕೊಂಡಿರುತ್ತಿದ್ದೆ." ಎಂಬುವ ಹೆಳಿಕೆಯು ಆಗಾಗ ಹರಿದಾಡುತ್ತಿರುತ್ತದೆ. ಈ ವಾದದ ಸತ್ಯಾಸತ್ಯತೆಯನ್ನು ವಿಮರ್ಶಿಸಬೇಕಾಗಿದೆ.

 ಇನ್ನು ಕೆಲವರು ಹೀಗೆ ವಾದಿಸುತ್ತಾರೆ - ಭಾರತದ ಗುರುಕುಲ ಪದ್ದತಿಯ ಶಿಕ್ಷಣ ಅತ್ಯದ್ಭುತವಾಗಿತ್ತು, ಅದೇ ಶಿಕ್ಷಣ ಪದ್ಧತಿ ಮುಂದುವರೆದಿದ್ದರೆ ಭಾರತವು ಇನ್ನೂ ಪ್ರಗತಿಯನ್ನು ಸಾಧಿಸಬಹುದಿತ್ತು. ಗುರುಕುಲಗಳಲ್ಲಿ 64 ವಿದ್ಯೆಗಳ ಪಾಠವಾಗುತ್ತಿತ್ತು, ಶಸ್ತ್ರಾಭ್ಯಾಸ ಹಾಗೂ ಶಾಸ್ತ್ರಾಭ್ಯಾಸ ಸಮಾಗಮ ಗುರುಕುಲದ ಶಿಕ್ಷಣದಲ್ಲಿತ್ತು." 

ಇದರ ಸತ್ಯಾಸತತೆಯನ್ನೂ ವಿಮರ್ಶಿಸಬೇಕಾಗಿದೆ. ವಿಷಯವು ತುಂಬಾ ವಿಸ್ತೃತವಾಗಿದೆ. ಈ ಲೇಖನ ಕೇವಲ ದಿಕ್ಸೂಚಿಯಾಗಿರುತ್ತದೆ . 

ಅದು ಸ್ವಾತಂತ್ರ್ಯಪೂರ್ವದ ಬ್ರಿಟಿಷರ ಆಡಳಿತವಿದ್ದ ಕಾಲ . ಅಕ್ಟೋಬರ್ 20, 1931 ರಂದು ಗಾಂಧಿಯವರು ದುಂಡು ಮೇಜಿನ ಪರಿಷತ್ತಿಗಾಗಿ (Round Table Confarance)  ಇಂಗ್ಲ್ಯಾಂಡಿಗೆ ಹೋದ ಸಂದರ್ಭ. ಛಾತಮ್ ಹೌಸ್, ಲಂಡನ್ ನಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಭಾಷಣದಲ್ಲಿ ಗಾಂಧಿಯವರು ಭಾರತೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು - "I say without fear of my figures being challenged successfully, that today India is more illiterate than it was fifty or a hundred years ago, and so is Burma, because the British administrators, when they came to India, instead of taking hold of things as they were, began to root them out. They scratched the soil and began to look at the root, and left the root like that, and the beautiful tree perished.

The village schools were not good enough for the British administrator, so he came out with his programme. Every school must have so much paraphernalia, building, and so forth. Well, there were no such schools at all. There are statistics left by a British administrator which show that, in places where they have carried out a survey, ancient schools have gone by the board, because there was no recognition for these schools, and the schools established after the European pattern were too expensive for the people, and therefore they could not possibly overtake the thing. I defy anybody to fulfill a programme of compulsory primary education of these masses inside of a century. This very poor country of mine is ill able to sustain such an expensive method of education. Our State would revive the old village schoolmaster and dot every village with a school both for boys and girls." (Complete Works of Mahatma Gandhi Vol.48.p.199) 

