ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ




           ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ



ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನೆಯ ಸಫಲತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು . ವಿಜ್ಞಾನಿಗಳ ಒಂದು ತಂಡ ಎಂದಿನಂತೆ ಯೋಜನೆಯ ಸಾಫಲ್ಯಕ್ಕಾಗಿ  ತಿಮ್ಮಪ್ಪನನ್ನು ಪ್ರಾರ್ಥಿಸಲು ತಿರುಮಲದಲ್ಲಿದ್ದರು. ಉಪಕರಣದ ಒಂದು ಭಾಗವನ್ನು ತಿಮ್ಮಪ್ಪನ ಮುಂದಿಟ್ಟು ಯೋಜನೆ ಯಶಸ್ಸಿಗಾಗಿ ಅನುಗ್ರಹವನ್ನು ಪ್ರಾರ್ಥಿಸಿದರು . ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ , ಮಂಗಳಯಾನಕ್ಕೂ ಚಂದ್ರಯಾನಕ್ಕೂ ವ್ಯತ್ಯಾಸವೂ ತಿಳಿಯದ ಸ್ವಯಂಘೋಷಿತ ಜೀವಪರ,ಪ್ರಗತಿಪರ, ಸಮಾಜದ ಸಾಕ್ಷಿಪ್ರಜ್ಞೆಯ ಬುದ್ದಿಜೀವಿಗಳು ಇದೊಂದು ಪ್ರತಿಗಾಮಿ ಚಿಂತನೆಯೆಂದೂ, ಭಾರತೀಯ ವಿಜ್ಞಾನಿಗಳಿಗೆ ತಮ್ಮ ಕೆಲಸದ ಮೇಲೆಯೆ ವಿಶ್ವಾಸವಿಲ್ಲವೆಂದೂ, ಮೌಡ್ಯವೆಂದೂ ಬೊಬ್ಬಿಡುತ್ತಾ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರು ಈ ರೀತಿಯ ಮೌಡ್ಯಾಚಾರಣೆಯನ್ನು ನಿಲ್ಲಿಸುವಂತೆ ಕ್ರಮವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವನ್ನು ಪ್ರಕಟಿಸಿಬಿಟ್ಟರು . ಒಂದೊಮ್ಮೆ ಇಸ್ರೋ ವಿಜ್ಞಾನಿಗಳು ಮಸಿದಿಗೊ, ಚರ್ಚಿಗೂ ಭೇಟಿಯಿತ್ತಿದ್ದರೆ ಇದೆ ಪ್ರಗತಿಪರ, ಜೀವಪರ ಚಿಂತಕರು ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೆರಿಸುವುದರಲ್ಲಿ ಸಂಶಯವಿರಲಿಲ್ಲ. ಹಿಂದುವಿರೋಧಿಗಳಾದ ಈ ಬುದ್ದಿಜೀವಿಗಳು ಪ್ರಗತಿಪರರೆಂಬ ಮುಖವಾಡ ಧರಿಸಿ ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿರುವುದು ಇದೆ ಮೊದಲಲ್ಲ. ಜನರಿಗೂ ಇದು ಅರ್ಥವಾಗಿದೆ .

