Posts

ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City

Image
  ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City  -  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಜನವರಿ 22 ರಂದು ಇಡೀ ಜಗತ್ತು ಅಯೋಧ್ಯೆಯ ಕಡೆ ಕಾತರದಿಂದ ತನ್ನ ದೃಷ್ಟಿಯನ್ನು ಹರಿಬಿಡುತ್ತಿದೆ. ಅನೇಕ ಶತಮಾನಗಳ ಕನಸು ನನಸಾಗುವ ದಿವ್ಯ ಮಂಗಳ ಮುಹೂರ್ತಕ್ಕೆ ಅಯೋಧ್ಯಾ ನಗರಿಯು ನವವಧುವಿನಂತೆ ಸಜ್ಜಾಗುತ್ತಿದೆ. ಈ ಅಯೋಧ್ಯೆಯಲ್ಲಿ ನಾವು ಇಡುವ ಒಂದೊಂದು ಹೆಜ್ಜೆಯು ನಮಗೆ ನೂರು ಅಶ್ವಮೇಧ ಯಾಗದ ಫಲವನ್ನು ನೀಡುವುದೆಂದು ಸ್ಕಂದಪುರಾಣವು ತಿಳಿಸಿಕೊಡುತ್ತದೆ.   ಅಯೋಧ್ಯಾ ಪುರಿಯನ್ನು ಮನುವು ತನ್ನ ಮಗನಾದ ಇಕ್ಷ್ವಾಕುವಿನ ರಾಜ್ಯ ಪರಿಪಾಲನೆಗಾಗಿ ನಿರ್ಮಿಸಿದ ಎಂದು ರಾಮಾಯಣವು ತಿಳಿಸಿದೆ. ಆದ್ದರಿಂದಲೇ ಈ ಪಟ್ಟಣ 'ಆದಿಪುರಿ' ಎಂಬ ನಾಮಾಂತರವನ್ನು ಹೊಂದಿದೆ. ಈ ನಗರವು ಕೇವಲ ಆದಿ ನಗರಿಯಾಗಿರದೆ ಆದರ್ಶ ನಗರಿಯಾಗಿತ್ತು ಎಂದು ರಾಮಾಯಣದ ವಿವರಣೆಯಿಂದ ನಮಗೆ ತಿಳಿದು ಬರುತ್ತದೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಗಸ್ಟ 15 ರ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ Decolonization ನ ಸಾಕಾರತೆಗಾಗಿ  ಭಾರತೀಯ ನಗರನಿರ್ಮಾಣದ ಮೂಲಭೂತ ಅಂಶಗಳ ನಿರೂಪಣೆಯನ್ನು ರಾಮಾಯಣದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯು ಮೂಲಭೂತ ಸೌಕರ್ಯಗಳಿಂದ ಹಾಗು ಸಂಪತ್ತು ಸವಲತ್ತುಗಳಿಂದ ಕಂಗೊಳಿಸುತಿತ್ತು ಎಂಬ ವಿಷಯವನ್ನು ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ವಿವರಿಸಿದ್ದಾರೆ. ರಾಮಾಯಣದ ಅಧ್ಯಯನದಿಂದ ಅಯೋಧ್ಯೆಯು...

