ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1
ಇಂಡೋಲೊಜಿ ವಿಮರ್ಶೆ 12 – ಮೆಕಾಲೆ – ಭಾರತೀಯ ಶಿಕ್ಷಣವನ್ನು ಬದಲಿಸಿದ ಖಳನಾಯಕನೆ? -1 ಭಾರತದ ಈಗಿನ ಶಿಕ್ಷಣ ವ್ಯವಸ್ಥೆಯನ್ನು, ಅಥವಾ ಭಾರತೀಯ ಸಂಸ್ಕೃತಿ ವಿರೋಧಿ ಹಾಗೂ ಗುಲಾಮಗಿರಿಯ ಮಾನಸಿಕತೆಯನ್ನು ಗಮನಿಸಿದಾಗಲೆಲ್ಲ ಇದೆಲ್ಲವೂ ಮೆಕಾಲೆ ಶಿಕ್ಷಣದ ಪ್ರಭಾವ ಎಂದು ವಿಮರ್ಶೆ ಮಾಡುವುದನ್ನು ಅನೇಕರು ಕೇಳಿಯೆ ಇರುತ್ತೇವೆ. ಹಾಗಾದರೆ ಈ ಮೆಕಾಲೆ ಎನ್ನುವ ವ್ಯಕ್ತಿ ಯಾರು, ಅವನು ಹೇಗೆ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದ, ಅವನ ಮುಂಚೆ ಭಾರತದಲ್ಲಿ ಸಶಕ್ತವಾದ ಸಾರ್ವತ್ರಿಕವಾದ ಶಿಕ್ಷಣ ವ್ಯವಸ್ಥೆ ಇತ್ತೆ ಎನ್ನುವ ಸಂದೇಹಗಳು ಮೂಡುವುದು ಸಹಜ. ಈ ವಿಷಯದಲ್ಲಿ ಕೆಲವರು ಹೀಗೆ ವಾದಿಸುತ್ತಾರೆ "ಭಾರತ ಇಂದು ವಿಜ್ಞಾನ ತಂತ್ರಜ್ಞಾನ ಮುಂತಾದ ವಿಷಯದಲ್ಲಿ ಸಾಧನೆ ಮಾಡಿದ್ದರೆ, ಅದು ಮೆಕಾಲೆ ತಂದ ಇಂಗ್ಲೀಷ್ ಶಿಕ್ಷಣದ ಫಲವೇ. ಬ್ರಿಟಿಷರ ಶಿಕ್ಷಣ ಪ್ರಭಾವದಿಂದ ಇಂದು ಎಲ್ಲಾ ಜಾತಿಯವರು ಶಿಕ್ಷಣವನ್ನು ಪಡೆಯುವಂತಾಗಿದೆ. ಹಿಂದಿನ ಗುರುಕುಲ ಪದ್ಧತಿಯೇ ಇದ್ದಿದ್ದರೆ ಕೇವಲ ಬ್ರಾಹ್ಮಣರು ಮಾತ್ರ ಶಿಕ್ಷಿತರಾಗಿ ಉಳಿದವರನ್ನು ಜ್ಞಾನದಿಂದ ದೂರವಿಟ್ಟು ಶೋಷಿಸುತ್ತಿದ್ದರು". ಇದಕ್ಕೆ ಪೂರಕವಾಗಿ ಕುವೆಂಪುವರದ್ದು ಎನ್ನಲಾಗುವ "ಇಂಗ್ಲಿಷಿನವರು ಇಂಡಿಯಾಕ್ಕೆ ಬರದಿದ್ದರೆ ನಾನು ಕುಪ್ಪಳಿಯಲ್ಲಿ ಸಗಣಿ ತಟ್ಟಿಕೊಂಡು ಬ್ರಾಹ್ಮಣರ ಗದ್ದೆ ಉತ್ತುಕೊಂಡಿರುತ್ತಿದ್ದೆ." ಎಂಬುವ ಹೆಳಿಕೆಯು ಆಗಾಗ ಹರಿದಾಡುತ್ತಿರುತ್ತದೆ. ಈ ವಾದದ ಸತ್ಯಾಸತ್ಯತೆಯನ್ನು ...