ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್

ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್ ಬ್ರಿಟಿಷ್ ಸರ್ಕಾರವು ಕಾನೂನಿನಲ್ಲಿ ಬದಾಲವಣೆಯನ್ನು ತಂದ ಮೇಲೆ ಅನೇಕ ಮಿಶನರಿಗಳು ಮುಕ್ತವಾಗಿ ಭಾರತವನ್ನು ಪ್ರವೇಶಿಸಲಾರಂಬಿಸಿದವು . ಅವರಲ್ಲಿ ಪ್ರಮುಖನಾದ ವಿಲಿಯಮ್ ಕ್ಯಾರಿಯ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದೆವು . ಈ ಸಂಚಿಕೆಯಲ್ಲಿ ಇನ್ನೂ ಕೆಲವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ . ಅಲೆಗ್ಸಾಂಡರ್ ಡಫ್ ( Alexander Duff -1806-1878) ಇವನು ಭಾರತದ ಉನ್ನತಶಿಕ್ಷಣದ ವ್ಯವಸ್ಥೆಯಲ್ಲಿ (Higher education) ನಲ್ಲಿ ಇಂಗ್ಲೀಷ ಭಾಷೆಯನ್ನು ಹಾಗೂ ಪಾಶ್ಚಾತ್ಯ ವಿಜ್ಞಾನವನ್ನು ಹಾಗೂ ಅದರ ಮೂಲಕ ಬೈಬಲ್ ಅಧ್ಯಯನವನ್ನು ಸೇರಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಿದನು . ಚರ್ಚ ಆಫ್ ಸ್ಕೊಟ್ಲ್ಯಾಂಡ್ (Church of Scotland) ತನ್ನ ಮೊದಲ ಮಿಶನರಿ ಸಂಸ್ಥೆಯನ್ನು ಸ್ಥಾಪಿಸುವ ಚಿಂತನೆಯಲ್ಲಿತ್ತು . ಆಗ ತಾನೆ ಡಫ್ ತನ್ನ ವ್ಯಾಸಾಂಗವನ್ನು ಮುಗಿಸಿದ್ದನು .ಇವನನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿರುವ ಜೆನೆರಲ್ ಅಸೆಂಬ್ಲಿ ಇಂಸ್ಟಿಟ್ಯುಷನ್ (General assembly institution) ಎಂಬ ಸಂಸ್ಥೆಯ ಸುಪರಿಡೆಂಟೆಂಟ್ ಹುದ್ದೆಗೆ ನಿಯೋಜಿಸಿತು . ಎರಡು ಬಾರಿ ಅವನು ಪ್ರಯಾಣಿಸುತಿದ್ದ ಹಡಗು ಸಮುದ್ರದಲ್ಲಾಗುವ ಬಿರುಗಾಳಿ ಮುಂತಾದ ತೊಂದರೆಗಳಿಂದ ನಾಶವಾಯಿತು . ಆದರೂ 1830 ರಲ್ಲಿ ಮೂರನೆಯ ಪ್ರಯತ್ನದಲ್ಲಿ ಕೊಲ್ಕತ್ತೆಗೆ ಬಂದು ಸೇರಿದನು . ಅವನು ಸ್ಕೊಟಿಷ್ ಚರ್ಚಸ್ ಕಾಲೆಜನ್ನು...