Posts

Showing posts from November, 2023

ಏಕಭುಕ್ತ ಮತ್ತು intermittent fasting

Image
  ಏಕಭುಕ್ತ ಮತ್ತು intermittent fasting ಕೆಲವು ದಿನಗಳ ಹಿಂದೆ ಮೋಬೈಲ್ ನಲ್ಲಿ ಹಿಂದಿ ಚಿತ್ರರಂಗದ ನಟ ಮನೋಜ್ ವಾಜಪೇಯಿಯವರ ಸಂದರ್ಶನವೊಂದು ಕಣ್ಣಿಗೆ ಬಿತ್ತು . ಅದರಲ್ಲಿ ತಮ್ಮ ದೈಹಿಕ ಕ್ಷಮತೆಯ ರಹಸ್ಯವೇನೆಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಗಮನ ಸೆಳೆಯಿತು.. ಅವರು ಹೇಳಿದ್ದು ‌'' ನನ್ನ ಅಜ್ಜ ಬಹಳ ಸ್ವಸ್ಥವಾಗಿ ಬಾಳಿ ಬದುಕಿದ್ದರು . ನಾನೂ ಅವರ ಜೀವನ ಶೈಲಿಯನ್ನೆ ಅನುಸರಿಸಬೇಕೆಂಬ ನಿರ್ಣಯ ತೆಗೆದುಕೊಂಡು ಕಳೆದ ೧೫ ವರ್ಷಗಳಿಂದ ರಾತ್ರಿ ಊಟ ಮಾಡುವುದನ್ನು ನಿಲ್ಲಿಸಿದ್ದೆನೆ . ದಿನಕ್ಕೆ ಒಂದು ಹೋತ್ತು ಮಾತ್ರ ಊಟ ಮಾಡುತ್ತೇನೆ . ಇದು ನನ್ನ ಆರೋಗ್ಯದಲ್ಲಿ ಬಹಳ ಸುಧಾರಣೆಯನ್ನು ತಂದಿದೆ , ಬ್ಲಡ್ ಪ್ರೆಶರ್, ಶುಗರ್ ಎಲ್ಲವೂ ನಿಯಂತ್ರಣದಲ್ಲಿದೆ . ನಾನು ಯಾವಾಗಲೂ ಚುರುಕಾಗಿರುತ್ತೆನೆ , ಉತ್ಸಾಹಿಯಾಗಿರುತ್ತೆನೆ . ನಾನು ಈ ಜೀವನ ಕ್ರಮವನ್ನು ಪ್ರಾರಂಭಿಸಿದಾಗ ಎಲ್ಲರೂ ಆಶ್ಚರ್ಯ ಪಡುತಿದ್ದರು . ಆದರೆ ಈಗ intermittent fasting ಎನ್ನುವ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ ''. ಅವರ ಈ ಮಾತುಗಳನ್ನು ಕೇಳಿ ಬಹಳ ಆಶ್ವರ್ಯವಾಯಿತು . ಅರೆ! ನಮ್ಮ ಪೂರ್ವಜರು ಹಲವರು ರಾತ್ರಿ ಊಟ ಮಾಡದೆ ಕೇವಲ ಹಾಲನ್ನೋ ಹಣ್ಣನ್ನೋ ತಿಂದು ಮಲಗುತ್ತಿದ್ದರಲ್ಲವೆ ಎಂದು ಯೋಚಿಸಿ ಅದನ್ನೆ ಹೋಲುವ intermittent fasting ಕ್ರಮದ ಬಗ್ಗೆ ಕುತೂಹಲದಿಂದ ತಿಳಿಯಲು ಪ್ರಯತ್ನಿಸಿದೆ .                 2012 ರಲ್ಲಿ ಬಿಡುಗಡೆಯಾದ B.B.C