ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ !

ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ ! ಭಾರತದ ಇತಿಹಾಸ ,ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಶ್ರೇಷ್ಠ ಪಂಡಿತರು ಅನೆಕರಿದ್ದಾರೆ. ಹಾಗೆಯೆ ವಿದ್ವಾಂಸ ಎಂಬ ಹಣೆಪಟ್ಟಿಯನ್ನು ಹೊತ್ತ್ತು ಅನೇಕ ವರ್ಷ ಮೆರೆದ ಮೇಲೆ , ನಿಜ ಬಣ್ಣ ಬಯಲಾದ ಕಥೆಗಳಿಗೂ ಕಡಿಮೆಯೆನಿಲ್ಲ. ಹೆಚ್.ಹೆಚ್.ವಿಲ್ಸನ್ ತನ್ನ ಕಾಲದ ಶ್ರೇಷ್ಠ ಪಂಡಿತನೆಂದು ಪ್ರಸಿದ್ಧನಾದವನು. ಎಸಿಯಾಟಿಕ್ ಸೋಸಾಯಿಟಿಯ ನಿರ್ದೇಶಕನಾಗಿ , ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ,ಅನೇಕ ಉನ್ನತ ಪದವಿಯನ್ನು ಗಳಿಸಿದವನು. ಜೇಮ್ಸ ಮಿಲ್ ನ ಕುಪ್ರಸಿದ್ಧವಾದ "ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ" ದ ಸಂಶೋಧಿತ ಪುನರಾವೃತ್ತಿಗಳನ್ನು ತನ್ನ ಮುನ್ನುಡಿಯೊಂದಿಗೆ ಪುನರ್ಮುದ್ರಿಸಿದ. ಮೇಘದೂತ, ವಿಷ್ಣುಪುರಾಣವನ್ನು ಅನುವಾದಿಸಿದ. ಮೊತ್ತ ಮೊದಲ ಬಾರಿಗೆ ಋಗ್ವೇದದ ಕೆಲವು ಭಾಗವನ್ನು ಆಂಗ್ಲಭಾಷೆಗೆ ಅನುವಾದಿಸಿದ. ಇವನು ನಿಜವಾಗಿ ಅಷ್ಟು ಶ್ರೇಷ್ಠ ಪಂಡಿತನೆ. ಸಂಸ್ಕೃತದ ಯಾವುದೆ ವಿಧವಾದ ಅಧ್ಯಯನದ ಹಿನ್ನಲೆಯೆಲ್ಲದೆ ಭಾರತಕ್ಕೆ ಬಂದಳಿದ ಇವನು ಪ್ರಪಂಚದ ಮೊದಲ ಸಂಸ್ಕೃತ-ಇಂಗ್ಲೀಷ್ ನಿಘಂಟುವನ್ನು ಜಗತ್ತಿಗೆ ಕೊಟ್ಟದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದರೆ ಅನಾವರಣಗೊಳ್ಳುವುದು ,ಅದೃಷ್ಟ, ವಂಚನೆ, ಉತ್ಸಾಹ ಹಾಗು ಕೃತಿಚೌರ್ಯದ ಇತಿಹಾಸ. ಅದುವೆ ಹೆಚ್,ಹೆಚ್, ವಿಲ್ಸನ್ ನ ಜೀವನೇತಿಹಾಸ. *ಹೆ...