Posts

Showing posts from October, 2020

ಆಚಾರ್ಯರು ಉದಾಹರಿಸಿದ ಅಪರೂಪದ ಸ್ತೋತ್ರ

Image
  ಅನುವ್ಯಾಖ್ಯಾನದ ತೃತೀಯಾಧ್ಯಾಯದ ಪ್ರಥಮಪಾದದಲ್ಲಿ ಆಚಾರ್ಯರು  ಅಪೂರ್ವವಾದ ವಿಷಯವನ್ನು ನಿರೂಪಿಸಿದ್ದಾರೆ. “ ಏಕೈವ ಬ್ರಹ್ಮಹತ್ಯಾಹಿ ವರಾಹಹರಿಣೋದಿತಾ | ಬ್ರಹ್ಮಪಾರಸ್ತವೇನೈವ ನಿಷ್ಕಾಂತಾ ರಾಜದೇಹತಃ | ಸೊತ್ರಸ್ಯ ತಸ್ಯ ಮಾಹಾತ್ಮ್ಯಾತ್  ವ್ಯಾಧತ್ವಂ ಗಮಿತಾ ಪುನಃ | ಪ್ರಾಪ್ಯಜ್ಞಾನಂ ವರಂ ಚಾಪ |'' ಆಚಾರ್ಯರು ಕರ್ಮಗಳಿಗಿರು ವ ಜೀವಸ್ವರೂಪದ ವಿಷಯದಲ್ಲಿ  ಅಪರೂಪದ ಪ್ರಮೇಯವನ್ನು ಈ ಪ್ರಕರಣದಲ್ಲಿ ನಿರೂಪಿಸಿದ್ದಾರೆ.ಈ ಪ್ರಮೇಯಕ್ಕೆ ಸಂವಾದಿಯಾಗಿ ಈ ಮೇಲಿನ ಶ್ಲೋಕಗಳಲ್ಲಿ ವರಾಹಪುರಾಣದಲ್ಲಿ ಬರುವ ಒಂದು ಕಥೆಯನ್ನು ಉದಾಹರಿಸಿದ್ದಾರೆ.  ಆಚಾರ್ಯರು ನಿರೂಪಿಸುವ ಕಥೆಯ ಸಾರಾಂಶ ಹೀಗಿದೆ. ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ ಜನ್ಮವನ್ನು ಪಡೆಯುತ್ತದೆ. ಆ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ.ಇಲ್ಲಿ ಬ್ರಹ್ಮಹತ್ಯಾ ದೋಷವು  ವ್ಯಾಧ ಜನ್ಮವನ್ನು ಪಡೆದಿದೆ ಎಂಬ ಕಥೆಯನ್ನು ಉದಾಹರಿಸಿ ಆಚಾರ್ಯರು ಕರ್ಮಗಳಿಗೆ ಅಭಿಮಾನಿಗಳಾದ ಜೀವಿಗಳೂ ಇದ್ದಾರೆ ಎಂಬ ಪ್ರಮೇಯವನ್ನು ನಿರೂಪಿಸಿದ್ದಾರೆ."ಈ ಶ್ಲೋಕದಲ್ಲಿ “ ವರಾಹಹರಿಣೋದಿತಾ '' ಎಂದು ಹೇಳಿರುವುದರಿಂದ ಆಚಾರ್ಯರು ಈ ಸ್ತೋತ್ರವು ವರಾಹಪುರಾಣದಲ್ಲಿದೆ ಎಂಬುದನ್ನು ಸೂಚಿಸಿದ್ದಾರೆ'