ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ

ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ ಭಾರತದಲ್ಲಿ ಸನಾತನ ಧರ್ಮದ ಪುನರುತ್ಥಾನದ ವಿಷಯದಲ್ಲಿ ಮಾಧ್ವ ಯತಿಗಳ ಕೊಡುಗೆ ಎನೂ ಇಲ್ಲ ಎನ್ನುವ ಆಕ್ಷೇಪವನ್ನು ನಾವು ಆಗ್ಗಾಗ್ಗೆ ಕೇಳುತ್ತೆವೆ . ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದನ್ನು ನಾವು ಓದಿದ್ದೇವೆ . ಆದರೆ ಅದರಂತೆಯೇ ವ್ಯಾಸರಾಜರ ಜೀವನವನ್ನು ಐತಿಹಾಸಿಕ ದೃಷ್ಟಿಯಿಂದ ಇನ್ನೂ ಹೆಚ್ಚು ಅಧ್ಯಯನ ಮಾಡಿದರೆ ಇವರ ಕೊಡುಗೆಯೂ ಈ ವಿಷಯದಲ್ಲಿ ಅನುಪಮವೇ ಎನ್ನುವ ಸತ್ಯ ಗೋಚರಿಸುತ್ತದೆ. ವ್ಯಾಸರಾಜರು ಸಾಳುವ ನರಸಿಂಹದೇವರಾಯ , ತಿಮ್ಮಭೂಪಾಲ , ತುಳುವ ನರಸ ನಾಯಕ , ವೀರ ನರಸಿಂಹರಾಯ , ಕೃಷ್ಣದೇವರಾಯ , ಅಚ್ಯುತ ದೇವರಾಯರೆಂಬ ವಿಜಯನಗರರಾಜರುಗಳಿಗೆ ಅರ...