ಏಕಭುಕ್ತ ಮತ್ತು intermittent fasting

Image
  ಏಕಭುಕ್ತ ಮತ್ತು intermittent fasting ಕೆಲವು ದಿನಗಳ ಹಿಂದೆ ಮೋಬೈಲ್ ನಲ್ಲಿ ಹಿಂದಿ ಚಿತ್ರರಂಗದ ನಟ ಮನೋಜ್ ವಾಜಪೇಯಿಯವರ ಸಂದರ್ಶನವೊಂದು ಕಣ್ಣಿಗೆ ಬಿತ್ತು . ಅದರಲ್ಲಿ ತಮ್ಮ ದೈಹಿಕ ಕ್ಷಮತೆಯ ರಹಸ್ಯವೇನೆಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಗಮನ ಸೆಳೆಯಿತು.. ಅವರು ಹೇಳಿದ್ದು ‌'' ನನ್ನ ಅಜ್ಜ ಬಹಳ ಸ್ವಸ್ಥವಾಗಿ ಬಾಳಿ ಬದುಕಿದ್ದರು . ನಾನೂ ಅವರ ಜೀವನ ಶೈಲಿಯನ್ನೆ ಅನುಸರಿಸಬೇಕೆಂಬ ನಿರ್ಣಯ ತೆಗೆದುಕೊಂಡು ಕಳೆದ ೧೫ ವರ್ಷಗಳಿಂದ ರಾತ್ರಿ ಊಟ ಮಾಡುವುದನ್ನು ನಿಲ್ಲಿಸಿದ್ದೆನೆ . ದಿನಕ್ಕೆ ಒಂದು ಹೋತ್ತು ಮಾತ್ರ ಊಟ ಮಾಡುತ್ತೇನೆ . ಇದು ನನ್ನ ಆರೋಗ್ಯದಲ್ಲಿ ಬಹಳ ಸುಧಾರಣೆಯನ್ನು ತಂದಿದೆ , ಬ್ಲಡ್ ಪ್ರೆಶರ್, ಶುಗರ್ ಎಲ್ಲವೂ ನಿಯಂತ್ರಣದಲ್ಲಿದೆ . ನಾನು ಯಾವಾಗಲೂ ಚುರುಕಾಗಿರುತ್ತೆನೆ , ಉತ್ಸಾಹಿಯಾಗಿರುತ್ತೆನೆ . ನಾನು ಈ ಜೀವನ ಕ್ರಮವನ್ನು ಪ್ರಾರಂಭಿಸಿದಾಗ ಎಲ್ಲರೂ ಆಶ್ಚರ್ಯ ಪಡುತಿದ್ದರು . ಆದರೆ ಈಗ intermittent fasting ಎನ್ನುವ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ ''. ಅವರ ಈ ಮಾತುಗಳನ್ನು ಕೇಳಿ ಬಹಳ ಆಶ್ವರ್ಯವಾಯಿತು . ಅರೆ! ನಮ್ಮ ಪೂರ್ವಜರು ಹಲವರು ರಾತ್ರಿ ಊಟ ಮಾಡದೆ ಕೇವಲ ಹಾಲನ್ನೋ ಹಣ್ಣನ್ನೋ ತಿಂದು ಮಲಗುತ್ತಿದ್ದರಲ್ಲವೆ ಎಂದು ಯೋಚಿಸಿ ಅದನ್ನೆ ಹೋಲುವ intermittent fasting ಕ್ರಮದ ಬಗ್ಗೆ ಕುತೂಹಲದಿಂದ ತಿಳಿಯಲು ಪ್ರಯತ್ನಿಸಿದೆ .          ...

ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ

Image
            ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನೆಯ ಸಫಲತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು . ವಿಜ್ಞಾನಿಗಳ ಒಂದು ತಂಡ ಎಂದಿನಂತೆ ಯೋಜನೆಯ ಸಾಫಲ್ಯಕ್ಕಾಗಿ  ತಿಮ್ಮಪ್ಪನನ್ನು ಪ್ರಾರ್ಥಿಸಲು ತಿರುಮಲದಲ್ಲಿದ್ದರು. ಉಪಕರಣದ ಒಂದು ಭಾಗವನ್ನು ತಿಮ್ಮಪ್ಪನ ಮುಂದಿಟ್ಟು ಯೋಜನೆ ಯಶಸ್ಸಿಗಾಗಿ ಅನುಗ್ರಹವನ್ನು ಪ್ರಾರ್ಥಿಸಿದರು . ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ , ಮಂಗಳಯಾನಕ್ಕೂ ಚಂದ್ರಯಾನಕ್ಕೂ ವ್ಯತ್ಯಾಸವೂ ತಿಳಿಯದ ಸ್ವಯಂಘೋಷಿತ ಜೀವಪರ,ಪ್ರಗತಿಪರ, ಸಮಾಜದ ಸಾಕ್ಷಿಪ್ರಜ್ಞೆಯ ಬುದ್ದಿಜೀವಿಗಳು ಇದೊಂದು ಪ್ರತಿಗಾಮಿ ಚಿಂತನೆಯೆಂದೂ, ಭಾರತೀಯ ವಿಜ್ಞಾನಿಗಳಿಗೆ ತಮ್ಮ ಕೆಲಸದ ಮೇಲೆಯೆ ವಿಶ್ವಾಸವಿಲ್ಲವೆಂದೂ, ಮೌಡ್ಯವೆಂದೂ ಬೊಬ್ಬಿಡುತ್ತಾ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರು ಈ ರೀತಿಯ ಮೌಡ್ಯಾಚಾರಣೆಯನ್ನು ನಿಲ್ಲಿಸುವಂತೆ ಕ್ರಮವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವನ್ನು ಪ್ರಕಟಿಸಿಬಿಟ್ಟರು . ಒಂದೊಮ್ಮೆ ಇಸ್ರೋ ವಿಜ್ಞಾನಿಗಳು ಮಸಿದಿಗೊ, ಚರ್ಚಿಗೂ ಭೇಟಿಯಿತ್ತಿದ್ದರೆ ಇದೆ ಪ್ರಗತಿಪರ, ಜೀವಪರ ಚಿಂತಕರು ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೆರಿಸುವುದರಲ್ಲಿ ಸಂಶಯವಿರಲಿಲ್ಲ. ಹಿಂದುವಿರೋಧಿಗಳಾದ ಈ ಬುದ್ದಿಜೀವಿಗಳು ಪ್ರಗತಿಪರರೆಂಬ ಮುಖವಾಡ ಧರಿಸಿ ಕೇವಲ ಹಿಂದೂ ಧರ್ಮದ ಆಚರಣೆಗಳನ್ನು...

ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ

Image
ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ . ರಾಮಾಯಣ ಸಾರ್ವಕಾಲಿಕ. ಸದಾ ಪ್ರಸ್ತುತ. ಎಷ್ಟು ತಿಳಿದರೂ ತಿರುಚಿದರೂ ವಾಲ್ಮೀಕಿ ರಾಮಾಯಣ ಜನಜನಿತವಾಗಿಯೇ ಇರುತ್ತದೆ.ಇದು ಬ್ರಹ್ಮದೇವರ ಅನುಗ್ರಹ." ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ| ತಾವತ್ ರಾಮಾಯಣಕಥಾ ಲೋಕೇಷು ಪಚರಿಷ್ಯತಿ" |. ಎಲ್ಲಿಯವರೆಗೆ ಗಿಡಮರಗಳು,ನದಿಪರ್ವತಗಳು ಇರುವವೋ ಅಲ್ಲಿಯವರೆಗೆ ರಾಮನ ಕಥೆ ಇದ್ದೇ ಇರುತ್ತದೆ. ರಾಮಾಯಣದ ಪ್ರತಿಯೊಂದು ಪಾತ್ರಗಳು ವಿಭಿನ್ನ ಆಯಾಮದಲ್ಲಿ ವಿಭಿನ್ನ ಗುಣಗಳನ್ನು ಪ್ರತಿನಿಧಿಸುತ್ತವೆ. ರಾಮಾಯಣದ ಕೇಂದ್ರಬಿಂದು ರಾಮನಾದರೆ, ವೃತ್ತ ಲಕ್ಷ್ಮಣ. ಶ್ರೀನಾರಾಯಣಪಂಡಿತಾಚಾರ್ಯರು ಸಂಗ್ರಹ ರಾಮಾಯಣ ಗ್ರಂಥದಲ್ಲಿ ಲಕ್ಷ್ಮಣನ ಅವತಾರದ ಉದ್ದೇಶವನ್ನು ಸುಂದರವಾಗಿ ನಿರೂಪಿಸಿದ್ದಾರೆ. ಅನಂತೋನಂತ ಪರ್ಯಂಕಃ ಪರಿಚರ್ಯಾರ್ಥಮೀಶಿತುಃ  ರಾಮನ ಸೇವೆಗಾಗಿಯೇ ಲಕ್ಷ್ಮಣನ ಜನ್ಮ. ಅವನಿಗೆ ರಾಮನ ಹೊರತು ಬೇರೆಲ್ಲರೂ ಅಪ್ರಧಾನರು, ಹೆತ್ತ ತಾಯಿ, ಹೆಂಡತಿಯೂ ಸಹ.  ಅಂತಹ ಅಸದೃಶವಾದ ಭಾತೃಭಕ್ತಿಯನ್ನು ಲೋಕಕ್ಕೆ ತೋರಿಸಿದವನು ಲಕ್ಷ್ಮಣ. ರಾಮನಿಗೂ ಲಕ್ಷಣನೆಂದರೇ ಬಹಳ ಪ್ರೀತಿ. ಬಾಲ್ಯದಲ್ಲಿ ತನ್ನ ಪಕ್ಕದಲ್ಲಿ ಲಕ್ಷ್ಮಣನಿಲ್ಲದಿದ್ದರೆ ರಾಮನು ನಿದ್ರಿಸುತ್ತಿರಲಿಲ್ಲ, ಲಕ್ಷ್ಮಣ ಉಣ್ಣದೇ ತಾನು ಉಣ್ಣುತ್ತಿರಲಿಲ್ಲ. ಮೃಷ್ಟಮನ್ನಮುಪಾನೀತಂ ಅಶ್ನಾತಿ ನ ಹಿ ತಂ ವಿನಾ ' .ಲಕ್ಷ್ಮಣನಿಗೆ ರಾಮನಲ್ಲಿ ಅಪರಿಮಿತವಾದ ಭಕ್ತಿ ಹಾಗೆಯೇ  ತಮ್ಮನಲ್ಲಿ ರಾಮನಿಗೂ ಅಸದೃಶವಾದ ...

ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ

Image
 ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ   -                                             ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಪೂಜ್ಯ ಗುರುಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರ ಜೀವನವನ್ನು ಬರವಣಿಗೆಯಿಂದ ತಿಳಿಯಲು ಸಾಧ್ಯವಿಲ್ಲ . ಅದನ್ನು ಅನುಭವಿಸಿಯೇ ತಿಳಿಯಬೇಕು . ಆದರೆ ವಾಕ್ ಶುದ್ಧಿಗಾಗಿ , ಗುರುಗಳ  ಅನುಗ್ರಹಕ್ಕಾಗಿ  ಅವರ ಚರಿತ್ರೆಯನ್ನು ಬರೆಯುವುದು ಪೂರ್ವಾಚಾರ್ಯರು ತಿಳಿಸಿಕೊಟ್ಟ ಕ್ರಮ. ಆ ನಿಟ್ಟಿನಲ್ಲಿ ಅವರ ಶಿಷ್ಯರಾದ ಈಗ ಪೇಜಾವರಮಠದ ಪೀಠದಲ್ಲಿ ವಿರಾಜಮಾನರಾದ ಶ್ರೀವಿಶ್ವಪ್ರಸನ್ನತೀರ್ಥಶ್ರೀಪಾದರು ರಚಿಸಿದ  *ತಪಸ್ಸ್ವಾಧ್ಯಾಯಶುಶ್ರೂಷಾಕೃಷ್ಣಪೂಜಾರತಂ ಮುನಿಂ।* *ವಿಶ್ವೇಶಮಿಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಂ।।* ಎಂಬ ದಿವ್ಯವಾದ ಚರಮಶ್ಲೋಕದ ಯಥಾಮತಿ ಅರ್ಥವಿವರಣೆಗಾಗಿ ಒಂದು ಉಪಕ್ರಮ ಜ್ಞಾನದ ಪ್ರಖರತೆ . ಸ್ವಾಮಿಗಳನ್ನು, ಶತಾವಧಾನಿಗಳೆನ್ನಬಹುದು . ನೂರು ತರಹದ ಚಿಂತನೆಗಳು ಯಾವ ಕಾಲದಲ್ಲೂ ಸ್ವಾಮಿಗಳ ಮನಸ್ಸಿನ್ನಲ್ಲಿ ನಡೆಯುತ್ತಿರುತ್ತಿತ್ತು.  ಸ್ವಾಮಿಗಳಿಗೆ ಪ್ರತಿದಿನ ಅನೇಕ ಕಾರ್ಯಕ್ರಮಗಳು . ಅದರ ಮಧ್ಯದಲ್ಲಿ ಪಲಿಮಾರು ಶ್ರೀಪಾದರು ವಿದ್ಯಾಮಾನ್ಯತೀರ್ಥರ ಆರಾಧನಾ ನಿಮಿತ್ತ ಆಯೋಜಿಸುತ್ತಿದ್ದ ಅತ್ಯಂತ ಕ...