ಆದರೆ ಇದೆಲ್ಲದ ಮಧ್ಯೆ ವಿಜ್ಞಾನಿಗಳಿಗೂ ದೇವರಿಗೂ,ವಿಜ್ಞಾನಕ್ಕೂ ದೇವರ ಅಸ್ತಿತ್ವಕ್ಕೂ ಏನಾದರು ಸಂಭಂಧವಿದೆಯೆ ? ವಿರೋಧವೆ ? ಸಮ್ಮತಿಯಿದೆಯೆ? ಎಂಬಿತ್ಯಾದಿ ಮೂಲಭೂತವಾದ ಪ್ರಶ್ನೆಗಳುದ್ಭವಿಸಬಹುದು .  ವಿಜ್ಞಾನಕ್ಕೆ ದೇವರ ಅಸ್ತಿತ್ವವಾಗಲಿ , ನಿರಾಕರಣೆಯಾಗಲಿ ವಿಷಯವಲ್ಲ. ಯಾವುದು ವಿಜ್ಞಾನಕ್ಕೆ ವಿಷಯವಲ್ಲವೂ ಅದರ ಕುರಿತಾಗಿ ವಿಜ್ಞಾನವು ಮಾತನಾಡುವುದಿಲ್ಲ. ಹಾಗಾಗಿಯೆ ಅನೇಕ ಶ್ರೇಷ್ಠ ವಿಜ್ಞಾನಿಗಳು ದೇವರನ್ನು ನಂಬುವರಾಗಿದ್ದಾರೆ . ಪ್ರಗತಿಪರರು  ಎಷ್ಟೆ ಪರಚಾಡಿದರು ಇವರೆಲ್ಲರಿಗಿಂತ ನೂರು ಪಟ್ಟು ಮೇಧಾವಿಗಳಾದ ವಿಜ್ಞಾನಿಗಳು ಭಾರತೀಯ ಸನಾತನ ತತ್ವಶಾಸ್ತ್ರವನ್ನು ಅಭ್ಯಸಿಸಿ ಕೋಂಡಾಡಿರುವುದನ್ನು ಅಲ್ಲೆಗೆಳೆಯಲು ಅವರಿಂದ ಸಾಧ್ಯವಾಗುವುದಿಲ್ಲ.  

  ಪರಮಾಣು ಬಾಂಬಿನ ಪಿತಾಮಹ 'ರೊಬರ್ಟ ಒಪನ್ಹೈಮರ್' ಭಗವದ್ಗೀತೆಯಿಂದ ಬಹಳ ಪ್ರಭಾವಿತನಾಗಿದ್ದನು . James A hijiya (professor of history , university of Massachusetts, Dartmouth) ಅವರು Procedings of The American Philosophical society ಎಂಬ ಪುಸ್ತಕದಲ್ಲಿ ಬರೆದ The Gita of J.Robert Oppenheimer ಎಂಬ ಲೇಖನದಲ್ಲಿ ಈ ಕುರಿತಾಗಿ ಅನೇಕ ವಿಷಯಗಳನ್ನು ದಾಖಲಿಸಿದ್ದಾರೆ . ಒಪನ್ಹೈಮರ್ ಯೌವನದಲ್ಲೆ Arthur W Ryder ಎನ್ನುವ ಸಂಸ್ಕೃತ ವಿದ್ವಾಂಸನ ಬಳಿ ಸಂಸ್ಕೃತವನ್ನು ಹಾಗೆ ಗೀತೆಯನ್ನು ಅಭ್ಯಸಿಸಿ , ಅದರ ಸರಳತೆ ಮತ್ತು ಅಗಾಧತೆಯಿಂದ ಆಶ್ಚರ್ಯಗೊಂಡು ತನ್ನ ತಮ್ಮನಿಗೆ ಬರೆದ ಪತ್ರದಲ್ಲಿ ಗೀತೆಯ ಕುರಿತಾಗಿ Very easy and quite marvelous ಎಂದು ಉದ್ಗಾರ ತೆಗೆದ . ನಂತರದ ದಿನಗಳಲ್ಲಿ ' the most beautiful philosophical song