ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಧೀರ.

ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಮಹಾರಾಜ ಧೀರ. ಮೈಸೂರು ಅರಮನೆಯನಲ್ಲಿ ನಡೆಯುವ ಖಾಸಗಿ ದರ್ಬಾರ್ ನ್ನು ಆಡಿಕೊಳ್ಳುವ ವರ್ಗವೊಂದು ರಾಜರ ಕೊಡುಗೆಗಳನ್ನು ಅಲ್ಲೆಗೆಳೆಯುವ ಪ್ರಯತ್ನ ಮಾಡುತ್ತಲೆ ಇರುತ್ತದೆ. ಇವರು ರಾಜಪ್ರಭುತ್ವವನ್ನು ಟೀಕಿಸಿ ಮಾತನಾಡುವುದುಂಟು . ರಾಜನ ಮಗನೆ ರಾಜನಾಗಬೇಕು, ಮತ್ಯಾರಿಗೂ ಅವಕಾಶಕಲ್ಪಿಸದ ವ್ಯವಸ್ಥೆ. ರಾಜರು ಸ್ತ್ರೀಲೋಲುಪರು, ಐಷಾರಾಮಿಗಳು, ವಿಲಾಸಿಜೀವಿಗಳಾಗಿದ್ದರು , ಪ್ರಜೆಗಳ ಕಷ್ಟಗಳಿಗೆ ಯಾವುದೆ ಸ್ಪಂದನೆಯಿಲ್ಲದ ವ್ಯವಸ್ಥೆ. ಇವೆ ಮೊದಲಾದ ಟೀಕೆಗಳನ್ನು ರಾಜಪ್ರಭುತ್ವದ ವಿಷಯದಲ್ಲಿ ಕೇಳುತ್ತೆವೆ. ಇದು ವಾಸ್ತವಿಕವೆ ? ರಾಜಪ್ರಭುತ್ವವು ಈಗ ಪ್ರಸಕ್ತವಲ್ಲದಿರಬಹುದು, ಆದರೆ ಆ ರಾಜಪ್ರಭುತ್ವವಿದ್ದ ಕಾಲದಲ್ಲಿ ಆಡಳಿತ ವ್ಯವಸ್ಥೆಯೆಲ್ಲವೂ ಇವರೆಲ್ಲ ಆರೋಪಿಸುವ ದೋಷಗಳಿಂದಲೆ ಕೂಡಿತ್ತೆ . ರಾಜರಲ್ಲಿ ನೈತಿಕತೆಯೆ ಇರಲಿಲ್ಲವೆ ? ರಾಜನಿಗೆ ಸಾಮಾನ್ಯ ಪ್ರಜೆಯ ಕುರಿತು ಕಾಳಜಿಯೆ ಇರಲಿಲ್ಲವೆ ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ . ಇದಕ್ಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲ್ಲು ಕಾರ್ತವೀರ್ಯಾರ್ಜುನನ ಚರಿತ್ರೆಯನ್ನು ತಿಳಿಯಬೇಕು . ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ ಧರ್ಮಶೀಲ , ಪರಾಕ್ರಮೀ ಕ್ಷತ್ರಿಯ . ತಂದೆಯು ಸ್ವರ್ಗಸ್ಥನಾದ ಮೇಲೆ ಮಂತ್ರಿಗಳು ಹಾಗೂ ಪುರೋಹಿತರು ಪಟ್ಟಾಭಿಷೇಕಕ್ಕೆ ತಯಾರಾಗಿ ರಾಜನಾಗುವಂತೆ ಪ್ರಾರ್ಥಿಸಿದರು . ಅವರಷ್ಟೆ ಅಲ್ಲದೆ ಪೌರಜನರೆಲ್ಲರೂ ಅವ...