ನಾನು ನಾನು ನನ್ನ ಅಂಕಿ ಅಂಶಗಳಿಗೆ ಸವಾಲೆಸೆಯುವ ಯಾವುದೆ ಭಯವಿಲ್ಲದೆ ಹೇಳಲು ಬಯಸುವುದೆನೆಂದರೆ , ಭಾರತವು ಇಂದು ಐವತ್ತು –ನೂರು ವರ್ಷಗಳ ಹಿಂದಿನ ಕಾಲಕ್ಕಿಂತ ಹೆಚ್ಚು ಅನಕ್ಷರಸ್ಥವಾಗಿದೆ .ಬರ್ಮಾವು ಕೂಡ ಇದಕ್ಕೆ ಹೊರತಾಗಿಲ್ಲ. ಬ್ರಿಟಿಷ್ ಆಡಳಿತಗಾರರು ಭಾರತಕ್ಕೆ ಬಂದಾಗ ಇರುವ ಪರಿಸ್ಥಿತಿಯನ್ನು ಇರುವ ರೀತಿಯಲ್ಲಿಯೆ ಸ್ವೀಕರಿಸುವುದನ್ನು ಬಿಟ್ಟು ಅವುಗಳನ್ನು ಬೇರು ಸಮೇತ ಕಿತ್ತು ಹಾಕುವುದಕ್ಕಾಗಿ ಮೂಲಕ್ಕೆ ಕೈಹಾಕಿದರು . ಅವರು ಮಣ್ಣನ್ನೆಲ್ಲಾ ಕೆದರಿ, ಬೇರನ್ನು ಹಾಗೆಯೆ ಕೈಬಿಟ್ಟರು . ಅದರ ಫಲವಾಗಿ ಒಂದು ಸುಂದರ ವೃಕ್ಷವು ನಾಶವಾಯಿತು . ಗ್ರಾಮಶಾಲೆಗಳು ಬ್ರಿಟೀಷರಿಗೆ ಸರಿಕಾಣಿಸಲಿಲ್ಲ , ಆಗ ಅವರು ಹೊಸ ಕಾನೂನನ್ನು ಜಾರಿ ಮಾಡಿದರು . ಪ್ರತಿಯೊಂದು ಶಾಲೆಯು , ಈ ಮಟ್ಟದ ಸಾಮಾಗ್ರಿಗಳನ್ನು, ಕಟ್ಟಡವನ್ನು, ಹೊಂದಿರಬೇಕು ಎಂಬ  ಅನೇಕ ನಿಯಮವನ್ನು ಹೊರಡಿಸಿದರು . ಈ ನಿಯಮಗಳಿಗೆ ಸರಿ ಹೊಂದುವ ಶಾಲೆಗಳು ನಮ್ಮಲ್ಲಿರಲಿಲ್ಲ. ಕೆಲವು ಬ್ರಿಟಿಷರೆ ಮಾಡಿದ ಸಮೀಕ್ಷೆಗಳಲ್ಲಿ ಭಾರತದ ಪ್ರಾಚೀನ ಶಾಲೆಗಳು ಸರ್ಕಾರದ ಮಾನ್ಯತೆಯು ರದ್ದಾದ ಕಾರಣದಿಂದ ನಾಶವಾಗಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ . ಇವುಗಳ ಜಾಗದಲ್ಲಿ ಅಸ್ತಿತ್ವಕ್ಕೆ ಬಂದ ಯುರೋಪಿನ ಮಾದರಿಯ ಶಾಲೆಗಳು ತುಂಬಾ ದುಬಾರಿಯಾದವು. ಅವುಗಳು ಗ್ರಾಮಶಾಲೆಗಳ ಕೆಲಸವನ್ನು ಮಾಡಲು ಸಮರ್ಥವಾಗಲಿಲ್ಲ. ಈ ಶಿಕ್ಷಣದ ವ್ಯವಸ್ಥೆಯಲ್ಲಿ ಭಾರತದಲ್ಲಿರುವ ಈಗಿನ ಬಡತನದಲ್ಲಿ ಜನಸಾಮಾನ್ಯರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣವೂ ಕೂಡ ಶತಮಾನ್ಯದಲ್ಲಿಯೂ ಅಸಾಧ್ಯ . ಹಾಗಾಗಿ ನಮ್ಮ ದೇಶವು (ಬ್ರಿಟಿಷ್ ಸರ್ಕಾರವು) ಗ್ರಾಮಶಿಕ್ಷಕರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಿ, ಪ್ರತಿ ಗ್ರಾಮದಲ್ಲಿಯೂ ಹುಡುಗರಿಗೂ ಹುಡುಗಿಯರಿಗೂ ಶಾಲೆಗಳನ್ನು ಸ್ಥಾಪಿಸುವತ್ತ ಪ್ರಯತ್ನಿಸಬೇಕು ."

