Posts

Showing posts from 2024

The Saint of the Century - Glimpses of Sri Vishweshatirtha's Unparalleled Life

Image
The Saint of the Century - Glimpses of Sri Vishweshatirtha's Unparalleled Life  Dr. Srinidhi Acharya Pyati The revered life of Sri Vishwesha Tirtha Swamiji cannot be encapsulated through mere words—it must be experienced to be understood. However, as our ancestors have taught us, documenting such lives for purity of speech and seeking the Guru’s blessings is a worthy endeavor. Essence of His life is encapsulated by his disciple Sri Viswaprasana tirth swamji in the shloka t apassvādhyāyaśuśrūṣā kṛṣṇapūjārataṃ muniṃ | viśveśamiṣṭadaṃ vaṃde parivrāṭ cakravartinaṃ ||  This humble attempt is made to explain this verse to the best of my capacity and experience. Unparalleled Wisdom Swamiji could be described as a Shatavadhani (one capable of multifaceted thinking). Even amidst the myriad responsibilities and events of his daily life, Swamiji actively participated in the most complex discussions, such as the Vakyaartha Goshti organized during the Aaradhana of Vidyamanya Tirtha. These ...

ಇಂಡೋಲಜೀ ವಿಮರ್ಶೆ 5– ಮಿಷನರಿಗಳ ಆಗಮನ

Image
  ಇಂಡೋಲಜೀ ವಿಮರ್ಶೆ 5– ಮಿಷನರಿಗಳ ಆಗಮನ ಕಳೆದ ಸಂಚಿಕೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹಾಗೂ ಬ್ರಿಟಿಷ್ ಸರ್ಕಾರದ ಭಾರತದ ಕುರಿತಾದ ಧೋರಣೆಯನ್ನು ಗಮನಿಸಿದ್ದೇವೆ. ಭಾರತೀಯ ವೈದಿಕ ಅಥವಾ ಅವೈದಿಕ ಸಾಹಿತ್ಯಗಳ ಅಧ್ಯಯನ ಹಾಗೂ ಧರ್ಮದ ಹೇರಿಕೆಯ ವಿಷಯದಲ್ಲಿ ಅನಾಸಕ್ತಿಯ ಮೂಲವನ್ನು ಮನಗೊಂಡೆವು. ಆದರೂ, ಮಿಷನರಿಗಳು ಭಾರತದಲ್ಲಿ ತಮ್ಮ ಮತಾಂತರದ ಕಾರ್ಯವನ್ನು ಹಾಗೂ ಅದಕ್ಕೆ ಬೇಕಾದ ಸಾಹಿತ್ಯ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದರು. ಇದಕ್ಕೆ ಕಂಪನಿಯ ಹಾಗೂ ಬ್ರಿಟಿಷ್ ಸರ್ಕಾರದ ಬೆಂಬಲವಿತ್ತೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ವಿಮರ್ಶೆಯನ್ನು ಈ ಸಂಚಿಕೆಯಲ್ಲಿ ನಡೆಸೋಣ. ಯುರೋಪಿಯನ್ನರ, ಅದರಲ್ಲೂ ಬ್ರಿಟಿಷರ ಆಕ್ರಮಣ ಶೈಲಿ ಭಾರತವು ಹಿಂದೆಂದೂ ಕಂಡಿರದ ರೀತಿಯಲ್ಲಿತ್ತು. ಹಿಂದೆ ಯಾರೆಲ್ಲಾ ಭಾರತವನ್ನು ಆಕ್ರಮಿಸಿದ್ದರೊ, ಅವರೆಲ್ಲರೂ ಭಾರತದ ಶ್ರೇಷ್ಠತೆಯನ್ನು, ಸಂಪತ್ತು ಸಮೃದ್ಧಿಯನ್ನು ಮನಗಂಡು ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆಯಿಂದ ಆಕ್ರಮಿಸಿದ್ದವರಾಗಿದ್ದರು. ಆದರೆ ಮೊದಲ ಬಾರಿಗೆ, ತಮ್ಮನ್ನು ತಾವು ನಮಗಿಂತ ಶ್ರೇಷ್ಠರೆಂದು ಹಾಗೂ ತಮ್ಮ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗಿಂತ ಶ್ರೇಷ್ಠವೆಂದು ಭಾವಿಸುವ ಜನರಿಂದ ಭಾರತವು ಆಕ್ರಮಣಕ್ಕೊಳಗಾಗಿತ್ತು. ಯುರೋಪಿನಲ್ಲಿ ನಡೆದ ಆಧುನಿಕ ವಿಜ್ಞಾನ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನೇಕ ತಂತ್ರಜ್ಞಾನಗಳನ್ನು ಆವಿಷ್ಕರಿಸಿದ್ದರು. ಅದರಲ್ಲಿ ಪ್ರಮುಖವಾದದ್ದು  ದಿಕ್ಸೂಚಿಯ.( Compass) ಆವಿಷ್...

