Posts

Showing posts from October, 2019

ಧಾರ್ಮಿಕಪ್ರಪಂಚದ "ಆಧುನಿಕ ವಿಜ್ಞಾನ"ವಾದಿಗಳು

Image
                              ಹೌದು ಇಂದು  ಧಾರ್ಮಿಕ ಪ್ರಪಂಚದಲ್ಲಿ ಆಧುನಿಕ ವಿಜ್ಞಾನವಾದಿಗಳ ಸಂಖ್ಯೆ ಜಾಸ್ತಿಯಾಗಿದೆ . ಸನಾತನದ ಧರ್ಮದ ಪ್ರತಿಯೊಂದು ಆಚರಣೆಗಳಿಗೆ ಹಾಗು ಸಿದ್ಧಾಂತಗಳಿಗೆ ಆಧುನಿಕ ವಿಜ್ಞಾನದ ಸಮ್ಮತಿಯ ಮುದ್ರೆಯನ್ನು ಒದಗಿಸಲು ಪ್ರಯತ್ನಿಸುವವರ ಮತ್ತು ಅದನ್ನು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.   ಇದರ ಪರಿಣಾಮವಾಗಿ   ದೀಪಾವಳಿಯಲ್ಲಿ ಹಚ್ಚುವ ದೀಪದಿಂದ ಪ್ರಾರಂಭಿಸಿ ಸಂಕ್ರಾಂತಿಯಲ್ಲಿ ತಿನ್ನುವ ಎಳ್ಳು ಬೆಲ್ಲದವರೆಗಿನ ಎಲ್ಲಾ ಸಂಪ್ರದಾಯಗಳಿಗೂ "ವೈಜ್ಞಾನಿಕ" ಸ್ಪರ್ಶವನ್ನು ನೀಡಲು ಅನೇಕರು ಪ್ರಯತ್ನಿಸುತ್ತಾರೆ . ಈ ಪ್ರಯತ್ನದಲ್ಲಿ ವಿಜ್ಞಾನದ ಹೆಸರಿನಲ್ಲಿ ಅನೇಕ ಬಾಲಿಶ ಕಾರಣಗಳನ್ನು ನೀಡುತ್ತಾ , ವಿಜ್ಞಾನಕ್ಕೂ ನ್ಯಾಯ ಒದಗಿಸದೆ ,ಶಾಸ್ತ್ರ ಸಂಪ್ರದಾಯಗಳಿಗೂ ಅನ್ಯಾಯ ಮಾಡುತ್ತಾ ಅಪಹಾಸ್ಯಗೀಡಾಗುತ್ತಿದ್ದಾರೆ . ಈ ಮನಸ್ಥಿತಿಗೆ ಕಾರಣವನ್ನು ಯೋಚಿಸಬೇಕು . ೧೮ನೆಯ ಶತಮಾನದ ನಂತರ ಆಧುನಿಕ ವಿಜ್ಞಾನ ಕಂಡ ಬೆಳವಣಿಗೆ ಊಹೆಗೆ ನಿಲುಕದ್ದು . ವಿಜ್ಞಾನಿಗಳು ನಿಸರ್ಗದ ಅನೇಕ ಗುಟ್ಟುಗಳನ್ನು ಅರ್ಥಮಾಡಿಕೊಳ್ಳುತ್ತಾ ಅನೇಕ ಸಿದ್ಧಾಂತಗಳನ್ನು ಮಂಡಿಸಿದರು . ಅವುಗಳನ್ನು ಪ್ರಯೋಗಕ್ಕೊಳಪಡಿಸಿ ಖಚಿತಪಡಿಸಿಕೊಂಡರು . ಇಂತಹ ಸಿದ್ಧಾಂತಗಳನ್ನು ಬಳಸಿಕೊಂಡು ತಂತ್ರಜ್ಞಾನವು ಅಗಾಧವಾಗಿ ಬೆಳೆಯಿತು . ಐವತ್ತು ವರ್ಷಗಳ ಹಿಂದೆಯೆ ಚಂದ್ರನನ್ನು ತಲುಪಿದ್ದೂ ಆಯಿತು . ಇಂದು ನಾವು ಜಗತ್ತಿನ ಯಾವ ಮೂಲೆಯಲ್ಲಿ ಕುಳಿತುಕೊಂಡರು ಜಗ