ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ

ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- "ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ" ಭಾರತವನ್ನು ಅಧ್ಯಯನ ಮಾಡಿದ ಯುರೂಪಿನ ವಿದ್ವಾಂಸರು ಎರಡು ಬಗೆಯವರು . ಭಾರತ ಹಾಗೂ ಭಾರತೀಯವಾದದ್ದರಲ್ಲಿ ಯಾವುದೆ ಮಹತ್ವವಾದ ಅಂಶಗಳಿಲ್ಲ ಎಂದು ವಾದಿಸಿ ಹೀಳಾಯಿಸಿ ತುಚ್ಛವಾಗಿ ಕಾಣುವವರು , ಹಾಗೆಯೆ ಭಾರತೀಯವಾದದ್ದರಲ್ಲಿ ಅನೇಕ ಉತ್ತಮ ಅಂಶಗಳಿವೆ ಎಂದು ವಾದಿಸಿ ತಮ್ಮ ಇತಿಮಿತಿಯಲ್ಲಿ ಅದನ್ನು ಜಗತ್ತಿಗೆ ಪರಿಚಿಯಿಸಿದವರು . ಮೊದಲನೆಯ ಪ್ರಕಾರದ ವಿದ್ವಾಂಸರು ಭಾರತವನ್ನು ಹೀಗೆಳೆಯುದಷ್ಟೆ ಅಲ್ಲದೆ , ಯುರೋಪಿನ ವಸಾಹತುಷಾಹಿಗಳ ಆಳ್ವಿಕೆಯಿಂದಲೆ ಭಾರತವು ನಾಗರೀಕತೆಯನ್ನು ಹೊಂದಲು ಸಾಧ್ಯವೆಂದು ಸಮರ್ಥಿಸುತಿದ್ದರು . ಅವರಲ್ಲಿ ಭಾರತಕ್ಕೆ ಒಮ್ಮೆಯೂ ಭೇಟಿಕೊಡದೆ , ಭಾರತದ ಯಾವುದೆ ಭಾಷೆಗಳನ್ನು ತಿಳಿಯದೆ ಮೂರು ಸಂಪುಟಗಳಲ್ಲಿ history of British India ಎಂಬ ಪುಸ್ತಕಗಳ ಮೂಲಕ ಭಾರತದ ಇತಿಹಾಸವನ್ನು ಬರೆದ ಜೇಮ್ಸ್ ಮಿಲ್ ಕೂಡ ಒಬ್ಬ. ಜೇಮ್ಸ್ ಮಿಲ್ 1773- 1836 ಜೇಮ್ಸ್ ಮಿಲ್ ಬಹಳ ಬುದ್ಧಿವಂತನಾದ ಹುಡುಗನಾಗಿದ್ದ. ತನ್ನ ಶಾಲಾ ದಿನಗಳ ಅಧ್ಯಯನದ ನಂತರ ಎಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಲಾ ವಿಷಯದಲ್ಲಿ ಪದವಿಯನ್ನು ಸಂಪಾದಿಸಿದ . ನಂತರ ಡಿವಿನಿಟಿ ಸ್ಟಡಿಸ್( ಕ್ರಿಶ್ಚಿಯಾನಿಟಿಯ ಅಧ್ಯಯನ) ಎಂಬ ವಿಭಾಗದಲ್ಲಿ ಅಧ್ಯಯನ ಮಾಡಿದ. ಅದೇ ಆಧಾರದಲ್ಲಿ ಸ್ಕಾಟ್ಲ್ಯಾಂಡಿನ ಚರ್ಚೊಂದರಲ್ಲಿ ಬೋಧಕನಾಗಿ ಕೆಲಸ ಗಿಟ್ಟಿಸಿಕೊಂಡ. ಆದರೆ ಅವನು ನಿಯ...