ಇಂಡೋಲೊಜಿ ವಿಮರ್ಶೆ 4 – ಬ್ರಿಟಿಷರ ಆಗಮನ

Image
ಕಳೆದ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದವರೆಗೂ ನಡೆದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿದಿದ್ದೆವು. ಈ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದ ನಂತರ ಪ್ರಾರಂಭವಾದ ವ್ಯವಸ್ಥಿತವಾದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿಯೋಣ. ವ್ಯಾಪಾರವನ್ನು ಮಾಡಲು ಯುರೋಪಿನಿಂದ ಭಾರತಕ್ಕೆ ಆಗಮಿಸಿದ ವಸಾಹತುಶಾಹಿಗಳಲ್ಲಿ ಪೋರ್ಚುಗೀಸರು ಮತ್ತು ಡಚ್ಚರು ಮೊದಲಿಗರು. ಆಮೇಲೆ ಫ್ರೆಂಚರು ಮತ್ತು ಬ್ರಿಟೀಷರು ಆಗಮಿಸಿದರು. ಇವರೆಲ್ಲರೂ ಭಾರತೀಯ ಬಂದರುಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಪೈಪೋಟಿಗೆ ಇಳಿದರು.  ತಮ್ಮ ದೇಶಗಳ ಸರ್ಕಾರದ ನೆರವಿನಿಂದ ಹಾಗೂ ಸ್ಥಳೀಯ ರಾಜರ ಜೋತೆಗೆ ಮಾಡಿಕೊಂಡ ಒಪ್ಪಂದಗಳಿಂದ ಮತ್ತು ಅಧುನಿಕ ಸೈನ್ಯದ ನೆರವಿನಿಂದ ಮೊಘಲರಿಗಿಂತ ಬಹಳ ಪ್ರಬಲರಾದರು. 1757 ರಲ್ಲಿ ನಡೆದ ನಿರ್ಣಾಯಕ ಪ್ಲಾಸಿ ಕದನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಸೈನ್ಯವನ್ನು ಸೋಲಿಸಿ ಸಂಪೂರ್ಣ ಪ್ರಭುತ್ವವನ್ನು ಸಾಧಿಸಿತು. ನಂತರ ಕೆಲವೇ ವರ್ಷಗಳಲ್ಲಿ ಸ್ಥಳೀಯ ರಾಜ್ಯಗಳ ಮೇಲೆ ಅನೇಕ ರೀತಿಯಾದ ಕುಟಿಲ ಒಪ್ಪಂದಗಳನ್ನು ಹಾಗೂ ನಿಯಮಗಳನ್ನು ಹೇರಿ ಸಂಪೂರ್ಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬ್ರಿಟಿಷ್ ಸರ್ಕಾರದ ಅಧೀನದಲ್ಲಿರುವ ಪ್ರೈವೇಟ್ ಕಂಪನಿಯಾಗಿದ್ದು, ಅದು ಕೇವಲ ಭಾರತದಲ್ಲಿ ವ್ಯಾಪಾರವನ್ನು ಮಾಡಿ ಹೆಚ್ಚಿನ ಲಾಭ ಗಳಿಸಿ ಹಣವನ್ನು ಸಂಪಾದಿಸುವಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿತ್ತು. ಪ್ರಾರಂಭದಲ್ಲಿ ಬ...