ಗಾಂಧಿಯವರ ಈ ಭಾಷಣವು ದೊಡ್ಡ  ಚರ್ಚೆಯನ್ನೆ ಹುಟ್ಟು ಹಾಕಿತು . ಆ ಸಭೆಯಲ್ಲಿ ನೆರೆದಿದ್ದ ಲಂಡನ್ನಿನ School of Oriental Studies ನ ಸ್ಥಾಪಕನಾಗಿದ್ದ ಫಿಲಿಪ್ ಹಾರ್ಟಗ್ ಎಂಬುವವನು ಈ ವಾದಕ್ಕೆ ಆಧಾರಗಳನ್ನು ಕೇಳಿದನು . ಗಾಂಧಿಯವರು ಬ್ರಿಟಿಷನೆ ಆಗಿದ್ದ G.W. Leitner ಬರೆದ - History of Indigenous Education in the Punjab: Since Annexation and in 1882 ಎಂಬ ಪುಸ್ತಕವನ್ನು ಪ್ರಮಾಣವಾಗಿ ನೀಡಿದರು . ಅದೇ ರೀತಿ 1835 ರಲ್ಲಿ ಭಾರತದ ಗವರ್ನರ್ ಜನರಲ್ ವಿಲಿಯಮ್ ಬೆಂಟಿಂಕ್ ನ ಆದೇಶದ ಮೇರೆಗೆ , ವಿಲಿಯಮ್ ಆಡಮ್ ಎಂಬುವವನು ಮಾಡಿದ ಗ್ರಾಮಶಾಲೆ ಹಾಗೂ ಸ್ಥಳೀಯ ಶಾಲೆಗಳ ಸಮೀಕ್ಷೆಯ ಮೂರು ವರದಿಯನ್ನು ಅವರ ಮುಂಡಿಟ್ಟರು . ಆದರೂ ಅವನು ಸಮಾಧಾನಗೊಳ್ಳಲಿಲ್ಲ. ಸರಿಯಾದ ಪ್ರಮಾಣಗಳನ್ನು ನೀಡಿ ಅಥವಾ ನಿಮ್ಮ ಮಾತನ್ನು ಹಿಂತೆಗೆದುಕೊಳ್ಳಿ ಎಂದು ಪೀಡಿಸತೊಡಗಿದ . ಗಾಂಧಿಯವರು ಲಂಡನ್ ನಿಂದ ಬಂದಾಕ್ಷಣ ಅವರನ್ನು ಬಂಧಿಸಿ ಯರವಾಡ ಜೈಲಿನಲ್ಲಿ ಇರಿಸಲಾಯಿತು . ಅಲ್ಲೂ ಅವರನ್ನು ಪತ್ರಗಳನ್ನು ಬರೆದು ಪೀಡಿಸತೊಡಗಿದ. ಅವರು ತಮ್ಮ ಮಿತ್ರರಾದ ಕೇ.ಟಿ.ಶಾಹ್ ಅವರಿಗೆ ಉತ್ತರಿಸಲು ತಿಳಿಸಿದರು . ಅವರೂ  ತಮ್ಮ ಬಳಿಯಿದ್ದ ದಾಖಲೆಗಳ ಸಮೇತ ಸುದೀರ್ಘ ಪತ್ರವನ್ನು ಬರೆದರು .ಅದರಿಂದಲೂ ಅವನು ಸಮಾಧಾನಗೊಳ್ಳದೆ ತನ್ನ ವಾದವನ್ನು ಮುಂದುವರೆಸಿದ . ನಂತರದ ದಿನಗಳಲ್ಲಿ ಈ ಚರ್ಚೆಯ ಹಿನ್ನಲೆಯಲ್ಲಿ ಗಾಂಧಿವಾದಿಯಾಗಿದ್ದ ಧರ್ಮಪಾಲ್ ಎಂಬುವವರು ಗಾಂಧಿಯವರು ಭಾರತೀಯ ಶಿಕ್ಷಣಕ್ಕಾಗಿ ಬಳಸಿದ್ದ The beautifull tree ಎಂಬ ಉಪಮೆಯ ಹೆಸರಿನಲ್ಲಿಯೆ ಸಂಶೋಧನಾತ್ಮಕಾವಾದ ಕೃತಿಯನ್ನು ರಚಿಸಿದರು . ಈ ಕೃತಿಯಲ್ಲಿ ಬ್ರಿಟೀಷರು ಬರುವ ಮೊದಲು ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣವೆ ಇರಲಿಲ್ಲ ಎಂಬ ತಥಾಕಥಿತ ಸಿದ್ಧಾಂತವನ್ನು ಸಪ್ರಮಾಣವಾಗಿ ಖಂಡಿಸಿದ್ದಾರೆ . ಬ್ರಾಹ್ಮಣರು ಉಳಿದ ಜಾತಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದರು ಎಂಬ ಆಪಾದನೆಯನ್ನು ನಿರಾಕರಿಸಿ , ಎಲ್ಲಾ ಜಾತಿಯ ಜನರು ಶಿಕ್ಷಣವನ್ನು ಪಡೆಯುತ್ತಿದ್ದರೆಂಬ ವಿಷಯವನ್ನು ಅನೇಕ ಪ್ರಮಾಣಗಳಿಂದ ಸಿದ್ದಪಡಿಸಿದ್ದಾರೆ . ಇವುಗಳ ವಿವರಣೆಯು ಮುಂದಿನ ಸಂಚಿಕೆಯಲ್ಲಿ . 


ಗ್ರಂಥ ಋಣ - 


1.The Beautiful Tree 

Author - Dharampal

Publisher - Other india press .

2.Complete Works of Mahatma Gandhi

Publisher - Govt.of India

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions