Posts

Showing posts from January, 2024

ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City

Image
  ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City  -  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಜನವರಿ 22 ರಂದು ಇಡೀ ಜಗತ್ತು ಅಯೋಧ್ಯೆಯ ಕಡೆ ಕಾತರದಿಂದ ತನ್ನ ದೃಷ್ಟಿಯನ್ನು ಹರಿಬಿಡುತ್ತಿದೆ. ಅನೇಕ ಶತಮಾನಗಳ ಕನಸು ನನಸಾಗುವ ದಿವ್ಯ ಮಂಗಳ ಮುಹೂರ್ತಕ್ಕೆ ಅಯೋಧ್ಯಾ ನಗರಿಯು ನವವಧುವಿನಂತೆ ಸಜ್ಜಾಗುತ್ತಿದೆ. ಈ ಅಯೋಧ್ಯೆಯಲ್ಲಿ ನಾವು ಇಡುವ ಒಂದೊಂದು ಹೆಜ್ಜೆಯು ನಮಗೆ ನೂರು ಅಶ್ವಮೇಧ ಯಾಗದ ಫಲವನ್ನು ನೀಡುವುದೆಂದು ಸ್ಕಂದಪುರಾಣವು ತಿಳಿಸಿಕೊಡುತ್ತದೆ.   ಅಯೋಧ್ಯಾ ಪುರಿಯನ್ನು ಮನುವು ತನ್ನ ಮಗನಾದ ಇಕ್ಷ್ವಾಕುವಿನ ರಾಜ್ಯ ಪರಿಪಾಲನೆಗಾಗಿ ನಿರ್ಮಿಸಿದ ಎಂದು ರಾಮಾಯಣವು ತಿಳಿಸಿದೆ. ಆದ್ದರಿಂದಲೇ ಈ ಪಟ್ಟಣ 'ಆದಿಪುರಿ' ಎಂಬ ನಾಮಾಂತರವನ್ನು ಹೊಂದಿದೆ. ಈ ನಗರವು ಕೇವಲ ಆದಿ ನಗರಿಯಾಗಿರದೆ ಆದರ್ಶ ನಗರಿಯಾಗಿತ್ತು ಎಂದು ರಾಮಾಯಣದ ವಿವರಣೆಯಿಂದ ನಮಗೆ ತಿಳಿದು ಬರುತ್ತದೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಗಸ್ಟ 15 ರ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ Decolonization ನ ಸಾಕಾರತೆಗಾಗಿ  ಭಾರತೀಯ ನಗರನಿರ್ಮಾಣದ ಮೂಲಭೂತ ಅಂಶಗಳ ನಿರೂಪಣೆಯನ್ನು ರಾಮಾಯಣದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯು ಮೂಲಭೂತ ಸೌಕರ್ಯಗಳಿಂದ ಹಾಗು ಸಂಪತ್ತು ಸವಲತ್ತುಗಳಿಂದ ಕಂಗೊಳಿಸುತಿತ್ತು ಎಂಬ ವಿಷಯವನ್ನು ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ವಿವರಿಸಿದ್ದಾರೆ. ರಾಮಾಯಣದ ಅಧ್ಯಯನದಿಂದ ಅಯೋಧ್ಯೆಯು ಬಹುತೇಕ ಆಧುನಿಕ ನಗರಗಳಿ