Posts

Showing posts from October, 2024

ಇಂಡೊಲೊಜಿಯ ಇತಿಹಾಸ

Image
  ಇಂಡೊಲೊಜಿಯ ಇತಿಹಾಸ  ಕಳೆದ ಸಂಚಿಕೆಯಲ್ಲಿ ವಿಮರ್ಶೆ ಮತ್ತು ಪ್ರತಿಕ್ರಿಯೆ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನು ವಿಮರ್ಶಿಸಬೇಕಾದರೆ ಆ ವಿಷಯದ ಇತಿಹಾಸ, ಆಳ ಮತ್ತು ಅಗಲಗಳನ್ನು ಚೆನ್ನಾಗಿ ತಿಳಿಯಬೇಕಾಗುತ್ತದೆ. ಆ ದೃಷ್ಟಿಯಿಂದ ಇಂಡೋಲಜಿಯ ಇತಿಹಾಸವನ್ನು ತಿಳಿಯಲು ಪ್ರಯತ್ನಿಸೋಣ.  ಇಂಡೋಲಜಿಯ ಮೂಲ  ಓರಿಯಂಟಲ್ ಸ್ಟಡೀಸ್ ನಿಂದ ಪ್ರಾರಂಭವಾಗುತ್ತದೆ. ಈಗಲೂ ಓರಿಯಂಟಲ್ ರಿಸರ್ಚ್  ಇನ್ಸ್ಟಿಟ್ಯೂಟ್ ಗಳು ಮೈಸೂರು,ಪುಣೆ, ಬರೋಡಾ ಮುಂತಾದ ಕಡೆಗಳಲ್ಲಿ ಇರುವುದನ್ನು ಗಮನಿಸಬಹುದು. (Oriental research institute ORI ,Mysore, Bhandarkar oriental research institute BORI ,Pune )  ಓರಿಯಂಟಲ್  ಸ್ಸ್ಟಡೀಸ್   ಎಂದರೇನು, ಅದರ ಅಸ್ತಿತ್ವಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಕಾಡುವುದು ಸಹಜ . ಪಾಶ್ಚಾತ್ಯರು ಪೂರ್ವದ ದೇಶಗಳ ಭಾಷೆಗಳ ಅಧ್ಯಯನವನ್ನು ಮಾಡಲು ಬೆಳೆಸಿದ ಅಧ್ಯಯನ ಶಾಖೆಯನ್ನು ಓರಿಯಂಟಲ್ ಸ್ಟಡೀಸ್ ಎನ್ನುತ್ತಾರೆ. ಅದು  ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯನ್  ರಿಲಿಜನ್ ನ ಸರ್ವತೋಮುಖ ಪ್ರಭಾವ ಮತ್ತು ಹಿಡಿತವಿದ್ದ ಕಾಲ. ಆಗ ಕ್ರಿಶ್ಚಿಯನ್ ರಿಲಿಜನ್  ಯುರೋಪಿಗಿಂತ ಆಚೆಗೆ ವಿಸ್ತಾರವನ್ನೂ ಪ್ರಚಾರವನ್ನೂ ಪಡೆಯಬೇಕೆಂದು ಚರ್ಚ್ ತೀರ್ಮಾನಿಸಿತು. ಇದರ ಅಂಗವಾಗಿ 12ನೇ ಶತಮಾನದಲ್ಲಿ  ಚರ್ಚ್ ನ ಪೋಪ್ ಐದನೆಯ ಹೊನೋರಿಯಸ್ (Pope, Honorius IV) ಪೆಗನ್ಗಳಿಗೆ ( ಪೇಗನ್ - ಕ್ರಿಶ್ಚಿಯನ್ ಅಲ್ಲದವರು) ಕ್ರಿಶ್ಚಿಯನ್