Posts

Showing posts from November, 2019

ವಿಜಯದಾಸರ ಸ್ವಪ್ನಸುಳಾದಿ

Image
ಸಾಧನಾ ಮಾರ್ಗದಲ್ಲಿ ಅತಿಪ್ರಮುಖವಾದ ಅಂಶ ಭಕ್ತಿ. ಭಕ್ತಿ ಎಂದರೆ ಪರಮಾತ್ಮನಲ್ಲಿ ಮಾಡುವ ಮಾಹಾತ್ಮ್ಯಜ್ಞಾನಪೂರ್ವಕವಾದ ಧೃಢವಾದ ಸ್ನೇಹ. ಪರಮಾತ್ಮನಲ್ಲಿ ಮಾಹಾತ್ಮ್ಯಜ್ಞಾನ ಬರಬೇಕಾದರೆ, ಅವನ ಗುಣಗಳನ್ನು ,ಲೀಲೆಗಳನ್ನು ಅರ್ಥೈಸಿಕೊಳ್ಳಬೇಕು. ಈ ರೀತಿಯಾದ ಭಕ್ತಿಯೇ ನಮ್ಮಲ್ಲಿ ಈಶ ದಾಸ ಭಾವವನ್ನು, ಪರಮಾತ್ಮನ ಅಧೀನರೆಂಬ ಜ್ಞಾನವನ್ನು ಅನುಭವ ,ಆಚರಣೆಗಳ ಹಂತಕ್ಕೆ ಕೊಂಡೊಯ್ಯುತ್ತದೆ. ನಾವು ಪರಮಾತ್ಮನ ಅಧೀನರೆಂಬ ಪ್ರಮೇಯಕ್ಕೆ ಅತ್ಯಂತ ಉತ್ತಮವಾದ ದೃಷ್ಟಾಂತವೆಂದರೆ ವ್ಯಕ್ತಿಗಳು ಮಲಗಿದಾಗ ಕಾಣುವ ಸ್ವಪ್ನ. ಸ್ವಪ್ನವು ಅತಿ ವಿಸ್ಮಯಕಾರಿಯಾದ ಪರಮಾತ್ಮನ ಸೃಷ್ಟಿ. ನಾವು ಸ್ವತಂತ್ರರಾಗಿದ್ದರೆ, ನಾವು ಇಚ್ಚೆಪಟ್ಟಂತೆ ಸ್ವಪ್ನವನ್ನು ಕಾಣಬೇಕಿತ್ತು. ಆದರೆ ವಸ್ತುಸ್ಥಿತಿಯು ಹಾಗಿಲ್ಲವೆನ್ನುವುದು ಎಲ್ಲರಿಗೂ ಅನುಭವವೇದ್ಯವೇ ಆಗಿದೆ. ಸ್ವಪ್ನದಂತೆಯೆ ಜಾಗೃತ್ತು ಅವನ ಅಧೀನ. ಮಾನವನ ಈ ಅವಸ್ಥೆಗಳನ್ನು, ಅವುಗಳನ್ನು ನಿಯಂತ್ರಿಸುವ ಪರಮಾತ್ಮನ ರೂಪಗಳನ್ನು ದಾಸರು ಸ್ವಪ್ನಸುಳಾದಿಯಲ್ಲಿ ವಿಮರ್ಶಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ಪದಾರ್ಥಗಳು ಸತ್ಯ ಎನ್ನುವುದು ಆಚಾರ್ಯರ ಸಿದ್ಧಾಂತ. ಸ್ವಪ್ನಕಾಲದಲ್ಲಿ ಕಾಣುವ ಪದಾರ್ಥಗಳನ್ನು ಪರಮಾತ್ಮನು ಮನಸ್ಸೆಂಬ ಗೊಡೆಯ ಮೇಲೆ ಸೃಷ್ಟಿಸುತ್ತಾನೆ. ಈ ಪದಾರ್ಥಗಳನ್ನು ಯಾವಾಗ ಸೃಷ್ಟಿಸುತ್ತಾನೆ ಎಂದು ಪ್ರಶ್ನೆ ಮೂಡುವುದು ಸಹಜ. ಸ್ವಪ್ನಕಾಲಕ್ಕಿಂತ ಮುಂಚೆ ಅಥವಾ ನಂತರ ಎಚ್ಚರಕಾಲದಲ್ಲಿ ಸೃಷ್ಟಿಸುತ್ತಾನೆ ಎಂದು ಹೇಳಲು