existing in any known tongue'' ಎಂದು ಗೀತೆಯನ್ನು ಕೊಂಡಾಡಿದ . ಅವನು ತನ್ನ ಮೇಜಿನ ಹತ್ತಿರ ಯಾವಾಗಲೂ ಭಗವದ್ಗೀತೆಯ ಒಂದು ಪ್ರತಿಯನ್ನು ಇರಿಸಿಕೊಳ್ಳುತ್ತಿದ್ದನಷ್ಟೆ ಅಲ್ಲದೆ , ತನ್ನ ಎಲ್ಲಾ ಮಿತ್ರರಿಗೂ ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡುತ್ತಿದ್ದ . ಅಮೇರಿಕ ಅಧ್ಯಕ್ಷ ರೂಸ್ವೆಲ್ಟ ನಿಧನಾಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗೀತೆಯ ಗೀತೆಯ 17ನೆಯ ಅಧ್ಯಾಯದ ಮೂರನೆಯ ಶ್ಲೋಕವನ್ನುದಾಹರಿಸಿದ. ಪರಮಾಣು ಬಾಂಬಿನ ತಯಾರಿಯ ಕಾಲದಲ್ಲೂ ಗೀತೆಯನ್ನು ಅಭ್ಯಸಿಸುತ್ತಿದ್ದ ಅವನಿಗೆ ಪರಮಾಣು ವಿಸ್ಪೋಟಗೊಂಡ ದೃಶ್ಯವು ಕಣ್ಣೆದಿರಿಗೆ ಬಂದಾಗ ಗೀತೆಯ ವಿಶ್ವರೂಪದರ್ಶನಯೋಗದ ವರ್ಣನೆಯು ಮನದಲ್ಲಿ ಸ್ಫುರಿಸಿದ್ದು ಸಹಜವೆ . 1963 ರಲ್ಲಿ 'Christian century' ನಿಯತಕಾಲಿಕೆಯಲ್ಲಿ ಅವನ ಜೀವನವನ್ನು ಪ್ರಭಾವಿಸಿದ ಹತ್ತು ಪುಸ್ತಕಗಳ ಬಗ್ಗೆ ಕೇಳಿದಾಗ ಭಗವದ್ಗೀತೆಯನ್ನು ಉದಾಹರಿಸಿದ. ಹಾಗಾದರೆ ಭಗವದ್ಗೀತೆಯ ಅಧ್ಯಯನವನ್ನು ಮಾಡುತ್ತಿದ್ದ ಒಪನ್ಹೈಮರ್ ಮೌಢ್ಯವನ್ನಾಚರಿಸುತ್ತಿದ್ದನೆ .  ಅವನು ತನ್ನ ಮಿತ್ರರಿಗೆ ಭಗವದ್ಗೀತೆಯನ್ನು ನೀಡುತ್ತಿದ್ದದ್ದನ್ನು ಮೌಢ್ಯವೆಂದೂ ಹೇಳುವರೆ? ಭಾರತೀಯ ಮೂಲದ ಎಲ್ಲವನ್ನು ಮೌಢ್ಯವೆಂದು ವಿರೂಧಿಸುತ್ತಾ, ಅಭಾರತೀಯವಾದದ್ದೂ ಎಷ್ಟೆ ಕೊಳಕು, ಅವೈಜ್ಞಾನಿಕವಾಗಿದ್ದರೂ ಶ್ರೇಷ್ಠವೆಂದು ಬಿಂಬಿಸುತ್ತಾ, ವಿಜ್ಞಾನ ಮತ್ತು ವೈಜ್ಞಾನಿಕ ಮನೂಧರ್ಮದ ಎಳ್ಳಷ್ಟೂ ಜ್ಞಾನವಿಲ್ಲದಿದ್ದರೂ , ಎಲ್ಲಾ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ನೀಡುವ  ಅಭಿಪ್ರಾಯವ್ಯಸನಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ .  

