Posts

Showing posts from March, 2023

ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ

Image
ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ . ರಾಮಾಯಣ ಸಾರ್ವಕಾಲಿಕ. ಸದಾ ಪ್ರಸ್ತುತ. ಎಷ್ಟು ತಿಳಿದರೂ ತಿರುಚಿದರೂ ವಾಲ್ಮೀಕಿ ರಾಮಾಯಣ ಜನಜನಿತವಾಗಿಯೇ ಇರುತ್ತದೆ.ಇದು ಬ್ರಹ್ಮದೇವರ ಅನುಗ್ರಹ." ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ| ತಾವತ್ ರಾಮಾಯಣಕಥಾ ಲೋಕೇಷು ಪಚರಿಷ್ಯತಿ" |. ಎಲ್ಲಿಯವರೆಗೆ ಗಿಡಮರಗಳು,ನದಿಪರ್ವತಗಳು ಇರುವವೋ ಅಲ್ಲಿಯವರೆಗೆ ರಾಮನ ಕಥೆ ಇದ್ದೇ ಇರುತ್ತದೆ. ರಾಮಾಯಣದ ಪ್ರತಿಯೊಂದು ಪಾತ್ರಗಳು ವಿಭಿನ್ನ ಆಯಾಮದಲ್ಲಿ ವಿಭಿನ್ನ ಗುಣಗಳನ್ನು ಪ್ರತಿನಿಧಿಸುತ್ತವೆ. ರಾಮಾಯಣದ ಕೇಂದ್ರಬಿಂದು ರಾಮನಾದರೆ, ವೃತ್ತ ಲಕ್ಷ್ಮಣ. ಶ್ರೀನಾರಾಯಣಪಂಡಿತಾಚಾರ್ಯರು ಸಂಗ್ರಹ ರಾಮಾಯಣ ಗ್ರಂಥದಲ್ಲಿ ಲಕ್ಷ್ಮಣನ ಅವತಾರದ ಉದ್ದೇಶವನ್ನು ಸುಂದರವಾಗಿ ನಿರೂಪಿಸಿದ್ದಾರೆ. ಅನಂತೋನಂತ ಪರ್ಯಂಕಃ ಪರಿಚರ್ಯಾರ್ಥಮೀಶಿತುಃ  ರಾಮನ ಸೇವೆಗಾಗಿಯೇ ಲಕ್ಷ್ಮಣನ ಜನ್ಮ. ಅವನಿಗೆ ರಾಮನ ಹೊರತು ಬೇರೆಲ್ಲರೂ ಅಪ್ರಧಾನರು, ಹೆತ್ತ ತಾಯಿ, ಹೆಂಡತಿಯೂ ಸಹ.  ಅಂತಹ ಅಸದೃಶವಾದ ಭಾತೃಭಕ್ತಿಯನ್ನು ಲೋಕಕ್ಕೆ ತೋರಿಸಿದವನು ಲಕ್ಷ್ಮಣ. ರಾಮನಿಗೂ ಲಕ್ಷಣನೆಂದರೇ ಬಹಳ ಪ್ರೀತಿ. ಬಾಲ್ಯದಲ್ಲಿ ತನ್ನ ಪಕ್ಕದಲ್ಲಿ ಲಕ್ಷ್ಮಣನಿಲ್ಲದಿದ್ದರೆ ರಾಮನು ನಿದ್ರಿಸುತ್ತಿರಲಿಲ್ಲ, ಲಕ್ಷ್ಮಣ ಉಣ್ಣದೇ ತಾನು ಉಣ್ಣುತ್ತಿರಲಿಲ್ಲ. ಮೃಷ್ಟಮನ್ನಮುಪಾನೀತಂ ಅಶ್ನಾತಿ ನ ಹಿ ತಂ ವಿನಾ ' .ಲಕ್ಷ್ಮಣನಿಗೆ ರಾಮನಲ್ಲಿ ಅಪರಿಮಿತವಾದ ಭಕ್ತಿ ಹಾಗೆಯೇ  ತಮ್ಮನಲ್ಲಿ ರಾಮನಿಗೂ ಅಸದೃಶವಾದ