ಇಂಡೊಲೊಜಿಯ ಇತಿಹಾಸ

Image
  ಇಂಡೊಲೊಜಿಯ ಇತಿಹಾಸ  ಕಳೆದ ಸಂಚಿಕೆಯಲ್ಲಿ ವಿಮರ್ಶೆ ಮತ್ತು ಪ್ರತಿಕ್ರಿಯೆ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನು ವಿಮರ್ಶಿಸಬೇಕಾದರೆ ಆ ವಿಷಯದ ಇತಿಹಾಸ, ಆಳ ಮತ್ತು ಅಗಲಗಳನ್ನು ಚೆನ್ನಾಗಿ ತಿಳಿಯಬೇಕಾಗುತ್ತದೆ. ಆ ದೃಷ್ಟಿಯಿಂದ ಇಂಡೋಲಜಿಯ ಇತಿಹಾಸವನ್ನು ತಿಳಿಯಲು ಪ್ರಯತ್ನಿಸೋಣ.  ಇಂಡೋಲಜಿಯ ಮೂಲ  ಓರಿಯಂಟಲ್ ಸ್ಟಡೀಸ್ ನಿಂದ ಪ್ರಾರಂಭವಾಗುತ್ತದೆ. ಈಗಲೂ ಓರಿಯಂಟಲ್ ರಿಸರ್ಚ್  ಇನ್ಸ್ಟಿಟ್ಯೂಟ್ ಗಳು ಮೈಸೂರು,ಪುಣೆ, ಬರೋಡಾ ಮುಂತಾದ ಕಡೆಗಳಲ್ಲಿ ಇರುವುದನ್ನು ಗಮನಿಸಬಹುದು. (Oriental research institute ORI ,Mysore, Bhandarkar oriental research institute BORI ,Pune )  ಓರಿಯಂಟಲ್  ಸ್ಸ್ಟಡೀಸ್   ಎಂದರೇನು, ಅದರ ಅಸ್ತಿತ್ವಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಕಾಡುವುದು ಸಹಜ . ಪಾಶ್ಚಾತ್ಯರು ಪೂರ್ವದ ದೇಶಗಳ ಭಾಷೆಗಳ ಅಧ್ಯಯನವನ್ನು ಮಾಡಲು ಬೆಳೆಸಿದ ಅಧ್ಯಯನ ಶಾಖೆಯನ್ನು ಓರಿಯಂಟಲ್ ಸ್ಟಡೀಸ್ ಎನ್ನುತ್ತಾರೆ. ಅದು  ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯನ್  ರಿಲಿಜನ್ ನ ಸರ್ವತೋಮುಖ ಪ್ರಭಾವ ಮತ್ತು ಹಿಡಿತವಿದ್ದ ಕಾಲ. ಆಗ ಕ್ರಿಶ್ಚಿಯನ್ ರಿಲಿಜನ್  ಯುರೋಪಿಗಿಂತ ಆಚೆಗೆ ವಿಸ್ತಾರವನ್ನೂ ಪ್ರಚಾರವನ್ನೂ ಪಡೆಯಬೇಕೆಂದು ಚರ್ಚ್ ತೀರ್ಮಾನಿಸಿತು. ಇದರ ಅಂಗವಾಗಿ 12ನೇ ಶತಮಾನದಲ್ಲಿ  ಚರ್ಚ್ ನ ಪೋಪ್ ಐದನೆಯ ಹೊನೋರಿಯಸ್ (Pope, Hon...

ಇಂಡೋಲಜಿ – ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ.

