Posts

Showing posts from 2023

ಏಕಭುಕ್ತ ಮತ್ತು intermittent fasting

Image
  ಏಕಭುಕ್ತ ಮತ್ತು intermittent fasting ಕೆಲವು ದಿನಗಳ ಹಿಂದೆ ಮೋಬೈಲ್ ನಲ್ಲಿ ಹಿಂದಿ ಚಿತ್ರರಂಗದ ನಟ ಮನೋಜ್ ವಾಜಪೇಯಿಯವರ ಸಂದರ್ಶನವೊಂದು ಕಣ್ಣಿಗೆ ಬಿತ್ತು . ಅದರಲ್ಲಿ ತಮ್ಮ ದೈಹಿಕ ಕ್ಷಮತೆಯ ರಹಸ್ಯವೇನೆಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಗಮನ ಸೆಳೆಯಿತು.. ಅವರು ಹೇಳಿದ್ದು ‌'' ನನ್ನ ಅಜ್ಜ ಬಹಳ ಸ್ವಸ್ಥವಾಗಿ ಬಾಳಿ ಬದುಕಿದ್ದರು . ನಾನೂ ಅವರ ಜೀವನ ಶೈಲಿಯನ್ನೆ ಅನುಸರಿಸಬೇಕೆಂಬ ನಿರ್ಣಯ ತೆಗೆದುಕೊಂಡು ಕಳೆದ ೧೫ ವರ್ಷಗಳಿಂದ ರಾತ್ರಿ ಊಟ ಮಾಡುವುದನ್ನು ನಿಲ್ಲಿಸಿದ್ದೆನೆ . ದಿನಕ್ಕೆ ಒಂದು ಹೋತ್ತು ಮಾತ್ರ ಊಟ ಮಾಡುತ್ತೇನೆ . ಇದು ನನ್ನ ಆರೋಗ್ಯದಲ್ಲಿ ಬಹಳ ಸುಧಾರಣೆಯನ್ನು ತಂದಿದೆ , ಬ್ಲಡ್ ಪ್ರೆಶರ್, ಶುಗರ್ ಎಲ್ಲವೂ ನಿಯಂತ್ರಣದಲ್ಲಿದೆ . ನಾನು ಯಾವಾಗಲೂ ಚುರುಕಾಗಿರುತ್ತೆನೆ , ಉತ್ಸಾಹಿಯಾಗಿರುತ್ತೆನೆ . ನಾನು ಈ ಜೀವನ ಕ್ರಮವನ್ನು ಪ್ರಾರಂಭಿಸಿದಾಗ ಎಲ್ಲರೂ ಆಶ್ಚರ್ಯ ಪಡುತಿದ್ದರು . ಆದರೆ ಈಗ intermittent fasting ಎನ್ನುವ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ ''. ಅವರ ಈ ಮಾತುಗಳನ್ನು ಕೇಳಿ ಬಹಳ ಆಶ್ವರ್ಯವಾಯಿತು . ಅರೆ! ನಮ್ಮ ಪೂರ್ವಜರು ಹಲವರು ರಾತ್ರಿ ಊಟ ಮಾಡದೆ ಕೇವಲ ಹಾಲನ್ನೋ ಹಣ್ಣನ್ನೋ ತಿಂದು ಮಲಗುತ್ತಿದ್ದರಲ್ಲವೆ ಎಂದು ಯೋಚಿಸಿ ಅದನ್ನೆ ಹೋಲುವ intermittent fasting ಕ್ರಮದ ಬಗ್ಗೆ ಕುತೂಹಲದಿಂದ ತಿಳಿಯಲು ಪ್ರಯತ್ನಿಸಿದೆ .                 2012 ರಲ್ಲಿ ಬಿಡುಗಡೆಯಾದ B.B.C

ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ

Image
            ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನೆಯ ಸಫಲತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು . ವಿಜ್ಞಾನಿಗಳ ಒಂದು ತಂಡ ಎಂದಿನಂತೆ ಯೋಜನೆಯ ಸಾಫಲ್ಯಕ್ಕಾಗಿ  ತಿಮ್ಮಪ್ಪನನ್ನು ಪ್ರಾರ್ಥಿಸಲು ತಿರುಮಲದಲ್ಲಿದ್ದರು. ಉಪಕರಣದ ಒಂದು ಭಾಗವನ್ನು ತಿಮ್ಮಪ್ಪನ ಮುಂದಿಟ್ಟು ಯೋಜನೆ ಯಶಸ್ಸಿಗಾಗಿ ಅನುಗ್ರಹವನ್ನು ಪ್ರಾರ್ಥಿಸಿದರು . ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ , ಮಂಗಳಯಾನಕ್ಕೂ ಚಂದ್ರಯಾನಕ್ಕೂ ವ್ಯತ್ಯಾಸವೂ ತಿಳಿಯದ ಸ್ವಯಂಘೋಷಿತ ಜೀವಪರ,ಪ್ರಗತಿಪರ, ಸಮಾಜದ ಸಾಕ್ಷಿಪ್ರಜ್ಞೆಯ ಬುದ್ದಿಜೀವಿಗಳು ಇದೊಂದು ಪ್ರತಿಗಾಮಿ ಚಿಂತನೆಯೆಂದೂ, ಭಾರತೀಯ ವಿಜ್ಞಾನಿಗಳಿಗೆ ತಮ್ಮ ಕೆಲಸದ ಮೇಲೆಯೆ ವಿಶ್ವಾಸವಿಲ್ಲವೆಂದೂ, ಮೌಡ್ಯವೆಂದೂ ಬೊಬ್ಬಿಡುತ್ತಾ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರು ಈ ರೀತಿಯ ಮೌಡ್ಯಾಚಾರಣೆಯನ್ನು ನಿಲ್ಲಿಸುವಂತೆ ಕ್ರಮವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವನ್ನು ಪ್ರಕಟಿಸಿಬಿಟ್ಟರು . ಒಂದೊಮ್ಮೆ ಇಸ್ರೋ ವಿಜ್ಞಾನಿಗಳು ಮಸಿದಿಗೊ, ಚರ್ಚಿಗೂ ಭೇಟಿಯಿತ್ತಿದ್ದರೆ ಇದೆ ಪ್ರಗತಿಪರ, ಜೀವಪರ ಚಿಂತಕರು ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೆರಿಸುವುದರಲ್ಲಿ ಸಂಶಯವಿರಲಿಲ್ಲ. ಹಿಂದುವಿರೋಧಿಗಳಾದ ಈ ಬುದ್ದಿಜೀವಿಗಳು ಪ್ರಗತಿಪರರೆಂಬ ಮುಖವಾಡ ಧರಿಸಿ ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿರುವುದು ಇದೆ ಮೊದಲಲ್ಲ. ಜ

ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ

Image
ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ . ರಾಮಾಯಣ ಸಾರ್ವಕಾಲಿಕ. ಸದಾ ಪ್ರಸ್ತುತ. ಎಷ್ಟು ತಿಳಿದರೂ ತಿರುಚಿದರೂ ವಾಲ್ಮೀಕಿ ರಾಮಾಯಣ ಜನಜನಿತವಾಗಿಯೇ ಇರುತ್ತದೆ.ಇದು ಬ್ರಹ್ಮದೇವರ ಅನುಗ್ರಹ." ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ| ತಾವತ್ ರಾಮಾಯಣಕಥಾ ಲೋಕೇಷು ಪಚರಿಷ್ಯತಿ" |. ಎಲ್ಲಿಯವರೆಗೆ ಗಿಡಮರಗಳು,ನದಿಪರ್ವತಗಳು ಇರುವವೋ ಅಲ್ಲಿಯವರೆಗೆ ರಾಮನ ಕಥೆ ಇದ್ದೇ ಇರುತ್ತದೆ. ರಾಮಾಯಣದ ಪ್ರತಿಯೊಂದು ಪಾತ್ರಗಳು ವಿಭಿನ್ನ ಆಯಾಮದಲ್ಲಿ ವಿಭಿನ್ನ ಗುಣಗಳನ್ನು ಪ್ರತಿನಿಧಿಸುತ್ತವೆ. ರಾಮಾಯಣದ ಕೇಂದ್ರಬಿಂದು ರಾಮನಾದರೆ, ವೃತ್ತ ಲಕ್ಷ್ಮಣ. ಶ್ರೀನಾರಾಯಣಪಂಡಿತಾಚಾರ್ಯರು ಸಂಗ್ರಹ ರಾಮಾಯಣ ಗ್ರಂಥದಲ್ಲಿ ಲಕ್ಷ್ಮಣನ ಅವತಾರದ ಉದ್ದೇಶವನ್ನು ಸುಂದರವಾಗಿ ನಿರೂಪಿಸಿದ್ದಾರೆ. ಅನಂತೋನಂತ ಪರ್ಯಂಕಃ ಪರಿಚರ್ಯಾರ್ಥಮೀಶಿತುಃ  ರಾಮನ ಸೇವೆಗಾಗಿಯೇ ಲಕ್ಷ್ಮಣನ ಜನ್ಮ. ಅವನಿಗೆ ರಾಮನ ಹೊರತು ಬೇರೆಲ್ಲರೂ ಅಪ್ರಧಾನರು, ಹೆತ್ತ ತಾಯಿ, ಹೆಂಡತಿಯೂ ಸಹ.  ಅಂತಹ ಅಸದೃಶವಾದ ಭಾತೃಭಕ್ತಿಯನ್ನು ಲೋಕಕ್ಕೆ ತೋರಿಸಿದವನು ಲಕ್ಷ್ಮಣ. ರಾಮನಿಗೂ ಲಕ್ಷಣನೆಂದರೇ ಬಹಳ ಪ್ರೀತಿ. ಬಾಲ್ಯದಲ್ಲಿ ತನ್ನ ಪಕ್ಕದಲ್ಲಿ ಲಕ್ಷ್ಮಣನಿಲ್ಲದಿದ್ದರೆ ರಾಮನು ನಿದ್ರಿಸುತ್ತಿರಲಿಲ್ಲ, ಲಕ್ಷ್ಮಣ ಉಣ್ಣದೇ ತಾನು ಉಣ್ಣುತ್ತಿರಲಿಲ್ಲ. ಮೃಷ್ಟಮನ್ನಮುಪಾನೀತಂ ಅಶ್ನಾತಿ ನ ಹಿ ತಂ ವಿನಾ ' .ಲಕ್ಷ್ಮಣನಿಗೆ ರಾಮನಲ್ಲಿ ಅಪರಿಮಿತವಾದ ಭಕ್ತಿ ಹಾಗೆಯೇ  ತಮ್ಮನಲ್ಲಿ ರಾಮನಿಗೂ ಅಸದೃಶವಾದ