Posts

Showing posts from 2020

ಸಂಸ್ಕೃತದ ಎರಡು ಭಿನ್ನ ಯುಗಗಳು

Image
     ಸಂಸ್ಕೃತದ ಎರಡು ಭಿನ್ನ ಯುಗಗಳು   ನಾನು ನಿಮಗೆ ಎರಡು ಘಟನೆಗಳನ್ನು ಹೇಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಮೊದಲನೆಯದು 11 ನೇ ಶತಮಾನದ್ದು. ಭೋಜ ಎಂಬ ರಾಜನಿದ್ದನು. ಅವನ ರಾಜ್ಯವು ತುಂಬಾ ಸಮೃದ್ಧವಾಗಿತ್ತು. ಒಮ್ಮೆ ಲಕ್ಷ್ಮಿಧರ ಎಂಬ ಕವಿ ಆ ರಾಜನ ನಗರಕ್ಕೆ ಬಂದ. ಕವಿಯು ತುಂಬಾ ಪ್ರಭಾವಿತನಾಗಿ  ಆ ನಗರದಲ್ಲಿ ವಾಸಿಸಲು ಮನಸ್ಸು ಮಾಡಿದನು.  ಹಾಗಾಗಿ ಅವನು ರಾಜನ ಆಸ್ಥಾನಕ್ಕೆ ತೆರಳಿ ತನ್ನ ಉದ್ದೇಶವನ್ನು ಹೇಳಿದನು. ಭೋಜರಾಜನು ತುಂಬಾ ಸಂತೋಷಪಟ್ಟು ಕವಿಯ ವಸತಿಗಾಗಿ ವ್ಯವಸ್ಥೆಗಳನ್ನು ಮಾಡುವಂತೆ ಸಚಿವರಿಗೆ ಆದೇಶಿಸಿದನು. "ಈ ನಗರದಲ್ಲಿರುವ ಅವಿದ್ಯಾವಂತನೊಬ್ಬನನ್ನು ಹುಡುಕಿ ಅವನ ಮನೆಯನ್ನು ಖಾಲಿ ಮಾಡಿ ಈ ಪಂಡಿತನಿಗೆ ಆ ಮನೆಯನ್ನು ಮಂಜೂರು ಮಾಡಿ" ಎಂದು ರಾಜನು ಸಚಿವನಿಗೆ ಆದೇಶಿಸಿದನು. ಸಚಿವನು ಕೆಲವು ಅವಿದ್ಯಾವಂತರನ್ನು ಹುಡುಕಲು ಹೋದನು, ಆದರೆ ಅವನಿಗೆ ಅಂತಹವರು ಸಿಗಲಿಲ್ಲ. ಎಲ್ಲರೂ ಒಂದಾದರೂ ವಿದ್ಯೆಯಲ್ಲಿ ಪಾರಂಗತರೇ ಆಗಿದ್ದರೂ . ಅವನು ಮತ್ತೆ ರಾಜನ ಬಳಿಗೆ ಬಂದು ನಗರದಲ್ಲಿ ಅವಿದ್ಯಾವಂತನನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದು ಹೇಳಿದನು. ಆಗ ರಾಜನು ಸಂಸ್ಕೃತದಲ್ಲಿ ಕವಿತೆಯನ್ನು ರಚಿಸಲಾಗದ ವ್ಯಕ್ತಿಯನ್ನು ಹುಡುಕಲು ಹೇಳಿ, ಈ ಕವಿಗೆ ಆ ಮನೆಯನ್ನು ಮಂಜೂರು ಮಾಡಬೇಕೆಂದು  ಸಚಿವನಿಗೆ ಆದೇಶಿಸಿದನು . ಅನಂತರ ಸಚಿವನು ಒಬ್ಬ ನೇಕಾರನ ಮನೆಗೆ ಹೋಗಿ 'ಸಂಸ್ಕೃತದಲ್ಲಿ ಕವಿತೆಗಳನ್ನು ರಚಿಸಲು ನೀನು ಸಮರ್

ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ-1

Image
  ಕನ್ನಡಸಾರಸ್ವತ ಲೋಕಕ್ಕೆ ಹರಿದಾಸರುಗಳ ಕೊಡುಗೆ ಅಪಾರ. ಅದರಲ್ಲೂ ಅಧ್ಯಾತ್ಮಪ್ರಪಂಚಕ್ಕೆ ಹರಿದಾಸರುಗಳ ಪದ್ಯಗಳು ರಸದೌತಣ. ಮಧ್ವಾಚಾರ್ಯರು ಸ್ವತಃ ಸಂಗೀತಕೋವಿದರು ,ಅವರ ದ್ವಾದಶಸ್ತೋತ್ರಗಳಲ್ಲಿ ಇರುವ  ಸಂಗೀತದ ಸುವಾಸನೆಯನ್ನು ಜಗತ್ತಿಗೆಲ್ಲಾ ಪಸರಿಸಿದ ಕೀರ್ತಿ ಹರಿದಾಸರದ್ದು. ಶ್ರೀಪಾದರಾಜರು,ವ್ಯಾಸರಾಜರು ಹಾಕಿಕೊಟ್ಟದಾರಿಯಲ್ಲಿ ಮುಂದುವರೆದು ತತ್ವಗಳನ್ನು ಕನ್ನಡಭಾಷೆಯಲ್ಲಿ ತಿಳಿಸಿ ಹರಿದಾಸರುಗಳು ಮಾಡಿದ ಉಪಕಾರವು ಅವಿಸ್ಮರಣೀಯ. ಇಂತಹ ಹರಿದಾಸರಪರಂಪರೆಯಲ್ಲಿ ಪುರಂದರದಾಸರ ಶಿಷ್ಯರಾಗಿ 25,000ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಶ್ರೇಷ್ಠರೆನಿಸಿಕೊಂಡ ಮಹಾನುಭಾವರು ವಿಜಯದಾಸರು.  ವಿಜಯದಾಸರ ಕೃತಿಗಳು ಅವರ ಅನುಭವದ ಮೂಸೆಯಲ್ಲಿ ಬಂದ ರಸಪಾಕಗಳು. ಅವುಗಳು ಕೇವಲ ಅಧ್ಯಯನಕ್ಕೆ ಮಾತ್ರ ನಿಲುಕುವಂತದ್ದಲ್ಲ. ಭಗವದ್ಭಕ್ತಿ, ವೈರಾಗ್ಯ ,ಮತ್ತು ಅನುಭವಗಳಿಂದ ನಮ್ಮ ಪಾತ್ರತೆ ಎಷ್ಟು ಹೆಚ್ಚುತ್ತದೋ ,ಅಷ್ಟು ನಮಗೆ ಹೆಚ್ಚೆಚ್ಚು ಅರ್ಥವಾಗುತ್ತಾ ಹೋಗುತ್ತವೆ. “ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ “ ಎನ್ನುವ ಸುಳಾದಿಯು ಇದಕ್ಕೆ ಸ್ಪಷ್ಟ ನಿದರ್ಶನ. ಪ್ರತಿಯೊಂದು ಪದಾರ್ಥವು ಪರಮಾತ್ಮನ ಅಧೀನವೆನ್ನುವುದು ಸಿದ್ಧಾಂತ. ಅದರ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.  “ನ ಋತೇ ತ್ವತ್ಕ್ರಿಯತೆ” ಎನ್ನುವ ವೇದಮಂತ್ರದ , ‘ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ | ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ‘ ಎಂಬ ಅನುವ್ಯಾ

ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2

Image
   ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2   ಪರಮಾತ್ಮನ ಅಧೀನರಾದಮೇಲೆ ನಮ್ಮ ಜೀವನದ ಭಾರವನ್ನೆಲ್ಲಾ ಪರಮಾತ್ಮನೇ ಹೊರುತ್ತಾನೆ ಎಂಬ ನಂಬಿಕೆಯನ್ನು ಹೊಂದಿರಬೇಕು ಎಂದು ದಾಸರು ``ನಿನ್ನಾಧೀನನಾದವನೋ ನಿತ್ಯದಲಿ ನಾನು, ಮನ್ನಿಸು ದಯದಿಂದ ಮಾತು ಕೇಳಿ , ಇನ್ನಾವ ಯೋಚನೆಯೋ ನಿರ್ಧಾರವಾಗಿ ನುಡಿದೆ  ಎನ್ನಭಾರವು ನಿನ್ನದಲ್ಲವೇನಯ್ಯಾ” ಎಂದು ತಮ್ಮ ಸುಳಾದಿಯಲ್ಲಿ ನಿರೂಪಿಸುತ್ತಾರೆ. ಈ ಜನ್ಮದಲ್ಲಿ ನಮ್ಮ ತಂದೆಯೋ,ತಾಯಿಯೋ ಇನ್ನಾರೋ ರಕ್ಷಕರೆಂದು ತಿಳಿದಿರುತ್ತೇವೆ. ಅನಂತಜನ್ಮಗಳಿಂದ ನಮ್ಮನ್ನು ರಕ್ಷಿಸುತ್ತಾ ಬಂದವನು ಆ ಪರಮಾತ್ಮ . ಜಲೂಕ ಎಂಬ ಜಲಚರ ಪ್ರಾಣಿಗೆ ಕೈ , ಕಾಲುಗಳಿಲ್ಲ , ಆದರೆ ನದಿಯಲ್ಲಿ ಅದರ ಆಹಾರವು ಹರಿದುಬರುವಂತೆ ಮಾಡಿ ಅದನ್ನು ರಕ್ಷಿಸುತ್ತಾನೆ. “ರಕ್ಷತೀತ್ಯೇವ ವಿಶ್ವಾಸಃ” ಎಂದು ಹೇಳಿದ ಹಾಗೆ "ರಕ್ಷಿಸುತ್ತಾನೆ" ಎನ್ನುವ ಧೃಢವಾದ ವಿಶ್ವಾಸವಿದ್ದರೆ,  ಪರಮಾತ್ಮನೂ ಕೂಡ ``ಯೋಗಕ್ಷೇಮಂ ವಹಾಮ್ಯಹಂ” ಎಂದು ಆಶ್ವಾಸನೆ ಕೊಟ್ಟ ಹಾಗೆ ನಮ್ಮನ್ನು ರಕ್ಷಿಸುತ್ತಾನೆ ಎಂಬುವುದರಲ್ಲಿ ಸಂದೇಹವಿಲ್ಲ. ದಾಸರು ತಮ್ಮ ಹಂತದ ಭಕ್ತಿಯ ಪ್ರಕಾರವನ್ನು ನಿರೂಪಿಸುತ್ತಾರೆ. ಯಾವುದೇ ಸುಖ ಸುಪ್ಪತ್ತಿಗೆಗಳು ತನ್ನ ಸಾಧನೆಗೆ ಅಡ್ಡವಾಗುವುದಂತಾದ್ದರೇ, ಅದನ್ನು ಎಂದೆಂದೂ ಕರುಣಿಸಬೇಡ, ಕಷ್ಟ ಬಂದರೂ ಅದನ್ನು ನಿನ್ನ ಅನುಗ್ರಹವೆಂದು ಅನುಭವಿಸುವ ಧೈರ್ಯ ನನಗೆ ಕರುಣಿಸಿರುವಿ, ಹಾಗಾಗಿ ನಾನು ದುಃಖ ಪಡುವುದಿಲ್ಲ, ಎಷ್ಟೇ ಕಷ್ಟ ಬಂದರೂ,ಸುಖ ಬಂದರೂ

ಆಚಾರ್ಯರು ಉದಾಹರಿಸಿದ ಅಪರೂಪದ ಸ್ತೋತ್ರ

Image
  ಅನುವ್ಯಾಖ್ಯಾನದ ತೃತೀಯಾಧ್ಯಾಯದ ಪ್ರಥಮಪಾದದಲ್ಲಿ ಆಚಾರ್ಯರು  ಅಪೂರ್ವವಾದ ವಿಷಯವನ್ನು ನಿರೂಪಿಸಿದ್ದಾರೆ. “ ಏಕೈವ ಬ್ರಹ್ಮಹತ್ಯಾಹಿ ವರಾಹಹರಿಣೋದಿತಾ | ಬ್ರಹ್ಮಪಾರಸ್ತವೇನೈವ ನಿಷ್ಕಾಂತಾ ರಾಜದೇಹತಃ | ಸೊತ್ರಸ್ಯ ತಸ್ಯ ಮಾಹಾತ್ಮ್ಯಾತ್  ವ್ಯಾಧತ್ವಂ ಗಮಿತಾ ಪುನಃ | ಪ್ರಾಪ್ಯಜ್ಞಾನಂ ವರಂ ಚಾಪ |'' ಆಚಾರ್ಯರು ಕರ್ಮಗಳಿಗಿರು ವ ಜೀವಸ್ವರೂಪದ ವಿಷಯದಲ್ಲಿ  ಅಪರೂಪದ ಪ್ರಮೇಯವನ್ನು ಈ ಪ್ರಕರಣದಲ್ಲಿ ನಿರೂಪಿಸಿದ್ದಾರೆ.ಈ ಪ್ರಮೇಯಕ್ಕೆ ಸಂವಾದಿಯಾಗಿ ಈ ಮೇಲಿನ ಶ್ಲೋಕಗಳಲ್ಲಿ ವರಾಹಪುರಾಣದಲ್ಲಿ ಬರುವ ಒಂದು ಕಥೆಯನ್ನು ಉದಾಹರಿಸಿದ್ದಾರೆ.  ಆಚಾರ್ಯರು ನಿರೂಪಿಸುವ ಕಥೆಯ ಸಾರಾಂಶ ಹೀಗಿದೆ. ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ ಜನ್ಮವನ್ನು ಪಡೆಯುತ್ತದೆ. ಆ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ.ಇಲ್ಲಿ ಬ್ರಹ್ಮಹತ್ಯಾ ದೋಷವು  ವ್ಯಾಧ ಜನ್ಮವನ್ನು ಪಡೆದಿದೆ ಎಂಬ ಕಥೆಯನ್ನು ಉದಾಹರಿಸಿ ಆಚಾರ್ಯರು ಕರ್ಮಗಳಿಗೆ ಅಭಿಮಾನಿಗಳಾದ ಜೀವಿಗಳೂ ಇದ್ದಾರೆ ಎಂಬ ಪ್ರಮೇಯವನ್ನು ನಿರೂಪಿಸಿದ್ದಾರೆ."ಈ ಶ್ಲೋಕದಲ್ಲಿ “ ವರಾಹಹರಿಣೋದಿತಾ '' ಎಂದು ಹೇಳಿರುವುದರಿಂದ ಆಚಾರ್ಯರು ಈ ಸ್ತೋತ್ರವು ವರಾಹಪುರಾಣದಲ್ಲಿದೆ ಎಂಬುದನ್ನು ಸೂಚಿಸಿದ್ದಾರೆ' 

ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ

Image
ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ                         ಪೂಜ್ಯ ಗುರುಗಳು ತಾವು ಜೀವನದುಕ್ಕೂ ಎಂದೂ ಬಿಡದ ಪಾಠ, ಪ್ರವಚನ, ಸಂಚಾರವನ್ನು ಮಾಡುತ್ತಲೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಅವರ ವ್ಯಕ್ತಿತ್ವ ಸಮುದ್ರವಿದ್ದಂತೆ.  ನಾವು ನಮ್ಮ ನಮ್ಮ ಪಾತ್ರೆಗನುಗುಣವಾಗಿ ನೀರನ್ನು ಮನೆಗೆ ತರಬಹುದು .  ತರದೆ ಇದ್ದದ್ದೆ ಅಪಾರ . ಆದರೆ ನಮಗೆ ಸಮುದ್ರದ ನೀರನ್ನು ತಂದೆವೆಲ್ಲಾ ಎನ್ನುವ ಖುಷಿ . ಪೂಜ್ಯ ಗುರುಗಳ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದವರೆಲ್ಲಗೂ ಆದದ್ದು ಇದೇ ಅನುಭವ . ಇಂತಹ ಗುರುಗಳ ಜೊತೆ  ಎರಡು ವರ್ಷ ಸಂಚಾರ ಮಾಡುವ ಭಾಗ್ಯ ಒದಗಿದ್ದು ನನ್ನ ಸುಕೃತದ ಫಲ .ನಾನೂ ಪಾತ್ರೆಗನುಗುಣವಾಗಿ ಒಂದಷ್ಟು ಅನುಭವ ಪಡೆದಿದ್ದೇನೆ . ಅದನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುತ್ತೇನೆ   ಮಹಾನ್ ದೇಶಭಕ್ತರು . ಪೇಜಾವರ ಸ್ವಾಮಿಗಳು ದೇಶಭಕ್ತರು. ಹೌದು ಸ್ವಾಮಿಗಳು ಎಂದೂ ದೇಶಭಕ್ತಿಗೂ ಆಧ್ಯಾತ್ಮಕ್ಕೂ ವಿರೋಧವನ್ನು ಕಾಣಲೇ ಇಲ್ಲ.  ಈ ವಿಷಯದಲ್ಲಿ ನನಗಾದ ಅನುಭವವೇ ಪ್ರಮಾಣ.  May 16-2014 ಭಾರತದ ರಾಜಕೀಯದಲ್ಲಿ ಮಹತ್ವದ ದಿನ. ಅಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದಿತ್ತು. ಸ್ವಾಮಿಗಳೊಟ್ಟಿಗೆ ಕೆಲವು ದಿನಗಳಿಂದ ನಾವು ಉಡುಪಿಯಲ್ಲೇ ಇದ್ದೆವು. ಅಂದು ಬೆಳಗ್ಗೆ ಸ್ವಾಮಿಗಳು ಕೃಷ್ಣನ ಪೂಜೆ ಮುಗಿಸಿ ಬರುವಾಗ ರಥಬೀದಿಯಲ್ಲಿ "ಶೋಭಾ ಕರಂದ್ಲಾಜೆ" ಯವರು ಎದುರಾದರು. ಅವರನ್ನು ಆಶೀರ್ವದಿಸಿ ಮಠಕ್ಕೆ ಬಂ

ಮಧ್ವಾಚಾರ್ಯರು ಮತ್ತು Leadership Quality

Image
       ಅಮಂತ್ರಂ ಅಕ್ಷರಂ ನಾಸ್ತಿ          ನಾಸ್ತಿ ಮೂಲಂ ಅನೌಷಧಂ|       ಅಯೋಗ್ಯಃ ಪುರುಷೋ ನಾಸ್ತಿ          ಯೋಜಕಃ ತತ್ರ ದುರ್ಲಭಃ|| ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು “ ಆಧ್ಯಾತ್ಮಜ್ಞಾನನೇತಾ ” ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವ “ನಾಯಕ” ಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರು.  ಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ. ಮುಂದಾಳುತ್ವ ಗುಣ (leading from front) ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ

ಮಧ್ವಾಚಾರ್ಯರು ಮತ್ತು Time Management

ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳಿಗೂ ಇರುವುದು ೨೪ ಘಂಟೆಗಳೆ,ಆದರೆ ಅಷ್ಟೇ ಸಮಯವನ್ನು ಬಳಸಿಕೋಂಡು ಕೆಲವರು ಬಹಳ ಸಾಧಿಸುತ್ತಾರೆ. ಕೆಲವರು ಸಮಯ ಸಾಲುವುದಿಲ್ಲ ಎಂದು ಆಕ್ಷೇಪಿಸುತ್ತಾರೆ.ಇಲ್ಲಿ ಮುಖ್ಯವಾಗಿ ಎರಡು ಕಾರಣಗಳು, ಒಂದು ಉದಾಸೀನತೆ, ಇನ್ನೋಂದು ಸಮಯನಿರ್ವಹಣೇಯ ಕೋರತೆ.ಉದಾಸಿನತೆಗೆ ಮದ್ದಿಲ್ಲ,ಆದರೆ ಸಮಯವನ್ನು ಹೇಗೆ ನಿರ್ವಹಿಸಬೇಕೆಂಬ ಕಲೆಯನ್ನು ತಿಳಿದುಕೋಳ್ಳಬೇಕು. ಆಚಾರ್ಯರು ತಮ್ಮ ಅವತಾರಕಾಲದಲ್ಲಿ ಅಪರಿಮಿತ ಸಾಧನೆಗಳನ್ನು ಮಾಡುತ್ತಾ ಸಮಯನಿರ್ವಹಣೆಯ ಕಲೆಯನ್ನು ಶಿಷ್ಯರಿಗಾಗಿ ತೋರಿಸಿಕೋಟ್ಟಿದ್ದಾರೆ. ಮಧ್ವನವಮಿಯ ಸಂಧರ್ಭದಲ್ಲಿ  ಅದನ್ನು ಅರ್ಥೈಸಿಕೋಳ್ಳಲು ಪ್ರಯತ್ನಿಸೋಣ. ಸಮಯ ಹಂಚಿಕೆ [Time Management] ನಾವು ಅನೇಕ ಬಾರಿ ಪ್ರಮುಖವಲ್ಲದ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡಿ, ಪ್ರಮುಖ ಕೆಲಸಗಳಿಗೆ ಸಮಯವಿಲ್ಲವೆಂದು ಒದ್ದಾಡುತ್ತೆವೆ. ಆಚಾರ್ಯರು ಬಾಲಕನಾಗಿದ್ದಾಗ ಅವರ ತಂದೆಯು ಅಕ್ಷರಾಭ್ಯಾಸ ಮಾಡಿಸಲು ಪ್ರ‍ಾರಂಭಿಸಿದರು.ತಂದೆಯು ಒಮ್ಮೆ ಬರೆದಿದ್ದನ್ನು ಮತ್ತೊಮ್ಮೆ ಬರೆಯಲು ಹೇಳಿದರು.ಆಚಾರ್ಯರು “ನೆನ್ನೆ ಬರೆದ ಅಕ್ಷರಗಳನ್ನೇ ಮತ್ತೆ ಮತ್ತೆ ಯಾಕೆ ಬರೆಯಬೇಕು,ಹೊಸದೇನಾದಿದ್ದರು ಹೇಳಿ” ಎಂದರು. ಮುಂದೋಮ್ಮೆ ಆಚಾರ್ಯರ ವೇದಗುರುಗಳು ವೇದಪಾಠವನ್ನು ಮಾಡುತ್ತಿದ್ದರು.ಆಚಾರ್ಯರು ಬೇರೆನನ್ನೋ ಯೋಚಿಸುತ್ತಿದ್ದರು.ಆಗ ಗುರುಗಳು “ಗೆಳೆಯರೋಂದಿಗೆ ವೇದವನ್ನು ಏಕೆ ಉಚ್ಚಾರಿಸುತ್ತಿಲ್ಲಾ” ಎಂದು ಆಕ್ಷೇಪಿಸಿದರು. ಅದಕ್ಕೆ ಆಚಾ