Image
  ಇಂಡೋಲಜಿ (Indology)– ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ.  ಕಳೆದ ಸಂಚಿಕೆಯಲ್ಲಿ ಇಂಡೋಲಜಿಯ ಅರ್ಥ ಮತ್ತು ವಿಸ್ತಾರ ಇವುಗಳನ್ನು ಅರ್ಥೈಸಿಕೊಂಡಿದ್ದೆವು. ಈ ಸಂಚಿಕೆಯಲ್ಲಿ ಇಂಡೋಲಾಜಿಯ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆಯ ಕುರಿತಾಗಿ ತಿಳಿಯೋಣ.  ಇಂಡೋಲಜಿ ಎಂದರೆ ಭಾರತದ ಕಲೆ, ಸಂಸ್ಕೃತಿ ,ಭಾಷಾ ಸಾಹಿತ್ಯ, ಇತಿಹಾಸ ಮುಂತಾದವುಗಳ ಅಧ್ಯಯನಕ್ಕೆ ಮೀಸಲಾದ ಅಧ್ಯಯನ ಪ್ರಕಾರ. ಇಂಡೋಲಜಿಯ ಪುಸ್ತಕಗಳು ಪ್ರಾಯಃ ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣಗೊಂಡಿವೆ. ಯುರೋಪಿನ ವಿದ್ವಾಂಸರಾಗಲೀ, ಅಮೆರಿಕದ ವಿದ್ವಾಂಸರಾಗಲೀ ಇಂಗ್ಲಿಷ್ ಭಾಷೆಯಲ್ಲಿಯೇ ಭಾರತದ ಕುರಿತಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಪಾರಂಪರಿಕ ಪಂಡಿತರಿಗೆ ಪ್ರಾಯಃ ಇಂಗ್ಲಿಷ್ ಜ್ಞಾನದ ಕೊರತೆ ಇರುತ್ತದೆ. ಆ ನಿಟ್ಟಿನಲ್ಲಿ ಅಕಾಡೆಮಿಕ್ ಸರ್ಕಲ್ ನಲ್ಲಿ ನಡೆಯುವ ಯಾವುದೇ ವಿದ್ಯಮಾನಗಳ ಪರಿಚಯವು ಅವರಿಗೆ ಆಗುವುದಿಲ್ಲ. ಕೆಲವೊಮ್ಮೆ ಗೊತ್ತಾದರೂ ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ಕೊಡುವಷ್ಟು ಪರಿಣತಿಯಾಗಲಿ, ಅವಕಾಶವಾಗಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಳೆದ ಶತಮಾನದಲ್ಲಿ ಇಂಡೋಲಜಿಯ ವಿಷಯದಲ್ಲಿ ಅಂತರಾಷ್ಟ್ರೀಯ ಅಕಾಡೆಮಿಕ್ ಸರ್ಕಲ್‌ನಲ್ಲಿ ಹಾರ್ವರ್ಡ್, ಆಕ್ಸ್ಫರ್ಡ್ , ಸ್ಟ್ಯಾನ್ಪೋರ್ಡ್ ಮುಂತಾದ ವಿಶ್ವವಿದ್ಯಾಲಯಗಳ ವಿದ್ವಾಂಸರ ಚಿಂತನೆಗಳೇ ಮುನ್ನೆಲೆಗೆ ಬಂದು ಪ್ರಪಂಚದಲ್ಲಿ ಅಂಗೀಕೃತವಾದವು. ಕೆಲವೇ ಬೆರಳೆಣಿಕೆಯಷ್ಟು ಭಾರತೀಯ ವಿದ್ವಾಂಸರು ಇವರ ಚ...

ವೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ-1

Image
       Indology ಇಂಡೊಲೊಜಿ ವ ೆಂಡಿ ಡೊನಿಗರ್ ನ (Wendy doneger)   ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ. Indology ಇಂಡೋಲೊಜಿ ವೆಂಡಿ ಡೊನಿಗರ್ ಅಮೇರಿಕನ್ ಇಂಡೋಲೊಜಿಸ್ಟ್ ಆಗಿದ್ದು . ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಿಲೀಜಿಯಸ್ ಸ್ಟಡೀಸ್ ನ ಪ್ರಾಧ್ಯಾಪಕಿಯಾಗಿದ್ದರು.1978 ರಿಂದ ಅಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರು ಮೂವತ್ತೈದು ಪುಸ್ತಕಗಳನ್ನು ಬರೆದಿದ್ದಾರೆ, ಇದರಲ್ಲಿ "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ", "ದಿ ರಿಗ್-ವೇದ; ಆನ್ ಆಂಥಾಲಜಿ" ಇತ್ಯಾದಿ ಸೇರಿವೆ. "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ" ಶೀರ್ಷಿಕೆಯಡಿ ಹಿಂದೂ ಧರ್ಮದ ಮೇಲಿನ ಒಂದು ಪುಸ್ತಕವನ್ನು 2009 ರಲ್ಲಿ ಪೆಂಗ್ವಿನ್ ಪಬ್ಲಿಕೇಶನ್ ಪ್ರಕಟಿಸಿತು. ಇದು ದೋಷಗಳಿಂದ  ಕೂಡಿದ್ದರಿಂದ ಹಿಂದೂಗಳಿಂದ  ತೀವ್ರ ಟೀಕೆಗೊಳಗಾಯಿತು. ಪೆಂಗ್ವಿನ್ ಪ್ರಕಾಶನವು ವಾಸ್ತವದ ದೋಷಗಳು ಮತ್ತು ಜನರಿಂದ ಪ್ರತಿಭಟನೆ ಮತ್ತು ಮೊಕದ್ದಮೆ ಭಯದಿಂದ  ಪುಸ್ತಕಗಳನ್ನು ಹಿಂದಕ್ಕೆ ಪಡೆಯಿತು. , ತದನಂತರ ಅವರು ಹಿಂದೂ ಧರ್ಮದ ಮೇಲೆ On Hinduism ಎಂಬ ಮತ್ತೊಂದು ಪುಸ್ತಕವನ್ನು ಬರೆದರು, ಇದರಲ್ಲಿ ಅವರು ರಾಮಾಯಣದ ಬಗ್ಗೆ ಮತ್ತೆ ಅದೇ ಹಿಂದಿನ  ಪುಸ್ತಕಗಳಲ್ಲಿ  ಬರೆದ ತಪ್ಪನ್ನು ಮುಂದು  ಮುಂದುವರೆಸಿದರು. ಈ ಲೇಖನ ಸರಣಿಯಲ್ಲಿ  ಈ ಪುಸ್ತದದ ವಿಮರ್ಶೆಯನ್ನು ಮಾಡುತ್ತೇನೆ. ಅದಕ್ಕ...

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ

Image
ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ  -ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ಹಾಗೂ ಪರಮಪೂಜ್ಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ನನಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನಿಗೆ ಪೂಜ್ಯ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು . ಅದರ ಜೊತೆಗೆ ಪೂಜ್ಯ ಶ್ರೀಪಾದಂಗಳವರ ಅಚಲ ಶ್ರದ್ಧೆ ಹಾಗೂ ಭಕ್ತಿಯ ವಿಶ್ವರೂಪದರ್ಶನ ಮಾಡುವ ಯೋಗವು ದೊರೆಯಿತು . ಅಯೋಧ್ಯೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಾದ ಚಳಿಯ ವಾತಾವರಣ. ನಮಗೆಲ್ಲರಿಗೂ ಸ್ವೆಟರ್,ಗ್ಲೌಸ್ ಗಳಿಲ್ಲದೆ ಒಡಾಡಲೂ ಸಾಧ್ಯವಾಗದ ಸ್ಥಿತಿ. ಅದರಲ್ಲೂ ಬೆಳಿಗ್ಗೆಯಂತೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾಗದಷ್ಟು ಮಂಜಿನ ಮುಸುಕು. ಇಂತಹ ವಾತಾವರಣದಲ್ಲೂ ಶ್ರೀಪಾದಂಗಳವರು ಬೆಳೆಗ್ಗೆ ಎಂದಿನಂತೆ ಎದ್ದು, ಸ್ನಾನವನ್ನು ಮುಗಿಸಿ, ತಮ್ಮ ಜಪತಪತರ್ಪಣಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದನ್ನು ಕಂಡರೆ , ಶ್ರೀಪಾದರಿಗಿರುವ ಸಂನ್ಯಾಸಧರ್ಮದ ನಿಷ್ಠೆ ಹಾಗೂ ಅನುಷ್ಠಾನದಲ್ಲಿ ಶ್ರದ್ಧೆ  ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ . ಅನುಕೂಲ ವಾತಾವರಣದಲ್ಲೂ ನಿತ್ಯಾನುಷ್ಠಾನದಲ್ಲಿ ಆಲಸ್ಯತನನಿಂದ ಅಥವಾ ಸಣ್ಣಪುಟ್ಟ ಕಾರಣಗಳಿಂದ ವಿಳಂಬ ಪ್ರವೃತ್ತಿಯನ್ನು ಮಾಡುವ ಇಂದಿನ ಅನೇಕರಿಗೆ ೬೦ ವರ್ಷದ ಶ್ರೀಪಾದಂಗಳವರ ನಡೆ ಆದರ್ಶವಾಗಬೇಕು .         ...

