Posts

Showing posts from December, 2020

ಸಂಸ್ಕೃತದ ಎರಡು ಭಿನ್ನ ಯುಗಗಳು

Image
     ಸಂಸ್ಕೃತದ ಎರಡು ಭಿನ್ನ ಯುಗಗಳು   ನಾನು ನಿಮಗೆ ಎರಡು ಘಟನೆಗಳನ್ನು ಹೇಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಮೊದಲನೆಯದು 11 ನೇ ಶತಮಾನದ್ದು. ಭೋಜ ಎಂಬ ರಾಜನಿದ್ದನು. ಅವನ ರಾಜ್ಯವು ತುಂಬಾ ಸಮೃದ್ಧವಾಗಿತ್ತು. ಒಮ್ಮೆ ಲಕ್ಷ್ಮಿಧರ ಎಂಬ ಕವಿ ಆ ರಾಜನ ನಗರಕ್ಕೆ ಬಂದ. ಕವಿಯು ತುಂಬಾ ಪ್ರಭಾವಿತನಾಗಿ  ಆ ನಗರದಲ್ಲಿ ವಾಸಿಸಲು ಮನಸ್ಸು ಮಾಡಿದನು.  ಹಾಗಾಗಿ ಅವನು ರಾಜನ ಆಸ್ಥಾನಕ್ಕೆ ತೆರಳಿ ತನ್ನ ಉದ್ದೇಶವನ್ನು ಹೇಳಿದನು. ಭೋಜರಾಜನು ತುಂಬಾ ಸಂತೋಷಪಟ್ಟು ಕವಿಯ ವಸತಿಗಾಗಿ ವ್ಯವಸ್ಥೆಗಳನ್ನು ಮಾಡುವಂತೆ ಸಚಿವರಿಗೆ ಆದೇಶಿಸಿದನು. "ಈ ನಗರದಲ್ಲಿರುವ ಅವಿದ್ಯಾವಂತನೊಬ್ಬನನ್ನು ಹುಡುಕಿ ಅವನ ಮನೆಯನ್ನು ಖಾಲಿ ಮಾಡಿ ಈ ಪಂಡಿತನಿಗೆ ಆ ಮನೆಯನ್ನು ಮಂಜೂರು ಮಾಡಿ" ಎಂದು ರಾಜನು ಸಚಿವನಿಗೆ ಆದೇಶಿಸಿದನು. ಸಚಿವನು ಕೆಲವು ಅವಿದ್ಯಾವಂತರನ್ನು ಹುಡುಕಲು ಹೋದನು, ಆದರೆ ಅವನಿಗೆ ಅಂತಹವರು ಸಿಗಲಿಲ್ಲ. ಎಲ್ಲರೂ ಒಂದಾದರೂ ವಿದ್ಯೆಯಲ್ಲಿ ಪಾರಂಗತರೇ ಆಗಿದ್ದರೂ . ಅವನು ಮತ್ತೆ ರಾಜನ ಬಳಿಗೆ ಬಂದು ನಗರದಲ್ಲಿ ಅವಿದ್ಯಾವಂತನನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದು ಹೇಳಿದನು. ಆಗ ರಾಜನು ಸಂಸ್ಕೃತದಲ್ಲಿ ಕವಿತೆಯನ್ನು ರಚಿಸಲಾಗದ ವ್ಯಕ್ತಿಯನ್ನು ಹುಡುಕಲು ಹೇಳಿ, ಈ ಕವಿಗೆ ಆ ಮನೆಯನ್ನು ಮಂಜೂರು ಮಾಡಬೇಕೆಂದು  ಸಚಿವನಿಗೆ ಆದೇಶಿಸಿದನು . ಅನಂತರ ಸಚಿವನು ಒಬ್ಬ ನೇಕಾರನ ಮನೆಗೆ ಹೋಗಿ 'ಸಂಸ್ಕೃತದಲ್ಲಿ ಕವಿತೆಗಳನ್ನು ರಚಿಸಲು ನೀನು ಸಮರ್