Posts

Showing posts from 2019

ವಿಜಯದಾಸರ ಸ್ವಪ್ನಸುಳಾದಿ

Image
ಸಾಧನಾ ಮಾರ್ಗದಲ್ಲಿ ಅತಿಪ್ರಮುಖವಾದ ಅಂಶ ಭಕ್ತಿ. ಭಕ್ತಿ ಎಂದರೆ ಪರಮಾತ್ಮನಲ್ಲಿ ಮಾಡುವ ಮಾಹಾತ್ಮ್ಯಜ್ಞಾನಪೂರ್ವಕವಾದ ಧೃಢವಾದ ಸ್ನೇಹ. ಪರಮಾತ್ಮನಲ್ಲಿ ಮಾಹಾತ್ಮ್ಯಜ್ಞಾನ ಬರಬೇಕಾದರೆ, ಅವನ ಗುಣಗಳನ್ನು ,ಲೀಲೆಗಳನ್ನು ಅರ್ಥೈಸಿಕೊಳ್ಳಬೇಕು. ಈ ರೀತಿಯಾದ ಭಕ್ತಿಯೇ ನಮ್ಮಲ್ಲಿ ಈಶ ದಾಸ ಭಾವವನ್ನು, ಪರಮಾತ್ಮನ ಅಧೀನರೆಂಬ ಜ್ಞಾನವನ್ನು ಅನುಭವ ,ಆಚರಣೆಗಳ ಹಂತಕ್ಕೆ ಕೊಂಡೊಯ್ಯುತ್ತದೆ. ನಾವು ಪರಮಾತ್ಮನ ಅಧೀನರೆಂಬ ಪ್ರಮೇಯಕ್ಕೆ ಅತ್ಯಂತ ಉತ್ತಮವಾದ ದೃಷ್ಟಾಂತವೆಂದರೆ ವ್ಯಕ್ತಿಗಳು ಮಲಗಿದಾಗ ಕಾಣುವ ಸ್ವಪ್ನ. ಸ್ವಪ್ನವು ಅತಿ ವಿಸ್ಮಯಕಾರಿಯಾದ ಪರಮಾತ್ಮನ ಸೃಷ್ಟಿ. ನಾವು ಸ್ವತಂತ್ರರಾಗಿದ್ದರೆ, ನಾವು ಇಚ್ಚೆಪಟ್ಟಂತೆ ಸ್ವಪ್ನವನ್ನು ಕಾಣಬೇಕಿತ್ತು. ಆದರೆ ವಸ್ತುಸ್ಥಿತಿಯು ಹಾಗಿಲ್ಲವೆನ್ನುವುದು ಎಲ್ಲರಿಗೂ ಅನುಭವವೇದ್ಯವೇ ಆಗಿದೆ. ಸ್ವಪ್ನದಂತೆಯೆ ಜಾಗೃತ್ತು ಅವನ ಅಧೀನ. ಮಾನವನ ಈ ಅವಸ್ಥೆಗಳನ್ನು, ಅವುಗಳನ್ನು ನಿಯಂತ್ರಿಸುವ ಪರಮಾತ್ಮನ ರೂಪಗಳನ್ನು ದಾಸರು ಸ್ವಪ್ನಸುಳಾದಿಯಲ್ಲಿ ವಿಮರ್ಶಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ಪದಾರ್ಥಗಳು ಸತ್ಯ ಎನ್ನುವುದು ಆಚಾರ್ಯರ ಸಿದ್ಧಾಂತ. ಸ್ವಪ್ನಕಾಲದಲ್ಲಿ ಕಾಣುವ ಪದಾರ್ಥಗಳನ್ನು ಪರಮಾತ್ಮನು ಮನಸ್ಸೆಂಬ ಗೊಡೆಯ ಮೇಲೆ ಸೃಷ್ಟಿಸುತ್ತಾನೆ. ಈ ಪದಾರ್ಥಗಳನ್ನು ಯಾವಾಗ ಸೃಷ್ಟಿಸುತ್ತಾನೆ ಎಂದು ಪ್ರಶ್ನೆ ಮೂಡುವುದು ಸಹಜ. ಸ್ವಪ್ನಕಾಲಕ್ಕಿಂತ ಮುಂಚೆ ಅಥವಾ ನಂತರ ಎಚ್ಚರಕಾಲದಲ್ಲಿ ಸೃಷ್ಟಿಸುತ್ತಾನೆ ಎಂದು ಹೇಳಲು

ಧಾರ್ಮಿಕಪ್ರಪಂಚದ "ಆಧುನಿಕ ವಿಜ್ಞಾನ"ವಾದಿಗಳು

Image
                              ಹೌದು ಇಂದು  ಧಾರ್ಮಿಕ ಪ್ರಪಂಚದಲ್ಲಿ ಆಧುನಿಕ ವಿಜ್ಞಾನವಾದಿಗಳ ಸಂಖ್ಯೆ ಜಾಸ್ತಿಯಾಗಿದೆ . ಸನಾತನದ ಧರ್ಮದ ಪ್ರತಿಯೊಂದು ಆಚರಣೆಗಳಿಗೆ ಹಾಗು ಸಿದ್ಧಾಂತಗಳಿಗೆ ಆಧುನಿಕ ವಿಜ್ಞಾನದ ಸಮ್ಮತಿಯ ಮುದ್ರೆಯನ್ನು ಒದಗಿಸಲು ಪ್ರಯತ್ನಿಸುವವರ ಮತ್ತು ಅದನ್ನು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.   ಇದರ ಪರಿಣಾಮವಾಗಿ   ದೀಪಾವಳಿಯಲ್ಲಿ ಹಚ್ಚುವ ದೀಪದಿಂದ ಪ್ರಾರಂಭಿಸಿ ಸಂಕ್ರಾಂತಿಯಲ್ಲಿ ತಿನ್ನುವ ಎಳ್ಳು ಬೆಲ್ಲದವರೆಗಿನ ಎಲ್ಲಾ ಸಂಪ್ರದಾಯಗಳಿಗೂ "ವೈಜ್ಞಾನಿಕ" ಸ್ಪರ್ಶವನ್ನು ನೀಡಲು ಅನೇಕರು ಪ್ರಯತ್ನಿಸುತ್ತಾರೆ . ಈ ಪ್ರಯತ್ನದಲ್ಲಿ ವಿಜ್ಞಾನದ ಹೆಸರಿನಲ್ಲಿ ಅನೇಕ ಬಾಲಿಶ ಕಾರಣಗಳನ್ನು ನೀಡುತ್ತಾ , ವಿಜ್ಞಾನಕ್ಕೂ ನ್ಯಾಯ ಒದಗಿಸದೆ ,ಶಾಸ್ತ್ರ ಸಂಪ್ರದಾಯಗಳಿಗೂ ಅನ್ಯಾಯ ಮಾಡುತ್ತಾ ಅಪಹಾಸ್ಯಗೀಡಾಗುತ್ತಿದ್ದಾರೆ . ಈ ಮನಸ್ಥಿತಿಗೆ ಕಾರಣವನ್ನು ಯೋಚಿಸಬೇಕು . ೧೮ನೆಯ ಶತಮಾನದ ನಂತರ ಆಧುನಿಕ ವಿಜ್ಞಾನ ಕಂಡ ಬೆಳವಣಿಗೆ ಊಹೆಗೆ ನಿಲುಕದ್ದು . ವಿಜ್ಞಾನಿಗಳು ನಿಸರ್ಗದ ಅನೇಕ ಗುಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಾ ಅನೇಕ ಸಿದ್ಧಾಂತಗಳನ್ನು ಮಂಡಿಸಿದರು . ಅವುಗಳನ್ನು ಪ್ರಯೋಗಕ್ಕೊಳಪಡಿಸಿ ಖಚಿತಪಡಿಸಿಕೊಂಡರು . ಇಂತಹ ಸಿದ್ಧಾಂತಗಳನ್ನು ಬಳಸಿಕೊಂಡು ತಂತ್ರಜ್ಞಾನವು ಅಗಾಧವಾಗಿ ಬೆಳೆಯಿತು . ಐವತ್ತು ವರ್ಷಗಳ ಹಿಂದೆಯೆ ಚಂದ್ರನನ್ನು ತಲುಪಿದ್ದೂ ಆಯಿತು . ಇಂದು ನಾವು ಜಗತ್ತಿನ ಯಾವ ಮೂಲೆಯಲ್ಲಿ ಕುಳಿತುಕೊಂಡರು ಜಗ

ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ

Image
                            ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ                                                                                                 ಭಾರತದಲ್ಲಿ ಸನಾತನ ಧರ್ಮದ ಪುನರುತ್ಥಾನದ ವಿಷಯದಲ್ಲಿ ಮಾಧ್ವ ಯತಿಗಳ ಕೊಡುಗೆ ಎನೂ ಇಲ್ಲ ಎನ್ನುವ ಆಕ್ಷೇಪವನ್ನು ನಾವು ಆಗ್ಗಾಗ್ಗೆ ಕೇಳುತ್ತೆವೆ . ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದನ್ನು ನಾವು ಓದಿದ್ದೇವೆ . ಆದರೆ ಅದರಂತೆಯೇ  ವ್ಯಾಸರಾಜರ ಜೀವನವನ್ನು ಐತಿಹಾಸಿಕ ದೃಷ್ಟಿಯಿಂದ ಇನ್ನೂ ಹೆಚ್ಚು ಅಧ್ಯಯನ ಮಾಡಿದರೆ ಇವರ ಕೊಡುಗೆಯೂ ಈ ವಿಷಯದಲ್ಲಿ ಅನುಪಮವೇ ಎನ್ನುವ ಸತ್ಯ ಗೋಚರಿಸುತ್ತದೆ.  ವ್ಯಾಸರಾಜರು  ಸಾಳುವ ನರಸಿಂಹದೇವರಾಯ , ತಿಮ್ಮಭೂಪಾಲ , ತುಳುವ ನರಸ ನಾಯಕ , ವೀರ ನರಸಿಂಹರಾಯ , ಕೃಷ್ಣದೇವರಾಯ , ಅಚ್ಯುತ ದೇವರಾಯರೆಂಬ ವಿಜಯನಗರರಾಜರುಗಳಿಗೆ ಅರ್ಧಶತಮಾನಕ್ಕೂ ಹೆಚ್ಚು ಕಾಲ ಮಾರ್ಗದರ್ಶನ ಮಾಡಿದ ರಾಜಗುರುಗಳಾಗಿದ್ದರು . ಪುರಂದರದಾಸರು , ಕನಕದಾಸರಿಗೆ ಆಧ್ಯಾತ್ಮ ಗುರುಗಳಾಗಿ ತಮ್ಮ ರಾಜ್ಯದಲ್ಲೆಲ್ಲಾ ಭಕ್ತಿ ಮಾರ್ಗವೂ ಪ್ರಬಲವಾಗಿ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದರು. ರಾಜರೆಲ್ಲರೂ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇದ್ದರೂ ಯಾವುದೆ ವೈಯಕ್ತಿಕ ಲಾಭವನ್ನು ಮಾಡಿಕೊಳ್ಳದೆ, ಕೃಷ್ಣನ ಭಕ್ತಿಯಲ್ಲಿ ಲೀನರಾಗಿ ವೈರಾಗ್ಯದ ಪರಾಕಾಷ್ಠತೆಯನ್ನು ಪ್