Posts

Showing posts from 2022

ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ

Image
 ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ   -                                             ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಪೂಜ್ಯ ಗುರುಗಳಾದ ವಿಶ್ವೇಶತೀರ್ಥ ಶ್ರೀಪಾಂದಗಳವರ ಜೀವನವನ್ನು ಬರವಣಿಗೆಯಿಂದ ತಿಳಿಯಲು ಸಾಧ್ಯವಿಲ್ಲ . ಅದನ್ನು ಅನುಭವಿಸಿಯೇ ತಿಳಿಯಬೇಕು . ಆದರೆ ವಾಕ್ ಶುದ್ಧಿಗಾಗಿ , ಗುರುಗಳ  ಅನುಗ್ರಹಕ್ಕಾಗಿ  ಅವರ ಚರಿತ್ರೆಯನ್ನು ಬರೆಯುವುದು ಪೂರ್ವಾಚಾರ್ಯರು ತಿಳಿಸಿಕೊಟ್ಟ ಕ್ರಮ. ಆ ನಿಟ್ಟಿನಲ್ಲಿ ಈ ಒಂದು ಉಪಕ್ರಮ. ಜ್ಞಾನದ ಪ್ರಖರತೆ . ಸ್ವಾಮಿಗಳನ್ನು, ಶತಾವಧಾನಿಗಳೆನ್ನಬಹುದು . ನೂರು ತರಹದ ಚಿಂತನೆಗಳು ಯಾವ ಕಾಲದಲ್ಲೂ ಸ್ವಾಮಿಗಳ ಮನಸ್ಸಿನ್ನಲ್ಲಿ ನಡೆಯುತ್ತಿರುತ್ತಿತ್ತು.  ಸ್ವಾಮಿಗಳಿಗೆ ಪ್ರತಿದಿನ ಅನೇಕ ಕಾರ್ಯಕ್ರಮಗಳು . ಅದರ ಮಧ್ಯದಲ್ಲಿ ಪಲಿಮಾರು ಶ್ರೀಪಾದರು ವಿದ್ಯಾಮಾನ್ಯತೀರ್ಥರ ಆರಾಧನಾ ನಿಮಿತ್ತ ಆಯೋಜಿಸುತ್ತಿದ್ದ ಅತ್ಯಂತ ಕಠಿನ ವಿಷಯದ ವಾಕ್ಯಾರ್ಥಗೋಷ್ಠಿಯಲ್ಲಿ  ಪಾಲ್ಗೊಳ್ಳುವಿಕೆ.  ಮಹಾಯತಿಗಳ ವಿದ್ವಾಂಸರ ದಿವ್ಯೋಪಸ್ಥಿತಿ . ದೇಶದ ಮೂಲೆ ಮೂಲೆಗಳಿಂದ  ಅನೇಕ ಶ್ರೇಷ್ಠ ವಿದ್ವಾಂಸರ ಸಮಾಗಮ . ಇಂತಹ ಗೋಷ್ಥಿಯು ನಡೆಯುತ್ತಿರುವಾಗ ಎಲ್ಲಿಂದಲೋ ಬೇರೊಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದ ಶ್ರೀಪಾದಂಗಳವರು, ತತ್ ಕ್ಷಣವೆ ಆ ಗೋಷ್ಠಿಯ ಜಟಿಲವಾದ ವಿಷಯವನ್ನು ಗ್ರಹಿಸಿ  ಅಲ್ಲಿ ಬಂದಿರುವ ಸಂದೇಹಗಳಿಗೆ ಉತ್ತರಿಸುತ್ತಿದ್ದ ರೀತಿ ಅಸದೃಶ . ಇದರಿಂದ ಅವರಿಗಿದ್ದ ಶಾಸ್ತ್ರದ ಆಳಜ್ಞಾನ ,