Posts

Showing posts from November, 2024

ಇಂಡೋಲೊಜಿ ವಿಮರ್ಶೆ 4 – ಬ್ರಿಟಿಷರ ಆಗಮನ

Image
ಕಳೆದ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದವರೆಗೂ ನಡೆದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿದಿದ್ದೆವು. ಈ ಸಂಚಿಕೆಯಲ್ಲಿ ಬ್ರಿಟಿಷರ ಆಗಮನದ ನಂತರ ಪ್ರಾರಂಭವಾದ ವ್ಯವಸ್ಥಿತವಾದ ಇಂಡೋಲೊಜಿಯ ಅಧ್ಯಯನ ಪ್ರಕಾರವನ್ನು ತಿಳಿಯೋಣ. ವ್ಯಾಪಾರವನ್ನು ಮಾಡಲು ಯುರೋಪಿನಿಂದ ಭಾರತಕ್ಕೆ ಆಗಮಿಸಿದ ವಸಾಹತುಶಾಹಿಗಳಲ್ಲಿ ಪೋರ್ಚುಗೀಸರು ಮತ್ತು ಡಚ್ಚರು ಮೊದಲಿಗರು. ಆಮೇಲೆ ಫ್ರೆಂಚರು ಮತ್ತು ಬ್ರಿಟೀಷರು ಆಗಮಿಸಿದರು. ಇವರೆಲ್ಲರೂ ಭಾರತೀಯ ಬಂದರುಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಪೈಪೋಟಿಗೆ ಇಳಿದರು.  ತಮ್ಮ ದೇಶಗಳ ಸರ್ಕಾರದ ನೆರವಿನಿಂದ ಹಾಗೂ ಸ್ಥಳೀಯ ರಾಜರ ಜೋತೆಗೆ ಮಾಡಿಕೊಂಡ ಒಪ್ಪಂದಗಳಿಂದ ಮತ್ತು ಅಧುನಿಕ ಸೈನ್ಯದ ನೆರವಿನಿಂದ ಮೊಘಲರಿಗಿಂತ ಬಹಳ ಪ್ರಬಲರಾದರು. 1757 ರಲ್ಲಿ ನಡೆದ ನಿರ್ಣಾಯಕ ಪ್ಲಾಸಿ ಕದನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಸೈನ್ಯವನ್ನು ಸೋಲಿಸಿ ಸಂಪೂರ್ಣ ಪ್ರಭುತ್ವವನ್ನು ಸಾಧಿಸಿತು. ನಂತರ ಕೆಲವೇ ವರ್ಷಗಳಲ್ಲಿ ಸ್ಥಳೀಯ ರಾಜ್ಯಗಳ ಮೇಲೆ ಅನೇಕ ರೀತಿಯಾದ ಕುಟಿಲ ಒಪ್ಪಂದಗಳನ್ನು ಹಾಗೂ ನಿಯಮಗಳನ್ನು ಹೇರಿ ಸಂಪೂರ್ಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬ್ರಿಟಿಷ್ ಸರ್ಕಾರದ ಅಧೀನದಲ್ಲಿರುವ ಪ್ರೈವೇಟ್ ಕಂಪನಿಯಾಗಿದ್ದು, ಅದು ಕೇವಲ ಭಾರತದಲ್ಲಿ ವ್ಯಾಪಾರವನ್ನು ಮಾಡಿ ಹೆಚ್ಚಿನ ಲಾಭ ಗಳಿಸಿ ಹಣವನ್ನು ಸಂಪಾದಿಸುವಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿತ್ತು. ಪ್ರಾರಂಭದಲ್ಲಿ ಬ...