Posts

Showing posts from September, 2024

ಇಂಡೋಲಜಿ – ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ.

Image
  ಇಂಡೋಲಜಿ (Indology)– ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ.  ಕಳೆದ ಸಂಚಿಕೆಯಲ್ಲಿ ಇಂಡೋಲಜಿಯ ಅರ್ಥ ಮತ್ತು ವಿಸ್ತಾರ ಇವುಗಳನ್ನು ಅರ್ಥೈಸಿಕೊಂಡಿದ್ದೆವು. ಈ ಸಂಚಿಕೆಯಲ್ಲಿ ಇಂಡೋಲಾಜಿಯ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆಯ ಕುರಿತಾಗಿ ತಿಳಿಯೋಣ.  ಇಂಡೋಲಜಿ ಎಂದರೆ ಭಾರತದ ಕಲೆ, ಸಂಸ್ಕೃತಿ ,ಭಾಷಾ ಸಾಹಿತ್ಯ, ಇತಿಹಾಸ ಮುಂತಾದವುಗಳ ಅಧ್ಯಯನಕ್ಕೆ ಮೀಸಲಾದ ಅಧ್ಯಯನ ಪ್ರಕಾರ. ಇಂಡೋಲಜಿಯ ಪುಸ್ತಕಗಳು ಪ್ರಾಯಃ ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣಗೊಂಡಿವೆ. ಯುರೋಪಿನ ವಿದ್ವಾಂಸರಾಗಲೀ, ಅಮೆರಿಕದ ವಿದ್ವಾಂಸರಾಗಲೀ ಇಂಗ್ಲಿಷ್ ಭಾಷೆಯಲ್ಲಿಯೇ ಭಾರತದ ಕುರಿತಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಪಾರಂಪರಿಕ ಪಂಡಿತರಿಗೆ ಪ್ರಾಯಃ ಇಂಗ್ಲಿಷ್ ಜ್ಞಾನದ ಕೊರತೆ ಇರುತ್ತದೆ. ಆ ನಿಟ್ಟಿನಲ್ಲಿ ಅಕಾಡೆಮಿಕ್ ಸರ್ಕಲ್ ನಲ್ಲಿ ನಡೆಯುವ ಯಾವುದೇ ವಿದ್ಯಮಾನಗಳ ಪರಿಚಯವು ಅವರಿಗೆ ಆಗುವುದಿಲ್ಲ. ಕೆಲವೊಮ್ಮೆ ಗೊತ್ತಾದರೂ ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ಕೊಡುವಷ್ಟು ಪರಿಣತಿಯಾಗಲಿ, ಅವಕಾಶವಾಗಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಳೆದ ಶತಮಾನದಲ್ಲಿ ಇಂಡೋಲಜಿಯ ವಿಷಯದಲ್ಲಿ ಅಂತರಾಷ್ಟ್ರೀಯ ಅಕಾಡೆಮಿಕ್ ಸರ್ಕಲ್‌ನಲ್ಲಿ ಹಾರ್ವರ್ಡ್, ಆಕ್ಸ್ಫರ್ಡ್ , ಸ್ಟ್ಯಾನ್ಪೋರ್ಡ್ ಮುಂತಾದ ವಿಶ್ವವಿದ್ಯಾಲಯಗಳ ವಿದ್ವಾಂಸರ ಚಿಂತನೆಗಳೇ ಮುನ್ನೆಲೆಗೆ ಬಂದು ಪ್ರಪಂಚದಲ್ಲಿ ಅಂಗೀಕೃತವಾದವು. ಕೆಲವೇ ಬೆರಳೆಣಿಕೆಯಷ್ಟು ಭಾರತೀಯ ವಿದ್ವಾಂಸರು ಇವರ ಚಿಂತನೆಗಳ ವಿಮರ್ಶ