Exploring the unwavering devotion of Shri Vishwaprasana tirtha Swamiji - my experience of ayodhya yatra.

Image
Exploring the unwavering devotion of Shri Vishwaprasana tirtha Swamiji - my experience of ayodhya yatra.                           Dr.Shrinidhi Acharya Pyati By the grace of Ramalalla and Shri Vishwaprasanna Tirtha Shripadaru, I had the opportunity to perform various sevas to Utsava murthi of Shri Ramalalla. I was fortunate to witness Swamiji's unwavering devotion to Ramalalla. Each day, Swamiji will wake up early, regardless of Ayodhya's frigid temperatures, to perform various rituals, demonstrating his commitment to sanyasa deeksha. Following this, Swamiji will conduct the sansthana pooja of Panduranga Vithala Devararu. Tatvahoma, a homa ritual, is conducted for 48 consecutive days beginning the day after the pranapratishtha ceremony, by various acharyas within the garbha griha premises. The Samprokshana of the tatvahoma kalasha-jala is mandated by the scriptures. Upon completing the sansthana pooja, His Holiness  ...

ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City

Image
  ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City  -  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಜನವರಿ 22 ರಂದು ಇಡೀ ಜಗತ್ತು ಅಯೋಧ್ಯೆಯ ಕಡೆ ಕಾತರದಿಂದ ತನ್ನ ದೃಷ್ಟಿಯನ್ನು ಹರಿಬಿಡುತ್ತಿದೆ. ಅನೇಕ ಶತಮಾನಗಳ ಕನಸು ನನಸಾಗುವ ದಿವ್ಯ ಮಂಗಳ ಮುಹೂರ್ತಕ್ಕೆ ಅಯೋಧ್ಯಾ ನಗರಿಯು ನವವಧುವಿನಂತೆ ಸಜ್ಜಾಗುತ್ತಿದೆ. ಈ ಅಯೋಧ್ಯೆಯಲ್ಲಿ ನಾವು ಇಡುವ ಒಂದೊಂದು ಹೆಜ್ಜೆಯು ನಮಗೆ ನೂರು ಅಶ್ವಮೇಧ ಯಾಗದ ಫಲವನ್ನು ನೀಡುವುದೆಂದು ಸ್ಕಂದಪುರಾಣವು ತಿಳಿಸಿಕೊಡುತ್ತದೆ.   ಅಯೋಧ್ಯಾ ಪುರಿಯನ್ನು ಮನುವು ತನ್ನ ಮಗನಾದ ಇಕ್ಷ್ವಾಕುವಿನ ರಾಜ್ಯ ಪರಿಪಾಲನೆಗಾಗಿ ನಿರ್ಮಿಸಿದ ಎಂದು ರಾಮಾಯಣವು ತಿಳಿಸಿದೆ. ಆದ್ದರಿಂದಲೇ ಈ ಪಟ್ಟಣ 'ಆದಿಪುರಿ' ಎಂಬ ನಾಮಾಂತರವನ್ನು ಹೊಂದಿದೆ. ಈ ನಗರವು ಕೇವಲ ಆದಿ ನಗರಿಯಾಗಿರದೆ ಆದರ್ಶ ನಗರಿಯಾಗಿತ್ತು ಎಂದು ರಾಮಾಯಣದ ವಿವರಣೆಯಿಂದ ನಮಗೆ ತಿಳಿದು ಬರುತ್ತದೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಗಸ್ಟ 15 ರ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ Decolonization ನ ಸಾಕಾರತೆಗಾಗಿ  ಭಾರತೀಯ ನಗರನಿರ್ಮಾಣದ ಮೂಲಭೂತ ಅಂಶಗಳ ನಿರೂಪಣೆಯನ್ನು ರಾಮಾಯಣದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯು ಮೂಲಭೂತ ಸೌಕರ್ಯಗಳಿಂದ ಹಾಗು ಸಂಪತ್ತು ಸವಲತ್ತುಗಳಿಂದ ಕಂಗೊಳಿಸುತಿತ್ತು ಎಂಬ ವಿಷಯವನ್ನು ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ವಿವರಿಸಿದ್ದಾರೆ. ರಾಮಾಯಣದ ಅಧ್ಯಯನದಿಂದ ಅಯೋಧ್ಯೆಯು...