उडुपीतीर्थक्षेत्रयात्रानुभवः

Image
                     उडुपीतीर्थक्षेत्रयात्रानुभवः             उडुपीं गच्छामः इति वाक्यश्रवणमात्रेण गृहे हर्षोल्लासः आवृतः। बालिकयोः आनन्दस्य तु पारमेव नासीत्। तत्रस्था मनोहरकृष्णमूर्तिः बालानां वयस्यभावम् जनयति, सर्वान् आकर्षयत्यपि। सर्वेषां  सः कृष्णः प्रियः एव किल। तथैव चौकीभोजनम्, उत्सवाः, समुद्रः इत्यादिना सर्वदा उडुपी अस्माकं आद्यप्रवासस्थानम् भवति।   कोरोनानिमित्तेन बहुकालात् कुत्रापि न गतः। जीवनं स्तब्धम् इत्येवं अनुभवः आसीत्। पुत्र्यौ गृहमेतत् कारागृहवत् वर्तते इति सर्वदा दूषयतः स्म। प्रवासप्रिये मम पुत्र्यौ कदा कुत्र गच्छावः इत्येव चिन्तयतः।  प्रवासवार्तया ताभ्यां बन्धमुक्तानुभवः प्राप्तः।            झटिति सर्वसन्नद्धता आरब्धा। अनेके विघ्नाः प्राप्ताः। वस्तुतः सुब्रह्मण्यक्षेत्रे कार्यमासीत्। तत्र गत्वा उडूपीं गच्छामः इति चिन्तनं आसीत्। परन्तु सुब्रह्मण्यषष्ठीप्रयुक्तं उत्सवादिकारणेन गमनागमनम् निर्बद्धं अभवत्। तस्मात् प्रथमं उडुपीमेव गच्छामः इति निर्...

ओलपिक्-क्रीडाविजयः - लघुप्रबन्धः

Image
                                   ओलम्पिक्-क्रीडाविजयः अस्माकं प्रधानमन्त्रिणः स्तुत्यम् अनुकरणीयं आचरणम् ।गतमासे एव सम्पन्नासु टोक्योलम्पिक्-स्पर्धासु भारतेन सप्त पदकानि प्राप्तानि – एतत् वयं जानीमः एव । क्रीडादिसामर्थ्यवृद्धिः सङ्कल्पमात्रेण धनविनियोगमात्रेण वा न भवति । सामर्थ्यवताम् अन्वेषणं तेषां योग्यप्रशिक्षणं समुचितानां साधनानां प्रापणं समर्थ्यप्रदर्शनाय अवसरदानम् इत्यादयः बहवः अंशाः अनुष्ठिताः चेदेव पदकजयशीलानां तरुणानां विकासः भवेत् । भारतेन अद्यत्वे एतस्मिन् क्षेत्रे विशेषावधानं दीयमानम् अस्ति । अतः एव आधिक्येन पदकानि प्राप्तुं शक्तानि । ये पदकानि प्राप्तवन्तः तथैव पदकानि प्राप्तुम् असमर्थाः अपि विशेषयोग्यतां ये प्रदर्शितवन्तः ते अपि वस्तुतः अभिनन्दनार्हाः एव । फलाफलं भवति देवाधीनम् । किन्तु प्रयत्नः भवति मानवाधीनः । एतादृशेषु अन्यतमा आसीत् मीराबाईचानु । सा भारोन्नयनस्पर्धायां रजतपदकं प्राप्तवती । यदा पदकं प्राप्य स्वजन्मस्थलं प्रति आगता तदा तया कृतं प्रथमं कार्यं इम्फालप्रदेशं प्रति गमन...