Erwin Schrodinger   ಕ್ವಾಂಟಮ್ ಫಿಸಿಕ್ಸ ಕ್ಷೇತ್ರದಲ್ಲಿ  ಅದ್ಭುತ ಸಂಶೋದನೆಗೈದ ಈ ವಿಜ್ಞಾನಿಯು 1918 ರ ಆಸುಪಾಸಿನಲ್ಲಿ ಜೆರ್ಮನ್ ತತ್ವಶಾಸ್ತ್ರಜ್ಞನಾದ Arthur Schoenhauear  ಲೇಖನಗಳ ಮೂಲಕ ಭಾರತೀಯ ತತ್ವಶಾಸ್ತ್ರದಿಂದ ಪ್ರಭಾವಕ್ಕೊಳಗಾಗಿದ್ದನು . ಇನ್ನೊಬ್ಬ ವಿಜ್ಞಾನಿ Niels Bohr ನ "I go to the Upanishad to ask question" (The Tao of physics, 1975) ಎಂಬ ಪ್ರಸಿದ್ದ ಹೇಳಿಕೆಯನ್ನು ಭಾರತದಲ್ಲಿ ನೀಡಿದ್ದರೆ ಈ ಬುದ್ದಿಜೀವಿಗಳು ಅವನನ್ನು ಮೌಢ್ಯಪರ ಎಂದು ಷರಾ ಬರೆದುಬಿಡುತಿದ್ದರು. ಹೀಗೆ ಅನೇಕ ಶ್ರೇಷ್ಠ ವಿಜ್ಞಾನಿಗಳು ಸಾಧಕರು  ಭಾರತೀಯ ತತ್ವಶಾಸ್ತ್ರವನ್ನು ,ವಿಜ್ಞಾನವನ್ನು ಕೊಂಡಾಡಿದರೂ, ಅದು ಇವರ ಕಣ್ಣಿಗೆ  ಬಿದ್ದರೂ ಇವರ ಮನಸ್ಥಿತಿ ಬದಲಾಗುವುದಿಲ್ಲ. 

ಇನ್ನೂ ಕೆಲವರು ವಾದ ಮಾಡುವುದು ಹೀಗೆ – ಭಾರತವೂ ಧರ್ಮನಿರಪೇಕ್ಷ(Secular) ರಾಷ್ಟ್ರ , ದೇವಸ್ಥಾನಕ್ಕೆ ಹೋಗುವುದಾದರೆ, ಚರ್ಚಿಗೂ ,ಮಸೀದಿಗೂ ಹೋಗಲಿ , ಇಲ್ಲವಾದಲ್ಲಿ ಎಲ್ಲಿಗೂ ಹೋಗುವುದು ಬೇಡ. ದೇವಸ್ಥಾನಕ್ಕೆ ಮಾತ್ರ ಭೇಟಿ ನೀಡುವುದು ಭಾರತೀಯ ಧರ್ಮನಿರಪೇಕ್ಷತೆಗೆ(Secular) ವಿರುದ್ದವಾದ್ದು . ಇವರು ಅತಿ ಬುದ್ಧಿವಂತರು. ಇಂತಹವರಿಗೆ ಇಂತಹ ಪ್ರಸಂಗಗಳಲ್ಲಿ ಮಾತ್ರ ಧರ್ಮನಿರಪೇಕ್ಷತೆಯ(Secular)  ನೆನಪು ಕಾಡುವುದು . ಆದರೆ ನಿಜವಾಗಿಯು ಧರ್ಮನಿರಪೇಕ್ಷ(Secular) ರಾಷ್ಟ್ರವಾದರೆ ದೇವಸ್ಥಾನಗಳನ್ನು ಮಾತ್ರ ಎಕೆ ಸರ್ಕಾರವು ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ. ಮಸೀದಿಗೆ ,ಚರ್ಚಿಗಿರದ ನಿಯಮ ದೇವಸ್ಥಾನಗಳಿಗೆಕೆ ? ದೇವಸ್ಥಾನಗಳ ಆಡಳಿತವನ್ನು ಹಿಂದುಗಳಿಗೆ ಬಿಟ್ಟು ಕೊಡಲಿ ಆಗ ಮಾತನಾಡೋಣ . ಇನ್ನೂ ತಾರ್ಕಿಕವಾಗಿ ಯೋಚನೆ ಮಾಡಿದರೆ ಇಸ್ರೋ ಮಿಷನ್ ನಲ್ಲಿ ದೇವಸ್ಥಾನಗಳ ಪಾತ್ರವಿದೆ. NSSO ವರದಿ ಪ್ರಕಾರ ,ಭಾರತದಲ್ಲಿ ದೇವಸ್ಥಾನಗಳ ಹಣಕಾಸಿನ ವ್ಯವಹಾರ 3.02 ಲಕ್ಷ ಕೋಟಿ, ಅಥವಾ 40 ಬಿಲಿಯನ್ ಡಾಲರ್ , ಇದು ನಮ್ಮ ಒಟ್ಟಾರೆ ಜಿ.ಡಿ.ಪಿ ಯ 2.32 ಪ್ರತಿಶತ. ಕೇವಲ ಆರು ದೇವಸ್ಥಾನಗಳಿಂದ ಭಾರತ ಸರ್ಕಾರ ಇಪ್ಪತ್ತನಾಲ್ಕುಸಾವಿರಕೋಟಿಯಷ್ಟು ಹಣವನ್ನು ಸಂಪಾದಿಸುತ್ತದೆ . ಹಾಗಾದರೆ ಭಾರತ ಸರ್ಕಾರವು ಇಸ್ರೋಗೆ ನೀಡುವ ಅನುದಾನದಲ್ಲಿ ದೇವಸ್ಥಾನದ ಪಾಲೂ ಇದೆ . ವ್ಯಾವಹಾರಿಕವಾಗಿ ಯೋಚಿಸಿದರೂ ಇಸ್ರೋ ವಿಜ್ಞಾನಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರಲ್ಲಿ ತಪ್ಪೇನಿಲ್ಲ.  ಆದರೆ ವಿಜ್ಞಾನಿಗಳಾದರೂ ತಮ್ಮ ಸಕಲ ಪ್ರಯತ್ನವನ್ನು ಮಾಡಿ ನಿಜವಾದ ಶ್ರದ್ಧೆಯಿಂದ ಭೇಟಿ ನೀಡಿದ್ದರು. ಈ ಕುಹಕಿಗಳು ಕುಹಕವಾಡುವ ಸಮಯಕ್ಕೆ , ಉಡಾವಣೆಯು ಯಶಸ್ವಿಯಾಗಿ ರಾಕೆಟ್ ತನ್ನ ಪಥದಲ್ಲಿ ಯಾವುದೆ ವಿಘ್ನಗಳಿಲ್ಲದೆ ಮುನ್ನುಗ್ಗುತ್ತಿದ್ದರೆ , ಅದೇ ವಿಜ್ಞಾನಿಗಳು ಅದರ ಮುಂದಿನ ಹಂತದ  ಸಫಲತೆಗಾಗಿ ಮತ್ತೆ ಹಗಲಿರುಳು ಶ್ರಮಿಸಲು ಪ್ರಾರಂಭಿಸಿದ್ದರು … ಅಗಸ್ಟ 23 ರ ಸಾಯಂಕಾಲ 6:04 ಸಮಯಕ್ಕೆ ಯಶಸ್ವಿಯಾದ landing ನಡೆದು ವಿಜ್ಞಾನಿಗಳೆಲ್ಲಾ ಸಂತೃಪ್ತಿಯ ,ಸಫಲತೆಯ ಭಾವವನ್ನನುಭವಿಸುತ್ತಿದ್ದರೆ ,ಯೋಜನೆಯ ಅಸಫಲತೆಯನ್ನೆ ಬಯಸುತ್ತಿದ್ದ ಬುದ್ಧಿಜೀವಿಗಳು ಹೇಪು ಮೋರೆಯಲ್ಲಿ ದೇಶದ ಸಂತೋಷದಲ್ಲಿ ಪಾಲ್ಗೊಳ್ಳಲೂ ಆಗದೆ , ವಿಫಲತೆಯನ್ನೆ ನೆಪ ಮಾಡಿಕೊಂಡು ಸನಾತನ ಧರ್ಮವನ್ನು ನಿಂದಿಸಿಲು ಮಾಡಿಕೊಂಡಿದ್ದ ತಯಾರಿಯು ವಿಫಲಗೊಂಡಿದ್ದಕ್ಕಾಗಿ ಶೋಕಪಡುತ್ತಿದ್ದರು...

ಡಾ.ಶ್ರೀನಿಧಿ ಪ್ಯಾಟಿ





Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting