Posts

Showing posts from September, 2025

ಕಾರ್ತವೀರ್ಯಾರ್ಜುನ - ಪ್ರಜಾಪ್ರಭುತ್ವಕ್ಕೆ ರಾಜಪ್ರಭುತ್ವದ ಸಂದೇಶ

Image
ಕಾರ್ತವೀರ್ಯಾರ್ಜುನ - ಪ್ರಜಾಪ್ರಭುತ್ವಕ್ಕೆ ರಾಜಪ್ರಭುತ್ವದ ಸಂದೇಶ ಸಾಮಾನ್ಯವಾಗಿ ಪ್ರಜಾಪ್ರಭುತ್ವವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೆ ಇರುವ ವ್ಯವಸ್ಥೆ. ಪ್ರಜೆಗಳೆ ಇಲ್ಲಿ ಪ್ರಭುಗಳು ಎನ್ನುವ ನಂಬಿಕೆ. ಹಾಗೆಯೆ ಪ್ರಜಾಪ್ರಭುತ್ವವಾದಿಗಳು ರಾಜಪ್ರಭುತ್ವವನ್ನು ಟೀಕಿಸಿ ಮಾತನಾಡುವುದುಂಟು . ರಾಜನ ಮಗನೆ ರಾಜನಾಗಬೇಕು, ಮತ್ಯಾರಿಗೂ ಅವಕಾಶಕಲ್ಪಿಸದ ವ್ಯವಸ್ಥೆ. ರಾಜರು ಸ್ತ್ರೀಲೋಲುಪರು, ಐಷಾರಾಮಿಗಳು, ವಿಲಾಸಿಜೀವಿಗಳಾಗಿದ್ದರು , ಪ್ರಜೆಗಳ ಕಷ್ಟಗಳಿಗೆ ಯಾವುದೆ ಸ್ಪಂದನೆಯಿಲ್ಲದ ವ್ಯವಸ್ಥೆ. ಇವೆ ಮೊದಲಾದ ಟೀಕೆಗಳನ್ನು ರಾಜಪ್ರಭುತ್ವದ ವಿಷಯದಲ್ಲಿ ಕೇಳುತ್ತೆವೆ. ಇದು ವಾಸ್ತವಿಕವೆ ? ರಾಜಪ್ರಭುತ್ವವು ಈಗ ಪ್ರಸಕ್ತವಲ್ಲದಿರಬಹುದು, ಆದರೆ ಆ ರಾಜಪ್ರಭುತ್ವವಿದ್ದ ಕಾಲದಲ್ಲಿ ಆಡಳಿತ ವ್ಯವಸ್ಥೆಯೆಲ್ಲವೂ ಇವರೆಲ್ಲ ಆರೋಪಿಸುವ ದೋಷಗಳಿಂದಲೆ ಕೂಡಿತ್ತೆ . ರಾಜರಲ್ಲಿ ನೈತಿಕತೆಯೆ ಇರಲಿಲ್ಲವೆ ? ರಾಜನಿಗೆ ಸಾಮನ್ಯ ಪ್ರಜೆಯ ಕುರಿತು ಕಾಳಜಿಯೆ ಇರಲಿಲ್ಲವೆ ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ . ಇದಕ್ಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲ್ಲು ಕಾರ್ತವೀರ್ಯಾರ್ಜುನನ ಚರಿತ್ರೆಯನ್ನು ಅಭ್ಯಸಿಸಬೇಕು . ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ ಧರ್ಮಶೀಲ , ಪರಾಕ್ರಮೀ ಕ್ಷತ್ರಿಯ . ತಂದೆಯು ಸ್ವರ್ಗಸ್ಥನಾದ ಮೇಲೆ ಮಂತ್ರಿಗಳು ಹಾಗೂ ಪುರೋಹಿತರು ಪಟ್ಟಾಭ್ಹಿಷೇಕಕ್ಕೆ ತಯಾರಾಗಿ ರಾಜನಾಗುವಂತೆ ಪ್ರಾರ್ಥಿಸಿದರು . ಅವರಷ್ಟೆ ಅಲ್ಲದೆ ಪೌರ...