ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ

ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ ಪೂಜ್ಯ ಗುರುಗಳು ತಾವು ಜೀವನದುಕ್ಕೂ ಎಂದೂ ಬಿಡದ ಪಾಠ, ಪ್ರವಚನ, ಸಂಚಾರವನ್ನು ಮಾಡುತ್ತಲೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು. ಅವರ ವ್ಯಕ್ತಿತ್ವ ಸಮುದ್ರವಿದ್ದಂತೆ. ನಾವು ನಮ್ಮ ನಮ್ಮ ಪಾತ್ರೆಗನುಗುಣವಾಗಿ ನೀರನ್ನು ಮನೆಗೆ ತರಬಹುದು . ತರದೆ ಇದ್ದದ್ದೆ ಅಪಾರ . ಆದರೆ ನಮಗೆ ಸಮುದ್ರದ ನೀರನ್ನು ತಂದೆವೆಲ್ಲಾ ಎನ್ನುವ ಖುಷಿ . ಪೂಜ್ಯ ಗುರುಗಳ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದವರೆಲ್ಲಗೂ ಆದದ್ದು ಇದೇ ಅನುಭವ . ಇಂತಹ ಗುರುಗಳ ಜೊತೆ ಎರಡು ವರ್ಷ ಸಂಚಾರ ಮಾಡುವ ಭಾಗ್ಯ ಒದಗಿದ್ದು ನನ್ನ ಸುಕೃತದ ಫಲ .ನಾನೂ ಪಾತ್ರೆಗನುಗುಣವಾಗಿ ಒಂದಷ್ಟು ಅನುಭವ ಪಡೆದಿದ್ದೇನೆ . ಅದನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುತ್ತೇನೆ ಮಹಾನ್ ದೇಶಭಕ್ತರು . ಪೇಜಾವರ ಸ್ವಾಮಿಗಳು ದೇಶಭಕ್ತರು. ಹೌದು ಸ್ವಾಮಿಗಳು ಎಂದೂ ದೇಶಭಕ್ತಿಗೂ ಆಧ್ಯಾತ್ಮಕ್ಕೂ ವಿರೋಧವನ್ನು ಕಾಣಲೇ ಇಲ್ಲ. ಈ ವಿಷಯದಲ್ಲಿ ನನಗಾದ ಅನುಭವವೇ ಪ್ರಮಾಣ. May 16-2014 ಭಾರತದ ರಾಜಕೀಯದಲ್ಲಿ ಮಹತ್ವದ ದಿನ. ಅಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದಿತ್ತು. ಸ್ವಾಮಿಗಳೊಟ್ಟಿಗೆ ಕೆಲವು ದಿನಗಳಿಂದ ನಾವು ಉಡುಪಿಯಲ್ಲೇ ಇದ್ದೆವು. ಅಂದು ಬೆಳಗ್ಗೆ ಸ್ವಾಮಿಗಳು ಕೃಷ್ಣನ ಪೂಜೆ ಮು...