ವೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ-1


      Indology ಇಂಡೊಲೊಜಿ

ೆಂಡಿ ಡೊನಿಗರ್ (Wendy doneger)  ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ.

Indology ಇಂಡೋಲೊಜಿ

ವೆಂಡಿ ಡೊನಿಗರ್ ಅಮೇರಿಕನ್ ಇಂಡೋಲೊಜಿಸ್ಟ್ ಆಗಿದ್ದು . ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಿಲೀಜಿಯಸ್ ಸ್ಟಡೀಸ್ ನ ಪ್ರಾಧ್ಯಾಪಕಿಯಾಗಿದ್ದರು.1978 ರಿಂದ ಅಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರು ಮೂವತ್ತೈದು ಪುಸ್ತಕಗಳನ್ನು ಬರೆದಿದ್ದಾರೆ, ಇದರಲ್ಲಿ "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ", "ದಿ ರಿಗ್-ವೇದ; ಆನ್ ಆಂಥಾಲಜಿ" ಇತ್ಯಾದಿ ಸೇರಿವೆ. "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ" ಶೀರ್ಷಿಕೆಯಡಿ ಹಿಂದೂ ಧರ್ಮದ ಮೇಲಿನ ಒಂದು ಪುಸ್ತಕವನ್ನು 2009 ರಲ್ಲಿ ಪೆಂಗ್ವಿನ್ ಪಬ್ಲಿಕೇಶನ್ ಪ್ರಕಟಿಸಿತು. ಇದು ದೋಷಗಳಿಂದ  ಕೂಡಿದ್ದರಿಂದ ಹಿಂದೂಗಳಿಂದ  ತೀವ್ರ ಟೀಕೆಗೊಳಗಾಯಿತು. ಪೆಂಗ್ವಿನ್ ಪ್ರಕಾಶನವು ವಾಸ್ತವದ ದೋಷಗಳು ಮತ್ತು ಜನರಿಂದ ಪ್ರತಿಭಟನೆ ಮತ್ತು ಮೊಕದ್ದಮೆ ಭಯದಿಂದ  ಪುಸ್ತಕಗಳನ್ನು ಹಿಂದಕ್ಕೆ ಪಡೆಯಿತು. , ತದನಂತರ ಅವರು ಹಿಂದೂ ಧರ್ಮದ ಮೇಲೆ On Hinduism ಎಂಬ ಮತ್ತೊಂದು ಪುಸ್ತಕವನ್ನು ಬರೆದರು, ಇದರಲ್ಲಿ ಅವರು ರಾಮಾಯಣದ ಬಗ್ಗೆ ಮತ್ತೆ ಅದೇ ಹಿಂದಿನ  ಪುಸ್ತಕಗಳಲ್ಲಿ  ಬರೆದ ತಪ್ಪನ್ನು ಮುಂದು  ಮುಂದುವರೆಸಿದರು. ಈ ಲೇಖನ ಸರಣಿಯಲ್ಲಿ  ಈ ಪುಸ್ತದದ ವಿಮರ್ಶೆಯನ್ನು ಮಾಡುತ್ತೇನೆ. ಅದಕ್ಕೂ ಪೂರ್ವಪೀಠಿಕೆಯಾಗಿ ಇಂಡಾಲಾಜಿಕಲ್ ಸ್ಟಡಿಯ ಇತಿಹಾಸ ಅದರ ಬೆಳವಣಿಗೆಯ ಕೆಲವೊಂದು ಅಂಶಗಳನ್ನು ವಿವರಿಸುತ್ತೇನೆ.


ಇಂಡೋಲಜಿ ಎಂದರೇನು?


ಭಾರತವು ಜ್ಞಾನದ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ವಿಶ್ವದ ವಿವಿಧ ಭಾಗಗಳಿಂದ ಪಂಡಿತರನ್ನು ಆಕರ್ಷಿಸುತ್ತಿದ್ದ ಕಾಲವೊಂದಿತ್ತು. ಪರ್ಷಿಯನ್ ಸಾಮ್ರಾಜ್ಯದ ಕಾಲದಿಂದ ವಸಾಹತು(colonial) ಕಾಲದವರೆಗೆ, ಅನೇಕ ಪಂಡಿತರು ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ನಾಗರೀಕತೆಯನ್ನು ಅಧ್ಯಯನ ಮಾಡಲು ತೀವ್ರ ಆಸಕ್ತಿ ತೋರಿಸಿದ್ದಾರೆ. ವಿವಿಧ ನಾಗರಿಕತೆಗಳು ಭಾರತೀಯ ಜ್ಞಾನದ ಪ್ರಕಾರಗಳನ್ನು ಅಧ್ಯಯನ ಮಾಡಿದ್ದು, ತಮ್ಮ ಸಂಸ್ಕೃತಿಗಳನ್ನು ಸಶಕ್ತಗೊಳಿಸಲು ಅದರ ಅನೇಕ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಕೆಲವರು ಮೂಲವನ್ನು ಒಪ್ಪಿಕೊಂಡು ಅದನ್ನು ನಮೂದಿಸಿ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ , ಇತರರು ಜ್ಞಾನವನ್ನು ತಮ್ಮದೇ ಆವಿಷ್ಕಾರ ಎಂದು ತಮ್ಮದಾಗಿಸಿಕೊಂಡು ಕೃತಘ್ನರಾಗಿದ್ದಾರೆ. ಇನ್ನೂ ಕೆಲವರು ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿ ತಾವೇ ಆವಿಷ್ಕರಿಸಿದ್ದೇವೆಂದು ಪ್ರಚಾರ ಮಾಡಿ , ಭಾರತೀಯರಿಗೆ ಅದನ್ನು ಹಂಚಿ ಸಂಪತ್ತನ್ನು ಸಂಪಾದಿಸಿದ್ದಾರೆ.

ಧುನಿಕ ವಸಾಹತುಶಾಹಿ ಯುಗದಲ್ಲಿ, ಪಾಶ್ಚಾತ್ಯರು ಆಡಳಿತಾತ್ಮಕ ಉದ್ದೇಶಗಳಿಗಾಗಿ ತಮ್ಮ ಕಾಲೋನಿಗಳನ್ನು(ತಮ್ಮ ಅಧೀನದಲ್ಲಿರುವ ದೇಶಗಳು) ಅಧ್ಯಯನ ಮಾಡಲು ಪ್ರಾರಂಭಿಸಿದರು. ಉದಾಹರಣೆಗೆ ಭಾರತದಲ್ಲಿ ಜನರ ವ್ಯಾಜಗಳನ್ನು ಪರಿಹರಿಸಬೇಕೆಂದರೆ ಇಲ್ಲಿಯ ಸಂಸ್ಕೃತಿ ಸಂಪ್ರದಾಯದ ಅರಿವು ಅನಿವಾರ್ಯ. ಈ ದೃಷ್ಟಿಯಿಂದ ಪ್ರಾರಂಭದಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕಗಳಾದ ವೇದ- ವೇದಾಂತ- ಕಾವ್ಯ-ಸಾಹಿತ್ಯ-ಧರ್ಮಶಾಸ್ತ್ರ ಮೊದಲಾದ ಗ್ರಂಥಗಳ ಅಧ್ಯಯನವನ್ನು ನಡೆಸಿದರು.  ಅದರ ಜೊತೆಗೆ ಕ್ರಿಶ್ಚಿಯಾನಿಟಿಯನ್ನು ಭಾರತಲ್ಲಿ ಹರಡುವುದಕ್ಕಾಗಿ  ಪೂರ್ವಪಕ್ಷದ ದೃಷ್ಟಿಯಿಂದ  ಅಧ್ಯಯನವನ್ನು ನಡೆಸಿದರು., ಇದು ಅಧುನಿಕ ಕಾಲದಲ್ಲಿ ಭಾರತೀಯ ಜ್ಞಾನ ಪರಂಪರೆಯ  ಅಧ್ಯಯನದ ಉಗಮಕ್ಕೆ ಕಾರಣವಾಯಿತು. ಇದನ್ನು ಆಂಗ್ಲಭಾಷೆಯಲ್ಲಿ ಇಂಡೋಲೊಜಿ ಎಂದು ವ್ಯವಹರಿಸುತ್ತಾರೆ. ವಸಾಹತುಶಾಹಿಗಳು (colonial masters)  ತಮ್ಮ ಗುರಿಗಳನ್ನು ಸಾಧಿಸಲು ಭಾರತೀಯ ಗ್ರಂಥಗಳಲ್ಲಿ ತಾತ್ಸಾರ, ಭಾರತೀಯ ಪರಂಪರೆಯಲ್ಲಿ ಕೀಳರಿಮೆ ಉಂಟಾಗುವಂತೆ ಪುಸ್ತಕಗಳನ್ನು ಬರೆದರು , ಪಾಠಶಾಲೆಗಳನ್ನು ಕಿತ್ತು ,ಆಂಗ್ಲ ಶಿಕ್ಷಣಕ್ಕೆ ಒತ್ತುಕೊಟ್ಟು ಅಲ್ಲಿಯೂ ಇದನ್ನೇ ಬೋಧಿಸಿದರು.  ಇದು ಯುವಪೀಳಿಗೆಯಲ್ಲಿ ತಮ್ಮ ಸಂಸ್ಕೃತಿ- ಸಂಸ್ಕೃತದ ವಿಷಯದಲ್ಲಿ ಯಲ್ಲಿ ಸಂಕೋಚವನ್ನು ಸೃಷ್ಟಿಸಿತು. ಈ ತಂತ್ರವು ಅವರ ಆಡಳಿತ ಮತ್ತು ಮಿಶಿನರಿಗಳ ಪ್ರಚಾರದ ಉದ್ದೇಶಗಳಿಗೆ ಸಹಾಯಕವಾಯಿತು.


ಆದಾಗ್ಯೂ, ಕೆಲವರು, ಮತೀಯ ದೃಷ್ಟಿಕೋನಗಳನ್ನು ಬದಿಗಿಟ್ಟು, ಭಾರತೀಯ ಜ್ಞಾನ ವ್ಯವಸ್ಥೆಯನ್ನು ನಿರಪೇಕ್ಷವಾಗಿ ಅಧ್ಯಯನ ಮಾಡಿ ಪ್ರಾಮಾಣಿಕ ಕೊಡುಗೆಗಳನ್ನು ನೀಡಿದರು.

ವಸಾಹತುಶಾಹಿ ನಂತರದ (post colonial era) ಯುಗದಲ್ಲಿ , ವಿಶೇಷವಾಗಿ ಹಾರ್ವಾರ್ಡ್ ಮತ್ತು ಸ್ಟ್ಯಾಂಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ  ಇಂಡೋಲಾಜಿಯ ಅಧ್ಯಯನಗಳು ಮುಂದುವರಿದವು, ಅಲ್ಲಿ ದಕ್ಷಿಣ ಏಷ್ಯಾ ಅಧ್ಯಯನ(south Asian studies) ವಿಭಾಗಗಳಲ್ಲಿ ಪ್ರೊಫೆಸರ್ ಗಳು ಭಾರತೀಯ ಗ್ರಂಥಗಳ ವ್ಯಾಖ್ಯಾನ, ಅನುವಾದ ಕಾರ್ಯಗಳಲ್ಲಿ ತೊಡಗಿದ್ದರು.  ಈ ಪಂಡಿತರಲ್ಲಿ ಅನೇಕರು ಮಾರ್ಕ್ಸಿಸ್ಟ್, ಸೋಶಿಯಲಿಸ್ಟ ಅಥವಾ ಇವೆಂಜೆಲಿಕಲ್ ಕ್ರಿಶ್ಚಿಯನ್ ಚಿಂತನೆಗಳಿಂದ ಪ್ರಭಾವಿತರು . ಅದೇ ದೃಷ್ಟಿಕೋನಗಳಿಂದ ಗ್ರಂಥಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ವಿಕೃತಗೊಳಿಸಿದರು, ಕೆಲವೊಮ್ಮೆ ಹಿತಾಸಕ್ತಿಗಳಿಂದ ಮತ್ತು ಕೆಲವೊಮ್ಮೆ ಅವರ ರಾಜಕೀಯ ಕಾರಣಗಳಿಂದ  ಆಂಗ್ಲಭಾಷೆಯಲ್ಲಿ ಅನೇಕ ಗ್ರಂಥಗಳನ್ನು ರಚಿಸಿದರು. ದಿನ ಕಳೆದಂತೆ  ಭಾರತೀಯ ಗ್ರಂಥಗಳ ವ್ಯಾಖ್ಯಾನವನ್ನು  ಭಾರತೀಯ ಪಂಡಿತರಿಗಿಂತ ಹೆಚ್ಚು  ಪ್ರಾಮಾಣಿಕವಾಗಿ ಮಾಡಿದ್ದೇವೆಂದು ,ತಮ್ಮ ಗ್ರಂಥಗಳಿಗೆ ಹೆಚ್ಚಿನ ಅಧಿಕೃತತೆಯನ್ನು ಜಗತ್ತಿಗೆ ನಂಬಿಸುವ  ಪರಿಸರವನ್ನು ಸೃಷ್ಟಿಸಿದರು.


