ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್



ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್

ಬ್ರಿಟಿಷ್ ಸರ್ಕಾರವು ಕಾನೂನಿನಲ್ಲಿ ಬದಾಲವಣೆಯನ್ನು ತಂದ ಮೇಲೆ ಅನೇಕ ಮಿಶನರಿಗಳು ಮುಕ್ತವಾಗಿ ಭಾರತವನ್ನು ಪ್ರವೇಶಿಸಲಾರಂಬಿಸಿದವು . ಅವರಲ್ಲಿ ಪ್ರಮುಖನಾದ ವಿಲಿಯಮ್ ಕ್ಯಾರಿಯ  ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದೆವು . ಈ ಸಂಚಿಕೆಯಲ್ಲಿ ಇನ್ನೂ ಕೆಲವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ . 

ಅಲೆಗ್ಸಾಂಡರ್ ಡಫ್ ( Alexander Duff -1806-1878) ಇವನು ಭಾರತದ ಉನ್ನತಶಿಕ್ಷಣದ ವ್ಯವಸ್ಥೆಯಲ್ಲಿ (Higher education) ನಲ್ಲಿ ಇಂಗ್ಲೀಷ ಭಾಷೆಯನ್ನು ಹಾಗೂ  ಪಾಶ್ಚಾತ್ಯ ವಿಜ್ಞಾನವನ್ನು ಹಾಗೂ ಅದರ ಮೂಲಕ ಬೈಬಲ್ ಅಧ್ಯಯನವನ್ನು ಸೇರಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಿದನು .  ಚರ್ಚ ಆಫ್ ಸ್ಕೊಟ್ಲ್ಯಾಂಡ್ (Church of Scotland) ತನ್ನ ಮೊದಲ ಮಿಶನರಿ ಸಂಸ್ಥೆಯನ್ನು ಸ್ಥಾಪಿಸುವ ಚಿಂತನೆಯಲ್ಲಿತ್ತು . ಆಗ ತಾನೆ ಡಫ್ ತನ್ನ ವ್ಯಾಸಾಂಗವನ್ನು ಮುಗಿಸಿದ್ದನು .ಇವನನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿರುವ ಜೆನೆರಲ್ ಅಸೆಂಬ್ಲಿ ಇಂಸ್ಟಿಟ್ಯುಷನ್ (General assembly institution)  ಎಂಬ ಸಂಸ್ಥೆಯ ಸುಪರಿಡೆಂಟೆಂಟ್ ಹುದ್ದೆಗೆ ನಿಯೋಜಿಸಿತು . ಎರಡು ಬಾರಿ ಅವನು ಪ್ರಯಾಣಿಸುತಿದ್ದ ಹಡಗು ಸಮುದ್ರದಲ್ಲಾಗುವ ಬಿರುಗಾಳಿ ಮುಂತಾದ ತೊಂದರೆಗಳಿಂದ ನಾಶವಾಯಿತು . ಆದರೂ 1830 ರಲ್ಲಿ ಮೂರನೆಯ ಪ್ರಯತ್ನದಲ್ಲಿ ಕೊಲ್ಕತ್ತೆಗೆ ಬಂದು ಸೇರಿದನು . ಅವನು ಸ್ಕೊಟಿಷ್ ಚರ್ಚಸ್ ಕಾಲೆಜನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದನು . ಅವನು ಈ ಸಂಸ್ಥೆಯನ್ನು ಹಿಂದೂ ಧರ್ಮದ ವಿರುದ್ಧ ಸಾರುವ ಅಭಿಯಾನಕ್ಕೆ  ಕೇಂದ್ರ ಸ್ಥಾನವೆಂದು  ಗುರುತಿಸಿದನು . ಇಂಗ್ಲಿಷ್ ಮಾಧ್ಯಮದ ಶಾಲೆಗಳ ಮೂಲಕ ಹಿಂದೂಗಳನ್ನು ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡುವ ಉದ್ದೇಶವನ್ನು ಹೊಂದಿದ್ದನು. ಅವನು ಶಾಲಾ ಕಾಲೆಜುಗಳಲ್ಲಿ  ಪಾಶ್ಚಾತ್ಯ ವಿಜ್ಞಾನ ಹಾಗೂ ಇಂಗ್ಲಿಷ್ ಭಾಷೆಯನ್ನು ಸೇರಿಸಿದ್ದರ ಕಾರಣವನ್ನು ಅವನ ಮಾತುಗಳಿಂದಲಲೆ ತಿಳಿಯಬಹುದು - While we rejoice that true literature and science are to be substituted in place of what is demonstrably false, we cannot but lament that no provision has been made for substituting the only true religion-Christianity - in place of the false religion which our literature and science will inevitably demolish… Of all the systems of false religion ever fabricated by the perverse ingenuity of fallen man, Hinduism is surely the most stupendous."  ''ಪ್ರಸಕ್ತ ಪರಿಸ್ಥಿಯಲ್ಲಿ ನಿಜವಾದ ಸಾಹಿತ್ಯ ಹಾಗೂ ವಿಜ್ಞಾನವು ಅಸತ್ಯವಾದ ಅನೇಕ ವಿಷಯಗಳನ್ನು ಹೋಗಲಾಡಿಸುತ್ತದೆ ಎಂದು ನಾವೆಲ್ಲರೂ ಸಂತೋಷ ಪಡುತ್ತೇವೆ . ಪಾಶ್ಚಾತ್ಯ ವಿಜ್ಞಾನ ಹಾಗೂ ಸಾಹಿತ್ಯವು ಅಸತ್ಯವಾದ ಇತರ ಧರ್ಮವನ್ನು ನಾಶಗೊಳಿಸಿದ ನಂತರ ಎಕೈಕ ಸತ್ಯವಾದ ರಿಲೀಜನ್ ಕ್ರಿಶ್ಚಿಯಾನಿಟಿಯನ್ನು ಆ ಜಾಗದಲ್ಲಿ ತರಲು ಯಾವುದೇ ತಯಾರಿಯನ್ನು ನಾವಿನ್ನು ಮಾಡಿಲ್ಲವೆನ್ನುವುದಲ್ಲು ಮನಗಾಣಬೇಕು . ಪಾತಕನಾದ ಮನುಷ್ಯನು ಕೃತಕವಾಗಿ ಸೃಷ್ಟಿಸಿದ ರಿಲಿಜಿಯನ್ ಗಳಲ್ಲಿ  ಹಿಂದೂಯಿಸಮ್ ಎನ್ನುವುದು ಅತ್ಯಂತ ಮೂರ್ಖತನದಿಂದ ಕೂಡಿದ್ದಾಗಿದೆ '' 

 ಪಾಶ್ಚಾತ್ಯ ವಿಜ್ಞಾನ ಹಾಗು ಇಂಗ್ಲಿಷ್ ಭಾಷೆಯನ್ನು ಭಾರತೀಯ ಶಿಕ್ಷಣವ್ಯವಸ್ಥೆಯಲ್ಲಿ ಸೇರಿಸಿ , ಅವುಗಳ ತಾರ್ಕಿಕತೆಯಿಂದ ಹಿಂದೂ ಧರ್ಮವನ್ನು ನಿರುತ್ತರವಾಗಿಸಿ , ಆ ಜಾಗದಲ್ಲಿ ಕ್ರಿಶ್ಚಿಯಾನಿಟಿಯನ್ನು ಸ್ಥಾಪಿಸುವ ಸ್ಪಷ್ಟವಾದ ಉದ್ದೇಶವಿದ್ದದ್ದನ್ನು ನಾವು ಮನಗಾಣಬಹುದು.  ಈ ಕಾರ್ಯದಲ್ಲಿ ಇವನ್ನು ಯಶಸ್ಸನ್ನೂ ಸಂಪಾದಿಸಿದನು . 1835 ರ ನಂತರ ಇಂಗ್ಲೀಷ್ ಭಾಷೆಯು ಸ್ಥಳೀಯ ಆಡಳಿತ ಭಾಷೆಯಾದ ಬಳಿಕ ಇವನ ವಿಚಾರಗಳಿಗೆ ಪ್ರೋತ್ಸಾಹ ಸಿಕ್ಕಿತು ಹಾಗೆಯೆ ರಾಜಾ ರಾಮ್ ಮೋಹನ್ ರಾಯ್ ಇವರು ಹಿಂದೂ ಪಾಲಕರಲ್ಲಿ ಇವನ ಕುರಿತ ಸದ್ಭಾವನೆಗೆ ಬಹಳ ಸಹಾಯವನ್ನು ಮಾಡಿದರು .  1776 ರಲ್ಲಿ ಭಾರತದಲ್ಲಿ ಸುಪ್ರೀಂ ಕೋರ್ಟ ಸ್ಥಾಪನೆಯಾದ ಮೇಲೆ ಅನೇಕ ಶ್ರೀಮಂತ ಮೇಲ್ವರ್ಗದ ಬಂಗಾಳಿ ಹಿಂದೂಗಳು ಆಂಗ್ಲ ಭಾಷೆಯನ್ನು ಕಲಿಯಲು ಆಸಕ್ತಿ ತೋರಿಸಿದರು . 1816 ರಲ್ಲಿ ಆಗಿನ ಸರ್ವೋಚ್ಚ ನ್ಯಾಯಾಲದ ನ್ಯಾಯಾಧೀಶನಾದ ಎಡ್ವರ್ಡ ಹೈಡ್ ಈಸ್ಟ್ ಎಂಬುವವನು ತನ್ನ ಮನೆಯಲ್ಲಿ ಸಭೆಯನ್ನು ಕರೆದನು . ಹಿಂದೂ ಮಕ್ಕಳಿಗೆ ಧರ್ಮ ಮುಕ್ತವಾದ (secular) ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಪ್ರಸ್ತಾವನೆಯು ಸಭೆಯ ಉದ್ದೇಶವಾಗುತ್ತು . ಅದಕ್ಕಾಗಿ ೧ ಲಕ್ಷ ರೂಪಾಯಿಯ ದೇಣಿಗೆಯನ್ನು ಆಗಿನ ಪ್ರಮುಖರಾದ ರಾಜಾ ಗೋಪಿ ಮೋಹನ್ ದೇಬ್ , ಮಹಾರಾಜಾ ತೇಜ್ ಚಂದ್ರ ಮುಂತಾದವರು  ನೀಡಿದರು . ರಾಜಾ ರಾಮ್ ಮೋಹನ್ ರಾಯ್ ಅವರು ಈ ಉದ್ದೇಶಕ್ಕೆ ಸಹಕಾರ ನೀಡಿದರೂ ತನ್ನ ಸಾಂಪ್ರದಾಯಿಕ ದೇಶವಾಸಿಗಳ ಪೂರ್ವಾಗ್ರಹಗಳಿಂದ ಇಡೀ ಕಲ್ಪನೆಯೆ ಹಾಳಾಗಬಾರದೆಂಬ ಭಯದಿಂದ ತಮ್ಮ  ಸಹಕಾರವನ್ನು ಮುಕ್ತವಾಗಿ ಘೋಷಿಸಲಿಲ್ಲ. ಅಲ್ಲಿ  ಪಡೆದ ಪಾಶ್ಚಾತ್ಯ ವಿದ್ಯಾಭ್ಯಾಸದ ಪ್ರಭಾವದಿಂದ ಅನೇಕ ಯುವಕರು ಹಿಂದೂ ಧರ್ಮದ ವಿರುದ್ದ ಪ್ರತಿಭಟಿಸಿ ತಮ್ಮನ್ನು ತಾವು ನಾಸ್ತಿಕರೆಂದು ಘೋಷಿಸಿಕೊಂಡರು . ಅಂತಹವರೊಟ್ಟಿಗೆ ಚರ್ಚಿಸಿದ ಡಫ್, ಅವರನ್ನು ಕ್ರಿಶ್ಚಿಯಾನಿಟಿಗೆ ಮತಂತರಿಸಲು ಯಶಸ್ವಿಯಾದ . ಇಲ್ಲಿ ಗಮನಿಸಬೇಕಾದ ಅಂಶವೆಂದರೆ , ಡಫ್ ನು ಆಗಿನ ಕಾಲದ ಕೆಳ ಜಾತಿಯ ಜನರನ್ನು ಮಾತ್ರ ಮತಾಂತರಿಸಿದರೆ ಜನಸಂಖ್ಯೆ ಹೆಚ್ಚಾಗಬಹುದಷ್ಟೆ ಹೊರತು ,ಕ್ರಿಶ್ಚಿಯಾನಿಟಿಗೆ ತಾತ್ವಿಕ ಮಾನ್ಯತೆಯು ದೊರೆಯುದಿಲ್ಲವೆಂದು ತಿಳಿದನು . ಕ್ರಿಶ್ಚಿಯಾನಿಟಿಯ ವೈಶ್ವಿಕತೆ  ಹಾಗೂ ಹಿಂದೂ ಧರ್ಮದ ನಿಸ್ಸಾರತೆಯನ್ನು ಸಾರಬೇಕಾದರೆ  ಅದೇ ಧರ್ಮದ ಮೇಲ್ವರ್ಗದ ಬ್ರಾಹ್ಮಣ ಮೊದಲಾದ ಜಾತಿಯವರನ್ನು ಮತಾಂತರಿಸಬೇಕೆಂದು ಅರಿತು ಅವರನ್ನೆ ಗುರಿಯಾಗಿಸಿ ಕಾರ್ಯಪ್ರವೃತ್ತನಾದನು. .  ಅವರಲ್ಲಿ ಪ್ರಮುಖ ಕೆ.ಎಮ್. ಬ್ಯಾನರ್ಜಿ .ಇವನು ಹಿಂದೂ ಕಾಲೇಜ್ ನಲ್ಲಿ ಸೆಕ್ಯುಲರ್ ಶಿಕ್ಷಣವನ್ನು ಪಡೆದನು . ಅಲ್ಲಿಯೆ ಪಾಶ್ಚಾತ್ಯ ವಿಜ್ಞಾನ ಹಾಗೂ ಇಂಗ್ಲೀಷ್ ಭಾಷೆಯ ಅಧ್ಯಯನವಾಯಿತು . ಅಷ್ಟರಲ್ಲಿ ಅವನು ತನ್ನನ್ನು ನಾಸ್ತಿಕನೆಂದು ಘೋಷಿಸಿಕೊಂಡನು.. ಅದಲ್ಲದೆ ಅವನು ಹೆನ್ರಿ ಲೂಯಿಸ್ ವಿವಿಯನ್ ಡೆರೋಜಿಯೋ (Henry Louis Vivian Derozio) ನೇತೃತ್ವದ ಯಂಗ್ ಬೆಂಗಾಲ್ ಮೂವ್ಮೆಂಟ್(Young Bengal movement) ನಲ್ಲಿ  ಭಾಗಿಯಾದನು.. ಇಲ್ಲಿ ಹಳೆಯ ಹಿಂದೂ ಸಂಪ್ರದಾಯಗಳ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸಲಾಗುತ್ತಿತ್ತು ಮತ್ತು ತರ್ಕಶಕ್ತಿಯನ್ನು, ವೈಯಕ್ತಿಕ ಸ್ವಾತಂತ್ರ್ಯವನ್ನು, ಹಾಗೂ ಸಾಮಾಜಿಕ ಸುಧಾರಣೆಯನ್ನು ಉತ್ತೇಜಿಸಲಾಗುತ್ತಿತ್ತು.   ಹಿಂದೂ ಕಾಲೇಜಿನಲ್ಲಿ ಅಧ್ಯಯನದ ನಂತರ ಅವನು ಅಲೆಗ್ಸಾಂಡರ್ ಡಫ್ ಸ್ಥಾಪಿಸಿದ ಜೆನೆರಲ್ ಅಸೆಂಬ್ಲಿ ಇಂಸ್ಟಿಟ್ಯುಷನ್ (General assembly institution) ನ್ನು ಸೇರಿಕೊಂಡನು.. ಅಲ್ಲಿ ಪಾಶ್ಚಾತ್ಯ ಶಿಕ್ಷಣವನ್ನು ಇನ್ನೂ ಆಳವಾಗಿ ಅಭ್ಯಸಿಸಿದ್ದಲ್ಲದೆ , ಕ್ರಿಶ್ಚಿಯನ್ ರಿಲಿಜಯನ್ನಿನ ಅಧ್ಯಯನವನ್ನು ಮಾಡಿದನು. ಡಫ್ ನ ಬೋಧನೆಯ ಪ್ರಭಾವದಿಂದ 1832 ರಲ್ಲಿ ಕ್ರಿಶ್ಚಿಯನ್ ಆಗಿ ಮತಾಂತರಗೊಂಡನು . ಮತಾಂತಗೋಂಡ ನಂತರ ತನ್ನ ಸಮಾಜ ಹಾಗೂ ಬಾಂಧವರಿಂದ ಪ್ರತಿಭಟನೆ  ಎದುರಿಸಿದ ಅವನಿಗೆ ಅಲೆಗ್ಸಾಂಡರ್ ಡಫ್ ಮಾನಸಿಕವಾಗಿ ನೈತಿಕವಾಗಿ ಸಮರ್ಥನೆ ನೀಡಿ ಅವನ ಪರವಾಗಿ ನಿಂತನು.  1852 ರಲ್ಲಿ ಅಧಿಕೃತವಾಗಿ ಆಂಗ್ಲಿಕನ್ ಚರ್ಚ ಗೆ ಸೇರಿಕೊಂಡ ಮೇಲೆ ಪಾದ್ರಿಯಾಗಿ (Reverend) ಆಗಿ ನಿಯಾಮಕಗೊಂಡನು .ಇವನು ಸ್ವತಃ ತಾನು ಕ್ರಿಶ್ಚಯನ್ ಆಗಿ ಪರಿವರಿತನಾಗಿದ್ದಲ್ಲದೆ , ಹಿಂದೂ ಧರ್ಮವನ್ನು ಟೀಕಿಸಿ ವಿಮರ್ಶಿಸುವ ಅನೇಕ ಗ್ರಂಥಗಳನ್ನು ರಚಿಸಿದ . ಅವುಗಳಲ್ಲಿ "Lectures to Educated young men' ಎಂಬ ಪ್ರಭಂದವೂ ಒಂದು . ಇದರಲ್ಲಿ ಇವನ್ನು ವೇದಾಂತ-ಉಪನಿಷತ್ತು-ಬ್ರಹ್ಮಸೂತ್ರಗಳು ಹಾಗೂ ಪುರಾಣಗಳನ್ನು ಟೀಕಿಸಿ , ಅದೂ ನಿಮಗೆ ಸತ್ಯವನ್ನು ತಿಳಿಸುತ್ತಿಲ್ಲವೆಂದೂ , ಬೈಬಲ್ ನಲ್ಲಿ ಸತ್ಯವು ಆವಿಷ್ಕಾರಗೊಂಡಿದೆಯೆಂದು ಪ್ರತಿಪಾದಿಸಿದ . ಅವನು ಆಯ್ಕೆ ಮಾಡಿದ ಜನರನ್ನು(targeted audience ) ಮತ್ತು ಬಳಿಸಿದ ಪದವು ಗಮನಾರ್ಹವಾಗಿದೆ. ವಯಸ್ಸಾದವರನ್ನು ಒಪ್ಪಿಸುವುದೂ ಕಷ್ಟ ಹಾಗೂ ಅದರಿಂದ ದೊಡ್ಡ ಪ್ರಯೋಜನವೂ ಇಲ್ಲ. ಹಾಗಾಗಿ ಯುವಕರನ್ನೆ ಆಯ್ಕೆ ಮಾಡಿಕೊಂಡ. ಯುವಕರಲ್ಲಾದರೂ ಅಪರಿಪಕ್ವತೆ, ವ್ಯವಸ್ಥೆಯ ಮೇಲಿನ ಸಿಟ್ಟು, ಹಾಗೂ ಚಂಚಲತೆ ಬಳಸಿ ಹೊಸತನ್ನು ಒಪ್ಪಿಸುವುದು ಸುಲಭ . ಅದರಲ್ಲೂ Educated young men ಪದ ಬಳಕೆಯಿಂದ ಇದನ್ನು ಒಪ್ಪದವರು ಅಶಿಕ್ಷಿತರು ಎಂಬ ಭಾವವನ್ನು ಬೆಳೆಸಿ ಕಿಳಿರಿಮೆಯನ್ನು ಹುಟ್ಟು ಹಾಕುವ , ಒಪ್ಪಿದವರು ಶಿಕ್ಷಿತರು ಎಂಬ ಭಾವವನ್ನು ಸೃಷ್ಟಿಸಿ ಆಕರ್ಷಣೆಯನ್ನು ಹುಟ್ಟಿಸುವ ಉದ್ದೇಶವನ್ನು ಕಾಣಬಹುದು. ಈಗೀನ ಕಾಲದಲ್ಲಿ ಈ ತಂತ್ರವನ್ನು ಅನೇಕ ಮಲ್ಟಿ ನ್ಯಾಶನಲ್ ಕಂಪನಿಗಳು ಬಳಸಿಕೊಳ್ಳುತ್ತಿರುವುದನ್ನು ಮನಗಾಣಬಹುದು.  

ಇವನು "ದಿ ಪರ್ಸಿಕುಟೆಡ್''(The persecuted) ಎಂಬ ಮೊದಲ ಭಾರತೀಯ ಇಂಗ್ಲಿಷ್ ನಾಟಕವನ್ನು ಬರೆದನು . ಇದರಲ್ಲಿ ಹಿಂದೂ ಧರ್ಮದ ಸಾಂಪ್ರದಾಯಿಕತೆಯನ್ನು ಟಿಕಿಸಿದ. ಈ ನಾಟಕದ ಕಥೆ ಬಾನಿ ಲಾಲ್ ಎಂಬ ಯುವಕನನ್ನು ಕೇಂದ್ರವಾಗಿಟ್ಟುಕೊಂಡಿದೆ. ಪಾಶ್ಚಾತ್ಯ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಬಾನಿ ಲಾಲ್, ಮಾಂಸಾಹಾರ (ಬೀಫ್) ಸೇವನೆ ಮತ್ತು ಮದ್ಯಪಾನವನ್ನು ಮಾಡಲು ಪ್ರಾರಂಭಿಸುತ್ತಾನೆ. ಆದರೆ ಅವನ ತಂದೆ ಮೋಹದೇವ, ಹಿಂದೂ ಸಂಪ್ರದಾಯವನ್ನು ಪಾಲಿಸುವವನು,  ಅವನಿಗೆ ಮಗನ ಈ ಬದಲಾವಣೆಯನ್ನು ಸ್ವೀಕರಿಸಲು ಆಗುವುದಿಲ್ಲ. ಈ ತಂದೆ-ಮಕ್ಕಳ ನಡುವಿನ ಸಂಘರ್ಷವನ್ನು ತರ್ಕೋಲಂಕಾರ್ ಮತ್ತು ಬೈಧಬಾಗಿಸ್ ಎಂಬ ಬ್ರಾಹ್ಮಣರು ತಮ್ಮ ಧಾರ್ಮಿಕ ಪ್ರಭಾವವನ್ನು ದುರುಪಯೋಗ ಮಾಡುತ್ತಾ ಇನ್ನಷ್ಟು ತೀವ್ರಗೊಳಿಸುತ್ತಾರೆ. ಅವರು ಮೋಹದೇವನಿಗೆ ಮಗನನ್ನು ಕೌಟುಂಬಿಕ ಮತ್ತು ಸಾಮಾಜಿಕ ಜೀವನದಿಂದ ಹೊರಹಾಕುವಂತೆ ಪ್ರೇರೇಪಿಸುತ್ತಾರೆ, ಬಾನಿ ಲಾಲನನ್ನು ಹಿಂದೂ ಸಮಾಜಕ್ಕೆ ಬೆದರಿಕೆಯಾಗಿ ಬಿಂಬಿಸುತ್ತಾರೆ. ಎಷ್ಟೆ ತಿರುಸ್ಕಾರವನ್ನು ಎದುರಿಸಿದರೂ, ಬಾನಿ ಲಾಲ್ ತನ್ನ ಗೆಳೆಯರಿಗೆ ಸಾಮಾಜಿಕ ಮೂಢನಂಬಿಕೆಗಳನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸುವಂತೆ ಪ್ರೋತ್ಸಾಹಿಸುತ್ತಾನೆ. ಈ ನಾಟಕವು ಭಾಗಶಃ ಅವನ ಜೀವನವನ್ನು ಆಧರಿಸಿದೆ.  ಅದೇ ರೀತಿ 1875 ರಲ್ಲಿ ದಿ ಅರಿಯನ್ ವಿಟ್ನೆಸ್ ( The Arian witness) ಎಂಬ ಪುಸ್ತಕವನ್ನು ಬರೆಯುತ್ತಾನೆ . ಇದರಲ್ಲಿ ಆರ್ಯರ ವೇದ ಮೊದಲಾದ ಗ್ರಂಥಗಳಿಗೂ ಹಾಗೂ ಬೈಬಲ್ ವಿಚಾರಗಳಿಗೂ ಸಾಮ್ಯವನ್ನು ಪ್ರತಿಪಾದಿಸುತ್ತಾನೆ . ವೇದಗಳು ವಿಗ್ರಹಾರಾಧನೆ , ಬಹುದೇವತೋಪಸನೆಯನ್ನು ಪ್ರತಿಪಾದಿಸುತ್ತವೆನ್ನುವೆನ್ನುವುದು ನಂತರದ ಕಲ್ಪನೆ, ಮೂಲವಾಗಿ ಎಕದೇವತಾವಾದವನ್ನು ಪುರಸ್ಕರಿಸಿಸುತ್ತದೆ ಹಾಗೂ ವಿಗ್ರಹಾರಾಧನೆಯನ್ನು ನಿಷೇಧಿಸುತ್ತದೆ ಎಂದು ಪ್ರತಿಪಾದಿಸಿದನು. ಈ ನಿಟ್ಟಿನಲ್ಲಿ ಬೈಬಲ್ ಹೇಳುವುದನ್ನೆ ವೇದವು ಹೇಳುತ್ತದೆ ಎಂದು ಹೇಳುತ್ತಾ, ಸೃಷ್ಟಿ, ಪ್ರಳಯ, ಮಾನವನ ಉತ್ಪತ್ತಿ ಮೊದಲಾದ ಅನೇಕ ವಿಷಯಗಳಲ್ಲಿ ಸಾಮ್ಯವನ್ನು ತೋರಿಸಿದನು. ಸಂಸ್ಕೃತ ಹಾಗೂ ಹಿಬ್ರೂ ಭಾಷೆಯ ಸಾಮ್ಯತೆಯನ್ನು ತಿಳಿಸುತಾ , ಇಬ್ಬರ ಪೂರ್ವಜರ ಭಾಷೆಯ ಎಕತೆಯನ್ನು ಪ್ರತಿಪಾದಿಸಿದ. ೧೩ ಸಂಪುಟಗಳಲ್ಲಿ ಬಂಗಾಳಿ ಭಾಷೆಯಲ್ಲಿ Encycloedia ವನ್ನು ರಚಿಸಿದ. ಇದರಲ್ಲಿ ಸಮಗ್ರ ಜಗತ್ತಿನ ಇತಿಹಾನ ಮುಂತಾದ ಅನೇಕ ಸಾಮಾನ್ಯ ಜ್ಞಾನದ ಕುರಿತಾದ ವಿಷಯಗಳಿವೆ.  ಇಂತಹ ಇನ್ನೂ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಭಾರತದಲ್ಲಿ ಕ್ರಿಶ್ಚಿಯಾನಿಟಿಯ ವ್ಯಾಪ್ತಿಗೆ ಬಹಳ ಪ್ರಮುಖಪಾತ್ರವನ್ನು ವಹಿಸಿದ . 

ಇನ್ನೂ ಅಲೆಗ್ಸಾಂಡರ್ ಡಫ್ ನ 1857 ರಲ್ಲಿ  ನಡೆದ ಮೊದಲನೆಯ ಭಾರತೀಯ ಸಂಗ್ರಾಮ ಕುರಿತು `ಇಂಡಿಯನ್ ರೆಬೆಲಿಯನ್'  ಎಂಬ ಪತ್ರಗಳ ಸಂಗ್ರಹರೂಪವಾದ ಪುಸ್ತಕವು ಪ್ರಕಟವಾಗಿದೆ. .  ಡಫ್ ನು ನೇರವಾಗಿ ಇಂಡೊಲೊಜಿಯ ಕುರಿತಾಗಿ ಪುಸ್ತಕಗಳನ್ನು ಬರೆಯದಿದ್ದರೂ, ಆ ರೀತಿಯಾಗಿ ಪುಸ್ತವನ್ನು ಬರೆಯುವ ಪ್ರತಿಭಾವಂತ ಯುವ ತಂಡವನ್ನೆ ಕಟ್ಟಿದ. ಅವರಲ್ಲಿ ಪ್ರಮುಖರು ಲಾಲ್ ಬಿಹಾರಿ ಡೇ, ಮೈಕಲ್ ಮಧುಸೂದನ್ ದತ್ತ, ಗೌರ್ ಗೋವಿಂದ್ ರೇ, ಭೋಲಾ ನಾಥ್ ಬೋಸ್, ಮುಂತಾದವರು . ಇವರೆಲ್ಲರೂ ಭಾರತದಲ್ಲಿ ಕ್ರಿಶ್ಚಿಯಾನಿಟಿಯನ್ನು ಹರಡಲು ಪ್ರಮುಖಪಾತ್ರವನ್ನು ವಹಿಸಿದ್ದಲ್ಲದೆ, ಅದಕ್ಕೆ ತಾರ್ಕಿಕ ಹಾಗು ತಾತ್ವಿಕ ತಳಹದಿಯನ್ನು ಹಾಕಿ ಕೊಟ್ಟರು . ಒಬ್ಬ ವ್ಯಕ್ತಿಯಾಗಿ ಮಾಡುವ ಪ್ರಯತ್ನಕ್ಕೆ ವಿಲಿಯಮ್ ಕ್ಯಾರಿ ಉದಾಹರಣೆಯಾದರೆ, ಚಿಂತನೆಯನ್ನು ಸಾಂಸ್ಥಿಕರಣವಾಗಿಸುವ (idea's institutionalization) ಪ್ರಯತ್ನಕ್ಕೆ ಅಲೆಗ್ಸಾಂಡರ್ ಡಫ್ ಉದಾಹರಣೆಯಾಗುತ್ತಾನೆ . 

ಮುಂದಿನ ಸಂಚಿಕೆಯಲ್ಲಿ ಇನ್ನೂ ಕೆಲವರ ಕುರಿತಾಗಿ ತಿಳಿಯೋಣ..

ಆಕರ -

1.Early indologist a study in motivation –part-1

Autor –Swamy B.V.Giri 

2. Biographical Dictionary of Christian Missions, 

Author –Gerald Anderson 

3.The Arian Witness 

Autor –Rev K.M.Banerjea 

4. Lectures to Educated young men

Autor –Rev K.M.Banerjea 

5.  The persecuted 

Autor –Rev K.M.Banerjea 

  


Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions