Posts

Showing posts from January, 2025

ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ

Image
  ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ.     - ಡಾ.ಶ್ರೀನಿಧಿ ಪ್ಯಾಟಿ ಕಳೆದ ಸಂಚಿಕೆಯಲ್ಲಿ ಬ್ರಿಟಿಷ್ ಸರ್ಕಾರದ ಕಾನೂನಿನ ಬಲದಿಂದ ಮಿಶನರಿಗಳು ಭಾರತಕ್ಕೆ ಮುಕ್ತವಾಗಿ ಪ್ರವೇಶಿಸಲು ಪ್ರಾರಂಭಿಸಿದವೆಂದು ತಿಳಿದೆವು . ಅಂತಹ ಮಿಶನರಿಗಳಲ್ಲಿ ಕೆಲವು ಪ್ರಮುಖರ ಬಗ್ಗೆ ತಿಳಿಯೋಣ . ವಿಲಿಯಮ್ ಕ್ಯಾರಿ (William carey 1761-1834) ಇವನು ಅಧುನಿಕ ಮಿಶನರಿ ಚಟುವಟಿಕೆ ಹಾಗೂ ಪೂರ್ವೀಯ , ವಿಶೇಷವಾಗಿ ಭಾರತೀಯ ಭಾಷೆಗಳಲ್ಲಿ ಮಿಶನರಿಗಳಿಗೆ ಅನುಕೂಲವಾಗುವ ಸಾಹಿತ್ಯ ನಿರ್ಮಾಣದ ಪ್ರವರ್ತಕ ಹಾಗೂ ಬ್ಯಾಪ್ಟಿಸ್ಟ್ ಮಿಶನರಿ ಸೊಸಾಯಿಟಿ (Baptist missionary society)  ಸಂಸ್ಥಾಪಕ . ಇವನನ್ನು ಅಧುನಿಕ ಮಿಶನರಿಯ ಪಿತಾಮಹ ಎಂದು ಗುರುತಿಸಬಹುದು .  ಬ್ರಿಟಿಷ್ ಸರ್ಕಾರದ ನಿಯಮಗಳು ಮಿಶನರಿಗಳ ಪರವಾಗಿ ಮಾರ್ಪಾಡಾಗುವ ಮೊದಲೆ ಇವನು ಭಾರತದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ.  ಪೂರ್ವಿಯ ದೇಶದ ಭಾಷೆಗಳ ಪ್ರೋಫೆಸರ್ ಆಗಿದ್ದ ಇವನು ಅನೇಕ ವೇದಾಂತ ಗ್ರಂಥಗನ್ನು  ಹಾಗೂ ಮರಾಠಿ, ಸಂಸ್ಕೃತ, ಪಂಜಾಬಿ, ತೆಲುಗು , ಬೆಂಗಾಲಿ , ಮುಂತಾದ ಭಾಷೆಗಳ ವ್ಯಾಕರಣ ಹಾಗೂ ನಿಘಂಟು (Dictionary) ಗಳನ್ನು ರಚಿಸಿದನು . ಇವನು ತನ್ನ ಜೀವಿತಾವಧಿಯಲ್ಲಿ  ಸೆರಾಂಪೂರ್ ಪ್ರೆಸ್ ನಿಂದ ಎರಡು ಲಕ್ಷಕ್ಕೂ ಅಧಿಕ ಬೈಬಲ್ ಪ್ರತಿಗಳನ್ನು ನಲ್ವತ್ತಕ್ಕೂ ಹೆಚ್ಚಿನ ಭಾಷೆಗಳಲ್ಲಿ ಮುದ್ರಿಸಿ ಹಂಚಿದನು .ಅದರ ಸಾಹಿತ್ಯ ...