ಇಂಡೋಲಾಜಿಕಲ್ ಅಧ್ಯಯನದ ನಾಲ್ಕು ವಿಭಾಗಗಳನ್ನು ಅವಲೋಕಿಸೋಣ


1. ಯುರೋಪಿಯನ್ ಅಧ್ಯಯನ( Colonial study)– ಈ ಹಂತವು ಮುಖ್ಯವಾಗಿ 18 ನೇ ಶತಮಾನದಲ್ಲಿ ಪ್ರಾರಂಭವಾಯಿತು ಮತ್ತು ಅದನ್ನು ಮುಖ್ಯವಾಗಿ ಜರ್ಮನ್ ಮತ್ತು ಬ್ರಿಟಿಷ್ ಪಂಡಿತರು ಮುನ್ನಡೆಸಿದರು. ಉದಾ-ವಿಲಿಯಂ ಜೋನ್ಸ, ಮ್ಯಾಕ್ಸ ಮುಲ್ಲರ್


  2. ಪೋಸ್ಟ ಕೊಲೂನಿಯಲ್ ಸ್ಟಡಿ. (Post–Colonial study) ಈ ವಿಭಾಗವು ಮುಖ್ಯವಾಗಿ ಅಮೇರಿಕಾದ ವಿಶ್ವವಿದ್ಯಾಲಯಗಳ ಪಂಡಿತರನ್ನು ಒಳಗೊಂಡಿರುತ್ತದೆ, ಉದಾ- ರಾಬರ್ಟ್ ಗೋಲ್ಡ್‌ಮನ್ ಮತ್ತು ಶೆಲ್ಡನ್ ಪೊಲ್ಲಾಕ್.


3. ಎಡಪಂಥೀಯ ಇಂಡೊಲಾಜಿಕಲ್ ಅಧ್ಯಯನ – ಈ ವರ್ಗವು ಸೋಷಿಯಲಿಸಮ್  ಮತ್ತು ಮಾರ್ಕ್ಸಿಸಂ ಚಿಂತನೆಗಳಿಂದ ಪ್ರಭಾವಿತರಾದ ಪಂಡಿತರನ್ನು ಒಳಗೊಂಡಿರುತ್ತದೆ, ಉದಾ -ರೂಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್.


4. ಪಾರಂಪರಿಕ ಮತ್ತು ರಾಷ್ಟ್ರೀಯತಾವಾದಿ ಇಂಡೊಲಾಜಿಕಲ್ ಅಧ್ಯಯನ – ಈ ಗುಂಪು ಪಾರಂಪರಿಕ ಹಿನ್ನೆಲೆಯಿಂದ ಪಂಡಿತರನ್ನು ಮತ್ತು  ರಾಷ್ಟ್ರೀಯತಾವಾದಿ ಪಂಡಿತರನ್ನು ಒಳಗೊಂಡಿರುತ್ತದೆ. ಉದಾ- ಧರ್ಮಪಾಲ್ , ಆರ್,ಸಿ ಮುಜುಂದಾರ್ ,ಪಾರಂಪರಿಕ ಪಂಡಿತರು.


                                  ಮುಂದುವರಿಯುವುದು...


           ಡಾ.ಶ್ರೀನಿಧಿ ಪ್ಯಾಟಿ

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting