ವೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ-1
.jpeg)
Indology ಇಂಡೊಲೊಜಿ ವ ೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ. Indology ಇಂಡೋಲೊಜಿ ವೆಂಡಿ ಡೊನಿಗರ್ ಅಮೇರಿಕನ್ ಇಂಡೋಲೊಜಿಸ್ಟ್ ಆಗಿದ್ದು . ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಿಲೀಜಿಯಸ್ ಸ್ಟಡೀಸ್ ನ ಪ್ರಾಧ್ಯಾಪಕಿಯಾಗಿದ್ದರು.1978 ರಿಂದ ಅಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರು ಮೂವತ್ತೈದು ಪುಸ್ತಕಗಳನ್ನು ಬರೆದಿದ್ದಾರೆ, ಇದರಲ್ಲಿ "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ", "ದಿ ರಿಗ್-ವೇದ; ಆನ್ ಆಂಥಾಲಜಿ" ಇತ್ಯಾದಿ ಸೇರಿವೆ. "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ" ಶೀರ್ಷಿಕೆಯಡಿ ಹಿಂದೂ ಧರ್ಮದ ಮೇಲಿನ ಒಂದು ಪುಸ್ತಕವನ್ನು 2009 ರಲ್ಲಿ ಪೆಂಗ್ವಿನ್ ಪಬ್ಲಿಕೇಶನ್ ಪ್ರಕಟಿಸಿತು. ಇದು ದೋಷಗಳಿಂದ ಕೂಡಿದ್ದರಿಂದ ಹಿಂದೂಗಳಿಂದ ತೀವ್ರ ಟೀಕೆಗೊಳಗಾಯಿತು. ಪೆಂಗ್ವಿನ್ ಪ್ರಕಾಶನವು ವಾಸ್ತವದ ದೋಷಗಳು ಮತ್ತು ಜನರಿಂದ ಪ್ರತಿಭಟನೆ ಮತ್ತು ಮೊಕದ್ದಮೆ ಭಯದಿಂದ ಪುಸ್ತಕಗಳನ್ನು ಹಿಂದಕ್ಕೆ ಪಡೆಯಿತು. , ತದನಂತರ ಅವರು ಹಿಂದೂ ಧರ್ಮದ ಮೇಲೆ On Hinduism ಎಂಬ ಮತ್ತೊಂದು ಪುಸ್ತಕವನ್ನು ಬರೆದರು, ಇದರಲ್ಲಿ ಅವರು ರಾಮಾಯಣದ ಬಗ್ಗೆ ಮತ್ತೆ ಅದೇ ಹಿಂದಿನ ಪುಸ್ತಕಗಳಲ್ಲಿ ಬರೆದ ತಪ್ಪನ್ನು ಮುಂದು ಮುಂದುವರೆಸಿದರು. ಈ ಲೇಖನ ಸರಣಿಯಲ್ಲಿ ಈ ಪುಸ್ತದದ ವಿಮರ್ಶೆಯನ್ನು ಮಾಡುತ್ತೇನೆ. ಅದಕ್ಕ...